Vastu Tips: ಮನೆಯಲ್ಲಿರುವ ಈ ವಸ್ತುಗಳು ಮಾನಸಿಕ ನೆಮ್ಮದಿ ಕೆಡಿಸುವ ಜತೆಗೆ ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತವೆ

Vastu Tips: ಮನೆಯಲ್ಲಿರುವ ಈ ವಸ್ತುಗಳು ಮಾನಸಿಕ ನೆಮ್ಮದಿ ಕೆಡಿಸುವ ಜತೆಗೆ ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತವೆ
ಪ್ರಾತಿನಿಧಿಕ ಚಿತ್ರ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇರಿಸಿಕೊಳ್ಳುವ ಮೂಲಕ ಕೆಲವು ವಿಷಯಗಳು ನಕಾರಾತ್ಮಕತೆಯನ್ನು ಬೀರುತ್ತವೆ. ಇದು ನಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸುವುದಲ್ಲದೆ ಮಾನಸಿಕ ನೆಮ್ಮದಿಗೂ ಭಂಗ ತರುತ್ತವೆ. ಕಠಿಣ ಪರಿಶ್ರಮದ ಹೊರತಾಗಿಯೂ ಯಶಸ್ಸನ್ನು ಸಾಧಿಸಲು ಬಿಡುವುದಿಲ್ಲ.

TV9kannada Web Team

| Edited By: Ayesha Banu

Aug 22, 2021 | 7:32 AM

ಬದುಕಿನಲ್ಲಿ ಏಳು-ಬೀಳುಗಳು ಸಹಜ. ಅದಕ್ಕಾಗಿಯೇ ಹಿರಿಯರು ಸೋಲೇ ಗೆಲುವಿನ ಮೆಟ್ಟಿಲು ಎಂದು ಹೇಳಿರುವುದು. ಆದರೆ, ಕೆಲವೊಮ್ಮೆ ನಮ್ಮ ಪ್ರಾಮಾಣಿಕ ಪ್ರಯತ್ನಗಳು ಎಷ್ಟೇ ಇದ್ದರೂ ಸೋಲು, ನಿರಾಶೆ ಬೆನ್ನಿಗೆ ಅಂಟಿಕೊಂಡಂತೆ ಕಾಡುತ್ತವೆ. ನಿರೀಕ್ಷಿತ ಫಲಿತಾಂಶ ಕೈ ಸೇರುವುದಿಲ್ಲ. ಇದನ್ನು ಪರಿಶ್ರಮದ ಕೊರತೆ ಎನ್ನುವುದಕ್ಕಿಂತ ದುರಾದೃಷ್ಟ ಎಂದು ಪರಿಗಣಿಸಲಾಗುತ್ತದೆ. ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ ಮತ್ತು ಅದೃಷ್ಟ ಎರಡೂ ಅಗತ್ಯ ಎಂಬುದು ನಿಜವಿರಬಹುದು. ಆದರೆ ನಮ್ಮ ಸೋಲಿಗೆ ಪ್ರತಿಬಾರಿಯೂ ವಿಧಿಯನ್ನು ಹೊಣೆಯಾಗಿಸುವುದು ಸಾಧುವಲ್ಲ. ಏಕೆಂದರೆ, ಎಷ್ಟೋ ಸಲ ನಾವು ನಮಗೆ ಅರಿವಿಲ್ಲದಂತೆಯೇ ಮಾಡುವ ತಪ್ಪುಗಳೇ ನಮ್ಮ ಯಶಸ್ಸಿಗೆ ಮುಳುವಾಗಿರುತ್ತವೆ. ಕೆಲ ನಂಬಿಕೆಗಳ ಪ್ರಕಾರ ಒಬ್ಬ ವ್ಯಕ್ತಿಯ ಸೋಲು, ಗೆಲುವಿಗೆ ವಾಸ್ತು ಕೂಡಾ ಕಾರಣವಾಗುತ್ತದೆ ಎನ್ನಲಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇರಿಸಿಕೊಳ್ಳುವ ಮೂಲಕ ಕೆಲವು ವಿಷಯಗಳು ನಕಾರಾತ್ಮಕತೆಯನ್ನು ಬೀರುತ್ತವೆ. ಇದು ನಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸುವುದಲ್ಲದೆ ಮಾನಸಿಕ ನೆಮ್ಮದಿಗೂ ಭಂಗ ತರುತ್ತವೆ. ಕಠಿಣ ಪರಿಶ್ರಮದ ಹೊರತಾಗಿಯೂ ಯಶಸ್ಸನ್ನು ಸಾಧಿಸಲು ಬಿಡುವುದಿಲ್ಲ. ಜತೆಗೆ ಸಾಕಷ್ಟು ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತವೆ. ಅದರಲ್ಲೂ ಕೆಲ ವಸ್ತುಗಳನ್ನು ವಾಸ್ತುವಿಗೆ ವಿರುದ್ಧವಾಗಿ ಇಟ್ಟುಕೊಂಡರೆ ತೊಂದರೆ ಕಟ್ಟಿಟ್ಟಬುತ್ತಿ ಎನ್ನುವುದು ನಂಬಿಕೆ. ಹಾಗಾದರೆ ಆ ವಸ್ತುಗಳು ಯಾವುವು? ಅವುಗಳನ್ನು ಏಕೆ ಇಟ್ಟುಕೊಳ್ಳಬಾರದು ಎಂದು ಇಲ್ಲಿ ಮಾಹಿತಿ ನೀಡಲಾಗಿದೆ.

