Surya Grahan 2025: ಇಂದು ವರ್ಷದ ಮೊದಲ ಸೂರ್ಯಗ್ರಹಣ, ಎಲ್ಲೆಲ್ಲಿ ಗೋಚರ?
ಮಾರ್ಚ್ 29, 2025ರಂದು ವರ್ಷದ ಮೊದಲ ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಇದು ಈಶಾನ್ಯ ಅಮೆರಿಕ ಮತ್ತು ಕೆನಡಾ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಗೋಚರಿಸಲಿದೆ ಆದರೆ ಭಾರತದಲ್ಲಿ ಗೋಚರಿಸುವುದಿಲ್ಲ. ಸೂರ್ಯಗ್ರಹಣವನ್ನು ನೇರವಾಗಿ ವೀಕ್ಷಿಸುವುದು ಕಣ್ಣಿಗೆ ಹಾನಿಕಾರಕ, ಆದ್ದರಿಂದ ಸೂಕ್ತ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ. 2025ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ.

ಬೆಂಗಳೂರು, ಮಾರ್ಚ್ 29: ಇಂದು ವರ್ಷದ ಮೊದಲ ಭಾಗಶಃ ಸೂರ್ಯಗ್ರಹಣ (Solar Eclipse) ಸಂಭವಿಸಲಿದೆ. ಖಗೋಳ ಶಾಸ್ತ್ರದಲ್ಲಿ ಇದೊಂದು ಪ್ರಕ್ರಿಯೆ ಮಾತ್ರ. ಆದರೆ ಧರ್ಮಗ್ರಂಥಗಳಲ್ಲಿ ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವ ಇದೆ. ಸೂರ್ಯ, ಚಂದರ ಹಾಗೂ ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸಲಿದ್ದು, ಭೂಮಿಯ ಕೆಲ ಭಾಗಗಳಲ್ಲಿ ಕತ್ತಲೆ ಆವರಿಸಲಿದೆ. 2025ರ ಮೊದಲ ಸೂರ್ಯಗ್ರಹಣ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ (Amavasya) ದಿನವಾದ ಇಂದು ಸಂಭವಿಸಲಿದೆ.
ಭಾಗಶಃ ಸೂರ್ಯಗ್ರಹಣ ಎಂದರೇನು?
ಸೂರ್ಯ ಮತ್ತು ಭೂಮಿಯ ಮಧ್ಯೆ ಚಂದ್ರ ಹಾದುಹೋದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯನ ಒಂದು ಭಾಗ ಮಾತ್ರ ಆವರಿಸುತ್ತದೆ. ಆಗ ಆಕಾಶದಲ್ಲಿ ಭಾಗಶಃ ಸೂರ್ಯನನ್ನು ಕಾಣಬಹುದಾಗಿದೆ. ಸೂರ್ಯನ ಉಳಿದ ಭಾಗ ಕತ್ತಲೆಯಿಂದ ಆವರಿಸಿರುತ್ತದೆ.
ಎಲ್ಲೆಲ್ಲಿ ಸೂರ್ಯಗ್ರಹಣ ಗೋಚರ?
ಇಂದು ಮಧ್ಯಾಹ್ನ 2.21ರಿಂದ ಸಂಜೆ 6.14ರವರೆಗೆ ಸೂರ್ಯಗ್ರಹಣ ಸಂಭವಿಸಲಿದೆ. ಈಶಾನ್ಯ ಅಮೆರಿಕ ಹಾಗೂ ಕೆನಡಾದ ಕೆಲ ಭಾಗಗಳಲ್ಲಿ ಈ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ನ್ಯೂಯಾರ್ಕ್ ನಗರ, ಬೋಸ್ಟನ್, ಮಾಂಟ್ರಿಯಲ್ ಮತ್ತು ಕ್ವಿಬೆಕ್, ಆಫ್ರಿಕಾ, ಸೈಬೀರಿಯಾ, ಕೆರಿಬಿಯನ್ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಸಹ ಭಾಗಶಃ ಗ್ರಹಣ ಗೋಚರವಾಗಲಿದೆ.
