Spiritual: ಬುಧನ ಆರಾಧನೆ  ಹೇಗೆ ? ಯಾವಾಗ ಬುಧನ ಪೂಜೆ ಮಾಡಬೇಕು?

ನವಗ್ರಹ ಮಂಡಲದಲ್ಲಿ ಸೂರ್ಯನಿಂದ ಈಶಾನ್ಯ ಭಾಗದಲ್ಲಿ ಬುಧನ ಸ್ಥಾನ.ಬಾಣಾಕಾರ (ಬಿಲ್ಲಿನ ರೂಪದಲ್ಲಿ ) ಮಂಡಲವನ್ನು ಹಸಿರು ಬಣ್ಣದಿಂದ ಬರೆದು ಬುಧನ ಪೂಜೆ ಮಾಡುವುದು ಪದ್ಧತಿ. ಈ ಚಿಹ್ನೆಯ ಲಕ್ಷಣದಂತೆ ತೀಕ್ಷ್ಣಮತಿಯನ್ನು ಇವನ ಅನುಗ್ರದಿಂದಲೇ ಪಡೆಯಬೇಕು. ಬುಧನೊಬ್ಬ ಸಾತ್ವಿಕ ಗ್ರಹ.

Spiritual: ಬುಧನ ಆರಾಧನೆ  ಹೇಗೆ ? ಯಾವಾಗ ಬುಧನ ಪೂಜೆ ಮಾಡಬೇಕು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 30, 2022 | 7:05 AM

ಬುಧ ಎಂಬ ಶಬ್ದದ ಅರ್ಥವೇ ಜ್ಞಾನಿ, ಪಂಡಿತ ,ಉತ್ತಮವಾದ ಜ್ಞಾನವುಳ್ಳವನು ಎಂದು. ಬುಧನ ಆರಾಧನೆಯನ್ನು ಬುಧವಾರದಂದು ಮಾಡಿದರೆ ವಿಶೇಷ. ಬುಧವಾರಕ್ಕೆ ವಿಷ್ಣುವಾರವೆಂದೂ ಹೆಸರಿದೆ. ಬುಧನ ಅಧಿದೇವತೆ ವಿಷ್ಣು . “ಸೌಮ್ಯಃಸೌಖ್ಯಕರಃ” ಎಂಬ ಜ್ಯೌತಿಷ ಶಾಸ್ತ್ರದ ಉಕ್ತಿಯ ಪ್ರಕಾರ ಬುಧನು ಸೌಖ್ಯವನ್ನು ನೀಡುವಾತ. ಜಗತ್ತಿನ ಸ್ಥಿತಿಯ ಕರ್ತಾ ಭಗವಾನ್ ವಿಷ್ಣು ಎಂಬುದು ಪುರಾಣದ ಮಾತು. ಈ ಕಾರಣದಿಂದಲೇ ಬುಧನನ್ನು ಸೌಖ್ಯವನ್ನು ನೀಡುವಾತ ಎಂದಿರಬೇಕು. ಹಾಗೆಯೇ ಬುಧನು ವಿದ್ಯಾಪ್ರದಾಯಕ ಮತ್ತು ಮಾತಿನ ಕಾರತ್ವವನ್ನು ಹೊಂದಿರುರವನು. ಬುಧನು ನಮ್ಮ ಕುಂಡಲಿಯಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಒಳ್ಳೆಯ ವಿದ್ಯೆ ಮತ್ತು ಮಾತಿನ ಕೌಶಲವನ್ನು ನೀಡುತ್ತಾನೆ. ಅಕಸ್ಮಾತ್ ಆಗಿ ಬುಧ ಅನುಕೂಲ ಸ್ಥಾನದಲ್ಲಿರದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಅದಕ್ಕೆ ಸುಲಭ ಪರಿಹಾರಗಳಿವೆ.

ನವಗ್ರಹ ಮಂಡಲದಲ್ಲಿ ಸೂರ್ಯನಿಂದ ಈಶಾನ್ಯ ಭಾಗದಲ್ಲಿ ಬುಧನ ಸ್ಥಾನ.ಬಾಣಾಕಾರ (ಬಿಲ್ಲಿನ ರೂಪದಲ್ಲಿ ) ಮಂಡಲವನ್ನು ಹಸಿರು ಬಣ್ಣದಿಂದ ಬರೆದು ಬುಧನ ಪೂಜೆ ಮಾಡುವುದು ಪದ್ಧತಿ. ಈ ಚಿಹ್ನೆಯ ಲಕ್ಷಣದಂತೆ ತೀಕ್ಷ್ಣಮತಿಯನ್ನು ಇವನ ಅನುಗ್ರದಿಂದಲೇ ಪಡೆಯಬೇಕು. ಬುಧನೊಬ್ಬ ಸಾತ್ವಿಕ ಗ್ರಹ. ಬುಧನು ನಮ್ಮ ಕುಂಡಲಿಯಲ್ಲಿ ವಕ್ರಗತಿಯನ್ನು ಹೊಂದಿದವನಾಗಿದ್ದರೆ ಮತ್ತು ಚಂದ್ರನೊಡನೆ ಸೇರಿಕೊಂಡಿದ್ದರೆ ಅತ್ಯಂತ ಉತ್ತಮ ಫಲ ನೀಡುತ್ತಾನೆ. ಅದೇ ಬುಧನು ರವಿಯೊಡನೆ ಇದ್ದು ಅಸ್ತಂಗತನಾಗಿದ್ದರೆ ಅಶುಭ ಫಲ ನೀಡುವನು. ಉದಾಹರಣೆಗೆ ವಿದ್ಯಾರ್ಥಿಗಳಲ್ಲಿ ಕಾಣಬಹುದು. ಒಳ್ಳೆಯ ಅಭ್ಯಾಸ ಮಾಡಿದರೂ ಫಲಿತಾಂಶ ಕಡಿಮೆ, ಮರೆತು ಹೋಗುವುದು, ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವುದು ಇತ್ಯಾದಿ ಕಂಡುಬರುವುದು. ಮಧ್ಯವಯಸ್ಕರಿಗೆ ಮರೆವಿನ ಸಮಸ್ಯೆಗೂ ಬುಧನ ಅಸ್ತ ಸ್ಥಿತಿಯೇ ಕಾರಣ. ಅದೇ ಬುಧ ಅನುಕೂಲದಲ್ಲಿದ್ದರೆ ಒಳ್ಳೆಯ ವಾಕ್ಪಟುತ್ವ , ಒಳ್ಳೆಯ ವಿದ್ಯೆ, ಉತ್ತಮ ಸ್ಥಾನ-ಮಾನಗಳ ಪ್ರಾಪ್ತಿಯಾಗುತ್ತದೆ.

