ವಿದ್ಯಾರ್ಥಿಗಳನ್ನು ವೃತ್ತಿಪರರನ್ನಾಗಿ ಅಭಿವೃದ್ಧಿಪಡಿಸಲು ಇನ್ಫೋಜೆನ್ ಲ್ಯಾಬ್ನೊಂದಿಗೆ ಕೈಜೋಡಿಸಿದ ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ
ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ಅಮೇರಿಕಾದ ಲಾಸ್ ಏಂಜಲೀಸ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇನ್ಫೋಲ್ಯಾಬ್ನೊಂದಿಗೆ ತನ್ನ ಸಹಯೋಗವನ್ನು ಆರಂಭಿಸುತ್ತಿದೆ. ಆಗಸ್ಟ್ 24, ಗುರುವಾರದಂದು ಇದರ ಉದ್ಘಾಟನಾ ಕಾರ್ಯಕ್ರಮ ನಡೆದಿದ್ದು, ಎರಡೂ ಸಂಸ್ಥೆಯ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನ ಟಾಪ್ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Acharya Institute of Technology, Bangalore) ಭೋದನೆ, ಕಲಿಕೆ, ಸಂಶೋಧನೆ ಮತ್ತು ಹಲವಾರು ವಿಭಾಗಗಳಲ್ಲಿ ವಿದ್ಯಾರ್ಥಿಗಳನ್ನು ವೃತ್ತಿಪರರನ್ನಾಗಿ ಅಭಿವೃದ್ಧಿಪಡಿಸುವಲ್ಲಿ ಬದ್ಧವಾಗಿ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಅವರ ಉದ್ಯೋಗದ ಅವಶ್ಯಕತೆಗಳಿಗೆ ಹೊಂದಿಕೆಯಾಗುವ ಕೌಶಲ್ಯವನ್ನು ಕಲಿಸುವ ಮೂಲಕ ವಿದ್ಯಾರ್ಥಿಗಳ ಉದ್ಯೋಗಾವಕಾಶವನ್ನು ಹೆಚ್ಚಿಸಲು ಗುಣಮಟ್ಟದ ತರಬೇತಿಯನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಈ ಸಂಸ್ಥೆಯು ದೇಶ ವಿದೇಶದಲ್ಲಿರುವ ಹಲವಾರು ಪ್ರತಿಷ್ಠಿತ ಉದ್ಯಮ ಸಂಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳ ಜೊತೆಗೆ ತನ್ನ ಸಹಯೋಗವನ್ನು ಹೊಂದಿದೆ.
ಇದೀಗ ಲಾಸ್ ಏಂಜಲೀಸ್ ನಲ್ಲಿ ಪ್ರಧಾನ ಕಚೇರಿಯನನ್ನು ಹೊಂದಿರುವ ಇನ್ಫೋಜೆನ್ ಲ್ಯಾಬ್ನೊಂದಿಗೆ ಈ ಶಿಕ್ಷಣ ಸಂಸ್ಥೆಯು ತನ್ನ ಸಹಯೋಗವನ್ನು ಪಡೆದುಕೊಂಡಿದೆ. ಇನ್ಫೋಜೆನ್ ಲ್ಯಾಬ್ ಜಾಗತಿಕ ಡಿಜಿಟಲ್ ಸಲಹಾ ಕಂಪೆನಿಯಾಗಿದ್ದು, ಈ ಕಂಪೆನಿಯ ಜಂಟಿ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಹೆಚ್ಚಿನ ಕೌಶಲ್ಯಗಳನ್ನು ಒದಗಿಸುವ ಹಾಗೂ ಉದ್ಯೋಗಾವಕಾಶವನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ.
ಈಗಾಗಲೇ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಬಿ.ಟೆಕ್ ಪದವಿ ಓದುತ್ತಿರುವ 19 ವಿದ್ಯಾರ್ಥಿಗಳು 4 ತಿಂಗಳಿಂದ ಒಂದು ವರ್ಷದ ಅವಧಿಯ ವರೆಗೆ ಇನ್ಫೋನೆಜ್ ಲ್ಯಾಬ್ನಲ್ಲಿ ಇಂಟರ್ನ್ ಗಳಾಗಿ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:ಡಾರ್ಕ್ ಫ್ಯಾಂಟಸಿನ ಹೊಸ ಬ್ರಾಂಡ್ ರಾಯಭಾರಿಯಾಗಿ ಫ್ಯಾಂಟಸಿ ಕಿಂಗ್ ಶಾರುಖ್ ಖಾನ್ ಘೋಷಣೆ
ಈ ಎರಡು ಸಂಸ್ಥೆಗಳ ಸಹಯೋಗದ ಉದ್ಘಾಟನಾ ಕಾರ್ಯಕ್ರಮವು ಆಗಸ್ಟ್ 24 ಗುರುವಾರದಂದು, ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಕ್ಯಾಂಪಸ್ ನಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಇನ್ಫೋಜೆನ್ ಲ್ಯಾಬ್ ನ ಸಿ.ಇ.ಒ ಸಂಜೀವ್ ಕುಮಾರ್ ಕುವಾಡೇಕರ್, ಇನ್ಫೋಜೆನ್ ಲ್ಯಾಬ್ ನ ಸಿ.ಒ.ಒ ಸಿದ್ ಪಾಟ್ಕಿ, ಇನ್ಫೋಜೆನ್ ಲ್ಯಾಬ್ ನ ಸಿ.ಆರ್.ಒ ಆಂಡ್ರ್ಯೂ ಯೋಶಿಕಾವಾ, ಇನ್ಫೋಜೆನ್ ಲ್ಯಾಬ್ ನ ಸಿ.ಟಿ.ಒ ವಿನೋದ್ ನೆಹೆಟೆ ಹಾಗೂ ಆಚಾರ್ಯ ಸಂಸ್ಥೆಯ ಉದ್ಯೋಗ ಮತ್ತು ತರಬೇತಿ ಕೇಂದ್ರದ ನಿರ್ದೇಶಕರಾದ ಸಿ.ಬಿ.ಎಮ್ ಭೂಷನ್, ಆಚಾರ್ಯ ಸಂಸ್ಥೆಯ ತರಬೇತಿ ಮತ್ತು ಸಹಯೋಗದ ನಿರ್ದೇಶಕರಾದ ಪ್ರೊ ಇಕ್ಬಾಲ್ ಅಹಮದ್ , ಆಚಾರ್ಯ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಪ್ರೊ. ರಜತ್ ಹೆಗ್ಡೆ ಮತ್ತು ಉಪ ಪ್ರಾಂಶುಪಾಲರಾದ ಪ್ರೊ. ಮರೀಗೌಡ ಭಾಗವಹಿಸಿದ್ದರು.