ಪಿತೃಪಕ್ಷ ವಿಶೇಷ , ಆಚರಣೆ ಹೇಗೆ ? ಫಲವೇನು ? ದೋಷವೇನು? ನಿಷೇಧವೆಲ್ಲಿ ?

ಜಂತುಗಳಲ್ಲಿ (ಜಂತು ಎಂದರೆ ಜನಿಸಿದ್ದು ಎಂದರ್ಥ) ನರ ಜನ್ಮ ಎಂಬುದು ಶ್ರೇಷ್ಠ. ಯಾಕೆಂದರೆ ಇಲ್ಲಿ ಯೋಚನೆಯ ಶಕ್ತಿ ಮತ್ತು ಅದನ್ನು ಚಿಂತನೆ ಮಾಡಿ ಸಾರ್ಥಕ್ಯಗೊಳಿಸಲು ಬೇಕಾದ ಉತ್ತಮ ಮಟ್ಟದ ಬುದ್ಧಿಯಿರುತ್ತದೆ. ಈ ಕಾರಣದಿಂದಲೇ ಮಾನವನಿಗೆ ಕರ್ತವ್ಯ ಮತ್ತು ನಿಯಮಗಳು ಹೆಚ್ಚು.

ಪಿತೃಪಕ್ಷ ವಿಶೇಷ , ಆಚರಣೆ ಹೇಗೆ ? ಫಲವೇನು ? ದೋಷವೇನು? ನಿಷೇಧವೆಲ್ಲಿ ?
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 17, 2022 | 9:41 AM

ಜಾತಸ್ಯ ಹಿ ಧ್ರುವೋ ಮೃತ್ಯುಃ ಜನಿಸಿದ ಪ್ರತಿಯೊಂದು ಜೀವಿಗೂ ಮೃತ್ಯು ಅಥವಾ ಮರಣ ಎನ್ನುವುದು ನಿಶ್ಚಿತ. ಇದಕ್ಕಂಜಿಯೇ ಮಾನವ ಧರ್ಮಕಾರ್ಯವನ್ನು ಮಾಡುತ್ತಿರುತ್ತಾನೆ. ಜಂತುಗಳಲ್ಲಿ (ಜಂತು ಎಂದರೆ ಜನಿಸಿದ್ದು ಎಂದರ್ಥ) ನರ ಜನ್ಮ ಎಂಬುದು ಶ್ರೇಷ್ಠ. ಯಾಕೆಂದರೆ ಇಲ್ಲಿ ಯೋಚನೆಯ ಶಕ್ತಿ ಮತ್ತು ಅದನ್ನು ಚಿಂತನೆ ಮಾಡಿ ಸಾರ್ಥಕ್ಯಗೊಳಿಸಲು ಬೇಕಾದ ಉತ್ತಮ ಮಟ್ಟದ ಬುದ್ಧಿಯಿರುತ್ತದೆ. ಈ ಕಾರಣದಿಂದಲೇ ಮಾನವನಿಗೆ ಕರ್ತವ್ಯ ಮತ್ತು ನಿಯಮಗಳು ಹೆಚ್ಚು. ಇದಕ್ಕನುಗುಣವಾಗಿಯೇ ಅವನು ಜೀವನ ಸಾಗಿಸಬೇಕಾದ ಅನಿವಾರ್ಯತೆ ಹೆಚ್ಚಿದೆ. ಅಲ್ಲದೇ ಈ ಆಚರಣೆಯಿಂದ ಮಾನವನಿಗೆ ವಿಪುಲವಾದ ಯಶಸ್ಸು ಕೂಡ ಲಭ್ಯವಾಗಿದೆ ಮತ್ತು ಆಗುತ್ತಲಿದೆ .

