ಔಷಧಮುಕ್ತ IVF: ಗರ್ಭಧಾರಣೆಯ ಸವಾಲು ಎದುರಿಸುತ್ತಿರುವ ಮಹಿಳೆಯರಿಗೆ ಹೊಸ ಭರವಸೆಯ ಬೆಳಕು

CAPA IVM ಅಥವಾ ಔಷಧಮುಕ್ತ IVF ಫಲವಂತಿಕೆ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಹೆಚ್ಚು ಅನುಕೂಲಕರ, ಕಡಿಮೆ ಒತ್ತಡದ, ವೆಚ್ಚ ಉಳಿಸುವ ಮತ್ತು ಸಾಮರಸ್ಯದ ಚಿಕಿತ್ಸೆಯ ಅನುಭವ ನೀಡುತ್ತದೆ.

ಔಷಧಮುಕ್ತ IVF: ಗರ್ಭಧಾರಣೆಯ ಸವಾಲು ಎದುರಿಸುತ್ತಿರುವ ಮಹಿಳೆಯರಿಗೆ ಹೊಸ ಭರವಸೆಯ ಬೆಳಕು
Oasis Fertility Bangalore
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 31, 2023 | 12:02 PM

CAPA IVM ಅಥವಾ ಔಷಧಮುಕ್ತ IVF ಫಲವಂತಿಕೆ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಹೆಚ್ಚು ಅನುಕೂಲಕರ, ಕಡಿಮೆ ಒತ್ತಡದ, ವೆಚ್ಚ ಉಳಿಸುವ ಮತ್ತು ಸಾಮರಸ್ಯದ ಚಿಕಿತ್ಸೆಯ ಅನುಭವ ನೀಡುತ್ತದೆ. ಭಾರತದಲ್ಲಿ ಬಹಳಷ್ಟು ಮಹಿಳೆಯರು ಹಲವಾರು ಜೀವನಶೈಲಿ ಅಂಶಗಳು, ವೈದ್ಯಕೀಯ ಕಾರಣಗಳು, ತಡವಾದ ಪಾಲಕತ್ವ, ಪರಿಸರದ ಅಂಶಗಳು, ಬೊಜ್ಜು, ಮಧುಮೇಹ ಇತ್ಯಾದಿ ಕಾರಣಗಳಿಂದ ಬಂಜೆತನದ ವಿರುದ್ಧ ಹೋರಾಡುತ್ತಿದ್ದಾರೆ. ಕಳೆದ 45 ವರ್ಷಗಳಲ್ಲಿ IVF ಅತ್ಯಂತ ಶ್ರೇಷ್ಠ ವೈದ್ಯಕೀಯ ಕ್ರಾಂತಿಗಳಲ್ಲಿ ಒಂದಾಗಿದ್ದು ವಿಶ್ವದಾದ್ಯಂತ ಲಕ್ಷಾಂತರ ಮಕ್ಕಳ ಜನನಕ್ಕೆ ಕಾರಣವಾಗಿದೆ. ದುರಾದೃಷ್ಟವಶಾತ್, ಹಲವಾರು ಫಲವಂತಿಕೆಯ ಸವಾಲನ್ನೆದುರಿಸುವ ಮಹಿಳೆಯರು ಐವಿಎಫ್​ಗೆ ಸಂಬಂಧಿಸಿರುವ ದೈಹಿಕ, ಭಾವನಾತ್ಮಕ ಮತ್ತು ಹಣಕಾಸಿನ ಸಂಕಷ್ಟದಿಂದ ಅದರಿಂದ ವಿಮುಖರಾಗುತ್ತಾರೆ. CAPA IVM (Capacitation In vitro maturation/ Bi-phasic IVM) ಸುಧಾರಿತ ಫರ್ಟಿಲಿಟಿ ಚಿಕಿತ್ಸೆಯಾಗಿದ್ದು ಅದರಲ್ಲಿ ಕೆಲ ಇಂಜೆಕ್ಷನ್ ಗಳನ್ನು ಒಳಗೊಂಡಿದ್ದು ಓವರಿಯನ್ ಹೈಪರ್ ಸ್ಟಿಮುಲೇಷನ್ ಸಿಂಡ್ರೋಮ್ ನಂತಹ ಅಡ್ಡ ಪರಿಣಾಮಗಳಿಲ್ಲ ಮತ್ತು ಕಡಿಮೆ ವೆಚ್ಚದ್ದಾಗಿದೆ.

