ವೈವಾಹಿಕ ಜೀವನದಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲವಾದರೆ ದಂಪತಿ ಮಧ್ಯೆ ಕಂದಕ ದೊಡ್ಡದಾಗಿಬಿಡುತ್ತದೆ!

ದಾಂಪತ್ಯದಲ್ಲಿ ಮೂರನೆಯ ವ್ಯಕ್ತಿ ಪ್ರವೇಶ ಮಾಡುವುದಕ್ಕೆ ಅವಕಾಶ ನೀಡಲೇಬಾರದು. ಅಂತಹ ಸಂದರ್ಭಗಳಲ್ಲಿ The end ಅನ್ನುವುದು Tragedy ಯಾಗಿಯೇ ಇರುತ್ತದೆ. ಅದನ್ನು ಅರ್ಥ ಮಾಡಿಕೊಂಡು ದಾಂಪತ್ಯ ಬಂಡಿಯನ್ನು ಜೋಡೆತ್ತುಗಳಾಗಿ ಮುನ್ನಡೆಸಬೇಕು.

ವೈವಾಹಿಕ ಜೀವನದಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲವಾದರೆ ದಂಪತಿ ಮಧ್ಯೆ ಕಂದಕ ದೊಡ್ಡದಾಗಿಬಿಡುತ್ತದೆ!
ಈ ವಸ್ತು ಯಾವುದೇ ಸ್ಥಿತಿಯಲ್ಲಿ ದೊರೆತರೂ ಪಡೆದುಕೊಳ್ಳಿ, ಅದನ್ನು ತೆಗೆದುಕೊಳ್ಳುವಾಗ ಸಮಾಜದ ಬಗ್ಗೆ ಚಿಂತಿಸಬೇಡಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 20, 2022 | 6:06 AM

ಚಾಣಕ್ಯನ ನೀತಿ (Acharya Chanakya) ಮಾತುಗಳು ನಮ್ಮ ಜೀವನದ ಪ್ರಗತಿ, ಅಭ್ಯುದಯಕ್ಕೆ ತುಂಬಾ ಪ್ರಯೋಜನಕಾರಿ. ಚಾಣಕ್ಯ ನೀತಿ ತುಂಬಾ ಸರಳ, ಇಂದಿಗೂ-ಎಂದೆಂದಿಗೂ ಪ್ರಸ್ತುತ. ಜೀವನದಲ್ಲಿ ಎದುರಾಗುವ ಸರಳ ಸತ್ಯಗಳನ್ನೇ ಆಚಾರ್ಯ ಚಾಣಕ್ಯ ಹೇಳಿರುವುದು. ಚಾಣಕ್ಯ ಹೇಳುವಂತೆ ಯಾರೇ ಆಗಲಿ ತಮ್ಮ ವೈವಾಹಿಕ ಜೀವನದಲ್ಲಿ ಈ ತಪ್ಪುಗಳನ್ನು ಮಾಡಬಾರದು. ಇಲ್ಲವಾದರೆ ದಂಪತಿಯ ಮಧ್ಯೆ ಕಂದಕ ದೊಡ್ಡದಾಗಿಬಿಡುತ್ತದೆ! ಅವು ಯಾವುವು?

