ಚಾಣಕ್ಯನ ಈ ನೀತಿಗಳು ನಿಮ್ಮ ಹಣೆಬರಹವನ್ನು ಬದಲಾಯಿಸಬಲ್ಲದು, ಜೀವನದಲ್ಲಿ ಇವುಗಳನ್ನು ಪಾಲಿಸಿ

|

Updated on: Feb 27, 2024 | 3:56 PM

Chanakya Niti: ಚಾಣಕ್ಯನ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಲಾದ ವಿಷಯಗಳು ಸಾಮಾನ್ಯವಾಗಿ ಜನರಿಗೆ ಕಠಿಣವೆಂದು ತೋರುತ್ತದೆ, ಆದರೆ ಈ ವಿಷಯಗಳು ಜನರಿಗೆ ಸರಿ ಮತ್ತು ತಪ್ಪುಗಳ ಮಾರ್ಗವನ್ನು ಹೇಳುತ್ತವೆ. ಇಂದು ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ತನ್ನ ಇಚ್ಛೆಯಂತೆ ಯಶಸ್ಸನ್ನು ಸಾಧಿಸಲು ಬಯಸುತ್ತಾನೆ. ಅದು ಸಂಭವಿಸದಿದ್ದಾಗ ಹತಾಶನಾಗಿ ಜೀವನದ ಬಗ್ಗೆ ನಿರಾಶೆಗೊಳ್ಳಲು ಪ್ರಾರಂಭಿಸುತ್ತಾನೆ.

ಚಾಣಕ್ಯನ ಈ ನೀತಿಗಳು ನಿಮ್ಮ ಹಣೆಬರಹವನ್ನು ಬದಲಾಯಿಸಬಲ್ಲದು, ಜೀವನದಲ್ಲಿ ಇವುಗಳನ್ನು ಪಾಲಿಸಿ
ಚಾಣಕ್ಯನ ಈ ನೀತಿಗಳು ನಿಮ್ಮ ಹಣೆಬರಹವನ್ನು ಬದಲಾಯಿಸಬಲ್ಲದು
Follow us on

