ಹಿಂದೂ ಧರ್ಮದ ಪ್ರಕಾರ ಸ್ವಸ್ತಿಕ ಚಿಹ್ನೆ ಪ್ರಾಮುಖ್ಯತೆ, ಪ್ರಾಧಾನ್ಯತೆ ಏನೆಂಬುದರ ವಿವರ ಇಲ್ಲಿ ನೀಡಲಾಗಿದೆ. ಪವಿತ್ರವಾದ ಸ್ವಸ್ತಿಕ ಆಕಾರದಲ್ಲಿ ದೇವಾನುದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆಯಿದೆ. ಸ್ವಸ್ತಿಕ ಲಾಂಛನ ಇದ್ದೆಡೆ ನಕಾರಾತ್ಮಕತೆ ದೂರವಾಗುತ್ತದೆ. ವಾಸ್ತಯು ಶಾಸ್ತ್ರದ ಪ್ರಕಾರವು ಸ್ವಸ್ತಿಕಕ್ಕೆ ಮಹತ್ವ ಇದೆ. ಸ್ವಸ್ತಿಕ (卐) ಲಾಂಛನದ (Swastika in Hinduism) ನಾಲ್ಕು ಬಾಹುಗಳು 90 ಡಿಗ್ರಿಯಲ್ಲಿ ಬಾಗಿರುತ್ತವೆ. ಸಾಮಾನ್ಯವಾಗಿ ಒಂದು ಸಮಬಾಹು ಕ್ರಾಸ್ ಆಕಾರದ ರೂಪವನ್ನು ತೆಗೆದುಕೊಳ್ಳುವ ಒಂದು ಸಂಕೇತ. ಸ್ವಸ್ತಿಕ ಆಕಾರದ ಆಭರಣಗಳ ಅತ್ಯಂತ ಪ್ರಾಚೀನ ಪುರಾತತ್ವ ಪುರಾವೆಗಳು ಸಿಂಧೂ ಕಣಿವೆಯ ನಾಗರಿಕತೆ, ಮತ್ತು ಜೊತೆಗೆ ಮೆಡಿಟರೇನಿಯನ್ ಶಾಸ್ತ್ರೀಯ ಪ್ರಾಚೀನತೆ ಹಾಗು ಪ್ರಾಚೀನ ಶಿಲಾಯುಗದ ಯೂರೋಪ್‍ನ ಕಾಲಮಾನದ್ದೆಂದು ನಿರ್ಧರಿಸಲಾಗಿದೆ. ಟರ್ಕಿ, ಭಾರತ, ಇರಾನ್, ನೇಪಾಳ, ಚೀನಾ, ಜಪಾನ್, ಕೊರಿಯಾ ಮತ್ತು ಯೂರೋಪ್ ಅನ್ನು ಒಳಗೊಂಡಂತೆ ಪ್ರಪಂಚದಾದ್ಯಂತ ನಾನಾ ಪ್ರಾಚೀನ ನಾಗರಿಕತೆಗಳಲ್ಲೂ ಸ್ವಸ್ತಿಕ ಚಿಹ್ನೆಗಳನ್ನು ಬಳಸಲಾಗಿದೆ. ಇಂತಹ ನಿಗೂಢ ಸ್ವಸ್ತಿಕ ಚಿಹ್ನೆ ಮಹತ್ವಗಳ ಬಗ್ಗೆ ತಿಳಿಯೋಣ ಬನ್ನೀ.
