AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spiritual: ದುಷ್ಟನಾದರೂ ರಾವಣನಲ್ಲಿ ಕಂಡ ಒಂದು ಒಳ್ಳೆಯ ಗುಣ, ರಾವಣನಿಗೆ ಯಾರ ಶಾಪ?

ಕಥೆಯ ನಾಯಕ ಶ್ರೀರಾಮ. ಪ್ರತಿನಾಯಕ ರಾವಣ. ಈ ರಾವಣ ಅತ್ಯಂತ ದುಷ್ಟ ಎನ್ನುವುದು ಸತ್ಯ. ಹಾಗೆಯೇ ಅವನು ವಿಶ್ವಾವಸುವಿನ ಮಗನಾದ್ದರಿಂದ ಅವನ ಕುಲವಾದ ಬ್ರಾಹ್ಮಣ್ಯಕ್ಕೆ ವಿಹಿತವಾದ ಕರ್ಮಗಳನ್ನು ತಪ್ಪದೇ ಮಾಡುತ್ತಿದ್ದ.

Spiritual: ದುಷ್ಟನಾದರೂ ರಾವಣನಲ್ಲಿ ಕಂಡ ಒಂದು ಒಳ್ಳೆಯ ಗುಣ, ರಾವಣನಿಗೆ ಯಾರ ಶಾಪ?
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 09, 2022 | 7:15 AM

ಭಾರತದ ಮೊದಲ ಇತಿಹಾಸ ಕಾವ್ಯ ಗ್ರಂಥ ರಾಮಾಯಣ (Ravana). ಅದರ ಕಥೆಯ ನಾಯಕ ಶ್ರೀರಾಮ (Srirama). ಪ್ರತಿನಾಯಕ ರಾವಣ. ಈ ರಾವಣ ಅತ್ಯಂತ ದುಷ್ಟ ಎನ್ನುವುದು ಸತ್ಯ. ಹಾಗೆಯೇ ಅವನು ವಿಶ್ವಾವಸುವಿನ ಮಗನಾದ್ದರಿಂದ ಅವನ ಕುಲವಾದ ಬ್ರಾಹ್ಮಣ್ಯಕ್ಕೆ ವಿಹಿತವಾದ ಕರ್ಮಗಳನ್ನು ತಪ್ಪದೇ ಮಾಡುತ್ತಿದ್ದ. ಆದರೆ ಸಾತ್ವಿಕನಾಗಿರಬೇಕಾದ ಅವನು ರಾಜಸ ಮತ್ತು ತಮೋ ಗುಣಗಳನ್ನು ಆಶ್ರಯಿಸಿದ್ದರಿಂದ ಅವನಲ್ಲಿ ಕರ್ಮಪ್ರಾಮಾಣ್ಯವಿದ್ದರೂ ಅವನು ಸತ್ವಮಯವಾದ ಜೀವಿಗಳಿಗೆ ಕಂಟಕನಾದ ಮತ್ತು ಜಗತ್ತಿಗೇ ವಿಪತ್ತನ್ನು ತರುವ ಮನೋಭೂಮಿಕೆಯುಳ್ಳವನಾದ.

ಇದಕ್ಕೆ ಮೂಲ ಕಾರಣ ಜಯ-ವಿಜಯರಿಗಾದ ಶಾಪವಾದರೂ. ಅದಕ್ಕಿಂತಲೂ ಹೆಚ್ಚು ಅತಿಯಾದ ಮೋಹ. ರಾಮಾಯಣದ ಕಥೆ ಎಲ್ಲರಿಗೂ ಸಾಮಾನ್ಯವಾಗಿ ತಿಳಿದೇ ಇದೆ. ಸೀತೆಯ ಅಪಹರಣದ ನಂತರ ರಾಮನು ವಾನರರೊಡಗೂಡಿ ಲಂಕೆಯ ಪ್ರವೇಶ ಮಾಡುತ್ತಾನೆ. ಯುದ್ಧದ ವಾತಾವರಣ ಉಂಟಾಗಿದೆ. ಸಿದ್ಧತೆಯೂ ಭರದಿಂದ ಸಾಗುತ್ತಿತ್ತು. ಇನ್ನೇನು ಯುದ್ಧ ಆರಂಭವಾಗುವ ದಿನ ಬಂದೇ ಬಿಟ್ಟಿತು. ಯಾವುದೇ ಮಹತ್ತರವಾದ ಕಾರ್ಯದ ಆರಂಭದಲ್ಲಿ ನಾಂದೀ ಮಾಡಿಕೊಳ್ಳಬೇಕು ಎನ್ನುವುದು ಶಾಸ್ತ್ರ.

