ಮೊನ್ನೆಯಷ್ಟೇ ಅಕ್ಷಯ ತೃತೀಯ ಆಚರಿಸಿದ್ದೀರಿ. ಆ ಶುಭ ಘಳಿಗೆಯಲ್ಲಿ ಚಿನ್ನ ಖರೀದಿಸಿ, ಸಮೃದ್ಧಿ ಕಂಡಿದ್ದೀರಿ. ಅಕ್ಷಯವಾಗುವ ತೃತೀಯದ ದಿನ ಚಿನ್ನ ಖರೀದಿಸಬಹುದಾದರೆ ಯಾವ ದಿನದಂದು ಚಿನ್ನ ಖರೀದಿಸಬಾರದು ಮತ್ತು ಅದರ ಜೊತೆಗೆ, ಯಾವ ದಿನದಂದು ಕಬ್ಬಿಣ ಖರೀದಿ ಮಾಡಬಾರದು ಎಂಬುದು ಸಹ ಬಹುಮುಖ್ಯವಾಗುತ್ತದೆ. ಶುಭ ಘಳಿಗೆಯಲ್ಲಿ ಸ್ವಚ್ಛ ಮನಸಿನಿಂದ ಏನೇ ಮಾಡಿದರೂ ಅದು ಕೈಗೂಡುತ್ತದೆ. ಅದು ಪ್ರಯೋಜನಕಾರಿಯೂ ಆದೀತು. ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ದಿನದಂದು ಏನು ಮಾಡಬೇಕು ಎಂಬುದನ್ನು ಪ್ರಧಾನವಾಗಿ ಹೇಳಲಾಗುತ್ತದೆ. ನಮ್ಮ ಜೀವನದಲ್ಲಿ ಮುಖ್ಯವಾಗುವ ಚಿನ್ನ ಮತ್ತು ಕಬ್ಬಿಣ ಖರೀದಿಸುವ ಸಮಯದ ಬಗ್ಗೆ ತಿಳಿಯುವುದು ಅತ್ಯವಶ್ಯವಾಗುತ್ತದೆ. ಇದರ ಬಗ್ಗೆ ಈಗ ಒಂದಿಷ್ಟು ನಿಖರ ಮಾಹಿತಿ ತಿಳಿದುಕೊಳ್ಳೋಣ.
ಚಿನ್ನ ಖರೀದಿಗೆ ಅತ್ಯಂತ ಪ್ರಶಸ್ತ ಘಳಿಗೆಯೆಂದರೆ ಅಕ್ಷಯ ತೃತೀಯ ಮತ್ತು ಧನ್ ತೆರಸಾ ಆಗಿದೆ. ಈ ದಿನದಂದು ಚಿನ್ನ ಖರೀದಿಸಿದರೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಹೆಚ್ಚಾಗಿಯೇ ಆಗುತ್ತದೆ. ಇದರ ಹೊರತಾಗಿ ವಾರದ ದಿನಗಳಲ್ಲಿ ಚಿನ್ನ ಖರೀದಿಸಬೇಕು ಎಂದು ನೀವು ಇಚ್ಛಿಸಿದ್ದೇ ಆದರೆ ಅತ್ಯವಶ್ಯವಾಗಿ ಭಾನುವಾರ ಮತ್ತು ಗುರುವಾರಗಳಂದು ಚಿನ್ನ ಖರೀದಿ ಮಾಡಬಹುದು.
ಅಕ್ಷಯ ತೃತೀಯ ಮತ್ತು ಧನ್ ತೆರಸಾ ದಿನದಂದು ಚಿನ್ನ ಖರೀದಿ ಮಾಡಿದರೆ ಕೇವಲ ಮಹಾಲಕ್ಷ್ಮಿಯ ಕೃಪಾಕಟಾಕ್ಷವಷ್ಟೇ ಅಲ್ಲ; ಸೂರ್ಯ ಭಗವಂತನ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ. ಹಾಗಾಗಿ ಭಾನುವಾರ ಚಿನ್ನದ ಖರೀದಿಗೆ ಪ್ರಶಸ್ತವಾಗಿರುತ್ತದೆ. ಇಲ್ಲಿ ಮತ್ತೊಂದು ವಿಚಾರ ನಿಮ್ಮ ಗಮನಕ್ಕೆ ತರುವುದಾದರೆ ಅಪ್ಪಿತಪ್ಪಿಯೂ ನೀವು ಚಿನ್ನವನ್ನು ಶನಿವಾರ ಖರೀದಿಸಬೇಡಿ.
ಕಬ್ಬಿಣ ಲೋಹವು ಶನಿದೇವನ ಅಂಶವಾಗುತ್ತದೆ. ಹಾಗಾಗಿ ಶನಿವಾರದಂದು ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ವಸ್ತುವನ್ನು ದಾನವಾಗಿ ನೀಡಿದರೆ ಶನಿಮಹಾತ್ಮನನ್ನು ಸಂತುಷ್ಟಗೊಳಿಸಬಹುದು. ಮತ್ತೊಂದು ವಿಷಯವೆಂದರೆ ಶನಿವಾರ ಹೊರತುಪಡಿಸಿ, ವಾರದ ಇತರೆ ಯಾವುದೇ ದಿನಗಳಂದು ನೀವು ಕಬ್ಬಿಣವನ್ನು ಖರೀದಿ ಮಾಡಬಹುದು.
ಆಧ್ಯಾತ್ಮ ಕುರಿತಾದ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