Vastu Tips: ಕೆಲವರು ವಾಸ್ತು ಶಾಸ್ತ್ರವನ್ನು ಬಲವಾಗಿ ನಂಬುತ್ತಾರೆ. ಇನ್ನು ಕೆಲವರು ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ. ದೇವರು ಮತ್ತು ವಾಸ್ತುವನ್ನು ನಂಬುವುದು ಅವರವರ ಆಯ್ಕೆಯನ್ನು ಅವಲಂಬಿಸಿರುತ್ತದೆ. ಆದರೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಬಹಳಷ್ಟು ಮಂದಿ ಏನೇ ಕೆಲಸ ಆರಭಂಸಿಬೇಕೆಂದರೆ ವಾಸ್ತುವನ್ನು ನೋಡುತ್ತಾರೆ. ಅಂತಹವರಿಗಾಗಿ ಈ ಲೇಖನ. ನೀವು ಶ್ರೀಮಂತರಾಗಬೇಕಾದರೆ, ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರೂ ಯಾವುದೂ ಹೊಂದಾಣಿಕೆ ಆಗುವುದಿಲ್ಲ, ಯಾವುದೂ ಕೈಗೂಡುವುದಿಲ್ಲ. ಅಂತಹ ಜನರು ಕೆಲವು ಪರಿಹಾರಗಳನ್ನು ಕಂಡುಕೊಂಡು (Home Vastu), ಬಹಳ ಸುಲಭವಾಗಿ ಫಲಪ್ರದವಾಗಬಹುದು. ನಿಮ್ಮನ್ನು ಶ್ರೀಮಂತರನ್ನಾಗಿ (Rich) ಮಾಡುವ ಕೆಲವು ವಾಸ್ತು ಸಲಹೆಗಳನ್ನು ಇಲ್ಲಿ ತಿಳಿಯಿರಿ (spiritual).
ಪಾರಿಜಾತ ಸಸ್ಯವು ಲಕ್ಷ್ಮಿ ದೇವಿಯ ನೆಚ್ಚಿನ ಸಸ್ಯವೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಈ ಸಸ್ಯ ಎಲ್ಲಿ ನೆಲೆಸಿರುತ್ತದೋ ಅಲ್ಲಿ ಲಕ್ಷ್ಮಿಯೂ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ. ಅದಕ್ಕಾಗಿಯೇ ನೀವು ನಿಮ್ಮ ಮನೆಯ ತೋಟದಲ್ಲಿ ಪಾರಿಜಾತವನ್ನು ನೆಡಬೇಕು. ಎಲ್ಲಾ ರೀತಿಯ ವಾಸ್ತು ದೋಷಗಳು ಸಹ ಇದರಿಂದ ದೂರವಾಗುತ್ತವೆ. ಪೂಜೆಯಲ್ಲಿ ಹರಸಿಂಗಾರ್ ( ಅಂದರೆ ಪಾರಿಜಾತ ಗಿಡ) ಬೇರನ್ನು ಇಟ್ಟುಕೊಂಡರೆ ನಿಮಗೆ ಲಾಭ ವೃದ್ಧಿಸುತ್ತದೆ.
Also Read:
ಶಾಸ್ತ್ರಗಳಲ್ಲಿ ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯುತ್ತಾರೆ. ಆತನ ಕೃಪೆಯಿಂದಾಗಿ ಮನುಷ್ಯ ಮಾಡುವ ಎಲ್ಲಾ ಕಾರ್ಯಗಳು ಶ್ರಮವಿಲ್ಲದೆ ಸುಲಭವಾಗಿ ನೆರವೇರುತ್ತವೆ. ಮನೆಯ ಡ್ರಾಯಿಂಗ್ ರೂಮಿನಲ್ಲಿ ವಿನಾಯಕನ ಫೋಟೋ ಹಾಕಿದರೂ ಅದೆಲ್ಲ ವಾಸ್ತು ದೋಷಗಳು ಮತ್ತು ಗ್ರಹ ದೋಷಗಳನ್ನು ನಿವಾರಿಸುತ್ತದೆ. ಆದರೆ ಡ್ರಾಯಿಂಗ್ ರೂಮಿನಲ್ಲಿ ಇಟ್ಟಿರುವ ಫೋಟೋಗೆ ಪೂಜೆ ಮಾಡಬಾರದು. ಅಲ್ಲದೆ, ಅದನ್ನು ಕೋಣೆಯ ಪೂರ್ವ ಅಥವಾ ಉತ್ತರ ಗೋಡೆಯ ಮೇಲೆ ಇಡಬೇಕು.
ಧಾರ್ಮಿಕ ನಂಬಿಕೆಗಳ ಪ್ರಕಾರ, ಗಣೇಶನು ಬಿಳಿ ಅಂಜೂರದ ಮರದಲ್ಲಿ ನೆಲೆಸಿದ್ದಾನೆ. ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಮನೆಯಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದಕ್ಕಾಗಿ ಶನಿವಾರದಂದು ಶುಭ ಮುಹೂರ್ತಕ್ಕೆ ಹೋಗಿ ಗಿಡವನ್ನು ತನ್ನಿ. ಇದಾದ ನಂತರ ಮರುದಿನ ಅಂದರೆ ಭಾನುವಾರದಂದು ಶುಭ ಮುಹೂರ್ತದಲ್ಲಿ ತಂದು ನಿಮ್ಮ ಮನೆಯಲ್ಲಿ ಇಡಿ. ಈ ಸಸ್ಯವು ತುಳಸಿಯಂತೆ ಪವಿತ್ರವಾಗಿದೆ ಎಂಬುದನ್ನು ನೆನಪಿಡಿ. ಇದನ್ನು ಕೊಳಕು ಸ್ಥಳದಲ್ಲಿ ನೆಡಬಾರದು ಎಂಬುದನ್ನು ಪಾಲಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