AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ಮಲಗುವ ಕೋಣೆಯಲ್ಲಿ, ಹಾಸಿಗೆ-ದಿಂಬು ಕೆಳಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ

ವಾಸ್ತು ಟಿಪ್ಸ್ : ವಾಸ್ತು ಪ್ರಕಾರ ಕೆಲವು ವಸ್ತುಗಳನ್ನು ಎಲ್ಲೆಂದರಲ್ಲಿ ಇಡಬಾರದು. ಇಟ್ಟರೆ ಆ ಮನೆಗಳು ದರಿದ್ರ ದೇವತೆಯ ವಾಸಸ್ಥಾನವಾಗಿ ಬಿಡುತ್ತದೆ

Vastu Tips: ಮಲಗುವ ಕೋಣೆಯಲ್ಲಿ, ಹಾಸಿಗೆ-ದಿಂಬು ಕೆಳಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ
ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ
ಸಾಧು ಶ್ರೀನಾಥ್​
|

Updated on:Feb 28, 2023 | 3:48 PM

Share

ಅನೇಕ ಜನರು ತಮ್ಮ ಮನೆಯನ್ನು ತುಂಬಾ ಸುಂದರವಾಗಿ ಕಟ್ಟುತ್ತಾರೆ. ಅವರು ಆ ಮನೆಯಲ್ಲಿ ಸುಖ-ಸಂತೋಷದ ಕನಸು ಕಾಣುತ್ತಾರೆ. ಆದರೆ ಅವರ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಇರುವುದಿಲ್ಲ (Health Problems). ಅದಕ್ಕೆ ಅವರು ಕಟ್ಟಿದ ಮನೆಯಲ್ಲಿ ವಾಸ್ತು ದೋಷ ಹಾಗೂ ಲೋಪಗಳಿರುವುದು (Vastu) ಮುಖ್ಯ ಕಾರಣ ಎನ್ನುತ್ತಾರೆ ವಾಸ್ತು ತಜ್ಞರು. ಅಲ್ಲದೆ ವಾಸ್ತು ಪ್ರಕಾರ ಕೆಲವು ವಸ್ತುಗಳನ್ನು ಎಲ್ಲೆಂದರಲ್ಲಿ ಇಡಬಾರದು. ಆ ಮನೆಗಳು ದರಿದ್ರ ದೇವತೆಯ ಆವಾಸಸ್ಥಾನವಾಗುತ್ತವೆ ಎಂದು ಅವರು ಎಚ್ಚರಿಸುತ್ತಾರೆ. ಈ ಕ್ರಮದಲ್ಲಿ, ತಪ್ಪಾಗಿಯೂ, ಕೆಲವು ರೀತಿಯ ವಸ್ತುಗಳನ್ನು ಹಾಸಿಗೆಯ ಕೆಳಗೆ, ಮಲಗುವ ಪ್ರದೇಶದಲ್ಲಿ ಇಡಬಾರದು. ಇಲ್ಲವಾದಲ್ಲಿ ಜೀವನ ಪರ್ಯಂತ ಸಂಕಷ್ಟ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ಪ್ರಕಾರ ಕೆಲಸ ಮಾಡಿದರೆ ಅನೇಕ ಕೆಲಸಗಳು ಸುಲಭವಾಗಿ ನಡೆಯುತ್ತವೆ. ಈಗ ನಾವು ಹಾಸಿಗೆ ಅಥವಾ ಮಲಗುವ ಜಾಗದಲ್ಲಿ (Bed room) ಯಾವ ವಸ್ತುಗಳನ್ನು ಇಡಬಾರದು ಎಂದು ತಿಳಿಯೋಣ.

ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಪೊರಕೆ ಇಡಬೇಡಿ

ಹಾಸಿಗೆ ಅಥವಾ ಮಲಗುವ ಸ್ಥಳದಲ್ಲಿ ಪೊರಕೆ ಇಡುವುದು ತುಂಬಾ ಅಶುಭ. ಪೊರಕೆಯು ಮನಸ್ಸು ಮತ್ತು ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದಲ್ಲದೇ ಮನೆಯಲ್ಲಿ ಆರ್ಥಿಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಕುಟುಂಬದ ಸದಸ್ಯರೂ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ತುಕ್ಕು ಹಿಡಿದ ಕಬ್ಬಿಣ, ಪ್ಲಾಸ್ಟಿಕ್ ಇಡಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮಲಗುವ ಜಾಗದಲ್ಲಿ ತುಕ್ಕು ಹಿಡಿದ ಕಬ್ಬಿಣದ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳನ್ನು ಇಡಬೇಡಿ. ಇದರಿಂದ ಮನೆಯಲ್ಲಿ ಭಯಾನಕ ವಾಸ್ತು ದೋಷ ಉಂಟಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ.

ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಶೂಗಳು, ಚಪ್ಪಲಿಗಳು ಇಡಬೇಡಿ

ಹಾಸಿಗೆಯ ಕೆಳಗೆ ಚಿನ್ನ-ಬೆಳ್ಳಿ ಅಥವಾ ಇತರ ಲೋಹದ ಆಭರಣಗಳು, ಕನ್ನಡಿ, ಶೂಗಳು, ಚಪ್ಪಲಿಗಳನ್ನು ಇಡಬೇಡಿ. ಇವು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಹಾಗೆಯೇ ಹಾಸಿಗೆಯ ಕೆಳಗೆ ತಪ್ಪಾಗಿಯೂ ಗಾಜು ಅಥವಾ ಎಣ್ಣೆಯನ್ನು ಹಾಕಬೇಡಿ. ಏಕೆಂದರೆ ಇವು ವಾಸ್ತು ಶಾಸ್ತ್ರದ ಪ್ರಕಾರ ಆ ಸ್ಥಳದಲ್ಲಿ ನೆಲೆಸಿದರೆ ಕುಟುಂಬಕ್ಕೆ ಅನಿಷ್ಟ ಉಂಟಾಗುತ್ತದೆ.

ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಎಲೆಕ್ಟ್ರಾನಿಕ್ ವಸ್ತು ಇಡಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾಸಿಗೆಯ ಕೆಳಗೆ ಇಡಬಾರದು. ಇದರಿಂದ ಮಾನಸಿಕ ಆರೋಗ್ಯ ಹಾಳಾಗಿ ನಿದ್ರೆಯ ಕೊರತೆಯಂತಹ ಸಮಸ್ಯೆಗಳು ಎದುರಾಗುತ್ತವೆ.

Published On - 3:46 pm, Tue, 28 February 23