Oasis Fertility ಮಹಿಳೆಯರಿಗೆ ತಮ್ಮ ತಾಯ್ತನದ ಕನಸನ್ನು ನನಸಾಗಿಸಿಕೊಳ್ಳಲು ಹೆಚ್ಚು ಸುರಕ್ಷಿತ ಮತ್ತು ತಡೆರಹಿತ ವಿಧಾನದಲ್ಲಿ ಈ ವಿಶಿಷ್ಟ ತಂತ್ರವನ್ನು ಒದಗಿಸುತ್ತಿರುವ ವಿಶ್ವದ ಕೆಲವೇ ಕೇಂದ್ರಗಳಲ್ಲಿ ಒಂದಾಗಿದೆ. CAPA IVM ಅಲ್ಪ ಕಾಲದ ಪ್ರೊಟೊಕಾಲ್ ಹೊಂದಿದ್ದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಮತ್ತು PCOS ಒಳಗೊಂಡ ಮಹಿಳೆಯರಿಗೆ, ಹಾರ್ಮೋನು ಇಂಜೆಕ್ಷನ್​​ಗಳ ವಿರುದ್ಧ ಸಲಹೆ ನೀಡಲಾದವರು ಅಥವಾ ರೆಸಿಸ್ಟೆಂಟ್ ಓವರಿ ಸಿಂಡ್ರೋಮ್ ಉಳ್ಳ, ಥ್ರೊಂಬೊಫಿಲಿಯಾ ಒಳಗೊಂಡ, ಅಂಡಾಣು ಬೆಳವಣಿಗೆ ಸಮಸ್ಯೆಯುಳ್ಳವರು ಮತ್ತು ಹಾರ್ಮೋನು-ಸೂಕ್ಷ್ಮದ ಕ್ಯಾನ್ಸರ್ ಒಳಗೊಂಡವರಿಗೆ ಶಿಫಾರಸು ಮಾಡಲಾಗುತ್ತದೆ.

ಜ್ಞಾನ ಮತ್ತು ತಂತ್ರಜ್ಞಾನ ಪ್ರೇರಿತ ಸಂಸ್ಥೆಯಾಗಿ , Oasis Fertility ಸತತ ಸಂಶೋಧನೆಯ ಅನ್ವೇಷಣೆಗಳು, ಜಾಗತಿಕ ಪರಿಣಿತರ ಅಡಿಯಲ್ಲಿ ವಿಶೇಷ ತರಬೇತಿ ಮತ್ತು ಸೇವಾ ಶ್ರೇಷ್ಠತೆಗೆ ಬದ್ಧತೆಯ ಮೂಲಕ ಈ ಹೊಸ ತಂತ್ರಜ್ಞಾನವನ್ನು ಪಡೆದುಕೊಂಡಿದೆ.

IVM – ಮಹಿಳಾ-ಸ್ನೇಹಿ ಸುಧಾರಿತ ಫಲವಂತಿಕೆ ಚಿಕಿತ್ಸೆ

IVM (In vitro maturation) ಮಹಿಳೆಯರಿಗೆ ವಿಶೇಷವಾಗಿ ಹಾರ್ಮೋನುಗಳ ಇಂಜೆಕ್ಷನ್​​ಗಳು ಅಥವಾ ದುರ್ಬಲ ಪ್ರತಿಕ್ರಿಯೆ ನೀಡುವ ರೋಗಿಗಳಿಗೆ ನಡೆಸಲಾಗುತ್ತದೆ. ಈ ವಿಧಾನದಲ್ಲಿ IVF ಪ್ರಕ್ರಿಯೆಯಲ್ಲಿ ಬೆಳವಣಿಗೆ ಹೊಂದಿದ ಅಂಡಾಣುಗಳನ್ನು ಸಂಗ್ರಹಿಸಲು ಹೆಚ್ಚು ಇಂಜೆಕ್ಷನ್​ಗಳನ್ನು ಬಳಸಲಾಗುವ IVF ವಿಧಾನವಲ್ಲದೆ ಬೆಳವಣಿಗೆ ಹೊಂದದ ಅಂಡಾಣುಗಳನ್ನು ಕೆಲ ಇಂಜೆಕ್ಷನ್ ಮೂಲಕ ಪುನಃ ಪಡೆದುಕೊಳ್ಳಲಾಗುತ್ತದೆ. ಇದು ಹೆಚ್ಚು ಸುರಕ್ಷಿತ ಪ್ರಕ್ರಿಯೆಯಾಗಿದೆ ಮತ್ತು Oasis Fertility, IVM ಪರಿಣಿತಿ ಹಾಗೂ ಅನುಭವ ಹೊಂದಿರುವ ದೇಶದ ಕೆಲವೇ ಕೇಂದ್ರಗಳಲ್ಲಿ ಒಂದಾಗಿದೆ.

