Airtel 5G Plus: ಏರ್ ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ: ​5ಜಿ ಪ್ಲಸ್ ​ಸೇವೆ ಲಭ್ಯ, ಈ ಎಲ್ಲ ಸೌಲಭ್ಯ ಪಡೆಯಿರಿ

ಏರ್​ಟೆಲ್​ 5ಜಿ ಪ್ಲಸ್ ಸೇವೆಯು 30 ಪಟ್ಟು ಹೆಚ್ಚಿನ ವೇಗದ ವೈಫೈ ಸಂಪರ್ಕವನ್ನು ನೀಡುತ್ತದೆ, ಗ್ರಾಹಕರು ಯಾವುದೇ ಪ್ರದೇಶಕ್ಕೆ ಚಲಿಸುತ್ತಿರುವಾಗಲೂ ನೆಟ್​​ವರ್ಕ್​​ಗಳನ್ನು ಇದು ಒದಗಿಸುತ್ತಿದೆ.

Airtel 5G Plus: ಏರ್ ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ: ​5ಜಿ ಪ್ಲಸ್ ​ಸೇವೆ ಲಭ್ಯ, ಈ ಎಲ್ಲ ಸೌಲಭ್ಯ ಪಡೆಯಿರಿ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
| Updated By: Digi Tech Desk

Updated on:Apr 28, 2023 | 4:02 PM

ಏರ್​ಟೆಲ್​5ಜಿ ಪ್ಲಸ್ (Airtel 5G Plus) ​ಸೇವೆಯು ಅನೇಕ ವಿಚಾರಗಳಿಗೆ ವೇಗವನ್ನು ನೀಡುವ ಸಾಧಕವಾಗಿದೆ. ನೆಟ್​​​ವರ್ಕ್​​​ ಕಡಿತಗೊಂಡು ಮಂದಗತಿಯಲ್ಲಿ ಲೋಡ್ ಆಗುವ ಮತ್ತು ಯಾವುದೇ ಗೇಮಿಂಗ್ ಆಪ್​​ಗಳನ್ನು ಡೌನ್​ಲೋಡ್ ಮಾಡಲು ಸಹಾಯವಾಗುವ ಏರ್​ಟೆಲ್​5ಜಿ ಪ್ಲಸ್ ​ವೇಗವಾಗಿ ಡೌನ್​ಲೋಡ್ ಮಾಡಲು ಅವಕಾಶವನ್ನು ನೀಡುತ್ತದೆ, ಇದರ ಜತೆಗೆ ಆಪ್ ಅಪ್​ಡೇಟ್​ ಮಾಡಲು (ನವೀಕರಣಗಳು), ಹಾಗೂ ಉನ್ನತ ಮಟ್ಟದ ಸಂಪರ್ಕ ಸಾಧಿಸುವ ಬ್ಯಾಂಡ್​ವಿಡ್ತ್​ನೊಂದಿಗೆ ಗೇಮರ್​ಗಳಿಗೆ (ಗಣಕೀಕೃತ ಆಟಗಳ ಆಟಗಾರರು) ಒಂದು ವರದಾನವೇ ಆಗಿದೆ. (ಚಿತ್ರ ಕೃಪೆ: ಷಟ್ಟರ್​ಸ್ಟಾಕ್) ಏರ್​ಟೆಲ್​ 5ಜಿ ಪ್ಲಸ್​ ಸೇವೆಯು ಭಾರತದಾದ್ಯಂತ ಪ್ರಮುಖ ಭಾಗವಾಗಿ ಬೆಳೆಯುತ್ತಿದೆ. ಯಾವುದೇ ವಿಚಾರಗಳನ್ನು ರಚಿಸುವಾಗ, ಲೇಖನಗಳನ್ನು (ಕಂಟೆಂಟ್​) ಅಪ್​​ಡೇಟ್​​ ಮಾಡುವಾಗ ಅಥವಾ ಅವುಗಳನ್ನು ತಕ್ಷಣಕ್ಕೆ ತಿದ್ದಿಕೊಳ್ಳಲು, ವೇಗವಾಗಿ ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಈ 5ಜಿ ಪ್ಲಸ್​​ನಿಂದ ಸಾಧ್ಯ.

