Lord Shiva: ಓಂ ನಮಃ ಶಿವಾಯ.. ಇದು ಕೇವಲ ಮಂತ್ರವಲ್ಲ, ಇದನ್ನು ಪಠಿಸಿದರೆ ಸಿಗುತ್ತೆ ಅನೇಕ ಲಾಭಗಳು
ಶಿವನನ್ನು ಪೂಜಿಸುವವರು ಹೆಚ್ಚಾಗಿ ಓಂ ನಮಃ ಶಿವಾಯ ಎನ್ನುವ ಮಂತ್ರವನ್ನು ಪಠಿಸುತ್ತಾ ಇರುತ್ತಾರೆ. ಆದರೆ ಈ ಮಂತ್ರ ಕೇವಲ ಶಿವನ ಭಕ್ತರಿಗಾಗಿ ಮಾತ್ರವಲ್ಲ. ಇದನ್ನು ಪಠಿಸಿದರೆ ಇತರರಿಗೂ ಲಾಭವಿದೆ. ಓಂ ನಮಃ ಶಿವಾಯ ಮಂತ್ರವನ್ನು ಬದ್ಧತೆ ಮತ್ತು ಏಕಾಗ್ರತೆಯಿಂದ ಪಠಿಸಿದರೆ ಆಗ ನಮಗೆ ಮಾನಸಿಕ ಬಲ, ಶಕ್ತಿ ಮತ್ತು ಪ್ರೇರಣೆ ಸಿಗುತ್ತದೆ.
ಇಡೀ ಬ್ರಹ್ಮಾಂಡವೇ ಸೃಷ್ಟಿಯಾಗಿರುವುದು ತ್ರಿಮೂರ್ತಿಗಳಿಂದ. ಹಿಂದೂ ಪುರಾಣಗಳ ಪ್ರಕಾರ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ಭೂಮಿಯನ್ನು ಸೃಷ್ಟಿಸಿದ್ದಾರೆ. ಬ್ರಹ್ಮ ಜೀವಿಗಳನ್ನು ಸೃಷ್ಟಿಸಿದರೆ, ವಿಷ್ಣು ಅದಕ್ಕೆ ಜೀವ ನೀಡುತ್ತಾನೆ ಮತ್ತು ಮಹೇಶ್ವರ ಎಲ್ಲವನ್ನೂ ಲಯಗೊಳಿಸುತ್ತಾನೆ ಎಂದು ನಂಬಲಾಗಿದೆ. ಶಿವ ಸೃಷ್ಟಿಯಲ್ಲಿ ಇರುವ ಕೆಟ್ಟದನ್ನು ತನ್ನ ಮೂರನೇ ಕಣ್ಣಿನಿಂದ ನಾಶಗೊಳಿಸುತ್ತಾನೆ ಎನ್ನಲಾಗುತ್ತದೆ. ಇದಕ್ಕಾಗಿಯೇ ಆತನಿಗೆ ದೇವಾದಿದೇವ ಮಹಾದೇವ ಎನ್ನುತ್ತಾರೆ. ಇದರ ಅರ್ಥ ದೇವರುಗಳಿಗೆ ದೇವರು. ಬ್ರಹ್ಮ, ವಿಷ್ಣುವಿನ ಮೂಲದ ಬಗ್ಗೆ ತಿಳಿಯಲು ಅನೇಕ ಕಥೆ, ಪುರಾಣಗಳನ್ನು ನೋಡಬಹುದು. ಆದ್ರೆ ಈಶ್ವರನ ಸೃಷ್ಟಿಯ ಬಗ್ಗೆ ಯಾರಿಗೂ ಇದುವರೆಗೆ ತಿಳಿದಿಲ್ಲ. ಮತ್ತು ಆತನಿಗೆ ಕೊನೆಯೆಂಬುವುದು ಇಲ್ಲ. ಇದಕ್ಕಾಗಿಯೇ ಶಿವನಿಗೆ ಅತೀ ಹೆಚ್ಚು ಭಕ್ತರಿದ್ದಾರೆ. ಶಿವನ ಶಕ್ತಿ ಸ್ವರೂಪ ಎಂಟು ಆಭರಣಗಳ ಪರಮ ರಹಸ್ಯ