PGT & ERA – ಪುನರಾವರ್ತಿತ ಗರ್ಭಪಾತಗಳಿಗೆ ಒಳಗಾಗುವ ಮಹಿಳೆಯರಿಗೆ ಅತ್ಯಂತ ಸೂಕ್ತ

ಗರ್ಭಪಾತ ದೈಹಿಕ ಮತ್ತು ಮಾನಸಿಕವಾಗಿ ಅತ್ಯಂತ ನೋವಿನದಾಗಿದೆ. ಕೆಲ ಮಹಿಳೆಯರಿಗೆ ಹಲವಾರು ಬಾರಿ ಗರ್ಭಪಾತಗಳಾಗಿರುತ್ತವೆ ಮತ್ತು ಗರ್ಭಪಾತದ ಕಾರಣವನ್ನು ಪತ್ತೆ ಮಾಡಲಾಗದೇ ಇರುವುದರಿಂದ ತಾಯಿಯಾಗುವ ಭರವಸೆ ಕಳೆದುಕೊಳ್ಳುತ್ತಾರೆ. ಭ್ರೂಣದಲ್ಲಿ ಅನುವಂಶಿಕ ಅಸಹಜತೆಗಳು ಗರ್ಭಪಾತಕ್ಕೆ ಕಾರಣವಾಗಿರಬಹುದು. ಹಿಂದೆ ಹಲವು ಗರ್ಭಪಾತಗಳನ್ನು ಎದುರಿಸಿದ ಮಹಿಳೆಯರು ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸಬಹುದು ಮತ್ತು IVF ತೆಗೆದುಕೊಳ್ಳಬಹುದು, ಅದರಲ್ಲಿ ಈ ಪ್ರಕ್ರಿಯೆಯಲ್ಲಿ ರೂಪುಗೊಳ್ಳುವ ಭ್ರೂಣಗಳನ್ನು PGT (Pre-implantation Genetic Testing) ಮೂಲಕ ಯಾವುದೇ ಅನುವಂಶಿಕ ಅಸಹಜತೆಗೆ ಪರೀಕ್ಷಿಸಬಹುದು, ಇದು ಅತ್ಯಂತ ಸುಧಾರಿತ ತಂತ್ರವಾಗಿದ್ದು ಭ್ರೂಣದಲ್ಲಿ ಯಾವುದೇ ಅನುವಂಶಿಕ ಅಸಹಜತೆಗಳನ್ನು ಭವಿಷ್ಯದ ಬೆಳವಣಿಗೆಗೆ ಮಹಿಳೆಯ ಗರ್ಭಕೋಶಕ್ಕೆ ಭ್ರೂಣ ಇರಿಸುವ ಮುನ್ನ ಪರೀಕ್ಷಿಸಲು ಬಳಸಲಾಗುತ್ತದೆ. ಅಲ್ಲದೆ ಅನುವಂಶಿಕ ಅಸಹಜತೆಗಳ ಯಾವುದೇ ಕೌಟುಂಬಿಕ ಇತಿಹಾಸವುಳ್ಳ ಮಹಿಳೆಯರು PGT ಯನ್ನು ಬಳಸಬಹುದು ಮತ್ತು ಅವರ ಮಗು ಅನುವಂಶಿಕ ಅಸಹಜತೆಗಳನ್ನು ಹೊಂದುವ ರಿಸ್ಕ್ ನಿವಾರಿಸಬಹುದು.

PGT ಹೇಗೆ ನೆರವಾಗುತ್ತದೆ?

