AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಕ್ರಾಂತಿಯ ನಂತರ ಶನಿಯ ನಡೆ ಬದಲಾಗುತ್ತದೆಯೇ? ಅದರಿಂದ ಯಾವ ರಾಶಿಗೆ ಒಳಿತಾಗಲಿದೆ? ಯಾವ ರಾಶಿಯವರು ಜಾಗರೂಕರಾಗಬೇಕು ? ಪರಿಹಾರವೇನು ?

ಪ್ರತೀ ಗ್ರಹರು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡುವುದು ಸ್ವಾಭಾವಿಕ. ಆ ಸಂದರ್ಭದಲ್ಲಿ ಕೆಲವು ಗ್ರಹರಿಂದ ಕೆಲವು ರಾಶಿಗೆ ಒಳಿತೂ ಇನ್ನು ಕೆಲವು ರಾಶಿಗೆ ಅಮಂಗಲವೂ ಆಗುವುದು ಸಹಜ. ಹಾಗಂತ ಭಯಪಡಬೇಕಾಗಿಲ್ಲ.

ಸಂಕ್ರಾಂತಿಯ ನಂತರ ಶನಿಯ ನಡೆ ಬದಲಾಗುತ್ತದೆಯೇ? ಅದರಿಂದ ಯಾವ ರಾಶಿಗೆ ಒಳಿತಾಗಲಿದೆ? ಯಾವ ರಾಶಿಯವರು ಜಾಗರೂಕರಾಗಬೇಕು ? ಪರಿಹಾರವೇನು ?
ಸಾಂದರ್ಭಿಕ ಚಿತ್ರ Image Credit source: google image
TV9 Web
| Edited By: |

Updated on: Jan 13, 2023 | 10:44 AM

Share

ಪ್ರತೀ ಗ್ರಹರು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡುವುದು ಸ್ವಾಭಾವಿಕ. ಆ ಸಂದರ್ಭದಲ್ಲಿ ಕೆಲವು ಗ್ರಹರಿಂದ ಕೆಲವು ರಾಶಿಗೆ ಒಳಿತೂ ಇನ್ನು ಕೆಲವು ರಾಶಿಗೆ ಅಮಂಗಲವೂ ಆಗುವುದು ಸಹಜ. ಹಾಗಂತ ಭಯಪಡಬೇಕಾಗಿಲ್ಲ. ಪ್ರತಿಯೊಂದು ಕಷ್ಟಕ್ಕೂ ಸೂಕ್ತ ಪರಿಹಾರಗಳಿವೆ. ಅದನ್ನು ಸ್ವಯಂ ನಾವೇ ಶ್ರದ್ಧೆಯಿಂದ ಮಾಡಿದಷ್ಟು ಸಫಲತೆ ಹೆಚ್ಚಾಗಿ ಕಾಣುತ್ತದೆ. ಪ್ರಕೃತ ಈ ಸಲದ ಸಂಕ್ರಾಂತಿಯ ನಂತರ ಶನಿಯು ತನ್ನ ವಕ್ರಗತಿಯನ್ನು ಬದಲಿಸಿ ಮುಂದೆ ಸಾಗುತ್ತಾನೆ. ಈ ಹಿಂದಿನ ವರುಷದಲ್ಲಿ ಶನಿಯು ಸಾಕಷ್ಟು ಬಾರಿ ವಕ್ರ, ಋಜು ಎಂಬುದಾಗಿ ತನ್ನ ನಡೆಯನ್ನು ಬದಲಿಸಿ ತನ್ನ ಕರ್ಮಫಲವನ್ನು ಸರಿಯಾಗಿ ಅಳೆದು ನೀಡಿರುವುದು ಸ್ಪಷ್ಟ. ಈಗ ದಿನಾಂಕ 17/01/23ನೇ ಮಂಗಳವಾರದಂದು ರಾತ್ರಿ ಗಂಟೆ 10.05(pm) ನಿಮಿಷಕ್ಕೆ ಪ್ರಕೃತ ತಾನಿರುವ ಮಕರ ರಾಶಿಯಿಂದ ಕುಂಭಕ್ಕೆ ಸಾಗುತ್ತಾನೆ.