ಏರ್​ಟೆಲ್​ 5ಜಿ ಪ್ಲಸ್ ಸೇವೆಯು 30 ಪಟ್ಟು ಹೆಚ್ಚಿನ ವೇಗದ ವೈಫೈ ಸಂಪರ್ಕವನ್ನು ನೀಡುತ್ತದೆ, ಗ್ರಾಹಕರು ಯಾವುದೇ ಪ್ರದೇಶಕ್ಕೆ ಚಲಿಸುತ್ತಿರುವಾಗಲೂ ನೆಟ್​​ವರ್ಕ್​​ಗಳನ್ನು ಇದು ಒದಗಿಸುತ್ತಿದೆ. ಏರ್​ಟೆಲ್​ 5ಜಿ ಪ್ಲಸ್​ನ ವೈಫೈ ನಾವು ಚಲಿಸುತ್ತಿರುವಾಗಲೂ ಸಹ ಸಕ್ರಿಯವಾಗಿರುತ್ತದೆ. ಜೊತೆಗೆ ಜನರಿಗೆ ನಿರಂತರವಾದ ಗೇಮಿಂಗ್​ ಮತ್ತು ಸ್ಟ್ರೀಮಿಂಗ್​ ವ್ಯವಸ್ಥೆಗಳನ್ನು ನೀಡುತ್ತದೆ. ಏರ್​ಟೆಲ್​ 5ಜಿ ಪ್ಲಸ್​ ಸೇವೆಯು 30 ಪಟ್ಟು ಹೆಚ್ಚು ವೇಗದ ಅಂತರ್ಜಾಲ ಸಂಪರ್ಕವನ್ನು ಒದಗಿಸುವ ಮೂಲಕ ವಿಷಯವಸ್ತುಗಳ (ಕಂಟೆಂಟ್​) ರಚನೆಗೆ ಮತ್ತು ತಮ್ಮ ಬರಹಗಳನ್ನು ರಚಿಸುವುದನ್ನು, ತಿದ್ದುಪಡಿ ಮಾಡುವುದನ್ನು, ಹಾಗೂ ಅಪ್​ಲೋಡ್​ ಮಾಡುವುದನ್ನು ಸಾಧ್ಯವಾಗಿಸಿದೆ.

ಈ ತ್ವರಿತಗತಿಯ ಪ್ರಪಂಚದಲ್ಲಿ, ಸದಾ ಸಂಪರ್ಕಿತರಾಗಿರುವುದು ಹಾಗೂ ಚಲಿಸುತ್ತಿರುವಾಗಲೂ ಸಹ ಅತಿ ಹೆಚ್ಚಿನ ವೇಗದ ಅಂತರ್ಜಾಲ ಸಂಪರ್ಕದ ಸೌಲಭ್ಯವನ್ನು ಹೊಂದಿರುವುದು ಅತ್ಯಾವಶ್ಯಕವಾಗಿದೆ. ಉದ್ಯಮಿಗಳು, ಮಾಧ್ಯಮಗಳಿಗೆ ವಿಷಯವಸ್ತುಗಳನ್ನು ರಚಿಸುವವರು, ಹಾಗೂ ಚಲಿಸುತ್ತಿರುವಾಗಲೂ ವೈಫೈಗಳು ಬೇಕಾದ, ಜತೆಗೆ ಅಂತರ್ಜಾಲ ಸಂಪರ್ಕವನ್ನು ಬಯಸುವ ಇನ್ನಾರಿಗೇ ಆದರೂ ಈ ಸೇವೆಯ ಅವಶ್ಯಕತೆ ಇರುವಾಗ ಅದನ್ನು ಒದಗಿಸಲು ಅತ್ಯಾಧುನಿಕ ಕಟಿಂಗ್​-ಎಡ್ಜ್​ ತಂತ್ರಜ್ಞಾನವು ಅತ್ಯಾವಶ್ಯಕವಾಗಿದೆ. ದೊಡ್ಡ ಗಾತ್ರದ ಫೈಲ್​ಗಳನ್ನು ಡೌನ್​ಲೋಡ್​ ಮಾಡುವಾಗ, ವಿಡಿಯೋ ಮೂಲಕ ಸಭೆಗಳನ್ನು ನಡೆಸುವಾಗ, ಹಾಗೂ 4K ವಿಷಯವಸ್ತುಗಳನ್ನು ಅಪ್​ಲೋಡ್​ ಮಾಡುವ ಸಾಮರ್ಥ್ಯವು ಪ್ಯಾಕೇಜ್​ ಅವಶ್ಯಕತೆಯ ಭಾಗವಾಗಿದೆ.

