Vastu Tips: ವಾಸ್ತು ಪ್ರಕಾರ ಮನೆಯ ಈ ಜಾಗಗಳಲ್ಲಿ ಚಪ್ಪಲಿ -ಷೂ ಧರಿಸಬೇಡಿ, ಇಲ್ಲವಾದರೆ ಅದರಿಂದ ತೊಂದರೆಗಳೇ ಹೆಚ್ಚು

ಅಡುಗೆ ಮನೆಯೆಂದರೆ ಅಡುಗೆ ಮಾಡುವ, ಊಟ ಮಾಡುವ ಸ್ಥಳ. ಅದನ್ನು ಅತ್ಯಂತ ಶುಚಿಯಾಗಿಟ್ಟುಕೊಳ್ಳಬೇಕು. ಇದು ನಮ್ಮ ಆರೋಗ್ಯವನ್ನು ಕಾಪಾಡುವ ಸ್ಥಳ. ಹಾಗಾಗಿ ಈ ಜಾಗದಲ್ಲಿ ಚಪ್ಪಲಿ/ ಷೂ ಇಡುವುದಕ್ಕೆ/ ಹಾಕಿಕೊಳ್ಳುವುದಕ್ಕೆ ಬಳಸಬೇಡಿ. ಒಂದು ವೇಳೆ ನೀವಿಲ್ಲಿ ಚಪ್ಪಲಿ/ ಷೂ ಹಾಕಿಕೊಳ್ಳಲು ಶುರು ಮಾಡಿದರೆ ಅದರಿಂದ ತಾಪತ್ರಯಗಳು ಹಚ್ಚಾಗುವವು.

Vastu Tips: ವಾಸ್ತು ಪ್ರಕಾರ ಮನೆಯ ಈ ಜಾಗಗಳಲ್ಲಿ ಚಪ್ಪಲಿ -ಷೂ ಧರಿಸಬೇಡಿ, ಇಲ್ಲವಾದರೆ ಅದರಿಂದ ತೊಂದರೆಗಳೇ ಹೆಚ್ಚು
Vastu Tips: ವಾಸ್ತು ಪ್ರಕಾರ ಮನೆಯ ಈ ಜಾಗಗಳಲ್ಲಿ ಚಪ್ಪಲಿ, ಷೂ ಧರಿಸಬೇಡಿ, ಇಲ್ಲವಾದರೆ ಅದರಿಂದ ಹಾನಿಯೇ ಹೆಚ್ಚು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 18, 2021 | 6:06 AM

ವಾಸ್ತು ಶಾಸ್ತ್ರವನ್ನು ಚಾಚೂ ತಪ್ಪದೆ ಅನುಸರಿಸಿದರೆ ಮನೆಯಲ್ಲಿ ಸುಖ ಸಮೃದ್ಧಿ, ಯಶಸ್ಸು, ಶಾಂತಿ ನೆಲೆಸುವುದು ಖಚಿತ. ವಾಸ್ತು ಶಾಸ್ತ್ರದ ಅನುಸಾರ ರೂಢಿಗತವಾಗಿ ಕೆಲವೊಂದು ನಿರ್ದಿಷ್ಟ ನೀತಿ ನಿಯಮಗಳನ್ನು ಪಾಲಿಸುವುದು ಉಚಿತ. ಅದು ಶುಭ ಮತ್ತು ಶ್ರೇಯಸ್ಕರವೂ ಹೌದು. ಅದರಿಂದ ಮನೆಯಲ್ಲಿ ಧನಾತ್ಮಕತೆ ಹೆಚ್ಚಾಗಿ ಖುಣಾತ್ಮಕ ಪ್ರಭಾವನ್ನು ತಗ್ಗಿಸುತ್ತದೆ. ಆದರೆ ಕೆಲವು ಇರುತ್ತದೆ. ಅದನ್ನು ಮಾಡುವುದರಿಂದ ಮನೆಯಲ್ಲಿ ಖುಣಾತ್ಮಕತೆ ಹೆಚ್ಚಾಗಿಬಿಡುತ್ತದೆ. ಜಗತ್ತಿನಲ್ಲಿ ಬಹಳಷ್ಟು ಮಂದಿ ವಾಸ್ತು ಶಾಸ್ತ್ರವನ್ನು ಪಾಲಿಸುತ್ತಾರೆ ಎಂಬುದು ಗಮನಾರ್ಹ. ವಾಸ್ತು ಶಾಸ್ತ್ರವು ನಿಮ್ಮನ್ನು ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಬಲಾಢ್ಯರನ್ನಾಗಿಸುತ್ತದೆ. ವಾಸ್ತು ಪ್ರಕಾರ ಮನೆಯ ಈ ಜಾಗಗಳಲ್ಲಿ ಚಪ್ಪಲಿ, ಷೂ ಧರಿಸಬೇಡಿ, ಇಲ್ಲವಾದರೆ ಅದರಿಂದ ಹಾನಿಯೇ ಹೆಚ್ಚು. ನೀವು ಇದರ ಬಗ್ಗೆ ವಿಚಾರ ಮಾಡಿರುವುದಿಲ್ಲ ಅಥವಾ ಪ್ರಾಧಾನ್ಯತೆ ನೀಡಿರುವುದಿಲ್ಲ. ಆದರೆ ಇದು ಅಲ್ಲಗಳೆಯುವ, ನಿರ್ಲಕ್ಷ್ಯ ಮಾಡುವ ವಿಚಾರ ಅಲ್ಲ. ಬನ್ನೀ ಹಾಗಾದರೆ ಮನೆಯ ಯಾವ ಜಾಗದಲ್ಲಿ ಚಪ್ಪಲಿ, ಷೂ ಹಾಕಿಕೊಳ್ಳಬಾರದು ತಿಳಿದುಕೊಳ್ಳೋಣ.

