Vasthu Tips: ಮಲಗುವ ಕೋಣೆಯಲ್ಲಿ ತಪ್ಪಿಯೂ ಈ ವಸ್ತು ಇಡಬೇಡಿ; ದಾಂಪತ್ಯದಲ್ಲಿ ಬಿರುಕಿಗೆ ಕಾರಣವಾಗಬಹುದು!
ಇತ್ತೀಚಿನ ದಾಂಪತ್ಯ ಬಿರುಕಿಗೆ ಒತ್ತಡ, ಖಿನ್ನತೆಯ ಜೊತೆಗೆ ವಾಸ್ತು ದೋಷಗಳೂ ಕಾರಣವಾಗಬಹುದು. ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪೂರ್ವಜರ ಫೋಟೋಗಳು, ಒಡೆದ ಗಾಜು ಮತ್ತು ಚೂಪಾದ ವಸ್ತುಗಳನ್ನು ಅಲ್ಲಿ ಇಡಬಾರದು. ಸಕಾರಾತ್ಮಕ ಶಕ್ತಿಗಾಗಿ ಪ್ರೀತಿಯ ಚಿತ್ರಗಳನ್ನು ನೇತು ಹಾಕಿ, ಸಂಬಂಧಗಳನ್ನು ಸುಧಾರಿಸಲು ವಾಸ್ತು ನಿಯಮಗಳನ್ನು ಪಾಲಿಸಿ.

ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಎಷ್ಟು ಬೇಗ ರೂಪುಗೊಳುತ್ತದೋ ಅಷ್ಟೇ ಬೇಗ ಮುರಿದು ಬೀಳುತ್ತವೆ. ಹೆಚ್ಚುತ್ತಿರುವ ಒತ್ತಡ, ಖಿನ್ನತೆ ಮತ್ತು ಅಸೂಯೆ ಇದಕ್ಕೆ ಕಾರಣ. ಕೆಲವೊಮ್ಮೆ, ಈ ರೀತಿಯ ಸಮಸ್ಯೆಗಳಿಗೆ ವಾಸ್ತು ದೋಷವೂ ಕಾರಣವಾಗಿರಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಕೆಲವು ವಸ್ತುಗಳು ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೆ ಅದು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಮಲಗುವ ಕೋಣೆ ನಮ್ಮ ಜೀವನದಲ್ಲಿ ನಾವು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಬಯಸುವ ಸ್ಥಳವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತಹ ವಸ್ತುಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಪೂರ್ವಜರ ಫೋಟೋಗಳು:
ಧಾರ್ಮಿಕ ಪಠ್ಯಗಳು ಅಥವಾ ಪೂರ್ವಜರ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಈ ವಸ್ತುಗಳು ಮಲಗುವ ಕೋಣೆಯ ಗೌಪ್ಯತೆ ಮತ್ತು ಆರಾಮದಾಯಕ ವಾತಾವರಣದ ಮೇಲೆ ಪರಿಣಾಮ ಬೀರುತ್ತವೆ.
ಒಡೆದ ಗಾಜು:
ಒಡೆದ ಗಾಜು ಅಥವಾ ಒಡೆದ ಕನ್ನಡಿಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ, ಇದು ಸಂಬಂಧಗಳಲ್ಲಿ ಬಿರುಕುಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ: ಮನೆಯಲ್ಲಿ ಮೆಟ್ಟಿಲು ನಿರ್ಮಿಸುವಾಗ ಈ ವಾಸ್ತು ನಿಯಮ ನಿರ್ಲಕ್ಷ್ಯಿಸದಿರಿ
ಚೂಪಾದ ವಸ್ತುಗಳು:
ಚೂಪಾದ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಈ ವಸ್ತುಗಳು ಆಕ್ರಮಣಶೀಲತೆ ಮತ್ತು ಕೋಪವನ್ನು ಹೆಚ್ಚಿಸುತ್ತವೆ. ಇದು ಸಂಬಂಧಗಳಲ್ಲಿ ಉದ್ವಿಗ್ನತೆ ಮತ್ತು ಸಂಘರ್ಷಕ್ಕೆ ಕಾರಣವಾಗಬಹುದು. ಈ ವಸ್ತುಗಳನ್ನು ಅಡುಗೆಮನೆಯಲ್ಲಿ ಇಡಿ.
ಹಿಂಸೆಯ ಚಿತ್ರ:
ಮಲಗುವ ಕೋಣೆಯಲ್ಲಿ ಸುಂದರವಾದ ಮತ್ತು ಪ್ರೀತಿಯ ಚಿತ್ರಗಳನ್ನು ನೇತು ಹಾಕಬೇಕು, ಇದು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ದುಃಖ, ಹತಾಶೆ, ಒಂಟಿತನ, ದುರದೃಷ್ಟ ಅಥವಾ ಹಿಂಸೆಯನ್ನು ಚಿತ್ರಿಸುವ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬಾರದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