ಇದನ್ನೂ ಓದಿ:Airtel 5G: ಏರ್ಟೆಲ್​ನಿಂದ ಧಮಾಕ ಆಫರ್: ಅನ್ಲಿಮಿಟೆಡ್ 5G ಡೇಟಾ ಕೊಡುಗೆ: ಶಾಕ್ ಆದ ಜಿಯೋ

ಏರ್​ಟೆಲ್​ 5ಜಿ ಪ್ಲಸ್​ ಸೇವೆಯೊಂದಿಗೆ, 30 ಪಟ್ಟು ಹೆಚ್ಚಿನ ವೇಗದ ಎಚ್​.ಡಿ. ವಿಡಿಯೋ ಕರೆಗಳನ್ನು, ಅತ್ಯಂತ ಹೆಚ್ಚಿನ ವೇಗದ ಡೌನ್​ಲೋಡ್​ಗಳನ್ನು, ಮತ್ತು ಅತ್ಯಲ್ಪ ಪ್ರಮಾಣದ ಸ್ಟ್ರೀಮಿಂಗ್​ಗಳನ್ನು ಮತ್ತು ಗೇಮಿಂಗ್​​ಗಳ ಲಭ್ಯತೆಗಳನ್ನು ನಿಮ್ಮ ಮೊಬೈಲ್​ನಲ್ಲಿ ಅನುಭವಿಸಬಹುದು. ಈ ತಂತ್ರಜ್ಞಾನವು ನಿಮ್ಮ ಡಿಜಿಟಲ್​ ಅನುಭವವನ್ನು ವೃದ್ಧಿಸುವುದು ಮಾತ್ರವಲ್ಲದೇ, ನೀವು ಚಲಿಸುತ್ತಿರುವಾಗಲೂ ಸಹ ನಿಮ್ಮ ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡಲು ಸಾಧ್ಯವಾಗಿತ್ತದೆ.