ಈ ನಡೆಯಿಂದಾಗಿ ಧನುರಾಶಿಯವರಿಗೆ ತಮ್ಮ ಸಾಡೇಸಾತಿ (ಏಳೂವರೆ ವರುಷದ ಶನಿಯ) ತಾಪದಿಂದ ಮುಕ್ತಿ ದೊರಕುತ್ತದೆ. ಶನಿಯು ತನ್ನ ಅವಧಿಯ ಕೊನೆಯ ಕಾಲಘಟ್ಟದಲ್ಲಿ ತಾನು ಪೀಡಿಸಿದ ರಾಶಿಗೆ ಅತ್ಯಂತ ಮಂಗಲವನ್ನು ಕರುಣಿಸಿ ಮುಂದೆ ತೆರಳುವುದು ಅವನ ಸ್ವಾಭಾವಿಕ ಧರ್ಮ. ಆದ್ದರಿಂದ ಈ ಸಂಕ್ರಾಂತಿಯ ನಂತರ ಧನುರ್ರಾಶಿಯವರಿಗೆ ಅತ್ಯಂತ ಶುಭವಾಗಲಿದೆ. ಹಾಗೆಯೇ ಮಕರ ರಾಶಿಯಲ್ಲಿದ್ದ ಶನಿಯು ತನ್ನ ಮನೆಯನ್ನು/ ಸ್ಥಾನವನ್ನು ಬದಲಿಸಿ ಕುಂಭಕ್ಕೆ ಹೋಗುವುದರಿಂದ ಮಕರರಾಶಿಯವರಿಗೆ ಕೊಂಚ ನಿರಾಳವಾಗಲಿದೆ. ಆದರೂ ಮಕರರಾಶಿಯವರಿಗೆ ಸಾಡೇಸಾತಿಯ ಕೊನೆಯ ಭಾಗ ಸಂಕ್ರಾಂತಿಯ ನಂತರ ಆರಂಭವಾಗಲಿದ್ದು ಈ ಸಮಯದಲ್ಲಿ ವಾಹನದಲ್ಲಿ ತುಂಬಾ ಜಾಗರೂಕರಾಗಿರಿ. ಕಬ್ಬಿಣ ಮುಂತಾದ ಲೋಹಗಳಿಂದ ಗಾಯಗಳಾಗುವ ಸಂಭವ ಹೆಚ್ಚು.

ಇದನ್ನು ಓದಿ:Spiritual: ದುಷ್ಟನಾದರೂ ರಾವಣನಲ್ಲಿ ಕಂಡ ಒಂದು ಒಳ್ಳೆಯ ಗುಣ, ರಾವಣನಿಗೆ ಯಾರ ಶಾಪ?

ಕುಂಭಕ್ಕೆ ಶನಿಯ ಪ್ರವೇಶವಾಗುವುದರಿಂದ ಈ ರಾಶಿಯಲ್ಲಿ ಶನಿಯು ಸಂಚರಿಸುತ್ತಿರುತ್ತಾನೆ. ಇದರಿಂದ ಈ ರಾಶಿಯವರು ಪರೀಕ್ಷೆ, ಆರೋಗ್ಯ, ಹಣಕಾಸಿನ ವಿಚಾರಗಳಲ್ಲಿ ಅತ್ಯಂತ ಸೂಕ್ಷ್ಮವಾಗಿ ಇರಬೇಕು. ಎಚ್ಚರ ತಪ್ಪಿದರೆ ಅವಗಡಗಳಾಗುವ ಸಾಧ್ಯತೆಯಿದೆ. ಇನ್ನು ಮೀನರಾಶಿಯವರಿಗೆ ಸಂಕ್ರಾಂತಿಯ ನಂತರ ಸಾಡೇಸಾತಿ ಆರಂಭವಾಗಲಿದ್ದು ಇವರುಗಳು ಸ್ವಲ್ಪ ಮಟ್ಟಿಗೆ ಜಾಗರೂಕರಾಗುವುದು ಒಳಿತು.