ಚಾಣಕ್ಯ ನೀತಿ: ಭಾರತದ ಅತ್ಯುತ್ತಮ ವಿದ್ವಾಂಸರಲ್ಲಿ ಆಚಾರ್ಯ ಚಾಣಕ್ಯರನ್ನು ಪರಿಗಣಿಸಲಾಗಿದೆ. ನುರಿತ ರಾಜಕಾರಣಿ, ರಾಜತಾಂತ್ರಿಕ, ಮುತ್ಸದ್ದಿ ಮತ್ತು ತಂತ್ರಜ್ಞರಲ್ಲದೆ, ಅವರು ಅರ್ಥಶಾಸ್ತ್ರದಲ್ಲಿಯೂ ಪರಿಣತರಾಗಿದ್ದರು. ತಮ್ ತಮ್ಮ ಜೀವನದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಜನರು ಸಾಮಾನ್ಯವಾಗಿ ಚಾಣಕ್ಯ ನೀತಿಯನ್ನು (Chanakya Niti) ಅಳವಡಿಸಿಕೊಳ್ಳುತ್ತಾರೆ. ಚಾಣಕ್ಯನ ನೀತಿ ಶಾಸ್ತ್ರವು ಜೀವನದ ಹಲವು ಕಾಲಘಟ್ಟಗಳ ಸಮಸ್ಯೆಗಳಿಗೆ ಸಂಬಂಧಿಸಿದ ಸೂತ್ರಗಳನ್ನು ಒಳಗೊಂಡಿದೆ. ಅದನ್ನು ಅಳವಡಿಸಿಕೊಳ್ಳುವ ಮೂಲಕ ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಚಾಣಕ್ಯ ನೀತಿಯು ಸಮಸ್ಯೆಗಳಿಗೆ ರಾಮಬಾಣವಾಗಿದೆ. ಆಚಾರ್ಯ ಚಾಣಕ್ಯ ಅವರು ವೈಯಕ್ತಿಕ ಜೀವನದಿಂದ ಉದ್ಯೋಗ, ವ್ಯವಹಾರ ಮತ್ತು ಸಂಬಂಧಗಳವರೆಗಿನ ಎಲ್ಲಾ ಅಂಶಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೀತಿಶಾಸ್ತ್ರದಲ್ಲಿ ಉಲ್ಲೇಖಿಸಲಾದ ವಿಷಯಗಳು ಸಾಮಾನ್ಯವಾಗಿ ಜನರಿಗೆ ಕಠಿಣವೆಂದು ತೋರುತ್ತದೆ, ಆದರೆ ಈ ವಿಷಯಗಳು ಒಬ್ಬ ವ್ಯಕ್ತಿಗೆ ಸರಿ ಮತ್ತು ತಪ್ಪುಗಳ ಮಾರ್ಗವನ್ನು ಹೇಳುತ್ತವೆ. ಇಂದು ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ತನ್ನ ಇಚ್ಛೆಯಂತೆ ಯಶಸ್ಸನ್ನು ಸಾಧಿಸಲು ಬಯಸುತ್ತಾನೆ ಮತ್ತು ಅದು ಸಂಭವಿಸದಿದ್ದಾಗ, ಅವನು ಜೀವನದ ಬಗ್ಗೆ ನಿರಾಶೆಗೊಳ್ಳಲು ಪ್ರಾರಂಭಿಸುತ್ತಾನೆ. ಈ ನಿಟ್ಟಿನಲ್ಲಿ ಆಚಾರ್ಯ ಚಾಣಕ್ಯರು (Acharya Chanakya) “ಚಾಣಕ್ಯ ನೀತಿ”ಯಲ್ಲಿ ಒಬ್ಬ ವ್ಯಕ್ತಿ ಹೇಗೆ ಯಶಸ್ಸನ್ನು ಸಾಧಿಸಬಹುದು (Success Story) ಎಂಬುದನ್ನು ವಿವರಿಸಿದ್ದಾರೆ. ಆಚಾರ್ಯ ಚಾಣಕ್ಯರ ಈ ಅಮೂಲ್ಯ ಮಾತುಗಳ ಬಗ್ಗೆ ತಿಳಿಯೋಣ.

Chanakya Niti – ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ

ಸಾಮಾನ್ಯವಾಗಿ ಜನರು ತಮ್ಮ ದೌರ್ಬಲ್ಯಗಳನ್ನು ತಮ್ಮ ಆತ್ಮೀಯರಿಗೆ ಹೇಳುವುದು ದುಃಖಕ್ಕೆ ಕಾರಣವಾಗುತ್ತದೆ. ಆಚಾರ್ಯ ಚಾಣಕ್ಯರ ಪ್ರಕಾರ ಮನುಷ್ಯ ತನ್ನ ದೌರ್ಬಲ್ಯಗಳನ್ನು ಯಾರಿಗೂ ಹೇಳಬಾರದು. ಹೀಗೆ ಮಾಡುವುದರಿಂದ ಇನ್ನೊಬ್ಬ ವ್ಯಕ್ತಿ ಆ ದೌರ್ಬಲ್ಯವನ್ನು ಬೇರೆಯವರ ಬಳಿ ಬಹಿರಂಗಪಡಿಸಬಹುದು. ಅದು ದುರುಪಯೋಗಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತವೆ.

Chanakya Niti – ಬುದ್ಧಿವಂತಿಕೆಯಿಂದ ಖರ್ಚು ಮಾಡಿ

ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿಯು ಯಾವಾಗಲೂ ಉತ್ತಮ ಭವಿಷ್ಯಕ್ಕಾಗಿ ಹಣವನ್ನು ಉಳಿಸಬೇಕು. ಹೀಗೆ ಮಾಡುವುದರಿಂದ ಮುಂದೆ ಯಾವುದೇ ತೊಂದರೆಯನ್ನು ಎದುರಿಸಬಹುದು. ಆದ್ದರಿಂದ, ಮನೆಯಲ್ಲಿ ಸಂಪತ್ತನ್ನು ಸಂಗ್ರಹಿಸುವುದು ಬಹಳ ಮುಖ್ಯ. ಆದ್ದರಿಂದ, ಯಾವಾಗಲೂ ನಿಮ್ಮ ಹಣವನ್ನು ಆಲೋಚಿಸಿ, ಬಹಳ ಚಿಂತನಶೀಲವಾಗಿ ಖರ್ಚು ಮಾಡಿ. ಎಷ್ಟು ಸಾಧ್ಯವೋ ಅಷ್ಟು ಉಳಿಸಿ.