ಏರ್​ಟೆಲ್​ 5ಜಿ ಪ್ಲಸ್​ ಸೇವೆಯು ನಿಮ್ಮ ಅಭಿವ್ಯಕ್ತಿಯ ವಿಧಾನವನ್ನು, ಪ್ರತ್ಯಕ್ಷ (ಲೈವ್​) ಕೆಲಸದ ವಿಧಾನವನ್ನು, ಇತರರೊಂದಿಗೆ ಸಂಪರ್ಕ ಸಾಧಿಸುವ ವಿಧಾನವನ್ನು, ಹಾಗೂ ಮನರಂಜನೆಯ ಆಟಗಳನ್ನು ಆಡುವ ವಿಧಾನಗಳನ್ನು ಇನ್ನಷ್ಟು ವೃದ್ಧಿಸಲು ಸರ್ವಸನ್ನದ್ಧವಾಗಿದೆ. ನೀವು ಮನೆಯಲ್ಲಿರುವಾಗ ಅಥವಾ ಆಫೀಸ್​ನಲ್ಲಿರುವಾಗ ಏನೇನು ಮಾಡಬಲ್ಲರೋ ಅವೆಲ್ಲವನ್ನೂ ನೀವು ಹೊರಗಿರುವಾಗಲೂ ಅಥವಾ ಚಲಿಸುತ್ತಿರವಾಗಲೂ ಮಾಡಬಲ್ಲಿರಿ ಎಂಬುದಕ್ಕೆ ಎಲ್ಲ ರೀತಿ ಸೌಲಭ್ಯಗಳನ್ನು ಏರ್​ಟೆಲ್​ 5ಜಿ ಪ್ಲಸ್​ ಸೇವೆಯು ನಿಮಗೆ ಒದಗಿಸುತ್ತದೆ. ಏರ್​ಟೆಲ್ 5ಜಿ ಪ್ಲಸ್​ ಸೇವೆಯು ನಿಮ್ಮ ಸ್ವಂತ ಹಾಗೂ ವೃತ್ತಿಗಳೆರಡಕ್ಕೂ ಸಂಬಂಧಿಸಿದ ಅವಶ್ಯಕತೆಗಳಿಗೆ ಮೊಬೈಲ್​ ಸಂಪರ್ಕಜಾಲಗಳನ್ನು ಬಳಸಿಕೊಳ್ಳಲು ಉನ್ನತ ಮಟ್ಟದ ಸಾಧಕಗಳಿಗೆ ಕೊಂಡೊಯ್ಯುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

ಭವಿಷ್ಯದ ಗೇಮಿಂಗ್​ ಈಗಲೇ ಸಾಕಾರಗೊಳ್ಳಲಿದೆ

ಗೇಮಿಂಗ್​ ಜಗತ್ತು ತನ್ನ ದಾಪುಗಾಲುಗಳನ್ನು ಇಡುತ್ತಿರುವಾಗ ಹಾಗೂ 5ಜಿ ಫೋನುಗಳು ಕೈಗೆಟಕುವ ದರಗಳಲ್ಲಿ ಸಿಗುತ್ತಿರುವಾಗ, ಏರ್​ಟೆಲ್​ 5ಜಿ ಪ್ಲಸ್​ ಸೇವೆಯು ಗೇಮರ್​ಗಳಿಗೆ ಹೊಸದೊಂದು ಕ್ರಾಂತಿಕಾರಕ ಸೌಲಭ್ಯವನ್ನೇ ಪರಿಚಯಿಸಿದೆ. ಈಗ ಗೇಮರ್​ಗಳು 30 ಪಟ್ಟು ಹೆಚ್ಚಿನ ವೇಗದೊಂದಿಗೆ ಏರ್​ಟೆಲ್​ 5ಜಿ ಪ್ಲಸ್​ ಸೇವೆಯಿಂದ ಕಡಿತಗೊಂಡ ಮಂದಗತಿಯ ಗೇಮಿಂಗ್​ ಅವಧಿಗಳು, ಅತ್ಯಲ್ಪ ತಟಸ್ಥ ಆಟಗಳ ಅವಧಿಗಳು, ವೇಗದ ಡೌನ್​ಲೋಡ್​ಗಳು, ಹಾಗೂ ಒಟ್ಟಾರೆ ಅತ್ಯುನ್ನತ ಮಟ್ಟದ ಸಂಪರ್ಕ ಬ್ಯಾಂಡ್​ವಿಡ್ತ್​ಗಳಂತಹ ಅತ್ಯದ್ಭುತ ಲಾಭಗಳನ್ನು ಇದರ ಮೂಲಕ ಅನುಭವಿಸಬಹುದು. ಅತ್ಯುತ್ತಮವಾದ ಸಂಗತಿಯೆಂದರೆ, ಈಗ ತಮ್ಮ ಮನೆಗೆ ಮಾತ್ರವೇ ಸೀಮಿತವಾಗದೇ ಅಥವಾ ಗೇಮಿಂಗ್​ ಆರಂಭಿಸಲು ಹಾಗೂ ಈ ಗೇಮಿಂಗ್​ ಮೇಲ್ಮಟ್ಟದ ಯಶಸ್ಸನ್ನು ಗಳಿಸಲು ದುಬಾರಿ ಸಾಧನಗಳ ಮೇಲೆ ಅವಲಂಬಿತರಾಗಬೇಕಿಲ್ಲ. ಅವರು ತಮ್ಮ ಏರ್​ಟೆಲ್​ 5ಜಿ ಪ್ಲಸ್​ ಸೇವೆಯ ಸೂಪರ್​ಫಾಸ್ಟ್​ ವೇಗದಿಂದ ಪ್ರಯಾಣದಲ್ಲಿರುವಾಗಲೂ ಹಾಗೂ ಅವರಿಗೆ ಬೇಕೆನಿಸಿದಾಗಲೂ ಸಹ ತಮ್ಮ ಗೇಮಿಂಗ್​ ಹವ್ಯಾಸವನ್ನು ಮುಂದುವರೆಸಬಹುದು.

