ಜೀವನದ ಯಶಸ್ಸಿಗೆ ನಾಲ್ಕು ‘ಅರ್ಥ’ಪೂರ್ಣ ಸೂತ್ರಗಳು… ಇದು ಆಚಾರ್ಯ ಚಾಣಕ್ಯನ ಮಂತ್ರಗಳಾಗಿವೆ!

Chanakya Niti: ಆಚಾರ್ಯ ಚಾಣಕ್ಯ ಪ್ರಕಾರ ಪರಿಶ್ರಮ ಪಡುವವರು ಎಲ್ಲಿ ಬೇಕಾದರೂ ಯಶಸ್ಸು ಸಾಧಿಸಬಹುದು. ಏಕೆಂದರೆ ಸೋಮಾರಿಗಳು ಯಾವಾಗಲೂ ತಮ್ಮ ವೈಫಲ್ಯವನ್ನು ವಿಧಿಯ ಮೇಲೆ ದೂಷಿಸುತ್ತಾರೆ. ಆದರೆ ಶ್ರಮಜೀವಿಗಳು ತಮ್ಮ ಭವಿಷ್ಯವನ್ನು ಬರೆಯುತ್ತಾರೆ. ಅಂತಹವರು ವಿಜೇತರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ

ಜೀವನದ ಯಶಸ್ಸಿಗೆ ನಾಲ್ಕು 'ಅರ್ಥ'ಪೂರ್ಣ ಸೂತ್ರಗಳು... ಇದು ಆಚಾರ್ಯ ಚಾಣಕ್ಯನ ಮಂತ್ರಗಳಾಗಿವೆ!
ಜೀವನದ ಯಶಸ್ಸಿಗೆ 'ಅರ್ಥ'ಪೂರ್ಣ ನಾಲ್ಕು ಸೂತ್ರಗಳು...
Follow us
ಸಾಧು ಶ್ರೀನಾಥ್​
|

Updated on:Mar 26, 2024 | 10:33 AM

ಚಾಣಕ್ಯ ನೀತಿ: ಜೀವನದಲ್ಲಿ ಯಶಸ್ಸು ಸಾಧಿಸಲು ಹುಚ್ಚುಚ್ಚಾಗಿ ಓಡುವವರಲ್ಲಿ ನಾವೂ ಸಹ ಒಂದು ಭಾಗವಾಗಿದ್ದೇವೆ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಯಶಸ್ಸನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಆದರೆ ಎಲ್ಲರೂ ಯಶಸ್ಸಿಗೆ ಹತ್ತಿರವಾಗುವುದಿಲ್ಲ. ಆದರೆ ಆದಷ್ಟು ಬೇಗ ಜೀವನದಲ್ಲಿ ಯಶಸ್ಸು ಕಾಣಲು ಬಯಸುವವರು. ಆಚಾರ್ಯ ಚಾಣಕ್ಯ ಹೇಳಿದ ಸೂಚನೆಗಳನ್ನು (Chanakya teachings) ಪಾಲಿಸಿದರೆ ಸಾಕು. ಯಶಸ್ಸು ಅವರಿಗೆ ಕಟ್ಟಿಟ್ಟಬುತ್ತಿ. ಹಲವು ಶಾಸ್ತ್ರಗಳಲ್ಲಿ ಪ್ರವೀಣರಾಗಿರುವ ಆಚಾರ್ಯ ಚಾಣಕ್ಯರು ಯಶಸ್ಸಿಗೆ ನೀಡಿದ ಸೂಚನೆಗಳೇನು (Success Mantra) ಎಂಬುದನ್ನು ಈಗ ತಿಳಿಯೋಣ.. (Success story)

ಪ್ರಾಮಾಣಿಕತೆ: ನೀವು ಮಾಡುವ ಕೆಲಸದಲ್ಲಿ ನೀವು ಪ್ರಾಮಾಣಿಕವಾಗಿಲ್ಲದಿದ್ದರೆ, ನೀವು ಅದರಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಆದರೂ ತಪ್ಪು ದಾರಿಯಲ್ಲಿ ಹಣ ಗಳಿಸುವುದು ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ ನಿಮ್ಮ ಕೆಲಸವನ್ನು ಪೂರ್ಣ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಮಾಡುವುದು ಯಾವಾಗಲೂ ಉತ್ತಮ. ಹೀಗೆ ಮಾಡುವುದರಿಂದ ನೀವು ಶಾಶ್ವತವಾದ ಯಶಸ್ಸನ್ನು ಹೊಂದುವಿರಿ.