  • ಭ್ರೂಣದಲ್ಲಿ ಅನುವಂಶಿಕ ಅಸಹಜತೆಗಳನ್ನು ಪತ್ತೆ ಮಾಡುತ್ತದೆ
  • ಉತ್ತಮ ಭ್ರೂಣಗಳ ಆಯ್ಕೆಯಲ್ಲಿ ನೆರವಾಗುತ್ತದೆ
  • ಪೋಷಕರಿಂದ ಮಗುವಿಗೆ ಅನುವಂಶಿಕ ಅಸಹಜತೆಗಳ ವರ್ಗಾವಣೆ ತಡೆಯಲು ನೆರವಾಗುತ್ತದೆ
  • ಗರ್ಭಧಾರಣೆಯ ಸಮಯ ಮತ್ತು ಗರ್ಭಪಾತದ ತೊಂದರೆ ಕಡಿಮೆ ಮಾಡುತ್ತದೆ

ERA (ENDOMETRIAL RECEPTIVITY ARRAY)

ERA ಮತ್ತೊಂದು ಪ್ರಮುಖ ತಂತ್ರವಾಗಿದ್ದು ಅದು ಮಹಿಳೆಯರ ಗರ್ಭಕೋಶಕ್ಕೆ IVF ಪ್ರಕ್ರಿಯೆಯಲ್ಲಿ ಭ್ರೂಣವನ್ನು ಸೇರಿಸಲು ಅತ್ಯುತ್ತಮ ಸಮಯ ಪತ್ತೆ ಮಾಡಲು ನೆರವಾಗುತ್ತದೆ. IVF ನ ಯಶಸ್ಸಿನ ಪ್ರಮಾಣವನ್ನು ಯುಟೆರಿನ್ ಎಂಡೋಮೆಟ್ರಿಯಂನ ವಂಶವಾಹಿಗಳ ERA ಪರೀಕ್ಷೆಗಳ ಮೂಲಕ ಗರ್ಭ ಸೇರ್ಪಡೆಯ ಸಮಯ ಊಹಿಸುವ(ಭ್ರೂಣ ಸ್ವೀಕರಿಸಲು ಗರ್ಭಕೋಶ ಸನ್ನದ್ಧವಾಗಿರುವ ಸಮಯ) ಮೂಲಕ ಸುಧಾರಿಸಬಹುದು.

ಫಲವಂತಿಕೆಯ ಸಂರಕ್ಷಣೆ: ಕ್ಯಾನ್ಸರ್ ಉಳ್ಳ ಮಹಿಳೆಯರು ತಾಯಿಯರಾಗುವ ಭರವಸೆ

ದೋಷಪೂರಿತ ಜೀವನಶೈಲಿಗಳು, ಜಂಕ್ ಫುಡ್ ಸೇವನೆ, ವ್ಯಾಯಾಮದ ಕೊರತೆ ಮತ್ತಿತರೆ ಹಲವಾರು ಅಂಶಗಳಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕ್ಯಾನ್ಸರ್ ಮತ್ತು ಕಿಮೋಥೆರಪಿ ಹಾಗೂ ರೇಡಿಯೇಷನ್ ರೀತಿಯ ಚಿಕಿತ್ಸೆಗಳು ಮಹಿಳೆಯರ ಫಲವಂತಿಕೆಯ ಮೇಲೆ ಪರಿಣಾಮ ಬೀರಬಲ್ಲವು. ಇಲ್ಲಿ ಫಲವಂತಿಕೆಯ ಸಂರಕ್ಷಣೆಯು ಕ್ಯಾನ್ಸರ್ ಬಾಧಿತ ಮಹಿಳೆಯರಿಗೆ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ಮುನ್ನ ಅವರ ಫಲವಂತಿಕೆಯನ್ನು ಸಂರಕ್ಷಿಸಲು ನೆರವಾಗುತ್ತದೆ ಮತ್ತು ಜೀವನದಲ್ಲಿ ಮುಂದೊಮ್ಮೆ ತಾಯಿಯಾಗುವ ಅವಕಾಶ ನೀಡುತ್ತದೆ. ಮಹಿಳೆಯರು ಅಂಡಾಣುಗಳು/ಭ್ರೂಣಗಳು/ ಗರ್ಭಕೋಶದ ಜೀವಕೋಶವನ್ನು ವಿಟ್ರಿಫಿಕೇಷನ್ ತಂತ್ರದ ಮೂಲಕ ಸಂರಕ್ಷಿಸಬಹುದು ಇದರಿಂದ ಅವರಿಗೆ ದಾನಿಗಳ ಅಂಡಾಣುಗಳು ಅಥವಾ ಬಾಡಿಗೆ ತಾಯಿಯಿಂದ ಬದಲಿಗೆ ಸ್ವಂತ ಮಗು ಪಡೆಯಲು ಸಾಧ್ಯ.

