Vastu Tips: ಸೂರ್ಯಾಸ್ತದ ನಂತರ ಈ ಕೆಲಸ ಮಾಡಲೇಬೇಡಿ; ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ
ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳದಿರುವುದು, ಉಗುರು ಮತ್ತು ಕೂದಲು ಕತ್ತರಿಸದಿರುವುದು ಮುಂತಾದ ಅನೇಕ ನಂಬಿಕೆಗಳಿವೆ. ಈ ಕ್ರಿಯೆಗಳು ಆರ್ಥಿಕ ಸಂಕಷ್ಟ ಮತ್ತು ದುಷ್ಟ ಶಕ್ತಿಗಳನ್ನು ಆಕರ್ಷಿಸಬಹುದು ಎಂದು ನಂಬಲಾಗಿದೆ. ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಕಸವನ್ನು ಎಸೆಯುವುದರ ಬಗ್ಗೆಯೂ ಸೂಕ್ತ ಸಮಯವನ್ನು ಪಾಲಿಸುವುದು ಮುಖ್ಯ. ಸಂಜೆ ಹಾಲು, ಮೊಸರು ಮುಂತಾದ ಬಿಳಿ ಪದಾರ್ಥಗಳನ್ನು ಕೊಡುವುದನ್ನು ತಪ್ಪಿಸುವುದು ಒಳ್ಳೆಯದು.

ಸೂರ್ಯಾಸ್ತದ ಸಮಯವು ಧಾರ್ಮಿಕ ದೃಷ್ಟಿಕೋನದಿಂದ ಮಹತ್ತರ ಸಮಯವಾಗಿದೆ. ಎಷ್ಟೋ ಜನರು ಗೊತ್ತಿಲ್ಲದೆಯೋ ಅಥವಾ ಗೊತ್ತಿದ್ದೋ ಸೂರ್ಯಾಸ್ತದ ನಂತರ ಕೆಲವು ಕೆಲಸಗಳನ್ನು ಮಾಡುತ್ತಾರೆ. ಈ ಸಂಜೆ ಹೊತ್ತಿನಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ಮನೆಗೆ ಆಗಮಿಸುತ್ತಾಳೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಸಮಯದಲ್ಲಿ ನೀವು ಮಾಡುವ ಕೆಲವು ತಪ್ಪುಗಳು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿಸಬಹುದು.
ಸೂರ್ಯಾಸ್ತದ ನಂತರ ಹಣದ ವ್ಯವಹಾರ:
ಸೂರ್ಯಾಸ್ತದ ನಂತರ ಹಣದ ವ್ಯವಹಾರಗಳನ್ನು ಇಟ್ಟುಕೊಳ್ಳಬೇಡಿ. ಯಾರ ಬಲಿಯೂ ನೀವು ಸೂರ್ಯಾಸ್ತದ ನಂತರ ಸಾಲ ಕೇಳಬೇಡಿ ಮತ್ತು ನೀವು ಕೂಡ ಯಾರಿಗೂ ಸಾಲ ಕೊಡಬೇಡಿ. ಸೂರ್ಯಾಸ್ತದ ನಂತರ ಸಾಲ ಕೊಡುವುದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆಯಿದೆ.
ತುಳಸಿ ಎಲೆ ಕೀಳಬೇಡಿ:
ತುಳಸಿ ಗಿಡವನ್ನು ಮನೆಯಲ್ಲಿ ಇಡುವುದು ತುಂಬಾ ಶುಭ. ಇದು ಲಕ್ಷ್ಮಿ ದೇವಿಯನ್ನು ಆಕರ್ಷಿಸುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಆದರೆ ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳಬೇಡಿ. ಈ ರೀತಿಯ ಅಭ್ಯಾಸ ದುಷ್ಟ ಶಕ್ತಿಗಳಿಗೆ ಆಹ್ವಾನ ನೀಡುವುದಲ್ಲದೆ ಆರೋಗ್ಯದ ಸಮಸ್ಯೆಗೂ ಕಾರಣವಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಉಗುರು, ಕೂದಲು ಕತ್ತರಿಸುವ ಅಭ್ಯಾಸ:
ಸಂಜೆ ವೇಳೆ ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು, ಶೇವಿಂಗ್ ಮಾಡಬಾರದು. ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ನಂಬಲಾಗಿದೆ. ಇದಲ್ಲದೇ ಸಂಜೆ ಯಾರಾದರೂ ನಿಮ್ಮ ಮನೆಗೆ ಬಂದಾಗ ಅವರನ್ನು ಬರಿಗೈಯಲ್ಲಿ ಕಳುಹಿಸಬೇಡಿ. ಯಾವುದೇ ಸಣ್ಣ ಕಾಣಿಕೆ ಅಥವಾ ಆಹಾರವನ್ನು ಕೊಡಬೇಕು.
ಹಾಲು, ಮೊಸರು ಕೊಡಬೇಡಿ:
ಸಾಯಂಕಾಲ ಹಾಲು, ಮೊಸರು, ಸಕ್ಕರೆ ಮುಂತಾದ ಬಿಳಿ ಪದಾರ್ಥಗಳನ್ನು ಯಾರೂ ಕೊಡಬಾರದು. ಚಂದ್ರನಿಗೆ ಸಂಬಂಧಿಸಿದಂತೆ ಇವುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ನಿಯಮವನ್ನು ಅನುಸರಿಸದಿದ್ದರೆ, ಮನಸ್ಸಿನ ಶಾಂತಿ ಕಡಿಮೆಯಾಗಬಹುದು ಎಂದು ನಂಬಲಾಗಿದೆ.
ಇದನ್ನೂ ಓದಿ: ವಸಂತ ಪಂಚಮಿ ಈ 5 ರಾಶಿಯವರಿಗೆ ಅದೃಷ್ಟ ತರಲಿದೆ
ಕಸ ಗುಡಿಸುವ ಅಭ್ಯಾಸ:
ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ಪೊರಕೆ ಹಿಡಿದು ಮನೆ ಗುಡಿಸುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಸಂಪತ್ತಿನ ವೃದ್ಧಿ ಕಡಿಮೆಯಾಗುತ್ತದೆ. ಅದೇ ಸಮಯದಲ್ಲಿ ಶುಚಿತ್ವವು ತುಂಬಾ ಮುಖ್ಯವಾಗಿದೆ ಆದ್ದರಿಂದ ಬೆಳಿಗ್ಗೆ ಮನೆಯನ್ನು ಸ್ವಚ್ಛಗೊಳಿಸುವುದು ಉತ್ತಮವಾಗಿದೆ. ಸಂಜೆ ವೇಳೆ ಕಸ ಎಸೆದರೆ ದುಷ್ಟ ಶಕ್ತಿಗಳು ಮನೆಗೆ ನುಗ್ಗುವ ಅಪಾಯವಿದೆ. ಅದಕ್ಕೇ ಮನೆಯಲ್ಲಿರುವ ಕಸವನ್ನು ಬೆಳಗ್ಗೆ ಮಾತ್ರ ತೆಗೆಯುವುದು ಒಳ್ಳೆಯದು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