Sankashti Chaturthi 2022: ಅಂಗಾರಕ ಸಂಕಷ್ಟ ಚತುರ್ಥಿ; ಚಂದ್ರೋದಯದ ಸಮಯ, ಪೂಜಾ ವಿಧಾನದ ಕುರಿತ ಮಾಹಿತಿ ಇಲ್ಲಿದೆ
ಈ ಬಾರಿ ಸಂಕಷ್ಟ ಮಂಗಳವಾರ ಬಂದಿರುವುದರಿಂದ ಅಂಗಾರಕ ಸಂಕಷ್ಟಿಯೆಂದು ಕರೆಯಲಾಗುತ್ತದೆ. ಈ ಚತುರ್ಥಿಯನ್ನು ವಿಕಟ ಸಂಕಷ್ಟ ಚತುರ್ಥಿ, ಸಂಕಟ ಹರ ಚತುರ್ಥಿ ಎಂದೂ ಹೇಳಲಾಗುತ್ತದೆ. ಜೀವನದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವ ಜನರು ಈ ವ್ರತವನ್ನು ಮಾಡಿದರೆ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನುವುದು ನಂಬಿಕೆ.
ಇಂದು (ಏ.19) ಸಂಕಷ್ಟ ಚತುರ್ಥಿ (Sankashti Chaturthi). ಸಕಲ ಸಂಕಷ್ಟವನ್ನೂ ನಿವಾರಿಸುವ ವಿಘ್ನನಿವಾರಕನನ್ನು ಪೂಜಿಸುವ, ಆರಾಧಿಸುವ ಶುಭ ದಿನ. ಈ ದಿನದಂದು ಉಪವಾಸ ಮಾಡಿ, ಸಂಜೆ ಸೂರ್ಯಾಸ್ತದ ಬಳಿಕ ಗಣಪತಿಗೆ ವಿಶೇಷವಾದ ಪೂಜೆಯನ್ನು ಮಾಡಲಾಗುತ್ತದೆ. ಪ್ರತೀ ತಿಂಗಳು ಕೃಷ್ಣ ಪಕ್ಷದ ನಾಲ್ಕನೇ ದಿನ ಅಂದರೆ ಚತುರ್ಥಿಯಂದು ಸಂಕಷ್ಟಿಯ ಆಚರಣೆ ಮಾಡಲಾಗುತ್ತದೆ. ಅತ್ಯಂತ ಮಂಗಳಕರವಾದ ಈ ದಿನದಂದು ಸಾಕ್ಷಾತ್ ಶಿವನೇ ಮೊದಲು ಗಣೇಶನನ್ನು ಪೂಜಿಸಿದ ಎಂದು ನಂಬಲಾಗಿದೆ. ಈ ಬಾರಿ ಸಂಕಷ್ಟಿ ಮಂಗಳವಾರ ಬಂದಿರುವುದರಿಂದ ಅಂಗಾರಕ ಸಂಕಷ್ಟಿಯೆಂದು ಕರೆಯಲಾಗುತ್ತದೆ. ಈ ಚತುರ್ಥಿಯನ್ನು ವಿಕಟ ಸಂಕಷ್ಟ ಚತುರ್ಥಿ, ಸಂಕಟ ಹರ ಚತುರ್ಥಿ ಎಂದೂ ಹೇಳಲಾಗುತ್ತದೆ. ಜೀವನದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವ ಜನರು ಈ ವ್ರತವನ್ನು ಮಾಡಿದರೆ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನುವುದು ನಂಬಿಕೆ.