ಓಂ ನಮಃ ಶಿವಾಯ ಮಂತ್ರದಲ್ಲಿದೆ ಶಕ್ತಿ ಶಿವನನ್ನು ಪೂಜಿಸುವವರು ಹೆಚ್ಚಾಗಿ ಓಂ ನಮಃ ಶಿವಾಯ ಎನ್ನುವ ಮಂತ್ರವನ್ನು ಪಠಿಸುತ್ತಾ ಇರುತ್ತಾರೆ. ಆದರೆ ಈ ಮಂತ್ರ ಕೇವಲ ಶಿವನ ಭಕ್ತರಿಗಾಗಿ ಮಾತ್ರವಲ್ಲ. ಇದನ್ನು ಪಠಿಸಿದರೆ ಇತರರಿಗೂ ಲಾಭವಿದೆ. ಓಂ ನಮಃ ಶಿವಾಯ ಮಂತ್ರವನ್ನು ಬದ್ಧತೆ ಮತ್ತು ಏಕಾಗ್ರತೆಯಿಂದ ಪಠಿಸಿದರೆ ಆಗ ನಮಗೆ ಮಾನಸಿಕ ಬಲ, ಶಕ್ತಿ ಮತ್ತು ಪ್ರೇರಣೆ ಸಿಗುತ್ತದೆ. ಇದರಿಂದ ನೀವು ಜೀವನದ ಗುರಿಯನ್ನು ತಲುಪಬಹುದಾಗಿದೆ. ಈಗಿನ ಕಾಲದಲ್ಲಿ ಮನಸ್ಸಿಗೆ ಶಾಂತಿಯೆನ್ನುವುದು ಸಿಗುವುದೇ ಕಷ್ಟ. ಒತ್ತಡದ ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಶಾಂತಿ ಕಳೆದುಹೋಗಿರುತ್ತದೆ. ಜೀವನದಲ್ಲಿ ಕೆಲವೊಂದು ಸಂದರ್ಭದಲ್ಲಿ ಅತಿಯಾದ ಒತ್ತಡದಿಂದ ನೀವು ಹೊರ ಬರಬೇಕಾಗುತ್ತದೆ. ಕೈಲಾಸನಾಥ ಪರಶಿವನ ಕುರಿತ ರೋಚಕ ಜನ್ಮ ವೃತ್ತಾಂತ ಜೀವನದಲ್ಲಿ ಯಾವುದೇ ಸಂಕಷ್ಟದ ಸಂದರ್ಭ ಎದುರಾದರೂ ಆ ಸಮಯದಲ್ಲಿ ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿದರೆ ಆಧ್ಯಾತ್ಮಿಕ ಶಕ್ತಿ ಮತ್ತು ಮಾನಸಿಕ ಶಾಂತಿ ಸಿಗುತ್ತದೆ. ಇದರಿಂದ ಜೀವನದ ಸಂಕಷ್ಟದಿಂದ ಪಾರಾಗಬಹುದು.
ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವುದರಿಂದ ಸಿಗುತ್ತೆ ಅನೇಕ ಲಾಭಗಳು ಜೀವನ ಯಾವತ್ತೂ ಹೂವಿನ ಹಾದಿಯಾಗಿರುವುದಿಲ್ಲ. ಸಮಸ್ಯೆಗಳೆಂಬ ಮುಳ್ಳುಗಳೇ ಅತಿಯಾಗಿ ನಿಮ್ಮನ್ನು ಚುಚ್ಚುತ್ತಾ ಇದ್ದರೆ ಆಗ ಇಡೀ ವಿಶ್ವವೇ ನಿಮ್ಮ ವಿರುದ್ಧ ಪಿತೂರಿ ಮಾಡುತ್ತಿದೆಯೆಂದು ನಿಮಗನಿಸುತ್ತದೆ. ಇದರಿಂದ ಮಾನಸಿಕ ಶಾಂತಿ ಸಂಪೂರ್ಣವಾಗಿ ಹದಗೆಟ್ಟಿರುತ್ತದೆ. ಈ ಮಂತ್ರವೇ ನಿಮ್ಮ ಮನಶಾಂತಿಯನ್ನು ಮರಳಿ ತರುತ್ತದೆ. ಓಂ ನಮಃ ಶಿವಾಯ.. ಇದು ತುಂಬಾ ಶಕ್ತಿಯನ್ನು ಹೊಂದಿರುವ ಮಂತ್ರ. ಇದನ್ನು ಪಠಿಸುತ್ತಲೇ ಇದ್ದರೆ ನೀವು ಯಾವುದೇ ಧಾರ್ಮಿಕ ಕಾರ್ಯ, ಯೋಗ ಅಥವಾ ಧಾನ್ಯ ಮಾಡಬೇಕೆಂದಿಲ್ಲ. ಈ ಮಂತ್ರ ಪಠಿಸಲು ಯಾವುದೇ ನಿಯಮಗಳಿಲ್ಲ. ಯಾರು ಬೇಕಾದ್ರು ಈ ಮಂತ್ರವನ್ನು ಪಠಿಸಬಹುದಾಗಿದೆ.
ಇದರಲ್ಲಿ ಐದು ಅಕ್ಷರಗಳ ಮಹತ್ವವಿದೆ. ನ, ಮ, ಶಿ, ವಾ ಮತ್ತು ಯ. ಹಿಂದೂ ಪುರಾಣಗಳ ಪ್ರಕಾರ ಈ ಐದು ಅಕ್ಷರಗಳು ಭೂಮಿ, ಗಾಳಿ, ನೀರು, ಬೆಂಕಿ ಮತ್ತು ಆಕಾಶವನ್ನು ಪ್ರತಿನಿಧಿಸುತ್ತದೆ. ಇದನ್ನು ಪಠಿಸುತ್ತಾ ಇದ್ದರೆ ದೇವರು ಎಲ್ಲಾ ಕಡೆ ಇದ್ದಾನೆಂದು ಸೂಚಿಸುತ್ತದೆ. ಈ ಮಂತ್ರವನ್ನು ಪಠಿಸುತ್ತಾ ಇರುವುದರಿಂದ ದೈಹಿಕ ಶಕ್ತಿ ಮತ್ತು ಮನಸ್ಸಿನ ಶಾಂತಿ ಮರಳುತ್ತದೆ. ಇದು ನಿಮ್ಮ ಹೃದಯದಲ್ಲಿ ಸಂತೋಷವನ್ನು ಉಂಟುಮಾಡಿ ನಿಮಗೆ ತೊಂದರೆಯನ್ನು ಉಂಟುಮಾಡುವ ಎಲ್ಲಾ ನಕಾರಾತ್ಮಕ ಅಂಶಗಳನ್ನು ಹೊರಹಾಕುತ್ತದೆ. ಹೀಗಾಗಿ ಇಂದಿನಿಂದ ದಿನಾ ದಿನದ ಆರಂಭಕ್ಕೆ ಮೊದಲು ಶಿವನನ್ನು ನೆನೆದು ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ. ಇದರಿಂದ ನಿಮ್ಮ ಮನಶಾಂತಿ ಮರಳುತ್ತದೆ.
||ಓಂ ನಮಃ ಶಿವಾಯ|| ಡಾ.ಬಸವರಾಜ್ ಗುರೂಜಿ, ಜ್ಯೋತಿಷಿ