Shiva Puja: ಶಿವಪೂಜೆಯಲ್ಲಿ ಶಂಖ ಏಕೆ ಬಳಸಬಾರದು? ಇದರ ಹಿಂದಿನ ಪೌರಾಣಿಕ ಮತ್ತು ಆಧ್ಯಾತ್ಮಿಕ ರಹಸ್ಯ ಇಲ್ಲಿ ತಿಳಿಯಿರಿ

ಹಿಂದೂ ಧರ್ಮದಲ್ಲಿ ಶಂಖದ ಧ್ವನಿಯನ್ನು ಅತ್ಯಂತ ಮಂಗಳಕರ ಮತ್ತು ಧನಾತ್ಮಕ ಶಕ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಆದರೆ ಶಂಖವನ್ನು ಶಿವಪೂಜೆಯಲ್ಲಿ ಮಾತ್ರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭೋಲೇನಾಥನ ಆರಾಧನೆಯಲ್ಲಿ ಶಂಖವನ್ನು ಬಳಸದಿರಲು ಕಾರಣವೇನು? ಇದರ ಹಿಂದಿರುವ ರೋಚಕ ಪೌರಾಣಿಕ ಕಥೆ ಮತ್ತು ಆಧ್ಯಾತ್ಮಿಕ ರಹಸ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Shiva Puja: ಶಿವಪೂಜೆಯಲ್ಲಿ ಶಂಖ ಏಕೆ ಬಳಸಬಾರದು? ಇದರ ಹಿಂದಿನ ಪೌರಾಣಿಕ ಮತ್ತು ಆಧ್ಯಾತ್ಮಿಕ ರಹಸ್ಯ ಇಲ್ಲಿ ತಿಳಿಯಿರಿ
ಶಿವಪೂಜೆಯಲ್ಲಿ ಶಂಖ
Image Credit source: Pinterest

Updated on: Jun 03, 2026 | 2:29 PM

ಹಿಂದೂ ಧರ್ಮದಲ್ಲಿ ಶಂಖದ ಧ್ವನಿಯನ್ನು ಅತ್ಯಂತ ಮಂಗಳಕರ ಮತ್ತು ಧನಾತ್ಮಕ ಶಕ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಆದರೆ, ಶ್ರಾವಣ ಮಾಸವಿರಲಿ ಅಥವಾ ಮಹಾಶಿವರಾತ್ರಿಯಿರಲಿ, ಶಿವನಿಗೆ ಜಲಾಭಿಷೇಕ ಮಾಡುವಾಗ ಅಥವಾ ಪೂಜಿಸುವಾಗ ಶಂಖವನ್ನು ಬಳಸಬಾರದು ಎಂದು ಶಾಸ್ತ್ರಗಳು ಹೇಳುತ್ತವೆ.

ಪೌರಾಣಿಕ ಕಾರಣ:

ಶಿವಪುರಾಣದಲ್ಲಿ ಉಲ್ಲೇಖವಾಗಿರುವಂತೆ, ಹಿಂದೆ ‘ಶಂಖಚೂಡ’ ಎಂಬ ಪ್ರಬಲ ರಾಕ್ಷಸನಿದ್ದನು. ಆತನ ಕಾಟದಿಂದ ದೇವತೆಗಳೆಲ್ಲರೂ ತತ್ತರಿಸಿದಾಗ, ಭಗವಾನ್ ಶಿವನು ತನ್ನ ತ್ರಿಶೂಲದಿಂದ ಆತನನ್ನು ಸಂಹರಿಸುತ್ತಾನೆ. ಶಂಖಚೂಡನ ದೇಹವು ಭಸ್ಮವಾಗಿ ಸಮುದ್ರದಲ್ಲಿ ಬಿದ್ದಾಗ, ಅದರಿಂದ ‘ಶಂಖ’ ಉದ್ಭವವಾಯಿತು ಎಂದು ಹೇಳಲಾಗುತ್ತದೆ.