ಪಿತೃ ಎಂದರೆ ತಂದೆಯೆಂಬ ಅರ್ಥವಿದ್ದರೂ ಇಲ್ಲಿ ನಮ್ಮ ಪೂರ್ವಿಕರು ಎಂದು ತಿಳಿಯಬೇಕು. ಪಕ್ಷವೆಂದರೆ ಹದಿನೈದು ದಿನಗಳ ಒಂದು ಗುಚ್ಛ. ಭಾದ್ರಪದ ಮಾಸದ ಪಾಡ್ಯದಿಂದ ಆರಂಭಿಸಿ ಅಮಾವಾಸ್ಯೆಯವರೆಗೆ ಇರುವ ಹದಿನೈದು ದಿನಗಳನ್ನು ಪಿತೃಪಕ್ಷ ಎಂದು ಹೇಳುತ್ತಾರೆ. ಈ ಕಾಲಮಿತಿಯು ಹಿರಿಯರಿಗೋಸ್ಕರ(ಮೃತರಾದ ನಮ್ಮ ಪೂರ್ವಿಕರಿಗೋಸ್ಕರ) ಇರುವ ಸಮಯವಾದ್ದರಿಂದ ಈ ಅವಧಿಯಲ್ಲಿ ಯಾವುದೇ ವೃದ್ಧಿ ಕರ್ಮಗಳನ್ನುಮತ್ತು ಶಾಂತಿಕರ್ಮಗಳನು ಮಾಡುವುದಿಲ್ಲ. ಭಾವನಾತ್ಮಕವಾಗಿ ಹೇಳುವುದಾದರೆ ನಮ್ಮ ಹಿರಿಯರು ಅವರ ಎಲ್ಲಾ ಕಾರ್ಯಗಳನ್ನು ಬಿಟ್ಟು ನಮ್ಮ ಬಾಲ್ಯದಲ್ಲಿ ನಮ್ಮನ್ನು ಪೋಷಿಸುತ್ತಾರೆ ಅಲ್ಲವೇ? ಅಂತಯೇ ಅವರ ಕಾಲವಾದ ಮೇಲೆ ಅವರಿಗೋಸ್ಕರ ಮೀಸಲಿಟ್ಟ ಕಾಲಾವಧಿ (ಪಿತೃಪಕ್ಷದಲ್ಲಿ) ಯಲ್ಲಿ ನಾವು ಬೇರೆ ಯಾವುದೇ ಧಾರ್ಮಿಕ ಕರ್ಮಗಳನ್ನು ಮಾಡದೇ ಅವರ ನೆನಪಿನಲ್ಲಿ ಶ್ರಾದ್ಧಾದಿಗಳನ್ನು ಮಾಡಬೇಕು. ಶ್ರಾದ್ಧವೆಂದರೆ ಶ್ರದ್ಧಯಾ ಕುರುತೇ ಅರ್ಥಾತ್ ಶ್ರದ್ಧೆಯಿಂದ ಮಾಡಿದ್ದು ಅಥವಾ ಮಾಡಬೇಕಾದ್ದು ಎಂದು ಹೇಳಬಹುದು. ನಮ್ಮ ಹಿರಿಯರ ಕುರಿತು ನಾವು ಅತ್ಯಂತ ಶ್ರದ್ಧೆಯಿಂದ ಮಾಡಬೇಕಾದ ಕರ್ತವ್ಯಗಳು ಇವೆ. ಜೀವಿತಾವಧಿಯಲ್ಲಿ ಮತ್ತು ಮೃತರಾದ ಮೇಲೂ ಸಹ. ಇದಕ್ಕೆ ಹೇಳಿದ ವಿಶೇಷ ಕಾಲಮಾನವೇ ಪಿತೃಪಕ್ಷ.

ಆಚರಣೆ ಹೇಗೆ ? 

ಈ ಹದಿನೈದು ದಿನಗಳಲ್ಲಿ ನಾಲ್ಕು ವಿಧವಾಗಿ ಪಿತೃಕಾರ್ಯವನ್ನು ಮಾಡಬಹುದು. ಮೊದಲನೇಯದ್ದು ಮೃತರಾದವರ ಕುರಿತು ದಕ್ಷಿಣಾಭಿ ಮುಖವಾಗಿ ತಿಲ ತರ್ಪಣವನ್ನು ನೀಡುವುದು. ಎರಡನೇಯದ್ದು ಉತ್ತಮವಾದ ಸದ್ಗುಣವುಳ್ಳ ಶಾಸ್ತ್ರಜ್ಞನಿಗೆ ವಸ್ತ್ರ, ಅಕ್ಕಿ, ಬೇಳೆ, ತರಕಾರಿ (ಊಟಕ್ಕೆ ಬಳಸುವ ಅಗತ್ಯ ಸಂಬಾರ ಪದಾರ್ಥಗಳನ್ನು) ಇತ್ಯಾದಿಗಳನ್ನು ಪಿತೃಗಳ ಕುರಿತಾಗಿ ಸಂಕಲ್ಪಿಸಿ ದಾನ ಮಾಡಿ ಅವರ ಮೂಲಕ ತರ್ಪಣ ಬಿಡಿಸುವುದು. ಮೂರನೇಯದ್ದು ಉತ್ತಮ ಆಚಾರವಂತನಿಗೆ ಊಟ ಬಡಿಸಿ ಸತ್ಕಾರ ಮಾಡಿ ದಾನಾದಿಗಳನ್ನು ನೀಡಿ ಏಕ ಪಿಂಡವನ್ನಿಟ್ಟು ತರ್ಪಣವನ್ನು ನೀಡುವುದು. ನಾಲ್ಕನೇಯದ್ದು ಇಲ್ಲಿ ಉತ್ತಮವಾದ ಆಚಾರವುಳ್ಳ ಚೆನ್ನಾಗಿ ಅಧ್ಯಯನ ಮಾಡಿದ ವ್ಯಕ್ತಿಗಳನ್ನು ಮನೆಗೆ ಬರಮಾಡಿ ಅವರಿಂದ ಶ್ರಾದ್ಧವನ್ನು ಮಾಡಿಸಿ,ಪಿಂಡಪ್ರಧಾನ ಮಾಡಿಸಿವುದು. ಈ ರೀತಿಯಾಗಿ ಪಿತೃಪಕ್ಷದ ಆಚರಣೆ. ಆದರೆ ತಂದೆ ಮತ್ತು ತಾಯಿ ಇಬ್ಬರೂ ಜೀವಿತರಿದ್ದಲ್ಲಿ ಈ ಮೇಲಿನ ವಿಧಿಯನ್ನು ಮಾಡುವಂತಿಲ್ಲ.