ಸೋಷಿಯಲ್ ಫ್ರೀಜಿಂಗ್: ತಾಯ್ತನ ತಡ ಮಾಡಲು ಸುರಕ್ಷಿತ ಸಾಧನ (ಅಗತ್ಯವಿದ್ದಲ್ಲಿ)

ಶಿಕ್ಷಣ ಮತ್ತು ವೃತ್ತಿಗೆ ಗಮನ ನೀಡುವ ಬಹಳಷ್ಟು ಮಹಿಳೆಯರು ಅವರು ತಾಯಿಯಾಗುವುದನ್ನು ಮುಂದೂಡುತ್ತಾರೆ. ಆದರೆ ಯಾರೂ ಮಹಿಳೆಯರ ಜೈವಿಕ ಗಡಿಯಾರ ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಫಲವಂತಿಕೆ ವಯಸ್ಸಾದಂತೆ ಕುಸಿಯುತ್ತದೆ. ಮಹಿಳೆಯರು ನಿಶ್ಚಿತ ಸಂಖ್ಯೆಯ ಅಂಡಾಣುಗಳೊಂದಿಗೆ ಜನಿಸಿರುತ್ತಾರೆ ಮತ್ತು ಪ್ರತಿ ಋತುಚಕ್ರದ ನಂತರ ಅದು ಕುಸಿಯುತ್ತಿರುತ್ತದೆ. ಮಹಿಳೆಯರು 30ರ ವಯಸ್ಸು ತಲುಪುತ್ತಿದ್ದಂತೆ ಗರ್ಭಧಾರಣೆ ಮಾಡುವ ಸಾಮರ್ಥ್ಯ ಕುಸಿಯುತ್ತದೆ. ತಮ್ಮ ಬದ್ಧತೆಗಳಿಂದಾಗಿ ತಾಯಿಯಾಗಲು ತಡ ಮಾಡಲು ಬಯಸುವ ಮಹಿಳೆಯರು ಅವರ ಅಂಡಾಣುಗಳು/ಗರ್ಭಕೋಶದ ಜೀವಕೋಶವನ್ನು ಶೈತ್ಯೀಕರಣದಲ್ಲಿ ಸಂಗ್ರಹಿಸಬಹುದು ಇದರಿಂದ ಅವರಿಗೆ ಅನುಕೂಲವಾದ ಸಮಯದಲ್ಲಿ ತಾಯ್ತನ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ANDROLIFE ಕ್ಲಿನಿಕ್​ಗಳು- ಪುರುಷರಿಗೂ ಸಮಾನ ಸ್ಥಳಾವಕಾಶ

AndroLife ಕ್ಲಿನಿಕ್ ಗಳು ವಿಶೇಷವಾದ ಪುರುಷ ಫಲವಂತಿಕೆಯ ಕ್ಲಿನಿಕ್ ಗಳಾಗಿದ್ದು ಅವು ಪುರುಷರ ಫಲವಂತಿಕೆ ಚಿಕಿತ್ಸೆಗೆ ಸ್ಥಳ, ಖಾಸಗಿತನ ಮತ್ತು ವ್ಯಾಪ್ತಿ ನೀಡುತ್ತವೆ. ಪುರುಷರಿಂದ ಶೇ.30 to 40 ರಷ್ಟು ಬಂಜೆತನ ಉಂಟಾದರೂ ಬಹಳಷ್ಟು ಪುರುಷರು ಫಲವಂತಿಕೆಯ ಮೌಲ್ಯಮಾಪನವನ್ನು ನಿರಾಕರಿಸುತ್ತಾರೆ. AndroLife ವಿಶಿಷ್ಟ ಉಪಕ್ರಮವಾಗಿದ್ದು ಪುರುಷರಿಗೆ ಮುಕ್ತವಾಗಿ ಆಂಡ್ರೋಲಜಿಸ್ಟರೊಂದಿಗೆ ಫಲವಂತಿಕೆಯ ಸಮಸ್ಯೆಗಳನ್ನು ಚರ್ಚಿಸಲು ಮತ್ತು ತಂದೆತನ ನೀಡುವ ಸುಧಾರಿತ ಪುರುಷ ಫಲವಂತಿಕೆ ಚಿಕಿತ್ಸೆಗಳನ್ನು ಪಡೆದುಕೊಳ್ಳಲು ನೆರವಾಗುತ್ತವೆ. ಫರ್ಟಿಲಿಟಿ ಸಲಹೆ ಮತ್ತು ಚಿಕಿತ್ಸೆ ಮುಂದೂಡುವುದು ಗರ್ಭ ಹೊಂದುವುದರಲ್ಲಿ ಋಣಾತ್ಮಕ ಪರಿಣಾಮಗಳನ್ನು ಬೀರಬಲ್ಲದು.

