Kannada News Spiritual Vastu Tips: As per Vastu, money gain if a money plant is placed in which direction of the house is kept
Vastu Tips: ವಾಸ್ತು ಪ್ರಕಾರ ಮನೆಯ ಯಾವ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಟ್ಟರೆ ಧನ ಲಾಭ: ಇಲ್ಲಿದೆ ಮಾಹಿತಿ
ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ಮನಿ ಪ್ಲಾಂಟ್ನ್ನು ಸರಿಯಾದ ಸ್ಥಿತಿ ಮತ್ತು ದಿಕ್ಕಿನಲ್ಲಿ ಇಟ್ಟರೆ ನಿಮ್ಮ ಮನೆ ಹಣದಿಂದ ತುಂಬುತ್ತದೆ ಎಂದು ಹೇಳಲಾಗುತ್ತದೆ.
ಮನಿ ಪ್ಲಾಂಟ್ (money plant) ಹೆಸರೇ ಸೂಚಿಸುವಂತೆ ಇದೊಂದು ಹಣದ ಗಿಡ. ಆದರೆ ಈ ಗಿಡದಲ್ಲಿ ಹಣ ಬೆಳೆಯದಿದ್ದರೂ, ಅದು ನಮಗೆ ಹಣ ನೀಡಬಹುದು ಎಂಬ ನಂಬಿಕೆ ಇದೆ. ಈ ಗಿಡ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಲು ಸಂಪೂರ್ಣವಾಗಿ ಕೊಡುಗೆ ನೀಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ಮನಿ ಪ್ಲಾಂಟ್ನ್ನು ಸರಿಯಾದ ಸ್ಥಿತಿ ಮತ್ತು ದಿಕ್ಕಿನಲ್ಲಿ ಇಟ್ಟರೆ ನಿಮ್ಮ ಮನೆ ಹಣದಿಂದ ತುಂಬುತ್ತದೆ ಎಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವು ಮನೆಗಳಲ್ಲಿ ಕಾಣಸಿಗುವ ಗಿಡಗಳಲ್ಲಿ ಮನಿ ಪ್ಲಾಂಟ್ ಕೂಡ ಒಂದು. ಇದರ ಬಗ್ಗೆ ಎಲ್ಲರಿಗೂ ತಿಳಿದಿದೆ. ವಾಸ್ತು ಪ್ರಕಾರ ಇದನ್ನು ಮನೆಯಲ್ಲಿ ಬೆಳೆಸಿದರೆ ಒಳ್ಳೆಯ ಹಣ ಮತ್ತು ಅದೃಷ್ಟ ಬರುತ್ತದೆ ಎಂಬ ನಂಬಿಕೆ ಇದೆ.
ಮನೆಯಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಸುತ್ತಲೂ ಧನಾತ್ಮಕ ಶಕ್ತಿ ಉಂಟಾಗುತ್ತದೆ ಎಂದು ವಾಸ್ತುಶಾಸ್ತ್ರಗಳಲ್ಲಿ ಹೇಳಲಾಗಿದೆ. ಆದರೆ ಮನೆಯಲ್ಲಿ ಎಲ್ಲೆಂದರಲ್ಲಿ ಮನಿ ಪ್ಲಾಂಟ್ ಇಡಬಾರದು. ಮನಿಪ್ಲಾಂಟ್ನ್ನು ನಿರ್ದಿಷ್ಟ ಸ್ಥಳಗಳು ಮತ್ತು ದಿಕ್ಕುಗಳಲ್ಲಿ ಇರಿಸಬೇಕು.
ನೀವು ಮನಿ ಪ್ಲಾಂಟ್ನ್ನು ಮನೆಯಲ್ಲಿ ಇಡಲು ಬಯಸಿದರೆ, ಅದನ್ನು ಮಡಕೆ ಅಥವಾ ಬಾಟಲಿಯಲ್ಲಿ ನೀರು ತುಂಬಿಸಿ ಇಡಿ. ಹೀಗೆ ಮಾಡುವುರಿಂದ ಮನೆಯಲ್ಲಿರುವವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಮನಿ ಪ್ಲಾಂಟ್‌ಗೆ ನಿಯಮಿತವಾಗಿ ನೀರು ಹಾಕಬೇಕು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಇದು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ನ್ನು ಇಡಬಾರದು. ಹಾಗೆ ಇಟ್ಟುಕೊಂಡರೆ ಮನೆಯಲ್ಲಿದ್ದ ಹಣವೆಲ್ಲ ಹೊರ ಹೋಗುತ್ತದೆ. ಮನೆಯಲ್ಲಿರುವವರಲ್ಲಿ ಆರೋಗ್ಯ ಸಮಸ್ಯೆ ಉಂಟಾಗಬಹುದು.
ಮನೆಯಲ್ಲಿ ಮನಿ ಪ್ಲಾಂಟ್ನ್ನು ಪಶ್ಚಿಮ ದಿಕ್ಕಿನಲ್ಲಿ ಇಡಬಾರದು. ಹಾಗೆ ಮಾಡಿದರೆ ದಂಪತಿಗಳ ನಡುವೆ ಬೇರ್ಪಡುವ ಸಂಭವವಿದೆ.
ಒಣ, ಸತ್ತ ಮತ್ತು ಹಳದಿ ಬಣ್ಣದ ಮನಿ ಪ್ಲಾಂಟ್ ಎಲೆಗಳನ್ನು ಕಾಲಕಾಲಕ್ಕೆ ತೆಗೆದುಹಾಕಬೇಕು. ಇಲ್ಲದಿದ್ದರೆ ಮನೆಯಲ್ಲಿ ವಾಸ್ತುದೋಷ ನಿರ್ಮಾಣವಾಗುತ್ತದೆ.
ಮನೆಯಲ್ಲಿ ಮನಿ ಪ್ಲಾಂಟ್ನ್ನು ಆಗ್ನೇಯ ದಿಕ್ಕಿನಲ್ಲಿ (ಪೂರ್ವ-ದಕ್ಷಿಣ ನಡುವೆ) ಇಡಬೇಕು. ವಿನಾಯಕನಿಗೆ ಈ ದಿಕ್ಕು ಬಹಳ ಪ್ರಿಯ. ಆದ್ದರಿಂದ, ಆ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದು ಅದೃಷ್ಟವನ್ನು ತರುತ್ತದೆ.