ಕಷ್ಟವೇ ಭಾಗ್ಯ: ಆಚಾರ್ಯ ಚಾಣಕ್ಯ ಪ್ರಕಾರ ಪರಿಶ್ರಮ ಪಡುವವರು ಎಲ್ಲಿ ಬೇಕಾದರೂ ಯಶಸ್ಸು ಸಾಧಿಸಬಹುದು. ಏಕೆಂದರೆ ಸೋಮಾರಿಗಳು ಯಾವಾಗಲೂ ತಮ್ಮ ವೈಫಲ್ಯವನ್ನು ವಿಧಿಯ ಮೇಲೆ ದೂಷಿಸುತ್ತಾರೆ. ಆದರೆ ಶ್ರಮಜೀವಿಗಳು ತಮ್ಮ ಭವಿಷ್ಯವನ್ನು ಬರೆಯುತ್ತಾರೆ. ಅಂತಹವರು ವಿಜೇತರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಚಾಣಕ್ಯನ ನೀತಿಶಾಸ್ತ್ರ ಹೇಳುತ್ತದೆ.

Also Read: Chanakya Niti -ಜೀವನದಲ್ಲಿ ನೀವು ಅಳವಡಿಸಿಕೊಳ್ಳಬೇಕಾದ 7 ಪ್ರಮುಖ ಅಂಶಗಳಿವು; ಚಾಣಕ್ಯ ನೀತಿ ಹೀಗೆ ಹೇಳುತ್ತದೆ

ಅರ್ಥಪೂರ್ಣ ವಹಿವಾಟುಗಳು: ನಿಮ್ಮ ಬಳಿ ಹಣವಿದ್ದರೆ, ಅದನ್ನು ದೊಡ್ಡ ವಿಷಯಗಳಲ್ಲಿ ಮಾತ್ರ ಬಳಸುವುದು ಉತ್ತಮ. ಏಕೆಂದರೆ ವ್ಯರ್ಥ ಖರ್ಚು ನಿಮ್ಮ ಹಣವನ್ನು ನಾಶಪಡಿಸುತ್ತದೆ, ಆದರೆ ಅದನ್ನು ಬೆಳೆಸುವುದಿಲ್ಲ. ಒಳ್ಳೆಯ ಕಾರ್ಯಗಳಿಗೆ ಹಣವನ್ನು ಬಳಸುವುದು, ಅಂದರೆ ಇತರರಿಗೆ ಸಹಾಯ ಮಾಡುವುದು ಸಹ ನಿಮ್ಮ ಅಭಿವೃದ್ಧಿಗೆ ಸೋಪಾನವಾಗಬಹುದು ಎಂದು ಚಾಣಕ್ಯ ಹೇಳಿದರು.

ಇದನ್ನೂ ಓದಿ: Chanakya Niti: ಈ ಗುಣಗಳನ್ನು ಹೊಂದಿರುವ ವ್ಯಕ್ತಿ ಎಲ್ಲರ ಇಷ್ಟದ ನಾಯಕನಾಗುತ್ತಾನೆ; ಚಾಣಕ್ಯನ ವಿವರಣೆ ಇಲ್ಲಿದೆ

ವಿನಯ: ಮೊದಲು ಎಲ್ಲರೂ ಹೇಳುವುದನ್ನು ಆಲಿಸಿ ಮನಸ್ಸಿನಲ್ಲಿಟ್ಟುಕೊಳ್ಳಬೇಕು.. ನಂತರ ವೈಯಕ್ತಿಕ ಅರಿವಿನಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಆಚಾರ್ಯರು ಹೇಳಿದರು. ಚಾಣಕ್ಯನು ಇತರರ ಮಾತನ್ನು ತಳ್ಳಿಹಾಕಬೇಡಿ, ಅದು ನಾಲ್ವರ ನಡುವೆ ನಮ್ಮ ಮೌಲ್ಯವನ್ನು ಕಳೆಯುತ್ತದೆ ಎಂದು ಎಚ್ಚರಿಸಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:30 am, Tue, 26 March 24

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