Tulsi Vastu Tips: ಮನೆಯಲ್ಲಿ ತುಳಸಿ ಗಿಡ ನೆಡುವ ಮುನ್ನ ತಿಳಿಯಲೇಬೇಕಾದ ವಾಸ್ತು ನಿಯಮಗಳಿವು!

ಹಿಂದೂ ಧರ್ಮ ಮತ್ತು ವಾಸ್ತು ಪ್ರಕಾರ, ತುಳಸಿ ಗಿಡವು ಅತ್ಯಂತ ಪವಿತ್ರ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಆರ್ಥಿಕ ಸಮೃದ್ಧಿಗೆ ಇದು ನೆಲೆ. ತುಳಸಿ ಗಿಡ ನೆಡಲು ಗುರುವಾರ, ಶುಕ್ರವಾರ, ಶನಿವಾರ ಮತ್ತು ಕಾರ್ತಿಕ ಮಾಸ ಶುಭ. ಪ್ರತಿದಿನ ನೀರು ಅರ್ಪಿಸಿ, ಸಂಜೆ ದೀಪ ಹಚ್ಚಿ. ಪೊರಕೆ, ಚಪ್ಪಲಿಗಳನ್ನು ದೂರವಿಡಿ. ಏಕಾದಶಿಯಂದು ಎಲೆ ಕೀಳಬೇಡಿ, ಶಿವನಿಗೆ ಅರ್ಪಿಸಬೇಡಿ. ನಿಯಮ ಪಾಲಿಸಿದರೆ ಲಕ್ಷ್ಮಿ-ನಾರಾಯಣರ ಆಶೀರ್ವಾದ ಖಚಿತ.

Tulsi Vastu Tips: ಮನೆಯಲ್ಲಿ ತುಳಸಿ ಗಿಡ ನೆಡುವ ಮುನ್ನ ತಿಳಿಯಲೇಬೇಕಾದ ವಾಸ್ತು ನಿಯಮಗಳಿವು!
ತುಳಸಿ ಗಿಡ
Image Credit source: Getty Images

Updated on: Jul 04, 2026 | 7:43 AM

ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ತುಳಸಿ ಗಿಡವಿರುವ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿರುತ್ತದೆ ಮತ್ತು ಆರ್ಥಿಕ ಸಮಸ್ಯೆಗಳು ಎಂದಿಗೂ ಸುಳಿಯುವುದಿಲ್ಲ ಎಂಬ ನಂಬಿಕೆಯಿದೆ. ತುಳಸಿಯು ಶ್ರೀಹರಿ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದುದಾಗಿದೆ. ಹೀಗಾಗಿ, ತುಳಸಿಯನ್ನು ಪೂಜಿಸುವ ಮನೆಯಲ್ಲಿ ಲಕ್ಷ್ಮಿ-ನಾರಾಯಣರ ಆಶೀರ್ವಾದ ಸದಾ ಇರುತ್ತದೆ. ನಿಮ್ಮ ಮನೆಯಲ್ಲಿ ಹೊಸದಾಗಿ ತುಳಸಿ ಗಿಡವನ್ನು ನೆಡಲು ನೀವು ಬಯಸಿದರೆ, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಮುಖ್ಯ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಆ ನಿಯಮಗಳು ಇಲ್ಲಿವೆ:

ತುಳಸಿ ಗಿಡ ನೆಡಲು ಶುಭ ದಿನಗಳು ಯಾವುವು?

ವಾಸ್ತು ಶಾಸ್ತ್ರದ ಪ್ರಕಾರ, ವಾರದ ಎಲ್ಲಾ ದಿನಗಳಲ್ಲೂ ತುಳಸಿ ಗಿಡವನ್ನು ನೆಡಬಾರದು. ಅದಕ್ಕಾಗಿಯೇ ಕೆಲವು ವಿಶೇಷ ದಿನಗಳನ್ನು ಉಲ್ಲೇಖಿಸಲಾಗಿದೆ. ಗುರುವಾರ, ಶುಕ್ರವಾರ ಮತ್ತು ಶನಿವಾರಗಳು ಮನೆಯಲ್ಲಿ ಹೊಸ ತುಳಸಿ ಗಿಡವನ್ನು ನೆಡಲು ಅತ್ಯಂತ ಸೂಕ್ತವಾದ ದಿನಗಳಾಗಿವೆ. ವರ್ಷದ ಕಾರ್ತಿಕ ಮಾಸ ಮತ್ತು ಏಕಾದಶಿಯ ದಿನದಂದು ತುಳಸಿ ಗಿಡವನ್ನು ನೆಡುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಗಿಡ ನೆಡುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ. ನೆನಪಿರಲಿ, ಸೋಮವಾರದಂದು ಎಂದಿಗೂ ಮನೆಯಲ್ಲಿ ಹೊಸ ತುಳಸಿ ಗಿಡವನ್ನು ನೆಡಬಾರದು.

