ನಿರ್ಜಲ ಏಕಾದಶಿ: ವಿಷ್ಣು ಮತ್ತು ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಈ ಕ್ರಮಗಳು ಸಾಕು

Nirjala Ekadashi 2024: ನಿರ್ಜಲ ಏಕಾದಶಿಯಂದು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಬಹಳ ಮುಖ್ಯ. ನಿರ್ಜಲ ಏಕಾದಶಿ ವ್ರತದ ವಿಧಿವತ್ತಾದ ಆಚರಣೆಯು ನಿಮಗೆ ಗೊತ್ತಿದ್ದೂ ತಿಳಿಯದೆಯೂ ಮಾಡಿದ ಪಾಪಗಳಿಂದ ಮುಕ್ತಿ ನೀಡುತ್ತದೆ. ನಿರ್ಜಲ ಏಕಾದಶಿಯಂದು ಉಪವಾಸ ಮಾಡುವುದರಿಂದ ವರ್ಷವಿಡೀ ಏಕಾದಶಿಯ ಉಪವಾಸಕ್ಕೆ ಸಮಾನವಾದ ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ.

ನಿರ್ಜಲ ಏಕಾದಶಿ: ವಿಷ್ಣು ಮತ್ತು ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಈ ಕ್ರಮಗಳು ಸಾಕು
ನಿರ್ಜಲ ಏಕಾದಶಿ ದಿನದಂದು ಮಾಡಬೇಕಾದ ಪೂಜಾ ವಿಧಿ ವಿಧಾನಗಳು ಏನು?
Follow us
|

Updated on: Jun 17, 2024 | 6:06 AM

ಹಿಂದೂ ಧರ್ಮದಲ್ಲಿ ಏಕಾದಶಿ ತಿಥಿಗೆ ವಿಶೇಷ ಮಹತ್ವವಿದೆ. ಈ ತಿಥಿಯನ್ನು ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ರೀ ಮಹಾ ವಿಷ್ಣುವಿಗೆ (Lord Vishnu, Goddess Lakshmi) ಸಮರ್ಪಿಸಲಾಗಿದೆ. ಒಂದು ವರ್ಷದಲ್ಲಿ ಒಟ್ಟು 24 ಏಕಾದಶಿ ತಿಥಿಗಳಿವೆ. ಅಂದರೆ ಪ್ರತಿ ತಿಂಗಳು 2 ಏಕಾದಶಿ ತಿಥಿಗಳು ಬರುತ್ತವೆ. ಒಂದೊಂದು ಏಕಾದಶಿಯನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಒಂದೊಂದು ವಿಶೇಷತೆ ಇದೆ. ಹಾಗೆಯೇ ಜ್ಯೇಷ್ಠ ಮಾಸದ ಶುಕ್ಲ ಪಕ್ಷ ಏಕಾದಶಿ ತಿಥಿಯನ್ನು ನಿರ್ಜಲ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಏಕಾದಶಿಯಂದು ಆಹಾರವಿಲ್ಲದೆ ಮತ್ತು ಒಂದು ಹನಿ ನೀರು ಕುಡಿಯದೆ ಉಪವಾಸವನ್ನು ಆಚರಿಸುವುದರಿಂದ ಈ ಏಕಾದಶಿಯನ್ನು ನಿರ್ಜಲ ಏಕಾದಶಿ ಎಂದು ಕರೆಯಲಾಗುತ್ತದೆ. ನಿರ್ಜಲ ಏಕಾದಶಿಯು (Nirjala Ekadashi 2024) ವರ್ಷದ ಅತ್ಯಂತ ಶಕ್ತಿಶಾಲಿ ದಿನವಾಗಿದೆ. ಅತ್ಯಂತ ಮಂಗಳಕರ ಏಕಾದಶಿ ಎಂದೂ ಕರೆಯುತ್ತಾರೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ನಿರ್ಜಲ ಏಕಾದಶಿ ದಿನದಂದು ಉಪವಾಸ ಮಾಡುವುದರಿಂದ ವರ್ಷದಲ್ಲಿ 24 ಏಕಾದಶಿಗಳ ಪುಣ್ಯ ಲಭಿಸುತ್ತದೆ.

ನಿರ್ಜಲ ಏಕಾದಶಿಯಂದು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಬಹಳ ಮುಖ್ಯ. ನಿರ್ಜಲ ಏಕಾದಶಿ ವ್ರತದ ವಿಧಿವತ್ತಾದ ಆಚರಣೆಯು ನಿಮಗೆ ಗೊತ್ತಿದ್ದೂ ತಿಳಿಯದೆಯೂ ಮಾಡಿದ ಪಾಪಗಳಿಂದ ಮುಕ್ತಿ ನೀಡುತ್ತದೆ. ನಿರ್ಜಲ ಏಕಾದಶಿಯಂದು ಉಪವಾಸ ಮಾಡುವುದರಿಂದ ವರ್ಷವಿಡೀ ಏಕಾದಶಿಯ ಉಪವಾಸಕ್ಕೆ ಸಮಾನವಾದ ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ. ಈ ವರ್ಷ ನಿರ್ಜಲ ಏಕಾದಶಿ ವ್ರತವನ್ನು ಜೂನ್ 18 ರಂದು ಆಚರಿಸಲಾಗುತ್ತದೆ. ಹಾಗಾದರೆ ಈ ದಿನದಂದು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಯೋಣ.