Microfluidics, MACS (Magnetic Activated Cell Sorting), TESA (Testicular Sperm Aspiration), ಮತ್ತು Micro-TESE (Microsurgical Testicular Sperm Extraction) ಸುಧಾರಿತ ಪ್ರಕ್ರಿಯೆಗಳಾಗಿದ್ದು ವೀರ್ಯ ಸಂಗ್ರಹ ಮತ್ತು ಉಳಿವಿಗೆ ನೆರವಾಗುತ್ತದೆ. Oasis Fertility ಗೆ Micro-TESE ಪರಿಣಿತಿ ಇದ್ದು ಅದರಲ್ಲಿ ಶೂನ್ಯ ವೀರ್ಯಾಣುಗಳ ಪುರುಷರಿಗೆ ಬಳಸಲಾಗುತ್ತದೆ. ಈ ಚಿಕಿತ್ಸೆಯನ್ನು ದೇಶದ ಕೆಲವೇ ಕೇಂದ್ರಗಳಲ್ಲಿ ಒದಗಿಸಲಾಗುತ್ತಿದೆ.

ಎಲೆಕ್ಟ್ರಾನಿಕ್ ವಿಟ್ನೆಸಿಂಗ್ ಸಿಸ್ಟಂ- ಜೈವಿಕ ಮಕ್ಕಳ ಅಪ್ಪಿಕೊಳ್ಳುವ ಆನಂದ

ಯಾವುದೇ IVF ನಮೂನೆಯ ಹೊಂದಾಣಿಕೆ ಇಲ್ಲದಿರುವುದು ಪಾಲಕರ ಸಂತೋಷ ಹಾಳು ಮಾಡಬಲ್ಲದು. ಇದನ್ನು ಅರ್ಥ ಮಾಡಿಕೊಂಡು Oasis Fertility ಸುಧಾರಿತ ಟ್ರಾಕ್ ಅಂಡ್ ಟ್ರೇಸ್ ಸಿಸ್ಟಂ ಬಳಸುತ್ತಿದ್ದು ಅದು IVF ಪ್ರಕ್ರಿಯೆಯ ಪ್ರತಿ ಹಂತವನ್ನೂ ಗುರುತಿಸುತ್ತದೆ, ಮೇಲ್ವಿಚಾರಣೆ ವಹಿಸುತ್ತದೆ ಮತ್ತು ದಾಖಲಿಸುತ್ತದೆ. ಈ ತಂತ್ರಜ್ಞಾನದ ಮೂಲಕ ದೋಷಗಳು ಮತ್ತು ಹೊಂದಾಣಿಕೆ ಆಗದೇ ಇರುವ ತೊಂದರೆಗಳನ್ನು ತಡೆಯಬಹುದಾಗಿದ್ದು ಇದರಿಂದ ಮಹಿಳೆ/ದಂಪತಿಗಳು ಅವರ ಜೈವಿಕ ಮಗುವನ್ನು ಪಡೆಯಲು ಸನ್ನದ್ಧವಾಗಿಸುತ್ತದೆ.