ನಾಂದಿ ಎಂದರೆ ಆರಂಭ ಎಂದರ್ಥ. ಆದರೆ ಇಲ್ಲಿ ನಾಂದಿ ಎಂದರೆ ಕಾರ್ಯದ ಯಶಸ್ಸಿಗೋಸ್ಕರ ಗತಿಸಿದ ಪಿತೃಗಳನ್ನು ಮತ್ತು ಕುಲದೇವರನ್ನು ಸ್ಮರಿಸಿ, ಪ್ರಾರ್ಥಿಸಿ,ಪೂಜಿಸುವುದು ಎಂದು ತಾತ್ಪರ್ಯ. ಒಂದು ಸಲ ಒಂದು ಕಾರ್ಯದ ನಿಮಿತ್ತವಾಗಿ ಸಂಕಲ್ಪಿಸಿ ನಾಂದಿ ಮಾಡಿಕೊಂಡರೆ ತದನಂತರ ಆ ಕಾರ್ಯ ಮುಗಿಯುವ ತನಕ ಸಂಕಲ್ಪಿಸಿದ ಕಾರ್ಯದಿಂದ ವಿಮುಖರಾಗುವಂತಿಲ್ಲ ಎಂಬ ನಿಯಮವಿದೆ. ಯಾವುದೇ ಸಂಸ್ಕಾರ ಕರ್ಮಗಳನ್ನು, ಕಲಾರಾಧನೆಯನ್ನು , ಯುದ್ಧವನ್ನು ಆರಂಭಿಸುವ ಮೊದಲು ನಾಂದಿ ಮಾಡುವುದು ಕರ್ತವ್ಯ. ಧರ್ಮಶಾಸ್ತ್ರದಲ್ಲಿ , ನಾಟ್ಯಶಾಸ್ತ್ರದಲ್ಲಿ ಈ ನಾಂದಿಯ ಕುರಿತಾಗಿ ಉಲ್ಲೇಖಿಸಿದ್ದು ಕಂಡುಬರುತ್ತದೆ.

ಅದೇ ರೀತಿ ರಾಮ ರಾವಣರ ಯುದ್ಧ ಆರಂಭದ ವೇಳೆಯಲ್ಲಿ ನಾಂದಿ ಮಾಡಬೇಕಾದ ಸಂದರ್ಭ ಬಂದೊದಗಿತು. ರಾವಣನಿಗಾದರೋ ಅವನ ಕುಲಪುರೋಹಿತರು ಮಾಡುವವರಿದ್ದಾರೆ. ಆದರೆ ರಾಮನಿಗೆ ? ಸುಗ್ರೀವ ಹನುಮಂತಾದಿಗಳು ಚರ್ಚಿಸುತ್ತಿರುವಾಗ ಶ್ರೀರಾಮನು ಹೇಳುತ್ತಾನೆ – ವ್ಯವಹಾರದಲ್ಲಿ ರಾವಣ ಕ್ಷತ್ರಿಯನಾದರೂ ಅವನ ತಂದೆ ಮಹಾಬ್ರಾಹ್ಮಣ ವಿಶ್ವಾವಸು. ಅಲ್ಲದೇ ಶ್ರೇಷ್ಠವಾದ ಸಾಮವೇದವನ್ನು ಅಧ್ಯಯನ ಮಾಡಿದವನು ರಾವಣ. ಆದ್ದರಿಂದ ಅವನಲ್ಲಿ ಹೋಗಿ ದಶರಥ ಚಕ್ರವರ್ತಿಯ ಮಗನಾದ ರಾಮಚಂದ್ರನಿಗೆ ಯುದ್ಧ ನಾಂದಿಯನ್ನು ಮಾಡಿಸಿಕೊಡಬೇಕಾಗಿ ಅವರನ್ನು ನಿಮಂತ್ರಿಸಿ ಎಂದು. ಈಗ ನಮಗೆ ಪ್ರಶ್ನೆ ಬರಬಹುದು ನಾಂದಿಯನ್ನು ಸ್ವತಃ ರಾಮನೇ ಮಾಡಬಹುದಲ್ಲವೇ ಎಂದು. ಆದರೆ ನಾಂದಿಯನ್ನು ಮಾಡುವ ಬಗೆ ನಮಗೆ ತಿಳಿದಿದ್ದರೂ ಅದನ್ನು ವೇದ ಶಾಸ್ತ್ರಗಳನ್ನು ಅಭ್ಯಸಿಸಿದವರಲ್ಲೇ ಮಾಡಿಸಬೇಕು ಎಂಬ ಸಂಪ್ರದಾಯವಿದೆ. ಸ್ವತಃ ನಾವೇ ನಮಗೆ ಮಾಡುವ ಕ್ರಮವಿಲ್ಲ. ನಾಂದೀ ಸಂಕಲ್ಪ ರಕ್ಷೆಯನ್ನು ಆಶೀರ್ವಾದಪೂರ್ವಕವಾಗಿ ಪರರೇ ನಮಗೆ ಕಟ್ಟಬೇಕು.

