ಈ ರತ್ನಗಳನ್ನು ಧರಿಸುವುದರಿಂದ ಜೀವನದಲ್ಲಿ ಹಣದ ಕೊರತೆ ಕಡಿಮೆ ಆಗುತ್ತದೆ; ವಿವರ ತಿಳಿಯಿರಿ

ಒಂಬತ್ತು ಗ್ರಹಗಳ ಪ್ರಕಾರ, ಒಂಬತ್ತು ರತ್ನಗಳನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಧರಿಸಲಾಗುವ 4 ಅಂತಹ ರತ್ನಗಳ ಬಗ್ಗೆ ಇಲ್ಲಿ ತಿಳಿಯಿರಿ.

ಈ ರತ್ನಗಳನ್ನು ಧರಿಸುವುದರಿಂದ ಜೀವನದಲ್ಲಿ ಹಣದ ಕೊರತೆ ಕಡಿಮೆ ಆಗುತ್ತದೆ; ವಿವರ ತಿಳಿಯಿರಿ
Follow us
TV9 Web
| Updated By: ganapathi bhat

Updated on: Mar 14, 2022 | 6:30 AM

ಜ್ಯೋತಿಷ್ಯದಲ್ಲಿ ಬಹುವಿಧದ ರತ್ನಗಳನ್ನು ಉಲ್ಲೇಖಿಸಲಾಗಿದೆ. ಈ ರತ್ನಗಳು ಅಮೂಲ್ಯವಾದ ಕಲ್ಲುಗಳಾಗಿವೆ. ರತ್ನಗಳು ಕೆಲವು ಗ್ರಹಗಳಿಗೆ ಸಂಬಂಧಿಸಿದ್ದು ಆಗಿರುತ್ತದೆ. ಜಾತಕದಲ್ಲಿ ಗ್ರಹಗಳ ಸ್ಥಾನದ ಪ್ರಕಾರ, ಜ್ಯೋತಿಷಿಗಳು ರತ್ನದ ಕಲ್ಲುಗಳನ್ನು ಧರಿಸಲು ಶಿಫಾರಸು ಮಾಡುತ್ತಾರೆ. ಈ ರತ್ನಗಳು ಜಾತಕದಲ್ಲಿನ ದುರ್ಬಲ ಗ್ರಹಗಳನ್ನು ಸಮಾಧಾನಪಡಿಸಲು ಕೆಲಸ ಮಾಡುತ್ತವೆ. ಹೀಗೆ ರತ್ನ ಧರಿಸುವುದರಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದು ಎಂದು ನಂಬಲಾಗುತ್ತದೆ. ಜ್ಯೋತಿಷ್ಯದಲ್ಲಿ 84 ರತ್ನಗಳನ್ನು ಉಲ್ಲೇಖಿಸಲಾಗಿದೆ. ಆದರೆ ಒಂಬತ್ತು ಗ್ರಹಗಳ ಪ್ರಕಾರ, ಒಂಬತ್ತು ರತ್ನಗಳನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಧರಿಸಲಾಗುವ 4 ಅಂತಹ ರತ್ನಗಳ ಬಗ್ಗೆ ಇಲ್ಲಿ ತಿಳಿಯಿರಿ.

ಪಚ್ಚೆ ಕಲ್ಲು: ಪಚ್ಚೆ ಕಲ್ಲು ಅಥವಾ ಹಸಿರು ಕಲ್ಲು. ಇದು ಬುಧದ ರತ್ನ. ಪಚ್ಚೆಯನ್ನು ಅತ್ಯಂತ ಪ್ರಭಾವಶಾಲಿ ರತ್ನವೆಂದು ಪರಿಗಣಿಸಲಾಗಿದೆ. ಇದು ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಅವರ ವೃತ್ತಿಜೀವನದಲ್ಲಿ ಪ್ರಗತಿಯನ್ನು ನೀಡುತ್ತದೆ. ಇದರಿಂದ ಧನ ಲಾಭವಾಗುತ್ತದೆ. ವ್ಯಕ್ತಿಯ ವ್ಯಕ್ತಿತ್ವವನ್ನು ಬದಲಾಯಿಸುತ್ತದೆ. ವ್ಯಕ್ತಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಆದರೆ ನೀವು ಪಚ್ಚೆ ಕಲ್ಲನ್ನು ಧರಿಸಿದಾಗ, ಅದರೊಂದಿಗೆ ಮುತ್ತುಗಳು, ಹವಳ ಮತ್ತು ನೀಲಮಣಿ ಧರಿಸಬೇಡಿ.