Also Read: Gita Supersite IITK – ಐಐಟಿ ಕಾನ್ಪುರ​​ ನಿರ್ಮಿಸಿದೆ ಭಗವದ್ಗೀತೆ ಕುರಿತಾದ ವೆಬ್​ಸೈಟ್! ಕನ್ನಡದಲ್ಲಿಯೂ ಇದೆ -ಇಲ್ಲಿದೆ ಸಂಪೂರ್ಣ ವಿವರ!

Chanakya Niti – ಮೂರ್ಖ ಜನರೊಂದಿಗೆ ವಾದ ಮಾಡಬೇಡಿ

ಆಚಾರ್ಯ ಚಾಣಕ್ಯರ ಪ್ರಕಾರ, ಮೂರ್ಖ ಜನರೊಂದಿಗೆ ಎಂದಿಗೂ ವಾದ ಮಾಡಬಾರದು. ಇದನ್ನು ಮಾಡುವುದರಿಂದ ನಿಮಗೇ ಹಾನಿಯಾಗುತ್ತದೆ. ಇದಲ್ಲದೆ, ಇದು ನಿಮ್ಮ ಚಿತ್ತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

Chanakya Niti – ಅಂಥವರನ್ನು ನಂಬಬೇಡಿ

ಆಚಾರ್ಯ ಚಾಣಕ್ಯರ ಪ್ರಕಾರ ನಿಮ್ಮ ಮಾತುಗಳನ್ನು ನಿರ್ಲಕ್ಷಿಸುವ ಜನರು ನಂಬಿಕೆಗೆ ಅರ್ಹರಲ್ಲ. ನಿಮ್ಮನ್ನು ನೋವಿನಿಂದ ನೋಡಿ ಸಂತೋಷಪಡುವ ಜನರನ್ನು ನೀವು ಎಂದಿಗೂ ನಂಬಬಾರದು. ಅಂತಹ ವ್ಯಕ್ತಿಯು ಖಂಡಿತವಾಗಿಯೂ ನಿಮ್ಮನ್ನು ಮೋಸಗೊಳಿಸುತ್ತಾನೆ. ಆದ್ದರಿಂದ ನೀವು ಎಲ್ಲರೊಂದಿಗೆ ಹಂಚಿಕೊಳ್ಳಬಹುದಾದ ವಿಷಯಗಳನ್ನು ಈ ಜನರಿಗೆ ತಿಳಿಸಿ.

Chanakya Niti – ನಿಮ್ಮ ಗುರಿ ಧ್ಯೇಯವನ್ನು ಯಾರಿಗೂ ಹೇಳಬೇಡಿ

ಆಚಾರ್ಯ ಚಾಣಕ್ಯರ ಪ್ರಕಾರ ಯಾರೇ ಆಗಲಿ ತಮ್ಮ ಗುರಿ ಧ್ಯೇಯವನ್ನು ಯಾರ ಮುಂದೆಯೂ ಹೇಳಬಾರದು. ಈ ಕಾರಣದಿಂದಾಗಿ ಜನರು ನಿಮ್ಮ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸಬಹುದು. ಚಾಣಕ್ಯ ನೀತಿಯ ಪ್ರಕಾರ, ವ್ಯಕ್ತಿಯ ಯಶಸ್ಸು ಅವನ ಕಠಿಣ ಪರಿಶ್ರಮ, ತಂತ್ರ ಮತ್ತು ಸಮಯ ನಿರ್ವಹಣೆಯನ್ನು ಅವಲಂಬಿಸಿರುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