ARTis – ಆರೋಗ್ಯದ ದಾಖಲೆಗಳ ಅನುಕೂಲಕರ ಮತ್ತು ಸುರಕ್ಷಿತ ನಿರ್ವಹಣೆ

ARTis (Assisted Reproductive Technology Information System) ಓಯಸಿಸ್ ನ ಕ್ಲೌಡ್ ಆಧರಿತ ಸಾಫ್ಟ್ ವೇರ್ ಆಗಿದ್ದು ಅದು ರೋಗಿಯ ದಾಖಲೆಗಳನ್ನು ಕಾಪಾಡುತ್ತದೆ ಮತ್ತು ಎಲ್ಲಿಯೇ ಆಗಲಿ ಯಾವುದೇ ಸಮಯದಲ್ಲಿ ಸುಲಭ ಲಭ್ಯತೆ ನೀಡುತ್ತದೆ. ಪರೀಕ್ಷೆಗಳು, ಸ್ಕ್ಯಾನ್, ಪ್ರಕ್ರಿಯೆಗಳು, ವರದಿಗಳು ಇತ್ಯಾದಿ ಎಲ್ಲ ಚಿಕಿತ್ಸಾ ಪ್ರಕ್ರಿಯೆಗಳನ್ನು ARTis ನಲ್ಲಿ ದಾಖಲಿಸಲಾಗುತ್ತಿದ್ದು ಅದು ರೋಗಿಗೆ ಚಿಕಿತ್ಸೆಯ ಪ್ರತಿಯೊಂದು ಹಂತದ ಕುರಿತೂ ಸ್ಪಷ್ಟ ಒಳನೋಟಗಳನ್ನು ನೀಡುವ ಮೂಲಕ ಪಾರದರ್ಶಕತೆ ಕಾಪಾಡುತ್ತದೆ.

OASIS FERTILITY ಯಲ್ಲಿ ಸಮಗ್ರ ಮತ್ತು ವೈಯಕ್ತಿಕಗೊಳಿಸಿದ ಫಲವಂತಿಕೆ ಚಿಕಿತ್ಸೆಗಳು

ಪ್ರತಿ ಮಹಿಳೆಗೂ ಚಿಕಿತ್ಸೆಯ ವಿಧಾನ ವ್ಯತ್ಯಾಸಗೊಳ್ಳುತ್ತದೆ. ಫರ್ಟಿಲಿಟಿ ತಜ್ಞರು ಮಹಿಳೆಯ ವಯಸ್ಸು, ಆರೋಗ್ಯ ಸ್ಥಾನಮಾನ, ವೈದ್ಯಕೀಯ ಇತಿಹಾಸ, ಜೀವನಶೈಲಿ, ರಿಸ್ಕ್ ಅಂಶಗಳು ಇತ್ಯಾದಿ ಆಧರಿಸಿ ಚಿಕಿತ್ಸೆಯ ವಿಧಾನ ನಿರ್ಧರಿಸುತ್ತಾರೆ. Oasis Fertility ಮಹಿಳೆಯರಿಗೆ ಪಥ್ಯದ ಬದಲಾವಣೆಗಳು, ಜೀವನಶೈಲಿ ಬದಲಾವಣೆಗಳೊಂದಿಗೆ ತಾಯ್ತನ ಹೊಂದಲು ನೆರವಾಗುತ್ತದೆ.

ಅರಿವನ್ನು ಮೂಡಿಸಲು ಓಯಸಿಸ್ ಉಪಕ್ರಮಗಳು

Oasis Fertility ಬಂಜೆತನ ಕುರಿತು ಅರಿವನ್ನು ಮೂಡಿಸುತ್ತದೆ ಮತ್ತು ಟೈಯರ್ 2 ಮತ್ತು ಟೈಯರ್ 3 ನಗರಗಳಲ್ಲಿ ಫರ್ಟಿಲಿಟಿ ಶಿಬಿರಗಳ ಮೂಲಕ ಸುಧಾರಿತ ಫರ್ಟಿಲಿಟಿ ಚಿಕಿತ್ಸೆಗಳನ್ನು ನೀಡುತ್ತದೆ. ಅಲ್ಲದೆ Oasis Fertility ತಜ್ಞರು ದಂಪತಿಗಳಿಗೆ webinars, talk shows, Facebook Live ಇತ್ಯಾದಿಗಳ ಮೂಲಕ ದಂಪತಿಗಳಿಗೆ ಮಾತನಾಡಲು ಮತ್ತು ಫರ್ಟಿಲಿಟಿ ಚಿಕಿತ್ಸೆಗಳ ಕುರಿತು ಚರ್ಚಿಸಲು ಉತ್ತೇಜಿಸುತ್ತದೆ. Oasis Fertility ಪ್ರಮುಖ ಉದ್ದೇಶ ಟೈಯರ್ 2 ಮತ್ತು ಟೈಯರ್ 3 ನಗರಗಳಿಗೆ ವಿಸ್ತರಿಸುವುದಾಗಿದ್ದು ಇದರ ಮೂಲಕ ಫರ್ಟಿಲಿಟಿ ಚಿಕಿತ್ಸೆಗಳು ಈ ಪ್ರದೇಶಗಳ ಜನರಿಗೆ ಲಭ್ಯ ಮತ್ತು ಕೈಗೆಟುಕುವಂತೆ ಮಾಡುವುದಾಗಿದೆ.

