Tulsi plant: ಭಾನುವಾರ ತುಳಸಿಗೆ ನೀರು ಅರ್ಪಿಸಬಾರದು ಎಂದು ಹೇಳುವುದೇಕೆ? ಧಾರ್ಮಿಕ ಕಾರಣ ಇಲ್ಲಿದೆ
ತುಳಸಿ, ವಿಷ್ಣುವಿಗೆ ಪ್ರಿಯವಾದದ್ದು ಮತ್ತು ಲಕ್ಷ್ಮೀ ದೇವಿಯ ವಾಸಸ್ಥಾನ ಎಂದು ನಂಬಲಾಗಿದೆ. ತುಳಸಿಗೆ ಸೂರ್ಯೋದಯಕ್ಕೆ ಮೊದಲು ಅಥವಾ ಮುಂಜಾನೆ ಒಮ್ಮೆ ಮಾತ್ರ ನೀರು ಹಾಕಬೇಕು. ಪದೇ ಪದೇ ನೀರು ಹಾಕುವಂತಿಲ್ಲ. ಇದಲ್ಲದೇ ಏಕಾದಶಿ ಮತ್ತು ಭಾನುವಾರಗಳಂದು ತುಳಸಿಗೆ ನೀರು ಅರ್ಪಿಸಬಾರದು ಎಂಬ ನಂಬಿಕೆ ಇದೆ. ಇದಕ್ಕೆ ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿಯನ್ನು ವಿಷ್ಣುವಿಗೆ ತುಂಬಾ ಪ್ರಿಯವೆಂದು ಪರಿಗಣಿಸಲಾಗುತ್ತದೆ ಮತ್ತು ಲಕ್ಷ್ಮಿ ದೇವಿಯು ತುಳಸಿಯಲ್ಲಿ ವಾಸಿಸುತ್ತಾಳೆ ಎಂದು ಹೇಳಲಾಗುತ್ತದೆ. ತುಳಸಿಯನ್ನು ‘ವಿಷ್ಣುಪ್ರಿಯ’ ಎಂದೂ ಕರೆಯುತ್ತಾರೆ. ಆದ್ದರಿಂದ, ತುಳಸಿಗೆ ನೀರನ್ನು ಅರ್ಪಿಸುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಬರುತ್ತದೆ ಮತ್ತು ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎಂಬ ಎಂಬ ನಂಬಿಕೆಯಿದೆ.
ತುಳಸಿಗೆ ನೀರು ಹಾಕುವುದಕ್ಕೆ ಕೆಲವು ನಿಯಮಗಳಿವೆ ಮತ್ತು ಈ ನಿಯಮಗಳು ಧಾರ್ಮಿಕವಾಗಿದ್ದರೂ, ಅವುಗಳನ್ನು ಸಸ್ಯದ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಉದಾಹರಣೆಗೆ, ತುಳಸಿಯನ್ನು ಸೂರ್ಯೋದಯಕ್ಕೆ ಮೊದಲು ಅಥವಾ ಮುಂಜಾನೆ ಒಮ್ಮೆ ಮಾತ್ರ ನೀರು ಹಾಕಬೇಕು, ಅದು ಕೂಡ ಒಮ್ಮೆ ಮಾತ್ರ. ತುಳಸಿಗೆ ಒಮ್ಮೆ ನೀರು ಹಾಕಿದರೆ ಸಾಕು. ಪದೇ ಪದೇ ನೀರು ಹಾಕಿದರೆ, ತುಳಸಿ ಗಿಡ ಹಾಳಾಗುತ್ತದೆ ಏಕೆಂದರೆ ಅದಕ್ಕೆ ಹೆಚ್ಚಿನ ನೀರು ಬೇಕಾಗಿಲ್ಲ. ಒಣಗಿದ ತುಳಸಿ ಗಿಡಕ್ಕೆ ನೀರು ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ.
ಇದನ್ನೂ ಓದಿ: ಕೇವಲ ಕುಟುಂಬದ ಆಚರಣೆಯಾಗಿದ್ದ ಗಣೇಶ ಚತುರ್ಥಿ ಸಾರ್ವಜನಿಕ ಗಣೇಶೋತ್ಸವವಾಗಿದ್ದು ಹೇಗೆ?
ಯಾವ ದಿನ ತುಳಸಿಗೆ ನೀರು ಹಾಕಬಾರದು?
ಶಾಸ್ತ್ರಗಳ ಪ್ರಕಾರ, ಏಕಾದಶಿಯಂದು, ತಾಯಿ ತುಳಸಿ ದೇವಿಯು ಭಗವಂತ ವಿಷ್ಣುವಿಗಾಗಿ ಉಪವಾಸ ಮಾಡುತ್ತಾಳೆ ಮತ್ತು ವಿಶ್ರಾಂತಿ ಪಡೆಯುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ತುಳಸಿಗೆ ನೀರು ಅರ್ಪಿಸುವುದರಿಂದ ಉಪವಾಸವು ಭಂಗವಾಗುತ್ತದೆ, ಇದು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗಬಹುದು ಹಾಗೂ ಜೀವನದಲ್ಲಿ ಸಮಸ್ಯೆಗಳನ್ನು ತರಬಹುದು ಎಂದು ಧಾರ್ಮಿಕ ನಂಬಿಕೆ ಇದೆ. ಆದ್ದರಿಂದ, ಏಕಾದಶಿ ಮತ್ತು ಭಾನುವಾರದಂದು ತುಳಸಿಯ ಮೇಲೆ ನೀರು ಹಾಕಬಾರದು ಎಂದು ಹೇಳಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:12 pm, Thu, 28 August 25
