Spiritual: 108.. ಈ ಸಂಖ್ಯೆಯಲ್ಲೇನಿದೆ ಪವಾಡ, ವಿಜ್ಞಾನಕ್ಕೆ ಸವಾಲಾಗುತ್ತಿದೆ ಈ ನಂಬರ್

108 ಈ ಸಂಖ್ಯೆ ಭಾರತೀಯರ ಪಾಲಿಗೆ ತುಂಬಾ ವಿಶೇಷವಾದದ್ದು ಹಾಗೂ ಮಹತ್ವವಾದದ್ದು. ಯಾಕೆಂದರೆ 108 ಸೃಷ್ಟಿ ಮತ್ತು ಸೃಷ್ಟಿಕರ್ತನ ನಡುವಿನ ಸಂಪರ್ಕವನ್ನು ತೋರಿಸುತ್ತದೆ.

Spiritual: 108.. ಈ ಸಂಖ್ಯೆಯಲ್ಲೇನಿದೆ ಪವಾಡ, ವಿಜ್ಞಾನಕ್ಕೆ ಸವಾಲಾಗುತ್ತಿದೆ ಈ ನಂಬರ್
108
Follow us
TV9 Web
| Updated By: ಆಯೇಷಾ ಬಾನು

Updated on: Sep 18, 2022 | 6:30 AM

ನಕ್ಷತ್ರ ಮಂಡಲ, ಗ್ರಹಗಳು, ಮನುಷ್ಯರು, ಪ್ರಾಣಿಗಳು ಸೇರಿ ಇಡೀ ಜಗತ್ತು ಒಂದು ವಿಶೇಷ ಸೂತ್ರದಡಿ ಕಟ್ಟಲ್ಪಟ್ಟಿದೆ. ಆ ಸೂತ್ರವೇ 108. ಈ ಸಂಖ್ಯೆ ಭಾರತೀಯರ ಪಾಲಿಗೆ ತುಂಬಾ ವಿಶೇಷವಾದದ್ದು ಹಾಗೂ ಮಹತ್ವವಾದದ್ದು. ಯಾಕೆಂದರೆ 108 ಸೃಷ್ಟಿ ಮತ್ತು ಸೃಷ್ಟಿಕರ್ತನ ನಡುವಿನ ಸಂಪರ್ಕವನ್ನು ತೋರಿಸುತ್ತದೆ. ಜ್ಯೋತಿಷ್ಯದ ಪ್ರಕಾರ 27 ಜನ್ಮ ನಕ್ಷತ್ರಗಳಿವೆ. ಪ್ರತಿ ನಕ್ಷತ್ರಕ್ಕೂ 4 ಪಾದಗಳಿವೆ. ಈ 27 ನಕ್ಷತ್ರಗಳನ್ನು 4 ಪಾದಗಳೊಂದಿಗೆ ಗುಣಸಿದಾಗ 108 ಬರುತ್ತದೆ.

ಇನ್ನು 54 ರಾಕ್ಷಸರು, 54 ದೇವತೆಗಳು ಎರಡೂ ಕಡೆ ಕ್ಷೀರ ಸಾಗರವನ್ನು ಮಥನ ಮಾಡಿದಾಗ ಅಮೃತ ಹೊರ ಬಂತು ಅಂತ ಪುರಾಣಗಳು ಹೇಳುತ್ತವೆ. ಇಲ್ಲಿ ದೇವತೆಗಳು ಹಾಗೂ ರಾಕ್ಷಸರನ್ನು ಕೂಡಿದಾಗ 108 ಬರುತ್ತದೆ. ಹೀಗಾಗಿ ಈ 108 ಸಂಖ್ಯೆ ಮನುಷ್ಯನಲ್ಲಿನ ಲಕ್ಷಣಗಳನ್ನು ಎರಡಾಗಿ ಬೇರೆ ಮಾಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಈ ಸಂಖ್ಯೆಯ ಬಲದಿಂದ ಒಳ್ಳೆಯದು ಮೆಲುಗೈ ಸಾಧಿಸಿ, ಮನುಷ್ಯ ಮೋಕ್ಷವನ್ನು ಸಾಧಿಸುತ್ತಾನೆ ಎಂದು ಹೇಳುತ್ತಾರೆ.

ನಟರಾಜನ ನಾಟ್ಯ ಅಣುಗಳ ನರ್ತನಕ್ಕೆ ಸಾಮ್ಯತೆ ಇದ್ದು, ನಟರಾಜನ ನಾಟ್ಯ ಭಂಗಿಯೂ 108 ಆಗಿದೆ. ಆದ್ದರಿಂದಲೇ ಶಿವನನ್ನು ಪ್ರತಿನಿಧಿಸುವ ರುದ್ರಾಕ್ಷಿ ಮಾಲೆಯಲ್ಲಿ ರುದ್ರಾಕ್ಷಿಗಳು 108 ಇರುತ್ತವೆ. ವೈಜ್ಞಾನಿಕ ದೃಷ್ಟಿಯಿಂದ ಹಿಡಿದು, ದೈವಿಕ ದೃಷ್ಟಿಯವರೆಗೂ 108 ಸಂಖ್ಯೆ ಸನಾತನ ಧರ್ಮದೊಂದಿಗೆ ಅವಿನಾಭವ ನಂಟು ಹೊಂದಿದೆ. ಇದನ್ನೂ ಓದಿ: Pitru Paksha 2022: ಪಿಂಡ ದಾನ ಮಾಡುವ ಪವಿತ್ರ ಸ್ಥಳಗಳು, ಇಲ್ಲಿ ಪಿಂಡ ದಾನ ಮಾಡಿದ್ರೆ ಮೋಕ್ಷ ಪಕ್ಕ