ತಡೆರಹಿತ ವಿಷಯವಸ್ತುಗಳ (ಕಂಟೆಂಟ್​) ರಚನೆ

ಏರ್​ಟೆಲ್​ 5ಜಿ ಪ್ಲಸ್​ ಸೇವೆಯು ಭಾರತದಾದ್ಯಂತದ ಇಂದಿನ ವಿಷಯವಸ್ತುಗಳ ರಚನೆಕಾರರಿಗೆ ಅವರು ಪ್ರಯಾಣಿಸುತ್ತಿರುವಾಗಲೂ ಸಹ ತಮ್ಮ ಬರಹಗಳನ್ನು ರಚಿಸುವ, ತಿದ್ದುಪಡಿ ಮಾಡುವ, ಹಾಗೂ ಅತಿ ಹೆಚ್ಚಿನ ವೇಗದಿಂದ ತಮ್ಮ ಬರಹಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅವಕಾಶ ಒದಗಿಸುವ ಸಹಾಯ ಮಾಡುತ್ತಿದೆ. ಹಾಗೂ ಏರ್​ಟೆಲ್​ 5ಜಿ ಪ್ಲಸ್​ ಸೇವೆಯು ಒದಗಿಸುತ್ತಿರುವ 30 ಪಟ್ಟು ಹೆಚ್ಚು ವೇಗವರ್ಧನೆ ಹಾಗೂ ಸೇವೆಯು ಸ್ಥಗಿತಗೊಳ್ಳುವ ಅತ್ಯಲ್ಪ ಅವಧಿಯ ಸೌಲಭ್ಯಗಳಿಂದ ಅವರು ತಮ್ಮವರೊಂದಿಗೆ ಸಂಪರ್ಕ ಸಾಧಿಸಲು ಸುಲಭ ವಿಧಾನವನ್ನು ಈ ತಂತ್ರಜ್ಞಾನ ಮಾಡುತ್ತದೆ. ತಮ್ಮ ಅವಧಿಯೊಳಗೆ ಕೆಲಸ ಮಾಡಿಕೊಳ್ಳಲು ಏರ್​ಟೆಲ್​ 5ಜಿ ಪ್ಲಸ್​ ಸೇವೆಯು ಪ್ರಮುಖ ಪಾತ್ರವಹಿಸಿದೆ. ದೇಶದ ಉದ್ದಗಲಕ್ಕೂ ಸುಮಾರು 500 ನಗರಗಳಲ್ಲಿ ಏರ್​ಟೆಲ್​ 5ಜಿ ಪ್ಲಸ್​ ಸೇವೆಯು ಕಾರ್ಯಾರಂಭ ಮಾಡಿದ್ದು, ತಮ್ಮ ಪ್ರತಿಸ್ಪರ್ಧಿಗಳೊಂದಿಗೆ ಸಮಾನ ಸ್ಪರ್ಧೆಯ ಅವಕಾಶವನ್ನು ಪಡೆದುಕೊಂಡಿದ್ದಾರೆ. ಹಾಗೂ ಈ ಮೂಲಕ ಬೆಳವಣಿಗೆ ಮತ್ತು ಯಶಸ್ಸಿಗೆ ದಾರಿ ಮಾಡಿಕೊಡುವ ಹೊಸ ಅವಕಾಶಗಳನ್ನು ಗಳಿಸಿಕೊಂಡಿದೆ.

