Salt and Goddess Lakshmi: ಗೃಹ ಪ್ರವೇಶ ಮಾಡುವಾಗ ಮತ್ತು ತಿಂಗಳ ಮೊದಲ ದಿನ ಉಪ್ಪು ಖರೀದಿಸಿದರೆ ಸಂಪತ್ತು ವೃದ್ಧಿಸುತ್ತದೆ!
ಉಪ್ಪನ್ನು ನಮ್ಮ ಅಂಗೈಯಲ್ಲಿ ಇಟ್ಟುಕೊಂಡು ನಮ್ಮ ಮನೋಕಾಮನೆ ಈಡೇರಿಸುವಂತೆ ಪ್ರಾರ್ಥಿಸಿದರೆ ಅದು ಈಡೇರುತ್ತದೆ ಎಂಬ ನಂಬಿಕೆಯಿದೆ. ನಮ್ಮ ಮೇಲೆ ಕೆಟ್ಟ ದೃಷ್ಟಿ ತಗಲಿದ್ದರೆ ಅದನ್ನು ಕಡಿಮೆ ಮಾಡುವ ವಸ್ತು ಕಲ್ಲು ಉಪ್ಪು. ಕಲ್ಲುಉಪ್ಪಿನ ಮಹಾತ್ಮೆ ಬಗ್ಗೆ ನಿಮಗೆ ತಿಳಿದಿಲ್ಲದ ಕೆಲವು ಹೊಚ್ಚ ಹೊಸ ಆಧ್ಯಾತ್ಮಿಕ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಕಲ್ಲು ಉಪ್ಪನ್ನು ಮಂಗಳಕರ ದಿನದಂದು ಖರೀದಿಸಲು ಹೇಳಲಾಗುತ್ತದೆ. ಇದೇ ವೇಳೆ ಕೆಲವು ನಿರ್ದಿಷ್ಟ ದಿನಗಳಲ್ಲಿ ಉಪ್ಪನ್ನು ಖರೀದಿಸಬಾರದು ಎಂಬ ಮಾತಿದೆ. ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಿ.

Salt and Goddess Lakshmi: ಉಪ್ಪಿಗಿಂತ ರುಚಿ ಬೇರೆ ಇಲ್ಲ. ಯಾವುದೇ ಅಡುಗೆಗೆ ಉಪ್ಪು ಬೇಕೇಬೇಕು. ಉಪ್ಪು ಬಳಕೆಯಾಗಿಲ್ಲ ಅಂದ್ರೆ ಅಡುಗೆ ಅಪೂರ್ಣವಾಗಿದೆ ಎಂದರ್ಥ. ಉಪ್ಪಿಲ್ಲದ ಆಹಾರ ಕಸದ ಬುಟ್ಟಿಗೆ ಸೇರುತ್ತದೆ ಎಂಬ ಮಾತಿದೆ. ನಾವು ತಿನ್ನುವ ಆಹಾರದಲ್ಲಿ ಉಪ್ಪು ಎಷ್ಟು ಮುಖ್ಯ ಎಂಬುದು ಇದರಿಂದಲೇ ಅರ್ಥವಾಗುತ್ತದೆ. ಈ ಭೂಮಿಯಲ್ಲಿ ಉಪ್ಪಿಲ್ಲದಿದ್ದರೆ ಜೀವವಿಲ್ಲ. ಸಂಪತ್ತಿನ ಅಧಿಪತಿಯಾದ ಲಕ್ಷ್ಮಿ ದೇವಿಯು ಕ್ಷೀರಸಾಗರದ ಮಂಥನದಿಂದ ಹೊರಹೊಮ್ಮಿದಳು ಎಂದು ಹೇಳಲಾಗುತ್ತದೆ. ಲಕ್ಷ್ಮಿ ಕಾಣಿಸಿಕೊಂಡ ಆ ಸಮುದ್ರದಲ್ಲಿ ಉಪ್ಪು ಕೂಡ ಕಂಡುಬರುತ್ತದೆ. ಹಾಗಾಗಿ ಲಕ್ಷ್ಮಿ ದೇವಿಯು ಉಪ್ಪಿನಲ್ಲಿ ನೆಲೆಸಿದ್ದಾಳೆ. ಉಪ್ಪನ್ನು ಲಕ್ಷ್ಮಿ ದೇವಿಯ ಅಂಶ ಎಂದು ಹೇಳಲಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಆಹಾರದಲ್ಲಿ ಬಳಸುವ ಉಪ್ಪು ಅಂದರೆ ಸೋಡಿಯಮ್ ಕ್ಲೋರೈಡ್ ಹಲವು ಬಗೆಗಳಲ್ಲಿ ತಯಾರಾಗುತ್ತದೆ. ಇವುಗಳಲ್ಲಿ ಶುದ್ಧೀಕರಣಗೊಳ್ಳದ ಸಮುದ್ರದ ಉಪ್ಪು (ಕಲ್ಲುಪ್ಪು), ಶುದ್ಧೀಕೃತ ಪುಡಿ ಉಪ್ಪು (ಟೇಬಲ್ ಸಾಲ್ಟ್) ಮತ್ತು ಅಯೊಡಿನ್ ಒಳಗೊಂಡಿರುವ ಉಪ್ಪು ಪ್ರಮುಖವಾದವು. ಉಪ್ಪು ಬಿಳಿ, ತೆಳು ಗುಲಾಬಿ ಅಥವಾ ತೆಳುಗಪ್ಪು ಬಣ್ಣದ ಹರಳು ರೂಪದಲ್ಲಿ ಸಿಗುತ್ತೆ. ಉಪ್ಪನ್ನು ಸಾಮಾನ್ಯವಾಗಿ ಸಮುದ್ರದ ನೀರು ಅಥವಾ ಭೂಮಿಯಲ್ಲಿನ ಉಪ್ಪಿನ ಬಂಡೆಗಳಿಂದ (ಲವಣಶಿಲೆ) ಪಡೆಯಲಾಗುತ್ತದೆ. ಅಡುಗೆ ಉಪ್ಪು ಅನೇಕ ಸಮುದಾಯಗಳು ಮತ್ತು ಧರ್ಮಗಳಲ್ಲಿ ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಇಂತಹ ಉಪ್ಪನ್ನು ನಮ್ಮ ಅಂಗೈಯಲ್ಲಿ ಇಟ್ಟುಕೊಂಡು ನಮ್ಮ ಮನೋಕಾಮನೆ ಈಡೇರಿಸುವಂತೆ ಪ್ರಾರ್ಥಿಸಿದರೆ ಅದು ಈಡೇರುತ್ತದೆ ಎಂಬ ನಂಬಿಕೆಯಿದೆ. ನಮ್ಮ ಮೇಲೆ ಕೆಟ್ಟ ದೃಷ್ಟಿ ತಗಲಿದ್ದರೆ ಅದನ್ನು ಕಡಿಮೆ ಮಾಡುವ ವಸ್ತು ಕಲ್ಲು ಉಪ್ಪು. ಕಲ್ಲುಉಪ್ಪಿನ ಮಹಾತ್ಮೆ ಬಗ್ಗೆ ನಮಗೆ ತಿಳಿದಿಲ್ಲದ ಕೆಲವು ಹೊಚ್ಚ...
Published On - 2:02 am, Sat, 12 October 24