  1. ಸುಳ್ಳು ಹೇಳುವುದು: ಗಂಡ-ಹೆಂಡತಿ ಒಬ್ಬರಿಗೊಬ್ಬರು ಸುಳ್ಳುಗಳನ್ನು ಹೇಳುವುದಕ್ಕೆ ಆರಂಭಿಸಿದರೆ ಅದು ಅವರಿಬ್ಬರ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.. ಅವರ ವೈವಾಹಿಕ ಜೀವನದಲ್ಲಿ ಕಂದಕ ಏರ್ಪಡುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಜೀವನ ಸಂಗಾತಿಯ ನಂಬಿಕೆ ಕಳೆದುಕೊಳ್ಳುತ್ತಾರೆ. ಪತಿ-ಪತ್ನಿ ಮಧ್ಯೆ ಅನುಮಾನದ ಪೆಡಂಭೂತ ಹುಟ್ಟಿಕೊಳ್ಳುತ್ತದೆ. ಅದು ಅವರಿಬ್ಬರ ಸಂಬಂಧದ ಮೇಲೆ ತೀವ್ರತರ ಪರಿಣಾಮ ಬೀರುತ್ತದೆ.
  2. ದಾಂಪತ್ಯದ ಸಂಬಂಧದಲ್ಲಿ ಪರಕೀಯರು: ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದರೆ ಅದು ಹೇಗೆ ಧಗಧಗ ಎಂದು ಹೊತ್ತಿ ಉರಿಯುತ್ತದೋ ಹಾಗೆ ಗಂಡ ಹೆಂಡತಿ ಮಧ್ಯೆ ಮನಸ್ತಾಪ, ಮಿನಿಸು ತಲೆದೋರಿದ್ದಾಗ ಸುಳ್ಳುಗಳ ಸರಮಾಲೆ ಆಹುತಿಗೆ ಹಾಕಿದರೆ ಅದು ಸಂಬಂಧದಲ್ಲಿ ವಿಕೋಪಕ್ಕೆ ಹೋಗುತ್ತದೆ. ದಾಂಪತ್ಯ ಸಮತೋಲನ ಕಳೆದುಕೊಳ್ಳುತ್ತದೆ. ಆಗ ದಾಂಪತ್ಯದ ಸಂಬಂಧದಲ್ಲಿ ಪರಕೀಯರು ಪ್ರವೇಶ ಪಡೆಯುತ್ತಾರೆ.
  3. ರಹಸ್ಯಗಳನ್ನು ಹಂಚಿಕೊಳ್ಳುವುದು: ಗಂಡ ಹೆಂಡತಿ ಮಧ್ಯೆ ಕೆಲವು ಸರಹದ್ದುಗಳು ಇರುತ್ತವೆ. ಆ ಪರಿಧಿ ಮೀರಿದರೆ ಸಂಬಂಧ ಹಳಸುತ್ತದೆ. ಅವರವರ ರಹಸ್ಯಗಳನ್ನು ಅವರವರ ಬಳಿಯೇ ಕಾಯ್ದುಕೊಳ್ಳಬೇಕು. ಗಂಡ ಹೆಂಡತಿ ತಮ್ಮ ದಾಂಪತ್ಯ ರಹಸ್ಯಗಳನ್ನು ಪರಕೀಯರ ಬಳಿ ಹೇಳಿಕೊಳ್ಳಬಾರದು. ಅದು ಬಾಳ ಸಂಗಾತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಇದರಿಂದ ಬಾಳ ಸಂಗಾತಿಯನ್ನು ಬಹಳ ಘಾಸಿಗೊಳಿಸಿದಂತಾಗುತ್ತದೆ.
  4. ಪರಸ್ಪರ ಅವಮಾನಕ್ಕೆ ಗುರಿಯಾಗಿಸುವುದು: ಗಂಡ ಹೆಂಡತಿ ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದು ಮಾಡಿಕೊಳ್ಳಬಾರದು. ಆ ಸಂದರ್ಭಗಳಲ್ಲಿ ಬಾಳ ಸಂಗಾತಿಯನ್ನು ಕೀಳಾಗಿ ನೋಡಿದರೆ ಅದು ಖಂಡಿತಾ ಕೆಟ್ಟ ಪರಿಣಾಮ ಬೀರುತ್ತದೆ. ಅದು ದಂಪತ್ಯದ ಮೇಲೆ ಪ್ರಭಾವ ಬೀರುತ್ತದೆ. ಬಲಹೀನತೆಗಳನ್ನು ಮುಂದಿಟ್ಟಿಕೊಂಡು ಆಡಿಕೊಳ್ಳತೊಡಗಿದರೆ ಅದು ದಾಂಪತ್ಯಕ್ಕೆ ಕೊಳ್ಳಿಯಿಟ್ಟಂತಾಗುತ್ತದೆ. ಅಲ್ಲಿಂದ ಬಾಂಧವ್ಯ ಕರಗುತ್ತಾ ಬರುತ್ತದೆ. ಹಾಗಾಗಿ ಪರಸ್ಪರ ಗೌರವ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ.
  5. ಮೂರನೆಯ ವ್ಯಕ್ತಿಗೆ ಅವಕಾಶ: ದಾಂಪತ್ಯದಲ್ಲಿ ಮೂರನೆಯ ವ್ಯಕ್ತಿ ಪ್ರವೇಶ ಮಾಡುವುದಕ್ಕೆ ಅವಕಾಶ ನೀಡಲೇಬಾರದು. ದಾಂಪತ್ಯದಲ್ಲಿ ನಿಯತ್ತು, ಚಿತ್ತಶುದ್ಧಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ದಂಪತಿ ಮಧ್ಯೆ ಮೂರನೆಯ ವ್ಯಕ್ತಿ ನುಸುಳಿದರೆ ಆ ದಾಂಪತ್ಯ ಬಂಧ ಹೆಚ್ಚು ಕಾಲ ಉಳಿಯಲಾರದು. ಅಷ್ಟೇ ಅಂತಹ ಸಂದರ್ಭಗಳಲ್ಲಿ The end ಅನ್ನುವುದು Tragedy ಯಾಗಿಯೇ ಇರುತ್ತದೆ. ಅದನ್ನು ಅರ್ಥ ಮಾಡಿಕೊಂಡು ದಾಂಪತ್ಯ ಬಂಡಿಯನ್ನು ಜೋಡೆತ್ತುಗಳಾಗಿ ಮುನ್ನಡೆಸಬೇಕು.

ತೆಲುಗಿನಲ್ಲಿ ಈ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್