ಹಿದೆಂದೂ ಕಂಡಿರದ ಮನರಂಜನೆಯ ಅನುಭವ

ಏರ್​ಟೆಲ್​ 5ಜಿ ಪ್ಲಸ್​ ಸೇವೆಯು, ಬಳಕೆದಾರರು ಚಲಿಸುತ್ತಿರುವಾಗಲೂ ಕೂಡ ಯಾವುದೇ ಅಡೆತಡೆ ಇಲ್ಲದೆ ಯಾವುದೇ ಮನರಂಜನೆ ಪ್ರಸಾರಗಳನ್ನು ಅನುಭವಿಸಬಹುದು. ಇದು ಈ ಸಮಯದಲ್ಲಿ ಸೂಪರ್​ ಫಾಸ್ಟ್​ ವೇಗಗಳ ಮತ್ತು ಅತ್ಯಲ್ಪ ಲ್ಯಾಗ್​ ಅಥವಾ ಉತ್ತಮ ಸೇವೆಯನ್ನು ಒದಗಿಸುತ್ತಿದೆ. ಹೀಗಾಗಿ, ನೀವು ಹೈ-ಡೆಫಿನಿಷನ್​ ಮತ್ತು 4ಕೆ ವಿಡಿಯೋಗಳನ್ನು ಕ್ಷಣಮಾತ್ರದಲ್ಲಿ ಡೌನ್​ಲೋಡ್​ ಮಾಡಿಕೊಳ್ಳಬಹುದು. ಅನಿಯಮಿತ 5ಜಿ ಡೇಟಾ ಯೋಜನೆಯ ಕೊಡುಗೆಯಿಂದ, ಏರ್​ಟೆಲ್​ 5ಜಿ ಪ್ಲಸ್​ ಸೇವೆಯು ತನ್ನ ಬಳಕೆದಾರರಿಗೆ ಎಲ್ಲ ಸಮಯದಲ್ಲೂ ಹಾಗೂ ಎಲ್ಲ ಪ್ರದೇಶದಲ್ಲೂ ಸೇವೆಯನ್ನು ನೀಡುತ್ತದೆ. ಎಷ್ಟೇ ದೊಡ್ಡ ವಿಡಿಯೊಗಳಿದ್ದರು ನೋಡಲು ಉತ್ತಮ ನೆಟ್​ವರ್ಕ್​​ಗಳನ್ನು ನೀಡುತ್ತದೆ. ಇದರಲ್ಲಿ ಇನ್ನೊಂದು ಹೊಸ ಫೀಚರ್​ ಎಂದರೆ ಡೇಟಾ ಬೇಗ ಮುಗಿಯುತ್ತದೆ ಎಂಬ ಆತಂಕಪಡುವ ಅಗತ್ಯವೂ ಇಲ್ಲ.