ಸನಾತನ ಧರ್ಮದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಬಹಳ ಶುಭದಾಯಕ ಅನ್ನುತ್ತಾರೆ. ಯಾವುದೆ ಕೆಲಸ ಆರಂಭಿಸುವ ಸಮಯದಲ್ಲಿ ಜನ ಸ್ವಸ್ತಿಕ ಚಿಹ್ನೆಯನ್ನು ಬಿಡಿಸುತ್ತಾರೆ. ಏಕೆಂದರೆ ಸ್ವಸ್ತಿಕವನ್ನು ಸೀದಾ ವಿನಾಯಕನ ಜೊತೆ ತಳುಕು ಹಾಕಲಾಗುತ್ತದೆ. ಸ್ವಸ್ತಿಕ ಶಬ್ದವು ಸು ಮತ್ತು ಅಸ್ತಿಕಾ ಸೇರಿ ಮೂಡುವ ಪದವಾಗಿದೆ. ಸು ಅಂದರೆ ಶುಭ ಎಂದರ್ಥ. ಮತ್ತು ಅಸ್ತಿಕಾ ಶಬ್ದದ ಅರ್ಥ ಆಗುವುದು ಎಂದು. ಅಂದರೆ ಸ್ವಸ್ತಿಕ ಶಬ್ದದಿಂದ ಶುಭ ಆಗುವುದು ಎಂದರ್ಥ. ಸ್ವಸ್ತಿಕ ಲಾಂಛನವನ್ನು ಮನೆಯ ಮುಂದೆ ಇಟ್ಟರೆ ಹೊರಗಿನಿಂದ ನಕಾರಾತ್ಮಕ ಭಾವನೆಗಳು ಒಳನುಸುಳುವುದಿಲ್ಲ. ಮನೆಯಿಂದ ಆಚೆಗೆ ಅಲ್ಲಿಂದ ಹಾಗೆಯೇ ಹೊರಟುಬಿಡುತ್ತದೆ ಎಂಬ ನಂಬಿಕೆಯಿದೆ. ಸ್ವಸ್ತಿಕ ಲಾಂಛನವು ಸಕಾರಾತ್ಮಕತೆಯ ಪ್ರತೀಕ ಎಂಬುದು ಸರ್ವ ಸ್ವೀಕೃತ ಸಂಗತಿಯಾಗಿದೆ. ಸ್ವಸ್ತಿಕ ಲಾಂಛನವು ನಾಲ್ಕು ಋತುಗಳನ್ನೂ ಪ್ರತಿನಿಧಿಸುತ್ತದೆ. ಅದು ಸಮೃದ್ಧಿಯ ಧ್ಯೋತಕವಾಗಿದೆ.
ಸ್ವಸ್ತಿಕ ಲಾಂಛನವೆಂದರೆ ಅದನ್ನು ವಿಘ್ನನಿವಾರಕ ಗಣಪನ ರೂಪದಲ್ಲಿ ನೋಡುತ್ತಾರೆ. ಸ್ವಸ್ತಿಕ ಚಿಹ್ನೆಯ ಎಡಕ್ಕೆ ಇರುವ ಭಾಗವನ್ನು ಗಂ ಬೀಜ ಮಂತ್ರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಗಣಪತಿಯನ್ನು ಸ್ಥಾಪಿಸಿದಂತಾಗುತ್ತದೆ. ಸ್ವಸ್ತಿಕ ಲಾಂಛನದ ನಾಲ್ಕೂ ದಿಕ್ಕುಗಳಲ್ಲಿ ಇಡುವ ಬಿಂದಿ ಅಥವಾ ಚುಕ್ಕಿಗಳು ತಾಯಿ ಗೌರಿ, ಭೂ ತಾಯಿ ಮತ್ತು ಕೂರ್ಮಾ ಮತ್ತು ದೇವಾನುದೇವತೆಗಳ ಆವಾಸ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಸ್ವಸ್ತಿಕ ಲಾಂಛನಕ್ಕೆ ವಿಶೇಷ ಮಹತ್ವ ಇರುವುದು.
ಸ್ವಸ್ತಿಕಕ್ಕೆ ಬ್ರಹ್ಮನ ಜೊತೆಗೂ ಇದೆ ನಂಟು. ಸ್ವಸ್ತಿಕದ ನಾಲಕ್ಕೂ ರೇಖೆಗಳಿಗೆ ಬ್ರಹ್ಮನ ಜೊತೆಗೆ ಸಂಬಂಧವಿದೆ. ಸ್ವಸ್ತಿಕದ ನಾಲಕ್ಕೂ ರೇಖೆಗಳನ್ನು ಬ್ರಹ್ಮನ ನಾಲ್ಕು ಶಿರಗಳು ಎಂದು ಪರಿಗಣಿಸಲಾಗುತ್ತದೆ. ಸ್ವಸ್ತಿಕದ ನಾಲ್ಕು ಮಂಡಲಗಳ ಮಧ್ಯೆ ಬಿಂದು ವಿಷ್ಣು ಭಗವಂತನ ನಾಭಿ ಎಂದು ಭಾವಿಸಲಾಗುತ್ತದೆ. ನಾಲ್ಕು ಮಂಡಲಗಳ ಮಧ್ಯೆ ಬಿಂದು ಇನ್ನು ಸ್ವಸ್ತಿಕದ ನಾಲಕ್ಕೂ ರೇಖೆಗಳನ್ನು ಗಡಿಯಾರದ ದಿಕ್ಕಿನಲ್ಲಿ ಬಿಡಿಸಲಾಗುತ್ತದೆ. ಅಂದರೆ ಸರಿಯಾದ ದಿಕ್ಕಿನಲ್ಲಿ, ಸರಿಯಾದ ಸಮಯದಲ್ಲಿ, ಉಲ್ಟಾ ದಿಕ್ಕಿನಲ್ಲಿ ಹೋಗದೆ ಜೀವನದಲ್ಲಿಯೂ ಮುಂದೆ ಚಲಿಸಬಹುದು.