1. ಮನೆಯಲ್ಲಿ ಒಡೆದ ಪಾತ್ರೆಗಳು, ಒಡೆದ ಗಾಜು, ನಿಂತ ಗಡಿಯಾರ, ಮುರಿದ ದೀಪ, ಹಾಳಾದ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಹಳೆಯ ಪೊರಕೆ ಇದ್ದರೆ ಅವುಗಳನ್ನು ತಕ್ಷಣ ಮನೆಯಿಂದ ಹೊರಹಾಕುವುದು ಉತ್ತಮ. ಅವು ಯಾವುದೇ ಶುಭ ಕಾರ್ಯದ ಪ್ರಗತಿಗೆ ಅಡ್ಡಿಯಾಗುತ್ತವೆ. ಅವುಗಳಿಂದಾಗಿ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುವುದೂ ಸಾಧ್ಯವಾಗುವುದಿಲ್ಲ. ಹಾಗಾಗಿ ಪದೇಪದೇ ಆರ್ಥಿಕ ನಷ್ಟ ಎದುರಾಗುತ್ತದೆ ಎಂಬ ನಂಬಿಕೆ ಇದೆ.

2. ಹರಿದ ಪರ್ಸ್ ಇಟ್ಟುಕೊಂಡಿದ್ದರೆ ಅಥವಾ ಪರ್ಸ್​ನಲ್ಲಿ ದೇವರ ಚಿತ್ರ ಹರಿದಿದ್ದರೆ ಅದನ್ನು ತೆಗೆಯುವುದು ಒಳ್ಳೆಯುವುದು. ಅದರಿಂದಾಗಿ ಇದ್ದ ಹಣವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುವುದಲ್ಲದೇ ಆದಾಯವೂ ಕುಂಠಿತಗೊಳ್ಳುತ್ತದೆ. ಅಂದಹಾಗೆ, ಆರ್ಥಿಕ ಬೆಳವಣಿಗೆಗೆ ಪರ್ಸ್​ನಲ್ಲಿ 5 ಏಲಕ್ಕಿ ಇಟ್ಟುಕೊಳ್ಳುವುದು ಉತ್ತಮ ಎಂಬ ನಂಬಿಕೆ ಉತ್ತರ ಭಾರತದಲ್ಲಿದೆ.

3. ಮುಳ್ಳಿನ ಗಿಡಗಳು ಅಥವಾ ಅಂತಹ ಸಸ್ಯಗಳ ಚಿತ್ರ, ತಾಜ್ ಮಹಲ್ ಚಿತ್ರ, ಮಹಾಭಾರತದ ಚಿತ್ರ ಅಥವಾ ಯಾವುದೇ ಯುದ್ಧ, ಕ್ರೂರ ಪ್ರಾಣಿ, ಮುಳುಗುವ ದೋಣಿಯಂತಹ ಚಿತ್ರಗಳನ್ನು ಮನೆಯಲ್ಲಿ ಇಡಬಾರದು. ಈ ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತುಂಬುತ್ತವೆ ಎನ್ನಲಾಗುತ್ತದೆ. ಅಂತಹ ಚಿತ್ರಗಳು ವ್ಯಕ್ತಿಯನ್ನು ವೈಫಲ್ಯದ ಹಾದಿಗೆ ತಳ್ಳುವ ಜತೆಗೆ ಮನೆಯಲ್ಲಿ ತೊಂದರೆಗಳು ಮತ್ತು ಜಗಳಗಳು ಹೆಚ್ಚಾಗಲು ಕಾರಣವಾಗುತ್ತವಂತೆ.

4. ಛಾವಣಿಯ ಮೇಲೆ ಕಸ ಹಾಕುವುದು ಮತ್ತು ಮೇಲ್ಛಾವಣಿಯನ್ನು ಕೊಳಕು ಮಾಡುವುದು ಸಹ ಮಾನಸಿಕ ನೆಮ್ಮದಿ ಹಾಳುಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಕಾರಣದಿಂದಾಗಿ ಮಾನಸಿಕ ಗೊಂದಲಗಳು ಬಗೆಹರಿಯದೇ ಹಣಕಾಸಿನ ನಷ್ಟವೂ ಸಂಭವಿಸುವ ಸಾಧ್ಯತೆ ಇರುತ್ತದೆ.

(Vastu Tips Keeping these things in home will create money loss and effect mental health)

ಇದನ್ನೂ ಓದಿ: Vastu Tips: ನೀವು ಮಲಗುತ್ತಿರುವುದು ವಾಸ್ತು ಪ್ರಕಾರ ಸರಿ ಇದೆಯೇ? ಮನಸ್ಸಿಗೆ ಕಿರಿಕಿರಿ ಇದ್ದರೆ ಇವುಗಳನ್ನು ಪಾಲಿಸಿ ನೋಡಿ 

Vastu Tips: ಮಲಗುವಾಗ ಮೊಬೈಲ್, ಪರ್ಸ್​, ನೀರಿನ ಬಾಟಲಿಯನ್ನು ತಲೆಯ ಪಕ್ಕ ಇಟ್ಟುಕೊಳ್ಳುತ್ತೀರಾ? ತಪ್ಪದೇ ಈ ಅಂಶಗಳನ್ನು ಗಮನಿಸಿ

Follow us on

Related Stories

Most Read Stories

Click on your DTH Provider to Add TV9 Kannada