ರಾಮನ ಆಜ್ಞೆಯಂತೆ ಅಂಗದ ರಾವಣನ ಬಳಿ ಹೋಗಿ ನಿಮಿಂತ್ರಿಸುತ್ತಾನೆ. ರಾವಣವನು ತಕ್ಷಣ ತನ್ನ ಕಿರೀಟವನ್ನು ಕಳಚಿ ಸಿಂಹಾಸನದ ಮೇಲೆ ಇಟ್ಟು, ಅಲ್ಲಿಂದ ಕೆಳಬಂದು ಅಂಗದನ ಆಮಂತ್ರಣವನ್ನು ಸ್ವೀಕರಿಸುತ್ತಾ ಹೇಳುತ್ತಾನೆ. ಆಶ್ಚರ್ಯ ಬೇಡ ನೀನಂದ ಮಹಾಬ್ರಾಹ್ಮಣ ವಿಶ್ವಾವಸುವಿನ ಮಗನಾದ ಸಾಮಶಾಖಿಯಾದ ರಾವಣನು ಬಂದು ನಾಂದೀ ರಕ್ಷೆ ಮಾಡಬೇಕು ಎಂಬ ಪದವೇನಿದ ಅದರಂತೆ ನಾನು ಇದ್ದು ಸ್ವೀಕರಿಸಬೇಕಾಗಿದೆ. ಅಲ್ಲದೇ ಬ್ರಾಹ್ಮಣನಿಗೆ ಶತ್ರುವೆಂಬವರೇ ಇಲ್ಲ. ಅವರು ಸಾತ್ವಿಕರು. ಆದ ಕಾರಣ ನಾನು ತನ್ನ ಕಿರೀಟವನ್ನು ಕಳಚಿಟ್ಟು ಕ್ಷತ್ರಿಯತ್ವವನ್ನು ಬಿಟ್ಟು. ಆಹ್ವಾನ ತಾಂಬೂಲವನ್ನು ಸ್ವೀಕರಿಸಿ ನಿನ್ನೊಂದಿಗೆ ಹೊರಡುವ ಮನಸ್ಸು ಮಾಡಿದೆ ಎನ್ನುತ್ತಾನೆ.

ಹಾಗೆಯೇ ರಾವಣನು ಬಂದು ರಾಮನಿಗೆ ಯುದ್ಧದ ಕುರಿತಾದ ನಾಂದಿಯನ್ನು ಮಾಡಿಸಿದನು ಮತ್ತು ರಾಮನಿಗೆ ವಿಜಯೀಭವ ಎಂದು ಆಶೀರ್ವದಿಸುತ್ತಾನೆ. ಈಗ ಗಮನಿಸಿ ವ್ಯವಹಾರ ಶತ್ರುತ್ವವಿದ್ದರೂ ಮತ್ತು ಕರ್ಮ ಅಶುದ್ಧವಿದ್ದರೂ ರಾವಣನಲ್ಲೂ ಒಂದು ಗುಣವಿದೆಯಲ್ಲವೇ… ? ಶುಚಿಯಾಗಿರದ ಪಾತ್ರೆಯಲ್ಲಿ ಹಾಲು ಹಾಳಾಗುವಂತೆ ಸಾತ್ವಿಕ ಧರ್ಮವಿಲ್ಲದ ಮನವು ನಾಶವಾಗುವುದು. ಆದರೂ ಆಶ್ರಸಿದವರನ್ನು ರಕ್ಷಿಸುವುದು / ಆಶೀರ್ವದಿಸುವುದು ಸಾತ್ವಿಕಧರ್ಮ.

ಡಾ.ಕೇಶವಕಿರಣ ಬಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು, kkmanasvi@gamail.com

ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