Vastu Tips: ಹಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಮೊದಲು ನಿಮ್ಮ ಪರ್ಸ್ನಿಂದ ಈ ವಸ್ತುಗಳನ್ನು ತೆಗೆದುಹಾಕಿ
ವಾಸ್ತು ಶಾಸ್ತ್ರದ ಪ್ರಕಾರ, ಪರ್ಸ್‌ನಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಆರ್ಥಿಕ ಸಮಸ್ಯೆಗಳು ಉಂಟಾಗಬಹುದು. ಹರಿದ ನೋಟುಗಳು, ಮುರಿದ ವಸ್ತುಗಳು, ಹಳೆಯ ಬಿಲ್‌ಗಳು, ಸತ್ತವರ ಫೋಟೋಗಳು, ಮತ್ತು ದೇವರ ಫೋಟೋಗಳನ್ನು ಪರ್ಸ್‌ನಲ್ಲಿ ಇಡಬಾರದು. ಹಣವನ್ನು ಸರಿಯಾಗಿ ಇಡುವುದು ಮತ್ತು ಅನಗತ್ಯ ವಸ್ತುಗಳನ್ನು ತೆಗೆದುಹಾಕುವುದು ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯುವುದೇ ಇಲ್ಲ ಎನ್ನುವುದು ಪ್ರತಿಯೊಬ್ಬರ ಸಮಸ್ಯೆ. ಈ ಸಮಸ್ಯೆಗಳಿಂದ ಮುಕ್ತರಾಗಲು ವಾಸ್ತು ಸಲಹೆಯನ್ನು ಅನುಸರಿಸುವುದು ಮುಖ್ಯ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ವಿಶೇಷವಾಗಿ ಪ್ರತಿದಿನ ನೀವು ಇನ್ಮೊಂದಿಗೆ ಇಟ್ಟುಕೊಳ್ಳುವ ಪರ್ಸ್ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಏಕೆಂದರೆ ಪರ್ಸ್‌ನಲ್ಲಿ ಹಣದ ಬದಲಿಗೆ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು. ಆದ್ದರಿಂದ ಪರ್ಸ್‌ನಲ್ಲಿ ಯಾವ ವಸ್ತುಗಳನ್ನು ಇಡಲೇಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಪರ್ಸ್ನಲ್ಲಿ ಸತ್ತವರ ಫೋಟೋ ಇಟ್ಟುಕೊಳ್ಳಬೇಡಿ:
ಸಾಕಷ್ಟು ಜನರಿಗೆ ಪರ್ಸ್ನಲ್ಲಿ ಹಿರಿಯರ ಫೋಟೋ ಇಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ವಾಸ್ತು ಪ್ರಕಾರ ಯಾವುದೇ ಫೋಟೋ ಇಡುವುದು ಶುಭವಲ್ಲ. ಕೆಲವರು ತಮ್ಮ ಪರ್ಸ್‌ಗಳಲ್ಲಿ ದೇವರ ಫೋಟೋ ಇಟ್ಟುಕೊಳ್ಳುತ್ತಾರೆ. ಹಾಗೆ ಮಾಡುವುದು ತಪ್ಪು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಪರ್ಸ್ ಬದಲು ಮನೆಯಲ್ಲಿ ದೇವರನ್ನು ಪೂಜಿಸಿ.
ಹರಿದ ಹಣ ಹಾಗೂ ಮುರಿದ ವಸ್ತು:
ನಿಮ್ಮ ಪರ್ಸ್ನಲ್ಲಿ ಎಂದಿಗೂ ಹರಿದ ಹಣವನ್ನು ಇಟ್ಟುಕೊಳ್ಳಬೇಡಿ. ಇದರೊಂದಿಗೆ ಮುರಿದ ವಸ್ತುಗಳನ್ನು ಎಂದಿಗೂ ಪರ್ಸ್ ನಲ್ಲಿ ಇಡಬೇಡಿ ಏಕೆಂದರೆ ಅದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಈಗಾಗಲೇ ಹರಿದ ನೋಟು ಇದ್ದರೆ, ತಕ್ಷಣ ಅದನ್ನು ತೆಗೆದುಬಿಡಿ. ಹರಿದ ಪರ್ಸ್ ಸಹ ಬಳಸಬಾರದು. ಇದಲ್ಲದೇ ಹಣವನ್ನು ಎಂದಿಗೂ ಪರ್ಸ್‌ನಲ್ಲಿ ಸಡಿಲವಾಗಿ ಇಡಬಾರದು. ವಾಲೆಟ್‌ನಲ್ಲಿ ಹಣವನ್ನು ಸರಿಯಾಗಿ ಅಂದರೆ ನೋಟುಗಳು ಮತ್ತು ನಾಣ್ಯಗಳನ್ನು ಪ್ರತ್ಯೇಕವಾಗಿ ಇಡುವುದು ಯಾವಾಗಲೂ ಉತ್ತಮ.
ಇದನ್ನೂ ಓದಿ: ಹಳೆಯದ್ದು ಬಿಸಾಕಿ ಹೊಸ ಪರ್ಸ್ ತೆಗೆದುಕೊಳ್ಳುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ
ಹಳೆಯ ಬಿಲ್‌ಗಳು:
ವಾಸ್ತು ಶಾಸ್ತ್ರದ ಪ್ರಕಾರ, ನೀವು ನಿಮ್ಮ ಪರ್ಸ್‌ನಲ್ಲಿ ಹಳೆಯ ಬಿಲ್ ಗಳನ್ನು ಇಡಬಾರದು. ಇವು ನಿಮ್ಮ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅನವಶ್ಯಕ ವಸ್ತುಗಳನ್ನು ಹಣ ಶೇಖರಿಸುವ ಸ್ಥಳದಲ್ಲಿ ಅಥವಾ ಪರ್ಸ್ ನಲ್ಲಿ ಇಡುವುದು ಶುಭವಲ್ಲ. ಇದಲ್ಲದೇ ಇಎಂಐ ಪೇಪರ್ಬಿಲ್ ಅಥವಾ ಇಎಂಐ ಪೇಪರ್‌ನಂತಹ ವಸ್ತುಗಳನ್ನು ವ್ಯಾಲೆಟ್‌ನಲ್ಲಿ ಇಡಬಾರದು. ನಿಮ್ಮ ಪರ್ಸ್‌ನಲ್ಲಿ ಫೋನ್ ಬಿಲ್, ವಿದ್ಯುತ್ ಬಿಲ್ ಕೂಡ ಇಟ್ಟುಕೊಳ್ಳಬಾರದು ಎನ್ನಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




