ಈ 3 ರಾಶಿ ಜನ ಸುಲಭವಾಗಿ ಜನರೊಂದಿಗೆ ಬೆರೆಯುವುದಿಲ್ಲ, ವಿಷಯಗಳೆಲ್ಲವನ್ನೂ ತಮ್ಮಲ್ಲೆ ಉಳಿಸಿಕೊಳ್ಳಲು ಬಯಸುತ್ತಾರೆ

| Updated By: ಆಯೇಷಾ ಬಾನು

Updated on: Sep 07, 2021 | 7:55 AM

ಜ್ಯೋತಿಷ್ಯದ ಪ್ರಕಾರ 3 ರಾಶಿಯ ಜನ ಸ್ವಭಾವತಃ ದುಃಖಿಗಳಾಗಿರುತ್ತಾರೆ, ಆಕ್ರಮಣಶೀಲರಾಗಿರುವುದಿಲ್ಲ: ನಿಮ್ಮ ರಾಶಿ ಯಾವುದು?

ಈ 3 ರಾಶಿ ಜನ ಸುಲಭವಾಗಿ ಜನರೊಂದಿಗೆ ಬೆರೆಯುವುದಿಲ್ಲ, ವಿಷಯಗಳೆಲ್ಲವನ್ನೂ ತಮ್ಮಲ್ಲೆ ಉಳಿಸಿಕೊಳ್ಳಲು ಬಯಸುತ್ತಾರೆ
ಈ ಮೂರು ರಾಶಿಯ ಜನ ತುಂಬಾ ನಾಚಿಕೆ ಸ್ವಭಾದವರು! ಹಾಗಾದರೆ, ನಿಮ್ಮ ರಾಶಿ ಯಾವುದು?
Follow us on

ಜಾತಕದಲ್ಲಿ 12 ರಾಶಿಗಳಿದ್ದು, ಆ 12 ರಾಶಿಗಳ ಜನರೂ ಗುಣ ಸ್ವಭಾವದಲ್ಲಿ ವಿಭಿನ್ನವಾಗಿರುತ್ತಾರೆ. ಕೆಲವರು ನಿಷ್ಠೂರರಾಗಿ ನೇರವಂತಕೆಯಿಂದ ಇದ್ದದ್ದನ್ನು ಇದ್ದ ಹಾಗೆ ಹೇಳಿಬಿಡುತ್ತಾರೆ. ಆದರೆ ಕೆಲವರು ತುಂಬಾ ನಾಚಿಕೆ ಪ್ರವೃತ್ತಿಯವರಾಗಿರುತ್ತಾರೆ. ಮಗುಮ್ಮಾಗಿ ಇದ್ದುಬಿಡುತ್ತಾರೆ. ಕ್ಲುಪ್ತವಾಗಿ ಹೇಳಿ ಸುಮ್ಮನಾಗುತ್ತಾರೆ. ಗಾಂಭೀರ್ಯತೆ ಪ್ರದರ್ಶಿಸುತ್ತಾರೆ.

ಕೆಲರು ತಮಗೆ ಅನಿಸಿದ್ದನ್ನು ಹೇಳಲು ಶ್ರಮಪಡುವುದಿಲ್ಲ. ಅವರು ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಮಗೆ ಏನು ಸನ್ನಿಸುತ್ತದೆ, ಏನು ಇಷ್ಟವಾಗುತ್ತದೋ ಅದನ್ನಷ್ಟೇ ಹೇಳಿಮುಗಿಸುತ್ತಾರೆ. ಇನ್ನು ಕೆಲವರು ಇರುತ್ತಾರೆ… ಸದಾ ನ್ಯಾಯದ ಪರವಾಗಿ ಇರಲು ಬಯಸುತ್ತಾರೆ. ಅವರು ನಾಚಿಕೆ ಸ್ವಭಾವದವರೂ ಆಗಿರುತ್ತಾರೆ. ವಿಚಿತ್ರವಾಗಿರುತ್ತಾರೆ. ಅಂತರ್ಮುಖಿಗಳಾಗಿರುತ್ತಾರೆ. ಸ್ವಯಂ ತಮ್ಮ ಬಗ್ಗೆಯೇ ಹೆಚ್ಚು ಚಿಂತಿಸುತ್ತಿರುತ್ತಾರೆ. ಜ್ಯೋತಿಷ್ಯದ ಪ್ರಕಾರ 3 ರಾಶಿಯ ಜನ ಸ್ವಭಾವತಃ ದುಃಖಿಗಳಾಗಿರುತ್ತಾರೆ. ಆಕ್ರಮಣಶೀಲರಾಗಿರುವುದಿಲ್ಲ. ಕೆಳಗಿನ ನೀಡಿರುವ ಮೂರು ರಾಶಿಯ ಜನ ಇಂತಹ ಸ್ವಭಾವದವರಾಗಿರುತ್ತಾರೆ.