ಇದನ್ನೂ ಓದಿ: Solar Eclipse 2025: ಸೂರ್ಯಗ್ರಹಣದ ಸಮಯದಲ್ಲಿ ಈ ಒಂದು ಮಂತ್ರ ಪಠಿಸಿ; ವೃತ್ತಿ-ವ್ಯವಹಾರದಲ್ಲಿ ಜಯ ಸಿಗಲಿದೆ
ಎರಡು ಗಂಟೆಗಳ ಕಾಲ ಈ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. ಇಂದಿನ ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹೀಗಾಗಿ ಇಂದು ಯಾವುದೇ ಮುನ್ನೆಚ್ಚರಿಕೆ ಅಥವಾ ಪರಿಹಾರಗಳನ್ನು ಮಾಡುವ ಅಗತ್ಯವಿಲ್ಲ ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.
ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡುವಂತೆ ಸೂರ್ಯಗ್ರಹಣವನ್ನು ನೇರವಾಗಿ ವೀಕ್ಷಿಸಬಾರದು. ಇದರಿಂದ ರೆಟಿನಾ ಸುಟ್ಟುಹೋಗುದಲ್ಲದೇ ಕಣ್ಣಿನ ಹಾನಿಗೆ ಕಾರಣವಾಗಬಹುದು. ಸೂರ್ಯಗ್ರಹಣವನ್ನು ನೋಡುವುದಾದರೆ ಮೊದಲು ಕಣ್ಣಿನ ರಕ್ಷಣೆ ಅಗತ್ಯವಾಗಿದೆ. ಸಾಮಾನ್ಯವಾಗಿ ಸನ್ ಗ್ಲಾಸ್, ಕಲರ್ ಪ್ಲಾಸ್ಟಿಕ್ಗಳು, ಎಕ್ಸ್ ರೇಗಳಿಂದ ಅಥವಾ ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡ ಅನುಸರಿಸುವ ಸೌರ ವೀಕ್ಷಕಗಳಿಂದ ಕೂಡ ಸೂರ್ಯಗ್ರಹಣವನ್ನು ನೋಡಬಹುದಾಗಿದೆ.
ಇದನ್ನೂ ಓದಿ: Solar Eclipse 2025: ಮಾರ್ಚ್ ಕೊನೆಯಲ್ಲಿ ಸೂರ್ಯ ಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತದೆಯೇ?
ಯುಗಾದಿಗೂ ಒಂದು ದಿನ ಮೊದಲು ಸೂರ್ಯಗ್ರಹಣವಾಗಲಿದ್ದು, ಭಾರತದಲ್ಲಿ ಗೋಚರಿಸದಿದ್ದರೂ, ಧಾರ್ಮಿಕವಾಗಿ ಮಹತ್ವ ಪಡೆದುಕೊಂಡಿದೆ. ಈ ವರ್ಷದಲ್ಲಿ ಒಟ್ಟು ನಾಲ್ಕು ಗ್ರಹಣಗಳು ನಡೆಯಲಿದ್ದು, ಮಾರ್ಚ್ 14ರಂದು ಪೂರ್ಣ ಚಂದ್ರಗ್ರಹಣ ಸಂಭವಿಸಿದರೆ, ಇಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಇನ್ನು ಮತ್ತೊಂದು ಬಾರಿ ಪೂರ್ಣ ಚಂದ್ರಗ್ರಹಣ ನಡೆಯಲಿದ್ದು, ಬಳಿಕ ಸೆಪ್ಟೆಂಬರ್ 21ರಂದು ಭಾಗಶಃ ಸೂರ್ಯಗ್ರಹಣ ಕೂಡ ಈ ವರ್ಷವೇ ಸಂಭವಿಸಲಿದೆ.
ವರದಿ: ಬ್ಯೂರೋ ರಿಪೋರ್ಟ್, ಟಿವಿ9
ಮತ್ತಷ್ಟು ಆಧ್ಯಾತ್ಮ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