
ಗ್ರಹಗಳ ವಿಷಯದಲ್ಲಿ ಮಹತ್ವದ ಬದಲಾವಣೆಯೊಂದು ಸಂಭವಿಸಲಿದೆ. ಕರ್ಮ ಕಾರಕ ಮತ್ತು ನ್ಯಾಯಾಧೀಶನಾಗಿರುವ ಶನಿ ಗ್ರಹವು ಅಸ್ತಂಗತನಾಗಲಿದ್ದಾನೆ. ಅಸ್ತಂಗತ ಎಂದರೆ ಸೂರ್ಯನಿಗೆ ಹತ್ತಿರ ಬಂದಾಗ ಯಾವುದೇ ಗ್ರಹವು ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಳ್ಳುವುದು. ಶನಿ ಗ್ರಹವು ನಿನ್ನೆ ಅಂದರೆ ಮಾರ್ಚ್ 13 ರಂದು ಸಂಜೆ 7 ಗಂಟೆ 13 ನಿಮಿಷದಿಂದ ಏಪ್ರಿಲ್ 22 ರ ಬೆಳಗಿನ ಜಾವ 4 ಗಂಟೆ 43 ನಿಮಿಷದವರೆಗೆ ಅಸ್ತಂಗತ ಸ್ಥಿತಿಯಲ್ಲಿ ಇರಲಿದ್ದು, ಈ ಅವಧಿಯಲ್ಲಿ ಅದರ ಪ್ರಭಾವ ಕಡಿಮೆಯಾಗಲಿದೆ. ಈ ಅವಧಿಯು ಸುಮಾರು 40 ದಿನಗಳ ಕಾಲ ಮೀನ ರಾಶಿಯಲ್ಲಿ ಸಂಭವಿಸಲಿದೆ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.
ಶನಿ ಗ್ರಹವು 15 ಡಿಗ್ರಿಗಳೊಳಗೆ ಸೂರ್ಯನಿಗೆ ಹತ್ತಿರ ಬಂದಾಗ ಅಸ್ತಂಗತನಾಗುತ್ತದೆ. ರಾಹು ಮತ್ತು ಕೇತು ಗ್ರಹಗಳು ಅಸ್ತಂಗತವಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಗುರು ಮತ್ತು ಶುಕ್ರ ಅಸ್ತವಾದಾಗ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅದೇ ರೀತಿ, ಶನಿ ಅಸ್ತಂಗತನಾದಾಗ ಕೆಲವು ಕ್ಷೇತ್ರಗಳಲ್ಲಿ ಅಲ್ಲೋಲಕಲ್ಲೋಲ ಉಂಟಾಗುವ ಸಾಧ್ಯತೆ ಇದೆ. ಸಿಸ್ತು ಮತ್ತು ಪರಿಶ್ರಮದ ಸಂಕೇತವಾಗಿರುವ ಶನಿಯು ಅಸ್ತಂಗತನಾದಾಗ ಪೊಲೀಸ್, ಆರ್ಮಿ, ಹಾಗೂ ಸಾರ್ವಜನಿಕ ಜೀವನದಂತಹ ಕ್ಷೇತ್ರಗಳಲ್ಲಿ ಶಿಸ್ತಿನ ಬಗ್ಗೆ ಹೆಚ್ಚು ಗಮನ ನೀಡಬೇಕಾಗಬಹುದು.
ಈ ಶನಿ ಅಸ್ತಂಗತದ ಪರಿಣಾಮವಾಗಿ ಯುದ್ಧಗಳು, ಗ್ಯಾಸ್ ಸಿಲಿಂಡರ್‌ಗಳ ಕೊರತೆ, ಉದ್ಯೋಗ, ವ್ಯಾಪಾರ, ವ್ಯವಹಾರ ಮತ್ತು ವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳು, ಕೆಲವು ಆರೋಗ್ಯ ಸಮಸ್ಯೆಗಳು ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಏರುಪೇರುಗಳು ಸಂಭವಿಸಬಹುದು.
ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!
ಈ ಎಲ್ಲಾ ಫಲಗಳು ದಶಾಭುಕ್ತಿಗಳನ್ನೂ ಅವಲಂಬಿಸಿರುತ್ತವೆ. ಶನಿ ಅಸ್ತಂಗತನಾದಾಗ ಶನಿಯ ಮಂತ್ರ, ಶನಿಯ ಸ್ತೋತ್ರ, ಎಳ್ಳಿನ ದೀಪ ಹಚ್ಚುವುದು, ದೇವಿಯ ದರ್ಶನ ಮತ್ತು ಹನುಮನ ಆರಾಧನೆ ಮಾಡುವುದರಿಂದ ಬಹಳಷ್ಟು ಶುಭಫಲಗಳನ್ನು ಪಡೆಯಬಹುದು. ಈ 40 ದಿನಗಳಲ್ಲಿ ಭೂಗೋಳ ಮತ್ತು ಪ್ರಪಂಚದಲ್ಲಿ ಸಾಕಷ್ಟು ಪರಿವರ್ತನೆಗಳು ಆಗುತ್ತವೆ. ಇವೆಲ್ಲವೂ ಶಾಸ್ತ್ರಬದ್ಧವಾಗಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