1. ಕರ್ಕಾಟಕ ರಾಶಿ Cancer:
ಕರ್ಕಾಟಕ ರಾಶಿಯ ಜನ ಹೆಚ್ಚು ಓಪನ್​ ಆಗಿ ಮಾತನಾಡುವುದಿಲ್ಲ. ಔಟ್​ ಸ್ಪೋಕನ್​ ಅನ್ನುವಂತಿರುವುದಿಲ್ಲ. ಅವರಿಗೆ ಮುಕ್ತವಾಗಿ ಮಾತನಾಡಲು, ಜನರೊಂದಿಗೆ ಬೆರೆಯಲು ಸ್ವಲ್ಪ ಸಮಯ ಹಿಡಿಸುತ್ತದೆ. ವಿಚಿತ್ರವಾಗಿ, ಪ್ರತ್ಯೇಕವಾಗಿಯೇ ಇರಲು ಬಯಸುತ್ತಾರೆ. ಅವರು ಅಂತರ್ಮುಖಿಗಳಾಗಿರುತ್ತಾರೆ. ನಾಚಿಕೆ ಅವರಲ್ಲಿ ಹೆಚ್ಚಾಗಿರುತ್ತದೆ. ಎದುರಿಗಿರುವವರತ್ತ ತಕ್ಷಣಕ್ಕೆ ಸ್ನೇಹದ ಹಸ್ತ ಚಾಚುವುದಿಲ್ಲ. ಸ್ನೇಹಿತರನ್ನು ಮಾಡಿಕೊಳ್ಳುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಸ್ನೇಹಿತರನ್ನು ಮಾಡಿಕೊಳ್ಳುವುದಕ್ಕೆ ತುಂಬಾ ಒದ್ದಲಾಡುತ್ತಾರೆ.

2. ವೃಶ್ಚಿಕ ರಾಶಿ Scorpio:
ವೃಶ್ಚಿಕ ರಾಶಿಯವರು ಅತ್ಯಂತ ರಹಸ್ಯಮಯವಾಗಿರುತ್ತಾರೆ. ಅವರು ಮುಕ್ತವಾಗಿರುವುದಿಲ್ಲ. ಏನನ್ನೂ ಬಹಿರಂಗವಾಗಿ ಹೇಳಿಕೊಳ್ಳದೆ ಗುಪ್ತ ಗುಪ್ತವಾಗಿ ಇರಲು ಬಯಸುತ್ತಾರೆ. ಅವರಿಗೆ ತಮ್ಮ ಬಗ್ಗೆ ಹೇಳಿಕೊಳ್ಳುವುದಕ್ಕೆ ನಾಚಿಕೆ ಹೊಂದುತ್ತಾರೆ. ತಮ್ಮ ಅಭಿಪ್ರಾಯಗಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುತ್ತಾರೆ. ಅವರು ಬಡಬಡಾ ಅಂತಾ ಮಾತನಾಡುವುದಿಲ್ಲ; ಬದಲಿಗೆ ಎದುರಿಗೆ ಇರುವುವರನ್ನು ಅಳೆದು ತೂಗಿ ಒಂದೋ ಎರಡೋ ಮಾತನ್ನಾಡುತ್ತಾರೆ.

3. ಮೀನ ರಾಶಿ Pisces:
ಮೀನ ರಾಶಿಯ ಜನ ತಮ್ಮದೆ ಪ್ರಪಂಚದಲ್ಲಿ ಮುಳುಗಿರುತ್ತಾರೆ. ಎಕೆಂದರೆ ಯಾವುದೇ ಒಂದು ವಿಷಯವನ್ನು ಅನನ್ಯವಾದ ದೃಷ್ಟಿಕೋನದಲ್ಲಿ ನೋಡುತ್ತಾರೆ. ಅಷ್ಟು ಸುಲಭವಾಗಿ ಜನರೊಂದಿಗೆ ಬೆರೆಯುವುದಿಲ್ಲ. ವಿಷಯಗಳೆಲ್ಲವನ್ನೂ ತಮ್ಮಲ್ಲೆ ಉಳಿಸಿಕೊಳ್ಳಲು ಬಯಸುತ್ತಾರೆ. ತಮ್ಮ ಭಾವನೆಗಳನ್ನು ಬೇರೆಒಬ್ಬರೊಂದಿಗೆ ಹಂಚಿಕೊಳ್ಳಲು ಇಚ್ಛಿಸುವುದಿಲ್ಲ. ವಿಚಿತ್ರವಾಗಿ ವರ್ತಿಸುತ್ತಾರೆ ಮತ್ತು ಶಾಂತ ಮೂರ್ತಿಯಂತೆ ಭಾಸವಾಗುತ್ತಾರೆ.

ಬೋಟಿನಲ್ಲಿ ಪಾಠ ಶಾಲೆ; ವರ್ಷಕ್ಕೆ 6 ತಿಂಗಳು ಪ್ರವಾಹದಲ್ಲಿ ಮುಳುಗುವ ಪ್ರದೇಶದಲ್ಲಿ ಯುವಕರಿಂದ ‘ಶಿಕ್ಷಣದ ನಾವೆಗೆ’ ಚಾಲನೆ

(three zodiac signs people who are very shy know)