ಈ ಪಕ್ಷದ ಏಕಾದಶೀ ತಿಥಿಯಂದು(22/09/22) ಯತಿಮಹಾಲಯ. ಅಂದು ಬ್ರಹ್ಮೈಕ್ಯರಾದ ಯತಿಗಳ ಕುರಿತಾಗಿ ಆರಾಧನೆಯನ್ನು ಮಾಡಿದರೆ ತುಂಬಾ ವಿಶೇಷ ಫಲವಿದೆ. 19/09/22 ರಂದು ನಮಮೀ ತಿಥಿ ಈ ದಿನದಂದು ಸುಮಂಗಲೀಯರಾಗಿ ಮೃತರಾದವರ ಅಷ್ಟಕ ಶ್ರಾದ್ಧವನ್ನು ಮಾಡಿದರೆ ಉತ್ತಮ(ಈ ದಿನಕೆ ಅವಿಧವಾ ನವಮಿ ಎನ್ನುವರು). ಹಾಗೆಯೇ ನಮ್ಮ ಮನೆಯಲ್ಲಿ ಯಾರಾದರೂ ಅಪಘಾತಗಳಿಂದ ಮೃತರಾಗಿದ್ದರೆ ಅವರ ಕುರಿತಾಗಿ ಘಾತ ಚತುರ್ದಶೀ” (24/09/22)ಯಂದು ನಮಗೆ ಸಾಧ್ಯವಾದ ರೀತಿಯಲ್ಲಿ ಕರ್ಮಾಂಗಗಳನ್ನು ಮಾಡಬೇಕು. ಅದರಿಂದ ಯಾವುದಾದರು ಬಾಧೆಗಳಿದ್ದರೆ ಶಮನವಾಗುತ್ತದೆ. ಈ ಪಕ್ಷದಲ್ಲಿ ಪಿತೃಗಳನ್ನು ಉದ್ದೇಶಿಸಿ ಕರ್ಮಾಂಗಗಳನ್ನು ಮಾಡುವುದರಿಂದ ಸಂತಾನವಿಲ್ಲದವರಿಗೆ ಉತ್ತಮ ಸಂತಾನ ಪ್ರಾಪ್ತಿಯಾಗುತ್ತದೆ. ಹೇಗೆ ಮರದ ಬುಡದಲ್ಲಿ ನೀರೆರೆದರೆ ಅದು ಅದರ ತುದಿಯ ತನಕ ಸಾಗಿ ಹೂ ಅರಳಿ, ಕಾಯಿಯಾಗಿ, ಅದು ಮಾಗಿ ಹಣ್ಣಾಗಿ ನಮನ್ನು ಸೇರಿ ನಮಗೆ ಅನುಕೂಲವಾಗುತ್ತದೋ… ಅದೇ ರೀತಿ ಮೃತರಾದ ಪಿತೃಗಳನ್ನುದ್ದೇಶಿಸಿ ಮಾಡಿದ ಸತ್ಕಾರ್ಯವು ನಮ್ಮ ಅನುಕೂಲಕ್ಕೆ ಫಲವಾಗಿ ಬರುತ್ತದೆ. ಪಿತೃ ಕಾರ್ಯದಿಂದ ಮನೆಯಲ್ಲಿ ನೆಮ್ಮದಿ, ಅಪಘಾತಗಳಿಂದ ರಕ್ಷಣೆ ಹೀಗೆ ಹಲವು ಫಲಗಳ ಪ್ರಾಪ್ತಿಯಾಗುತ್ತದೆ.

ಕನಿಷ್ಠ ಪಿತೃಕಾರ್ಯವನ್ನೂ ಮಾಡದೇ ಇದ್ದಲ್ಲಿ ಮಂದಬುದ್ಧಿಯ ಸಂತಾನ,ಸಂತಾನ ಹೀನತೆ, ನೆಮ್ಮದಿಯಿಲ್ಲದಿರುವುದು, ಅಪಜಯ ಹೀಗೆ ಅಶುಭಗಳು ನಡೆಯುವ ಸಂದರ್ಭಗಳು ಅಧಿಕ. ಈ ಸಮಯದಲ್ಲಿ ವಾಹನ ಖರೀದಿ,ಜಮೀನು ಖರೀದಿ,ಚಿನ್ನ ಮೊದಲಾದ ಸುವಸ್ತುಗಳ ಕೊಳ್ಳುವಿಕೆ, ವಿವಾಹಾದಿ ಕಾರ್ಯಗಳನ್ನು ಮಾಡುವುವು ಉತ್ತಮವಲ್ಲ.

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College ಹೊನ್ನಾವರ, kkmanasvi@gamail.com

Published On - 7:29 am, Sat, 17 September 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್