ಕೆಲಸ ಮಾಡುವ ಸಾಮರ್ಥ್ಯದ ಹೆಚ್ಚಳ

ಇಂದಿನ ದಿನಗಳಲ್ಲಿ, ಹೆಚ್ಚು ಸಂಖ್ಯೆಯ ವೃತ್ತಿಪರರು ತಾವು ಚಲಿಸುತ್ತಿರುವಾಗಲೂ ಆನ್​​ಲೈನ್​ ಸಂಪರ್ಕದಲ್ಲಿರಲು ಹಾಗೂ ಉದ್ಯೋಗ- ವೈಯಕ್ತಿಕ ಜೀವನಗಳ ಸಮತೋಲನವನ್ನು ಹೊಂದಿರಲು ಬಯಸುತ್ತಾರೆ. ಏರ್​ಟೆಲ್​ 5ಜಿ ಪ್ಲಸ್​ ಸೇವೆಯು ಈ ಎಲ್ಲ ವಿವಾರಗಳಿಗೂ ಒತ್ತು ನೀಡಿ ಉದ್ಯೋಗದ ಸ್ಥಳಗಳಲ್ಲೂ ಹಾಗೂ ಪ್ರಯಾಣಿಸುತ್ತಿರುವಾಗಲೂ ಸಹ ತಡೆರಹಿತವಾಗಿ ಕೆಲಸ ಮಾಡುವ ಹಾಗೂ ತಮ್ಮ ವ್ಯವಹಾರಗಳೊಂದಿಗೆ, ವೃತ್ತಿಪರರೊಂದಿಗೆ ಸಂಪರ್ಕದಲ್ಲಿರುವುದನ್ನು ಅತ್ಯಂತ ಸುಲಭಗೊಳಿಸಿದೆ. ಏರ್​ಟೆಲ್​ 5ಜಿ ಪ್ಲಸ್​ ಸೇವೆಯು ಒದಗಿಸುತ್ತಿರುವ ವೈಫೈ ವೇಗದೊಂದಿಗೆ ವೃತ್ತಿಪರರು ತಾವು ಪ್ರಯಾಣಿಸುತ್ತಿರುವಾಗಲೂ ಸಹ ವಾಸ್ತವಿಕ ಮೀಟಿಂಗ್​​ಗಳಲ್ಲಿ ಭಾಗವಹಿಸಬಹುದು, ತಮ್ಮ ಸಹೋದ್ಯೋಗಿಗಳೊಂದಿಗೆ ನೈಜ ಸಮಯದಲ್ಲಿ ಜೊತೆಗೂಡಿ ಕೆಲಸ ಮಾಡಬಹುದು, ಹಾಗೂ ಬಹಳ ಸುಲಭವಾಗಿ ತಮ್ಮ ಕೆಲಸದ ಸ್ಥಳದ ಫೈಲ್​ಗಳನ್ನೂ ಪರಿಶೀಲಿಸಬಹುದು. ಏರ್​ಟೆಲ್​ 5ಜಿ ಪ್ಲಸ್​ ಸೇವೆಯು (ತನ್ನ ಪರಿಚಯಾತ್ಮಕ 5ಜಿ ಯೋಜನೆ ಕೊಡುಗೆಯ ಮೂಲಕ) ತಮ್ಮ ಗ್ರಾಹಕರು ತಮ್ಮ ಕೆಲಸವನ್ನು ಸಮರ್ಥವಾಗಿ ಮಾಡಲು ಅನಿಯಮಿತ ಡೇಟಾವನ್ನು ಯಾವ ಕ್ಷಣದಲ್ಲೂ ನೀಡಲು ಸಿದ್ಧವಾಗಿರುತ್ತದೆ.

ನೀವೇನಾದ್ರೂ ಈಗಾಗಲೇ ಏರ್​ಟೆಲ್​ನ ಗ್ರಾಹಕರಾಗಿದ್ದರೆ, ನಿಮ್ಮ ಸಿಮ್​ಗೆ ಈಗಾಗಲೇ 5ಜಿ ಸೇವೆಯನ್ನು ಚಾಲನೆಗೊಳಿಸಲಾಗಿದೆ. ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ 5ಜಿಗೆ ಬದಲಾವಣೆ ಹೊಂದಿರಿ ಹಾಗೂ ಭಾರತದಾದ್ಯಂತದ 500 ನಗರಗಳಲ್ಲಿ ಮಿಂಚಿನವೇಗದ 5ಜಿ ಅಂತರ್ಜಾಲ ಸೇವೆಯನ್ನು ಅನುಭವಿಸಿ. ನೀವು ಚಲಿಸುತ್ತಿರುವಾಗಲೂ ಸಹ ಒಂದು ತಡೆರಹಿತ ಸೇವೆಗಳನ್ನು ಪಡೆದುಕೊಳ್ಳಬಹುದು.

ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 1:46 pm, Tue, 4 April 23

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?