Shanidev Effect: ಜಾತಕದಲ್ಲಿ ಶನಿ ದೋಷವಿದೆಯೇ? ಪರಿಹಾರಕ್ಕಾಗಿ ಈ ಸಲಹೆ ಅನುಸರಿಸಿ

ಶನೀಶ್ವರನ ಮಿತ್ರ ಹನುಮಂತ. ಹಾಗಾಗಿ ಹನುಮಂತನನ್ನು ಪೂಜಿಸುವ ಭಕ್ತರಿಗೆ ಶನೀಶ್ವರನು ಕೆಟ್ಟದ್ದನ್ನು ಮಾಡುವುದಿಲ್ಲ ಎಂದು ನಂಬಲಾಗಿದೆ. ಇದಲ್ಲದೆ, ಶನಿವಾರದಂದು ಕಾಗೆ, ಇರುವೆ ಮತ್ತು ನಾಯಿಗಳಿಗೆ ಆಹಾರವನ್ನು ನೀಡುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ.

Shanidev Effect: ಜಾತಕದಲ್ಲಿ ಶನಿ ದೋಷವಿದೆಯೇ? ಪರಿಹಾರಕ್ಕಾಗಿ ಈ ಸಲಹೆ ಅನುಸರಿಸಿ
Shanidev Effect

Updated on: Mar 17, 2024 | 9:55 AM

ನವಗ್ರಹಗಳಲ್ಲಿ ಶನೀಶ್ವರನಿಗೆ ವಿಶೇಷ ಸ್ಥಾನವಿದೆ. ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವೂ ಹೌದು. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಸುಮಾರು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಆದರೆ ಗ್ರಹಗತಿಗಳನ್ನು ನಂಬುವ ಜನರು ಶನಿ ದೋಷಕ್ಕೆ ಭಯ ಪಡುತ್ತಾರೆ. ವಿಶೇಷವಾಗಿ ಶನೀಶ್ವರನು ಪ್ರತಿ ರಾಶಿಯಲ್ಲಿ ಕೆಲವು ವರ್ಷಗಳ ಕಾಲ ಇದ್ದು ಆಯಾ ಜನರು ಮಾಡುವ ಕೆಲಸಗಳಿಗೆ ಸೂಕ್ತ ಫಲಿತಾಂಶವನ್ನು ನೀಡುತ್ತಾನೆ.ಆದರೆ ಶನಿವಾರದಂದು ಶನಿ ದೇವರಿಗೆ ಸಮರ್ಪಿತವಾದ ಕೆಲವು ಕೆಲಸಗಳನ್ನು ಮಾಡುವುದರಿಂದ ಶನಿಯ ಪ್ರಭಾವದಿಂದ ನೀವು ಧನಾತ್ಮಕ ಫಲವನ್ನು ಪಡೆಯುತ್ತೀರಿ ಎಂದು ನಂಬಲಾಗಿದೆ. ಆದ್ದರಿಂದ ಜಾತಕದಲ್ಲಿ ಶನಿ ದೋಷವಿದ್ದರೆ ಚಿಂತಿಸಬೇಡಿ. ಶನಿವಾರದಂದು ಶನೀಶ್ವರನನ್ನು ಮೆಚ್ಚಿಸಲು ಈ ಸಲಹೆಗಳನ್ನು ಅನುಸರಿಸಿ.

ಶನೀಶ್ವರನ ಮಿತ್ರ ಹನುಮಂತ.ಹಾಗಾಗಿ ಹನುಮಂತನನ್ನು ಪೂಜಿಸುವ ಭಕ್ತರಿಗೆ ಶನೀಶ್ವರನು ಕೆಟ್ಟದ್ದನ್ನು ಮಾಡುವುದಿಲ್ಲ ಎಂದು ನಂಬಲಾಗಿದೆ. ಇದಲ್ಲದೆ, ಶನಿವಾರದಂದು ಕಾಗೆ, ಇರುವೆ ಮತ್ತು ನಾಯಿಗಳಿಗೆ ಆಹಾರವನ್ನು ನೀಡುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ.

ಶನಿವಾರದಂದು ಶ್ರದ್ಧಾ ಭಕ್ತಿಯಿಂದ ವೆಂಕಟೇಶ್ವರನನ್ನು ಪೂಜಿಸುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಇದಲ್ಲದೆ ಆಂಜನೇಯನಿಗೆ ವೀಳ್ಯದೆಲೆಯನ್ನು ಅರ್ಪಿಸಬೇಕು. ಶನೀಶ್ವರನ ಆರಾಧನೆಯಿಂದ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ನಿಮ್ಮ ಕುಟುಂಬ ಆರೋಗ್ಯವಾಗಿರಲು ಈ ವಾಸ್ತು ಸಲಹೆಯನ್ನು ಅಳವಡಿಸಿಕೊಳ್ಳಿ

ಜಾತಕದಲ್ಲಿ ಶನಿದೋಷವಿದ್ದರೆ ಶನೀಶ್ವರನ ದೇವಸ್ಥಾನದಲ್ಲಿ ಎಣ್ಣೆ ಮತ್ತು ಎಳ್ಳೆಣ್ಣೆಯಿಂದ ಅಭಿಷೇಕವನ್ನು ಮಾಡಬೇಕು. ಶನಿ ದೇವರ ಕೃಪೆಗಾಗಿ ಬಡವರಿಗೆ ಅನ್ನ, ವಸ್ತ್ರಗಳನ್ನು ದಾನ ಮಾಡುವುದರಿಂದ ದೇವರ ಅನುಗ್ರಹವಾಗುತ್ತದೆ ಎಂಬ ನಂಬಿಕೆ ಇದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us