ಸಂಕಷ್ಟ ಚತುರ್ಥಿಯ ಸಮಯ, ಚಂದ್ರೋದಯದ ಕುರಿತ ವಿವರ:
ಅಂಗಾರಕ ಸಂಕಷ್ಟ ಚತುರ್ಥಿ: 2022 ರ ಏಪ್ರಿಲ್ 19 ರ ಮಂಗಳವಾರ ಸಂಕಷ್ಟ ಚತುರ್ಥಿ ವ್ರತ ಆಚರಿಸಲಾಗುತ್ತದೆ
ಚತುರ್ಥಿ ತಿಥಿ ಆರಂಭ: 2022, ಏಪ್ರಿಲ್ 19ರ ಮಂಗಳವಾರ ಸಂಜೆ 4:38 ರಿಂದ
ಚತುರ್ಥಿ ತಿಥಿ ಕೊನೆಗೊಳ್ಳುವ ಸಮಯ: ಏಪ್ರಿಲ್ 20ರ ಬುಧವಾರ ಮಧ್ಯಾಹ್ನ 1.52ಕ್ಕೆ
ಚಂದ್ರೋದಯದ ಸಮಯ: ಏಪ್ರಿಲ್ 19- ರಾತ್ರಿ 9.50ಕ್ಕೆ (ಬೆಂಗಳೂರಿನಲ್ಲಿ 9.16ಕ್ಕೆ ಚಂದ್ರೋದಯ)
ಪೂಜಾ ವಿಧಾನ ಹೀಗಿರಲಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗ್ನೇಯ ದಿಕ್ಕಿಗೆ ಮುಖ ಮಾಡಿ ಕುಳಿತು ಪೂಜೆ ಮಾಡಬೇಕು. ಸಂಕಷ್ಟಿಯಂದು ಮಾಡುವ ಪೂಜೆಯಿಂದ ನಮ್ಮೆಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಚತುರ್ಥಿಯಲ್ಲಿ ಸಾಮಾನ್ಯವಾಗಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಉಪವಾಸದೊಂದಿಗೆ ವ್ರತವನ್ನು ಆಚರಿಸಿದರೆ ಶ್ರೇಷ್ಠ.
ಸಂಕಷ್ಟಿಯಂದು ದಿನಪೂರ್ತಿ ಉಪವಾಸ ಆಚರಿಸುವ ಭಕ್ತರು ಹಣ್ಣುಗಳು, ಹಾಲು, ಕಡಲೆಕಾಯಿ ಮೊದಲಾದವುಗಳನ್ನು ಸೇವಿಸಬಹುದು. ಗಣೇಶನ ವಿಗ್ರಹ ಅಥವಾ ಫೋಟೋವನ್ನು ಹೂವು, ಕುಂಕುಮ, ದೂರ್ವೆಯಿಂದ ಅಲಂಕರಿಸಿ ಪೂಜಿಸಿ. ಗಣಪತಿ ಮಂತ್ರಗಳನ್ನು ಪಠಿಸುತ್ತಾ, ವ್ರತದ ಕಥೆಯನ್ನು ಅಥವಾ ಸಂಕಷ್ಟ ಚತುರ್ಥಿಯ ಕಥೆಯನ್ನು ಓದಿ ಸಂಕಷ್ಟಿ ಆಚರಿಸಿ. ಸಂಕಷ್ಟ ಚತುರ್ಥಿಯಂದು ಓಂ ಗಂ ಗಣಪತಯೇ ನಮಃ ಹಾಗೂ ಓಂ ವಕ್ರತುಂಡಾಯಂ ಮಂತ್ರದ ಮೂಲಕ ಪೂಜಿಸಬಹುದು.
ಇದನ್ನೂ ಓದಿ: Chanakya Niti: ಮಕ್ಕಳ ಯಶಸ್ಸನ್ನು ನೀವು ಬಯಸುವುದಾದರೆ ಅವರ ಪಾಲನೆಯಲ್ಲಿ ಈ ವಿಷಯಗಳನ್ನು ನೆನಪಿಡಿ- ಚಾಣಕ್ಯ ನೀತಿ
ಚಾಣಕ್ಯ ನೀತಿ: ನಿಮ್ಮನ್ನು ಶ್ರೇಷ್ಠರಾಗಿಸುತ್ತವೆ ಈ ಕೆಲಸಗಳು; ನಿಮ್ಮ ಕುಟುಂಬಕ್ಕೂ ಇದು ಶ್ರೇಯಸ್ಕರ
Published On - 11:40 am, Tue, 19 April 22