ನೀಲಿ ಕಲ್ಲು: ಇದನ್ನು ಶನಿಯ ರತ್ನವೆಂದು ಪರಿಗಣಿಸಲಾಗಿದೆ. ನೀಲಮಣಿ ಎಷ್ಟು ಶಕ್ತಿಯುತವಾಗಿದೆಯೆಂದರೆ ಅದು ವ್ಯಕ್ತಿಯನ್ನು ಕೆಳ ಶ್ರೇಣಿಯಿಂದ ರಾಜನನ್ನಾಗಿಯೂ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅದನ್ನು ಧರಿಸಿದ ಸ್ವಲ್ಪ ಸಮಯದ ನಂತರ, ನೀವು ಅದರ ಮಂಗಳಕರ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ. ಆದರೆ, ಜ್ಯೋತಿಷ್ಯರ ಸಲಹೆ ಇಲ್ಲದೆ ರತ್ನವನ್ನು ತಪ್ಪಾಗಿ ಧರಿಸುವುದನ್ನು ಮಾಡಬೇಡಿ ಎಂದೂ ಹೇಳಲಾಗಿದೆ. ನೀಲಮಣಿಯೊಂದಿಗೆ ಮಾಣಿಕ್ಯ, ಹವಳವನ್ನು ಧರಿಸಬೇಡಿ ಎಂದೂ ತಿಳಿಸಲಾಗಿದೆ.

ಜೇಡ್ ಕಲ್ಲು: (ಜೇಡ್ ಸ್ಟೋನ್) ಜೇಡ್ ಕಲ್ಲು ಒಂಬತ್ತು ರತ್ನಗಳಲ್ಲಿ ಒಂದಲ್ಲ. ಆದರೆ ಇದು ಸಂಪತ್ತನ್ನು ನೀಡುವ ರತ್ನವೆಂದು ಪರಿಗಣಿಸಲಾಗಿದೆ. ಇದನ್ನು ಧರಿಸುವುದರಿಂದ ವ್ಯಕ್ತಿಯ ಏಕಾಗ್ರತೆ ಹೆಚ್ಚುತ್ತದೆ ಮತ್ತು ವ್ಯಕ್ತಿಯು ಯಾವುದೇ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ಜೇಡ್ ಕಲ್ಲು ಹಸಿರು, ಹಳದಿ, ಕೆಂಪು, ಕಪ್ಪು, ಬಿಳಿ ಮತ್ತು ಪಾರದರ್ಶಕವಾಗಿ ಇತ್ಯಾದಿ ವಿವಿಧ ರೀತಿಯದ್ದಾಗಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಹಸಿರು ಜೇಡ್ ಸ್ಟೋನ್ ಧರಿಸಬೇಕು ಎಂದು ತಿಳಿಸಲಾಗುತ್ತದೆ.

ಟೈಗರ್ ರತ್ನ: (ಟೈಗರ್ ಸ್ಟೋನ್) ಟೈಗರ್ ಸ್ಟೋನ್​ಅನ್ನು ನೀಲಮಣಿಯಂತೆ ತಕ್ಷಣದ ಪರಿಣಾಮವನ್ನು ನೀಡುವ ರತ್ನವೆಂದು ಪರಿಗಣಿಸಲಾಗುತ್ತದೆ. ಒಂಬತ್ತು ರತ್ನಗಳಲ್ಲಿ ಈ ರತ್ನವೂ ಸೇರಿಲ್ಲ. ಆದರೆ ಈ ರತ್ನವು ಹಣದ ಕೊರತೆಯನ್ನು ನೀಗಿಸಲು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಧರಿಸುವುದರಿಂದ ವೃತ್ತಿಜೀವನದ ವೇಗದ ಬೆಳವಣಿಗೆಗೆ ಕಾರಣವಾಗುತ್ತದೆ. ಆದರೆ, ಜ್ಯೋತಿಷ್ಯರ ಸಲಹೆ ಪಡೆದುಕೊಂಡು ಹೀಗೆ ರತ್ನ ಧರಿಸುವುದು ಒಳ್ಳೆಯದು.

(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಸಾಮಾನ್ಯ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಪ್ರಸ್ತುತಪಡಿಸಲಾಗಿದೆ.)

ಇದನ್ನೂ ಓದಿ: Zodiac Signs: ನಿಮ್ಮ ರಾಶಿಯ ಲಕ್ಕಿ ನಂಬರ್ ಯಾವುದು? ಯಾವ ಸಂಖ್ಯೆ ನಿಮಗೆ ಅದೃಷ್ಟ ತರಬಹುದು? ಇಲ್ಲಿದೆ ಮಾಹಿತಿ

ಇದನ್ನೂ ಓದಿ: Zodiac Signs: ನಿಮ್ಮ ವ್ಯಕ್ತಿತ್ವಕ್ಕೆ ಸರಿಯಾಗಿ ಹೊಂದುವ ಗಿಡ ಯಾವುದು? ಇಲ್ಲಿದೆ ಮಾಹಿತಿ