ಕೆಲವು ಧರ್ಮಗ್ರಂಥಗಳಲ್ಲಿ ಶಂಖವನ್ನು “ಮೃತಜ” (ಮೃತದೇಹದಿಂದ ಹುಟ್ಟಿದ್ದು) ಎಂದು ಕರೆಯಲಾಗಿದೆ. ಶಿವನು ತಾನು ವಧಿಸಿದ ರಾಕ್ಷಸನ ಭಾಗದಿಂದ ಉತ್ಪನ್ನವಾದ ವಸ್ತುವನ್ನು ಪೂಜೆಯಲ್ಲಿ ಸ್ವೀಕರಿಸುವುದಿಲ್ಲ. ಆದ್ದರಿಂದಲೇ, ಶಿವಲಿಂಗಕ್ಕೆ ಶಂಖದಿಂದ ನೀರು ಅಥವಾ ಹಾಲನ್ನು ಅರ್ಪಿಸುವುದು ನಿಷಿದ್ಧವಾಗಿದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಶಂಖವು ಶ್ರೀಹರಿಯ ಆಯುಧ ಮತ್ತು ವೈಷ್ಣವ ಸಂಕೇತ:

ಶಂಖವು ಲಕ್ಷ್ಮಿ ದೇವಿಯ ಸೋದರ (ಸಮುದ್ರ ಮಂಥನದಿಂದ ಜನಿಸಿದ್ದು) ಹಾಗೂ ಭಗವಾನ್ ವಿಷ್ಣುವಿನ ಪರಮ ಪ್ರಿಯವಾದ ಆಯುಧವಾಗಿದೆ. ಇದು ಮುಖ್ಯವಾಗಿ ವೈಷ್ಣವ ಸಂಪ್ರದಾಯ ಮತ್ತು ಲೌಕಿಕ ಸಮೃದ್ಧಿಗೆ ಸಂಬಂಧಿಸಿದ್ದಾಗಿದೆ. ಶಂಖದ ಧ್ವನಿಯು ವಿಜಯ, ವೈಭವ ಮತ್ತು ಐಶ್ವರ್ಯವನ್ನು ಪ್ರತಿನಿಧಿಸುತ್ತದೆ. ಆದರೆ, ಶಿವನು ಎಲ್ಲವನ್ನೂ ತ್ಯಜಿಸಿದ ವೈರಾಗ್ಯ ಮೂರ್ತಿ.

ಶಿವನು ನಿರ್ಲಿಪ್ತತೆಯ ಹಾಗೂ ಮೌನದ ದೇವರು:

ಶ್ರೀಹರಿ ವಿಷ್ಣುವು ಜಗತ್ತಿನ ಪಾಲಕನಾಗಿದ್ದು, ಆತನ ಆರಾಧನೆಯು ವೈಭವದಿಂದ ಕೂಡಿರುತ್ತದೆ. ಅದಕ್ಕೆ ವ್ಯತಿರಿಕ್ತವಾಗಿ, ಶಿವನು ಕೈಲಾಸದಲ್ಲಿ ಅಥವಾ ಶ್ಮಶಾನದಲ್ಲಿ ವಾಸಿಸುವ ತಪಸ್ವಿ. ಶಿವನನ್ನು ಯೋಗ, ಧ್ಯಾನ, ಮೌನ ಮತ್ತು ಏಕಾಗ್ರತೆಯ ಮೂಲಕ ಪೂಜಿಸಲಾಗುತ್ತದೆ. ಶಂಖದ ತೀವ್ರವಾದ ಧ್ವನಿಯು ಧ್ಯಾನಸ್ಥನಾಗಿರುವ ಶಿವನ ಮೌನಕ್ಕೆ ಭಂಗ ತರುತ್ತದೆ ಎಂಬ ನಂಬಿಕೆಯಿದೆ.

ಶಿವನ ಆರಾಧನೆಯಲ್ಲಿ ಬಾಹ್ಯ ಅಬ್ಬರಕ್ಕಿಂತ ಆಂತರಿಕ ಶಾಂತಿ ಮತ್ತು ಮೌನ ಧ್ಯಾನಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಮೌನವಾಗಿ ಮಾಡುವ ಶಿವಸ್ಮರಣೆಯು ಕೋಟಿ ಪಟ್ಟು ಹೆಚ್ಚು ಫಲಪ್ರದ ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us