ನಿರ್ಜಲ ಏಕಾದಶಿ ದಿನದಂದು ಮಾಡಬೇಕಾದ ಪೂಜಾ ವಿಧಿ ವಿಧಾನಗಳು ಏನು?

ನಿರ್ಜಲ ಏಕಾದಶಿಯಂದು ವಿಷ್ಣುವನ್ನು ಶಾಸ್ತ್ರೋಕ್ತವಾಗಿ ಪೂಜಿಸಿದ ನಂತರ ಚಂದನ ತಿಲಕವನ್ನು ಮಾಡಬೇಕು. ಇದರೊಂದಿಗೆ ‘ಓಂ ಅಹ ಅನಿರುದ್ಧಾಯ ನಮಃ’ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಹೀಗೆ ಮಾಡುವುದರಿಂದ ಜೀವನದಲ್ಲಿ ಸುಖ, ಸಮೃದ್ಧಿ ಸಿಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.

ಇದನ್ನೂ ಓದಿ: ನಿರ್ಜಲ ಏಕಾದಶಿ ದಿನದಂದು ಈ ಪರಿಹಾರಗಳು ಮತ್ತು ಪೂಜಾ ನಿಯಮಗಳು ನಿಮಗಾಗಿ..

ದಾಂಪತ್ಯ ಜೀವನದಲ್ಲಿ ಸುಖವಾಗಿರಲು ನಿರ್ಜಲ ಏಕಾದಶಿಯಂದು ಮನೆಯಲ್ಲಿರುವ ತುಳಸಿ ಗಿಡದ ಬಳಿ ಶುದ್ಧ ಹಸುವಿನ ತುಪ್ಪದಿಂದ 11 ದೀಪಗಳನ್ನು ಹಚ್ಚಬೇಕು. ಇದರೊಂದಿಗೆ ತುಳಸಿ ಗಿಡದ ಸುತ್ತಲೂ 11 ಬಾರಿ ಪ್ರದಕ್ಷಿಣೆ ಮಾಡಬೇಕು. ಇದನ್ನು ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಪೂಜಾ ಕೋಣೆಯ ನಿರ್ಮಾಣದಲ್ಲಿ ಈ 6 ತಪ್ಪುಗಳನ್ನು ಮಾಡಬೇಡಿ -ವಾಸ್ತು ತಜ್ಞರ ಸಲಹೆಗಳನ್ನು ಪಾಲಿಸಿ

ಜೀವನದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದಲು ನಿರ್ಜಲ ಏಕಾದಶಿ ಅತ್ಯುತ್ತಮ ದಿನವಾಗಿದೆ. ನಿರ್ಜಲ ಏಕಾದಶಿಯಂದು ಭಗವಾನ್ ವಿಷ್ಣುವಿಗೆ ಅಕ್ಕಿಯಿಂದ ಮಾಡಿದ ಪಾಯಸವನ್ನು ನೈವೇದ್ಯ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಿಹಿಗೆ ತುಳಸಿ ಎಲೆಗಳನ್ನು ಹಾಕಿ ದೇವರಿಗೆ ನೈವೇದ್ಯ ಮಾಡುವುದರಿಂದ ಜೀವನದ ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ.

ಯಾರದೇ ಜಾತಕದಲ್ಲಿ ಯಾವುದೇ ರೀತಿಯ ದೋಷವಿದ್ದರೆ, ಅದನ್ನು ಹೋಗಲಾಡಿಸಲು ನೀರು, ಹಳದಿ ಹಣ್ಣುಗಳು, ಬಟ್ಟೆ, ಮಾವಿನಹಣ್ಣು, ಕಲ್ಲಂಗಡಿ ಅಥವಾ ಸಕ್ಕರೆ ಇತ್ಯಾದಿಗಳನ್ನು ಬ್ರಾಹ್ಮಣ ಅಥವಾ ಬಡವರಿಗೆ ನೀಡಿ. ಇದನ್ನು ಮಾಡುವುದು ಅತ್ಯಂತ ಪವಿತ್ರವಾದುದು ಎಂದು ಪರಿಗಣಿಸಲಾಗಿದೆ.

ನಿರ್ಜಲ ಏಕಾದಶಿಯಂದು ಶ್ರೀ ಮಹಾ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಅಥವಾ ಇಡೀ ದಿನ ಉಪವಾಸ ಮಾಡುವಾಗ ‘ಓಂ ನಮೋ ವಾಸುದೇವಾಯ ನಮಃ’ ಎಂಬ ಮಂತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಕೋರಿಕೆ ಈಡೇರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ತಾಜಾ ಸುದ್ದಿ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