ಇದರೊಂದಿಗೆ ತುಲಾರಾಶಿಯವರಿಗೆ ಪಂಚಮದಲ್ಲಿ ಶನಿ ಸಂಚರಿಸುವುದರಿಂದ ಆರೋಗ್ಯವಿಚಾರದಲ್ಲಿ ಏರುಪೇರಾಗುವ ಸಂಭವವಿದೆ. ಆಹಾರ ವಿಹಾರಾದಿಗಳಲ್ಲಿ ಅತ್ಯಂತ ಗಮನವಿಡುವುದು ನಿಮ್ಮಮಟ್ಟಿಗೆ ಒಳ್ಳೆಯದು. ಹಾಗೆಯೇ ಕರ್ಕರಾಶಿ ಅಥವಾ ಕಟಕರಾಶಿಯವರಿಗೆ ಅಷ್ಟಮದಲ್ಲಿ ಶನಿಯು ಸಂಚರಿಸುವುದರಿಂದ ಈ ಸಂಕ್ರಾಂತಿಯ ನಂತರ ಕೆಲವು ಸಮಯಗಳ ಕಾಲ ಯಾವುದೇ ವಾಹನ ಖರೀದಿ, ವ್ಯವಹಾರಗಳಲ್ಲಿ ಪಾಲುದಾರಿಕೆ, ಸಾಲ ನೀಡುವಿಕೆ ಇತ್ಯಾದಿ ಕಾರ್ಯಗಳನ್ನು ಮಾಡದೇ ಇರುವುದು ಶ್ರೇಯಸ್ಕರ.

ಮೇಷರಾಶಿಯವರಿಗೆ ಸಂಕ್ರಾಂತಿಯ ನಂತರ ಶನಿಯು ಏಕಾದಶದಲ್ಲಿ ಸಂಚರಿಸುವುದರಿಂದ ಉತ್ತಮ ಸ್ಥಾನಮಾನಗಳು ಲಭ್ಯವಾಗಲಿದ್ದು, ತಮ್ಮ ಕೈ ಕೆಳಗೆ ಕೆಲಸ ಮಾಡುವ ಜನರಿಂದ ಉತ್ತಮ ಸಹಕಾರ ಸಿಗಲಿದೆ. ಸಂಸ್ಥೆಯಿಂದ / ಸರಕಾರದಿಂದ / ಉತ್ತಮರಿಂದ ಒಳ್ಳೆಯ ಗೌರವ ಲಭ್ಯವಾಗುವ ಸಾಧ್ಯತೆಯಿದೆ.

ಶನಿಯ ಅನುಗ್ರಹಕ್ಕಾಗಿ ಅಥವಾ ಶನಿಪೀಡಾ ನಿವಾರಣೆಗಾಗಿ ಅಶ್ವತ್ಥ ಪ್ರದಕ್ಷಿಣೆ ಅತ್ಯಂತ ಉತ್ತಮ ಪರಿಹಾರ. ಪ್ರತೀದಿನ ಮಾಡಿದರೆ ಅತ್ಯುತ್ತಮ. ಇಲ್ಲವಾದಲ್ಲಿ ಶನಿವಾರದಂದು ಏಳು ಬಾರಿ ಅಶ್ವತ್ಥ ಪ್ರದಕ್ಷಿಣೆ ಮಾಡಿರಿ. ಅಲ್ಲದೇ ಹನೂಮಾನ್ ಚಾಲೀಸ್, ವಿಷ್ಣುಸಹಸ್ರನಾಮ ಪಾರಾಯಣ ಅಥವಾ ಶ್ರವಣ. ಶಿವನಿಗೆ ಎಳ್ಳೆಣ್ಣೆಯನ್ನು ಶನಿವಾರದಂದು ಸಮರ್ಪಿಸುವುದರಿಂದ ಅಮಂಗಲವು ಸಂಭವಿಸುವುದಿಲ್ಲ.

ಅಶ್ವತ್ಥಮಂತ್ರ:

ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣೇ |

ಅಗ್ರತಃ ಶಿವ ರೂಪಾಯ ವೃಕ್ಷರಾಜಾಯ ತೇ ನಮಃ ||

ಡಾ.ಕೇಶವಕಿರಣ ಬಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್