ಇದನ್ನು ಓದಿ: ನಿಮ್ಮಲ್ಲಿ ಭಕ್ತಿ ಇದೆಯೇ ? ಭಕ್ತಿ ಹೇಗಿರಬೇಕು?

ಇದನ್ನೂ ಓದಿ
Image
Spiritual: ನಿಮ್ಮಲ್ಲಿ ಭಕ್ತಿ ಇದೆಯೇ ? ಭಕ್ತಿ ಹೇಗಿರಬೇಕು?
Image
Vastu Tips: ಮನೆಯಲ್ಲಿ ಓಡುತ್ತಿರುವ ಏಳು ಕುದುರೆಗಳ ಪೇಂಟಿಂಗ್ ಹಾಕುವುದರಿಂದ ನಿಮಗೆ ಸಿಗುತ್ತೆ ಅನೇಕ ಲಾಭ, ಈ ಚಿತ್ರದ ಮಹತ್ವವೇನು ಗೊತ್ತಾ?
Image
House Construction: ಚಾಣಕ್ಯ ನೀತಿಯ ಪ್ರಕಾರ ಈ ಜಾಗದಲ್ಲಿ ಮನೆಗಳನ್ನು ನಿರ್ಮಿಸಲೇ ಬಾರದು, ಅದು ಎಲ್ಲೆಲ್ಲಿ ಗೊತ್ತಾ?
Image
Spiritual: ಮನಸ್ಸಿನ ಶುಭ್ರತೆಗೆ ಏನು ಮಾಡಬೇಕು ? ಚಂದ್ರನ ಆರಾಧನೆ ಹೇಗೆ ?

ಇವನು ಅನುಕೂಲ ಸ್ಥಾನದಲ್ಲಿರದಿದ್ದರೆ ಏನು ಮಾಡಬೇಕು ಎಂಬುದಾಗಿ ನೋಡೋಣ – ಬುಧನ ಮಂತ್ರಜಪ, ವಿಷ್ಣುಸಹಸ್ರನಾಮ ಓದುವುದು / ಕೇಳುವುದು , ಅಶ್ವತ್ಥ ಪ್ರದಕ್ಷಿಣೆ, ಅಷ್ಟಾಕ್ಷರಿ ಮಂತ್ರ ಜಪ ಅಲ್ಲದೇ ಉತ್ತರಣೆ ಸಮಿಧೆಯಿಂದ ಬುಧನ ಕುರಿತಾದ ಹವನವನ್ನು ಮಾಡುವುದು.ಅಲ್ಲದೇ ಬುಧನಿಗೆ ಹಸಿರು ಬಣ್ಣ ಅತ್ಯಂತ ಪ್ರಿಯ. ಆದ್ದರಿಂದ ಹಸಿರು ಬಣ್ಣದ ವಸ್ತ್ರವನ್ನು ದಾನ ಮಾಡುವುದು,ಪಚ್ಚೆಹಸರು ಕಾಳನ್ನು ಆರ್ತರಿಗೆ ನೀಡುವುದು ಉತ್ತಮ ಕಾರ್ಯ. ವೈಜ್ಞಾನಿಕವಾಗಿಯು ಹಸಿರು ಬಣ್ಣವೆಂಬು ಧನಾತ್ಮಕ(ಸಕಾರಾತ್ಮಕ) ಚಿಂತನೆಗೆ ಸಹಕಾರಿ . ಇವೆಲ್ಲದರಿಂದ ಉತ್ತಮ ಫಲ ಸಾಧ್ಯ.

ಬುಧನು ಬುದ್ಧಿಪ್ರದನಾದ್ದರಿಂದ ಅವನ ಮಂತ್ರ ಜಪಿಸಿ ನಾವು ಇನ್ನೂ ಹೆಚ್ಚಿನ ಬುದ್ಧಿವಂತರಾಗೋಣ.

ಪ್ರಿಯಂಗುಕಲಿಕಾಭಾಸಂ ರೂಪೇಣಾಪ್ರತಿಮಂ ಬುಧಂ |

ಸೌಮ್ಯಂ ಸರ್ವಗುಣೋಪೇತಂ ನಮಾಮಿ ಶಶಿನಃ ಸುತಂ ||

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College, ಹೊನ್ನಾವರ, kkmanasvi@gamail.com