ತಿರುಮಲ ಭಕ್ತರಿಗೆ ಬಿಗ್ ಅಲರ್ಟ್: ಎರಡು ದಿನಗಳ ಕಾಲ ಬೆಟ್ಟದ ಮೇಲೆ ಬೈಕ್‌ ಸಂಚಾರಕ್ಕೆ ನಿಷೇಧ!

ತಿರುಮಲದಲ್ಲಿ ನವರಾತ್ರಿ ಬ್ರಹ್ಮೋತ್ಸವ ಹಾಗೂ ಗರುಡ ಸೇವೆ ನಿಮಿತ್ತ ಟಿಟಿಡಿ ಎರಡು ದಿನಗಳ ಕಾಲ ಬೈಕ್‌ ಸಂಚಾರಕ್ಕೆ ನಿಷೇಧ ಹೇರಿದೆ. ಭಕ್ತರ ಸುರಕ್ಷತೆ ಮತ್ತು ಜನದಟ್ಟಣೆ ನಿರ್ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅಕ್ಟೋಬರ್ 17ರ ಬೆಳಗ್ಗೆ 6 ಗಂಟೆಯವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ಭಕ್ತರು ತಿರುಪತಿಯಲ್ಲಿ ತಮ್ಮ ಬೈಕ್‌ ನಿಲ್ಲಿಸಿ, ಎಪಿಎಸ್‌ಆರ್‌ಟಿಸಿ ಬಸ್ ಮೂಲಕ ತಿರುಮಲಕ್ಕೆ ಪ್ರಯಾಣಿಸುವಂತೆ ಟಿಟಿಡಿ ಸೂಚಿಸಿದೆ.

ತಿರುಮಲ ಭಕ್ತರಿಗೆ ಬಿಗ್ ಅಲರ್ಟ್: ಎರಡು ದಿನಗಳ ಕಾಲ ಬೆಟ್ಟದ ಮೇಲೆ ಬೈಕ್‌ ಸಂಚಾರಕ್ಕೆ ನಿಷೇಧ!
ತಿರುಮಲ ಭಕ್ತರಿಗೆ ಬಿಗ್ ಅಲರ್ಟ್
Image Credit source: Getty Images

Updated on: Oct 16, 2026 | 10:18 AM

ತಿರುಪತಿ: ತಿರುಮಲ ಶ್ರೀವಾರಿ ದರ್ಶನಕ್ಕೆ ತೆರಳುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ಎಚ್ಚರಿಕೆ ನೀಡಿದೆ. ನವರಾತ್ರಿ ಬ್ರಹ್ಮೋತ್ಸವದ ಜನದಟ್ಟಣೆ ಮತ್ತು ಭಕ್ತರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ತಿರುಮಲ ಬೆಟ್ಟದ ಮೇಲೆ ಎರಡು ದಿನಗಳವರೆಗೆ ಬೈಕ್‌ಗಳ (ದ್ವಿಚಕ್ರ ವಾಹನ) ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಗರುಡ ಸೇವೆ ಮತ್ತು ಭಕ್ತರ ಭಾರೀ ದಟ್ಟಣೆ:

ಅಕ್ಟೋಬರ್ 16 ರಂದು ಸಂಜೆ 6.30 ಕ್ಕೆ ನವರಾತ್ರಿ ಬ್ರಹ್ಮೋತ್ಸವದ ಅತ್ಯಂತ ಪ್ರಮುಖ ಹಾಗೂ ಪವಿತ್ರವಾದ ‘ಗರುಡ ವಾಹನ ಸೇವೆ’ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಮಹಾಸೇವೆಯನ್ನು ಕಣ್ಣುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ತಿರುಮಲ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಭಕ್ತರ ಅಪಾರ ಜನದಟ್ಟಣೆ ಮತ್ತು ವಾಹನಗಳ ನಿಲುಗಡೆಗೆ (Parking) ಆಗುವ ತೊಂದರೆಯನ್ನು ತಪ್ಪಿಸಲು, ಟಿಟಿಡಿ ಈ ಕಠಿಣ ನಿರ್ಧಾರ ಕೈಗೊಂಡಿದೆ. ತಿರುಮಲಕ್ಕೆ ಸಂಪರ್ಕ ಕಲ್ಪಿಸುವ ಎರಡೂ ಘಾಟ್ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಷೇಧ ಆದೇಶವು ಅಕ್ಟೋಬರ್ 17 ರ ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರಲಿದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ನವರಾತ್ರಿಯ 9 ದಿನಗಳ ಮಹತ್ವವೇನು? ನವದುರ್ಗೆಯ ಒಂಬತ್ತು ರೂಪಗಳ ವಿಶೇಷತೆ ತಿಳಿಯಿರಿ

ಭಕ್ತರಿಗೆ ಟಿಟಿಡಿಯಿಂದ ಪ್ರಮುಖ ಸೂಚನೆಗಳು:

ಬೈಕ್‌ಗಳಿಗೆ ಅವಕಾಶವಿಲ್ಲದ ಕಾರಣ, ಭಕ್ತರು ತಿರುಪತಿಯಲ್ಲೇ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ, ಅಲ್ಲಿಂದ APSRTC ಬಸ್‌ಗಳ ಮೂಲಕ ತಿರುಮಲಕ್ಕೆ ಪ್ರಯಾಣಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ತಿರುಮಲದಲ್ಲಿ ಜನದಟ್ಟಣೆ ಅಧಿಕವಿರುವ ಬ್ರಹ್ಮೋತ್ಸವ ಹಾಗೂ ವಿಶೇಷ ಹಬ್ಬಗಳ ಸಂದರ್ಭದಲ್ಲಿ ಟಿಟಿಡಿ ಈ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಹೊಸದೇನಲ್ಲ. ಭಕ್ತರ ಹಿತದೃಷ್ಟಿಯಿಂದ ಈ ನಿಯಮ ಜಾರಿಗೊಳಿಸಲಾಗಿದೆ. ಭಕ್ತರು ಟಿಟಿಡಿಯ ಈ ನಿರ್ಧಾರಕ್ಕೆ ಸಂಪೂರ್ಣವಾಗಿ ಸಹಕರಿಸಬೇಕು ಹಾಗೂ ಬೈಕ್‌ಗಳಲ್ಲಿ ಬರುವವರು ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು TTD ಸೂಚನೆ ನೀಡಿದೆ.

ಪ್ರಸ್ತುತ ದಸರಾ ಉತ್ಸವ ಮತ್ತು ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ತಿರುಮಲದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದರಿಂದ, ಶ್ರೀವಾರಿಯ ದರ್ಶನಕ್ಕೆ ಸ್ವಲ್ಪ ಹೆಚ್ಚಿನ ಸಮಯಾವಕಾಶ ಹಿಡಿಯಬಹುದು. ಹೀಗಾಗಿ ಟಿಟಿಡಿ ಮಾಡಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಯಾತ್ರೆಯನ್ನು ಸುಗಮಗೊಳಿಸಿಕೊಳ್ಳುವಂತೆ ಕೋರಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us