ಪ್ರತಿದಿನ ಪಾಲಿಸಬೇಕಾದ ಪೂಜಾ ವಿಧಿಗಳು:

ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ, ಮೊದಲು ತುಳಸಿ ಗಿಡಕ್ಕೆ ನೀರನ್ನು (ಅರ್ಘ್ಯ) ಅರ್ಪಿಸಬೇಕು. ತುಳಸಿ ಕಟ್ಟೆಯ ಬಳಿ ಪ್ರತಿದಿನ ಸಂಜೆ ತಪ್ಪದೇ ದೀಪವನ್ನು ಹಚ್ಚಿ ಪ್ರಾರ್ಥಿಸಬೇಕು.

ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಈ 4 ಕೆಟ್ಟ ಅಭ್ಯಾಸಗಳಿದ್ದರೆ ಕೋಟ್ಯಧಿಪತಿಯೂ ಭಿಕ್ಷುಕನಾಗುತ್ತಾನೆ!

ತುಳಸಿ ಗಿಡದ ಬಳಿ ಇವುಗಳನ್ನು ಎಂದಿಗೂ ಮಾಡಬೇಡಿ:

ತುಳಸಿ ದೇವಿಯ ಅನುಗ್ರಹ ಸದಾ ಇರಬೇಕಾದರೆ, ಕೆಲವು ತಪ್ಪುಗಳನ್ನು ಮಾಡದಂತೆ ಎಚ್ಚರ ವಹಿಸಬೇಕು. ತುಳಸಿ ಗಿಡದ ಸುತ್ತಮುತ್ತಲಿನ ಜಾಗವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ತುಳಸಿ ಕಟ್ಟೆಯ ಬಳಿ ಎಂದಿಗೂ ಪೊರಕೆ (ಕಸಬರಗಿ), ಚಪ್ಪಲಿ ಅಥವಾ ಬೂಟುಗಳನ್ನು ಇಡಬಾರದು. ಇದು ನಕಾರಾತ್ಮಕತೆಯನ್ನು ತರುತ್ತದೆ. ಏಕಾದಶಿಯ ದಿನದಂದು ತುಳಸಿ ಎಲೆಗಳನ್ನು ಎಂದಿಗೂ ಕೀಳಬಾರದು. ಇದು ಧಾರ್ಮಿಕವಾಗಿ ನಿಷೇಧಿಸಲ್ಪಟ್ಟಿದೆ. ಶಿವಲಿಂಗಕ್ಕೆ ಅಥವಾ ಮಹಾದೇವನಿಗೆ (ಶಿವ) ಎಂದಿಗೂ ತುಳಸಿ ಎಲೆಗಳನ್ನು ಅರ್ಪಿಸಬಾರದು. ಆದರೆ, ವಿಷ್ಣು, ಲಕ್ಷ್ಮಿ ದೇವಿ ಮತ್ತು ರಂಗನಾಥ ಸ್ವಾಮಿಗೆ ತುಳಸಿ ಎಲೆಗಳನ್ನು ಅರ್ಪಿಸುವುದು ಅತ್ಯಂತ ಶ್ರೇಷ್ಠ ಹಾಗೂ ಶುಭ ತರಬಲ್ಲದ್ದಾಗಿದೆ. ವಾಸ್ತು ನಿಯಮಗಳ ಪ್ರಕಾರ ತುಳಸಿ ಗಿಡವನ್ನು ನೆಟ್ಟು, ಪೂಜಿಸುವುದರಿಂದ ಮನೆಯಲ್ಲಿ ಧನ-ಧಾನ್ಯಗಳ ಕೊರತೆ ಎದುರಾಗುವುದಿಲ್ಲ ಮತ್ತು ಸದಾ ಸಕಾರಾತ್ಮಕ ವಾತಾವರಣ ಇರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us