ಇತ್ತ ಆಚರಣೆಗಳ ವಿಷಯಕ್ಕೆ ಬಂದರೆ ಭಾರತದಲ್ಲಿ 108 ಪವಿತ್ರ ಕ್ಷೇತ್ರಗಳಿವೆ. ಜ್ಞಾನದ ವಿಷಯಕ್ಕೆ ಬಂದಲ್ಲಿ ನಾಲ್ಕು ವೇದಗಳ ಸಾರವನ್ನು ಹೊಂದಿರುವ ಉಪನಿಷತ್‍ಗಳ ಸಂಖ್ಯೆಯೂ 108. ಆತ್ಮಸಾಕ್ಷಾತ್ಕಾರಕ್ಕೆ ಪ್ರಯತ್ನಿಸುವವರು 108 ಮಣಿಗಳುಳ್ಳ ಮಾಲೆಯನ್ನು ಹಿಡಿದು ಜಪಿಸುತ್ತಾರೆ. 108 ಮಣಿಗಳು ಮನುಷ್ಯ ಮೋಕ್ಷ ಸಾಧಿಸುವುದಕ್ಕೂ ಮುಂಚಿನ ಹಂತಗಳನ್ನು ಪ್ರತಿನಿಧಿಸುತ್ತವೆ. 108 ಮಣಿಗಳ ಮಾಲೆಯಿಂದ ಜಪ ಮಾಡಿದರೆ ಮನುಷ್ಯ ಆಂತರಿಕವಾಗಿ ಸದೃಢವಾಗುತ್ತಾನೆ ಎಂಬ ನಂಬಿಕೆ ಇದೆ.

ಇನ್ನು ಸೌರಮಂಡಲದ ವಿಚಾರಕ್ಕೆ ಬಂದರೆ ಸೂರ್ಯ ಭೂಮಿಯಿಂದ ಸೂರ್ಯನ ವ್ಯಾಸದ 108ರಷ್ಟು ಮತ್ತು ಚಂದ್ರನ ವ್ಯಾಸದ 108ರಷ್ಟು ದೂರದಲ್ಲಿದ್ದಾನೆ. ಇನ್ನು ಮನುಷ್ಯನ ಹೊರಭಾಗಕ್ಕೆ ಕಾಣುವ ದೇಹಕ್ಕೂ ಒಳಗಿರುವ ಆತ್ಮಕ್ಕೂ 108 ಯುನಿಟ್‌ ಗಳಷ್ಟು ಅಂತರವಿರುವುದನ್ನು ಋಷಿಗಳು ಕಂಡುಕೊಂಡಿದ್ದಾರೆ.

ಗಂಗಾ ನದಿಯ ಅಳತೆ ಅಕ್ಷಾಂಶ ಮತ್ತು ರೇಖಾಂಶಗಳೊಟ್ಟಿಗೆ ಅಳೆದರೆ ಅಕ್ಷಾಂಶ 9 ಡಿಗ್ರಿ, ರೇಖಾಂಶ 12 ಡಿಗ್ರಿ ಇರುತ್ತದೆ. ಹೀಗಾಗಿ 9ನ್ನು 12 ರಿಂದ ಗುಣಸಿದರೆ 108 ಬರುತ್ತದೆ. ಹೀಗೆ ನಾವು ಏನೇ ಮಾಡಿದರೂ ಅದರಲ್ಲಿ ನೂರೆಂಟು ಇರುತ್ತದೆ. ಋಷಿಮುನಿಗಳು 3000 ವರ್ಷಗಳ ಹಿಂದೆಯೇ ಇದನ್ನೆಲ್ಲಾ ಹೇಳಿಹೋಗಿದ್ದಾರೆ. ಇದನ್ನೂ ಓದಿ: ಕೈಲಾಸಕ್ಕೆ ಬಂದ ವಿಷ್ಣುವಿಗೆ ಪರಶಿವನಿಂದಲೇ ನಾಮಕರಣ, ತಿಮ್ಮಪ್ಪನಿಗೆ ಗೋವಿಂದ ಗೋವಿಂದ ಎನ್ನಲು ಕಾರಣವೇನು?

ಸಿದ್ಧಾಂತ ಶಿಖಾಮಣಿಯಲ್ಲಿ ಸೂರ್ಯ, ಚಂದ್ರ, ಭೂಮಿ ನಡುವಿನ ಅಂತರದ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ವಿಜ್ಞಾನಿಗಳು ಅಧ್ಯಯನ ಮಾಡಿದ ಮೇಲೆ ಸಿಕ್ಕಿದ್ದು ಕೂಡಾ ಇದೇ ಲೆಕ್ಕಾಚಾರಗಳೇ. ಹೀಗಾಗಿ ವಿಜ್ಞಾನಿಗಳು ಋಷಿಮುನಿಗಳು ಹೇಳಿದ್ದನ್ನೆಲ್ಲಾ ಕಂಡುಹಿಡಿಯುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತೆ ಋಷಿಮುನಿಗಳೇ ವಿಜ್ಞಾನದ ಮೂಲ ಅನ್ನೋದು.

Basavaraj Guruji

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937,9972548937

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್