ಸ್ಟೋರ್​ ರೂಮ್​​: ಸ್ಟೋರ್​ ರೂಂನಲ್ಲಿ ನಾವು ನಮ್ಮ ಅತ್ಯವಶ್ಯಕ, ಸಾಮಾನು ಸರಂಜಾಮುಗಳನ್ನು ಇಡುತ್ತೇವೆ. ಈ ಜಾಗ ಊಟ ಮಾಡುವ ಸ್ಥಳದಂತೆ ಶುಚಿಯಾಗಿಟ್ಟುಕೊಂಡಿರುತ್ತೇವೆ. ಅಡುಗೆ ಸಾಮಾನುಗಳನ್ನು ಅವಶ್ದಯವಾಗಿ ಇಲ್ಲಿ ಇಟ್ಟುಕೊಂಡಿರುತೇವೆ. ಹಾಗಾಗಿ ಮನೆಯಲ್ಲಿ ಇದು ತುಂಬಾ ಶುಭ ಸ್ಥಾನವಾಗಿರುತ್ತದೆ. ಹಾಗಾಗಿ ಈ ಜಾಗದಲ್ಲಿ ಚಪ್ಪಲಿ, ಷೂ ಹಾಕಿಕೊಳ್ಳಬಾರದು ಅಥವಾ ಇಡಬಾರದು.

ತಿಜೋರಿ ಜಾಗ: ತಿಜೋರಿ ಜಾಗ ಅಂದರೆ ಹಣ ಇಡುವ ಸ್ಥಳ. ಇದು ನಿಜಕ್ಕೂ ಬಹಳ ಸ್ಥಳ ಮಹಾತ್ಮೆ ಹೊಂದಿರುವ ಜಾಗ. ಧನ ದೇವತೆ ಲಕ್ಷ್ಮಿಯ ವಾಸ ಸ್ಥಳ ಇದು. ಇಲ್ಲಿ ಧನ ಲಕ್ಷ್ಮೀ ಸದಾ ತನ್ನ ಕೃಪೆ ತೋರುತ್ತಿರುತ್ತಾಳೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ತಿಜೋರಿ ಜಾಗದ ಆಸುಪಾಸಿನಲ್ಲಿ ಚಪ್ಪಲಿ ಬಿಡಬಾರದು ಅಥವಾ ಹಾಕಿಕೊಳ್ಳಬಾರದು. ಹಾಗೆ ಮಾಡಿದರೆ ಲಕ್ಷ್ಮಿ ದೇವಿಗೆ ಅಪಮಾನ ಮಾಡಿದಂತಾಗುತ್ತದೆ.

ಅಡುಗೆ ಮನೆ: ಅಡುಗೆ ಮನೆಯೆಂದರೆ ಅಡುಗೆ ಮಾಡುವ, ಊಟ ಮಾಡುವ ಸ್ಥಳ. ಅದನ್ನು ಅತ್ಯಂತ ಶುಚಿಯಾಗಿಟ್ಟುಕೊಳ್ಳಬೇಕು. ಇದು ನಮ್ಮ ಆರೋಗ್ಯವನ್ನು ಕಾಪಾಡುವ ಸ್ಥಳ. ಹಾಗಾಗಿ ಈ ಜಾಗದಲ್ಲಿ ಚಪ್ಪಲಿ/ ಷೂ ಇಡುವುದಕ್ಕೆ/ ಹಾಕಿಕೊಳ್ಳುವುದಕ್ಕೆ ಬಳಸಬೇಡಿ. ಒಂದು ವೇಳೆ ನೀವಿಲ್ಲಿ ಚಪ್ಪಲಿ/ ಷೂ ಹಾಕಿಕೊಳ್ಳಲು ಶುರು ಮಾಡಿದರೆ ಅದರಿಂದ ತಾಪತ್ರಯಗಳು ಹಚ್ಚಾಗುವವು.

ಪೂಜಾ ಮಂದಿರ: ಪೂಜಾ ಮಂದಿರ ಎಂಬುದು ನಿಮ್ಮ ಇಡೀ ಪರಿವಾರದ ಶಾಂತಿ ನೆಮ್ಮದಿಯನ್ನು ಕಾಪಾಡುವ ಸ್ಥಳ. ಸಕಾರಾತ್ಮಕತೆ ಇಲ್ಲಿ ಸದಾ ಚಿಲುಮೆಯಂತೆ ಪುಟಿಯುತ್ತಿರುತ್ತದೆ. ಹಾಗಾಗಿಯೇ ಪವಿತ್ರ ಪೂಜಾ ಮಂದಿರವನ್ನ ಯಾರೂ ತಾನೆ ಚಪ್ಪಲಿ/ ಷೂ ಇಡುವುದಕ್ಕೆ/ ಹಾಕಿಕೊಳ್ಳುವುದಕ್ಕೆ ಬಳಸುವುದಿಲ್ಲ. ಒಂದು ವೇಳೆ ನೀವು ಪೂಜಾ ಮಂದಿರದಲ್ಲಿ ಚಪ್ಪಲಿ ಹಾಕಿಕೊಳ್ಳುವುದಕ್ಕೆ ಶುರು ಮಾಡಿದರೆ ಅದರಿಂದ ದೇವರು ಕೋಪ ಮಾಡಿಕೊಳ್ಳುತ್ತಾರೆ. ಅದರಿಂದ ದೇವರ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ಅದರಿಂದ ಧನ ಹಾನಿ, ಆರೋಗ್ಯ ಹಾನಿ ಸೇರಿದಂತೆ ಜೀವನದಲ್ಲಿ ಇನ್ನೂ ಅನೇಕಾನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.