IVF ಉದ್ಯಮದಲ್ಲಿ ಕಳೆದ 45 ವರ್ಷಗಳಿಂದ ಸುರಕ್ಷತೆ ಮತ್ತು ದಂಪತಿಗಳಿಗೆ ಸುಧಾರಿತ ಫಲಿತಾಂಶಗಳಿಂದ ಮಹತ್ತರ ಮೈಲಿಗಲ್ಲುಗಳನ್ನು ತಲುಪಿದ್ದೇವೆ. ನೈತಿಕತೆ ಮತ್ತು ಪಾರದರ್ಶಕತೆ ನಮ್ಮ ಪ್ರಮುಖ ತತ್ವಗಳಾಗಿವೆ ಮತ್ತು ನಾವು IVF ಪ್ರಯಾಣದಲ್ಲಿ ರೋಗಿಯ ಅನುಭವವನ್ನು ಹಲವಾರು ಸುಧಾರಿತ ತಂತ್ರಜ್ಞಾನಗಳ ಮೂಲಕ ಸುಧಾರಿಸಲು ಗಮನ ನೀಡುತ್ತೇವೆ. ದಂಪತಿಗಳಿಗೆ ಅವರ ಜೈವಿಕ ಮಗುವನ್ನು ಅಪ್ಪಿಕೊಳ್ಳುವ ಆನಂದ ನೀಡುವುದು ನಮ್ಮ ಬಯಕೆಯಾಗಿದೆ. ಜೀವನಶೈಲಿ ಬದಲಾವಣೆಗಳು ಮಹಿಳೆಯರಲ್ಲಿ ಬಂಜೆತನ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಕಳಂಕವನ್ನು ತೊರೆಯುವುದು ಮಹಿಳೆಯರಿಗೆ ಅತ್ಯಂತ ಮುಖ್ಯವಾಗಿದೆ ಏಕೆಂದರೆ ಸರಿಯಾದ ಸಮಯದಲ್ಲಿ ಫರ್ಟಿಲಿಟಿಯ ಚಿಕಿತ್ಸೆಯಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು Dr. Devi R, Clinical Head & Fertility Specialist, Oasis Fertility, Banashankari ತಿಳಿಸಿದ್ದಾರೆ.

ಭಾರತದಲ್ಲಿ ಬೊಜ್ಜು, ಮಧುಮೇಹ, ಧೂಮಪಾನ, ಮದ್ಯ ಸೇವನೆ, ತಡವಾಗಿ ಪಾಲಕತ್ ಹೊಂದುವುದು ಇತ್ಯಾದಿ ಕಾರಣಗಳಿಂದ ಪುರುಷರ ಬಂಜೆತನ ಹೆಚ್ಚಾಗುತ್ತಿದೆ. ಮೈಕ್ರೊಫ್ಲೂಯಿಡಿಕ್ಸ್ ಸುಧಾರಿತ ತಂತ್ರವಾಗಿದ್ದು ಅದು ಐವಿಎಫ್ ಪ್ರಕ್ರಿಯೆಗೆ ವೀರ್ಯ ಸಂಗ್ರಹಕ್ಕೆ ನೆರವಾಗುತ್ತದೆ ಇದರಿಂದ ಯಶಸ್ಸಿನ ಪ್ರಮಾಣ ಹೆಚ್ಚಾಗುತ್ತದೆ. ಅತ್ಯಂತ ಕಡಿಮೆ ವೀರ್ಯಾಣು ಹೊಂದಿರುವ ಪುರುಷರು ಕೂಡಾ MicroTESE ರೀತಿಯ ಸುಧಾರಿತ ವೀರ್ಯ ಸಂಗ್ರಹ ತಂತ್ರಗಳಿಂದ ತಂದೆಯರಾಗಬಹುದು. ಇಲ್ಲಿ ಮುಖ್ಯವಾದುದು ಏನೆಂದರೆ ಪುರುಷರು ತಮ್ಮ ಹಿಂಜರಿಕೆ ಬಿಟ್ಟು ಏಳಬೇಕು ಮತ್ತು ಬಂಜೆತನದ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚೆ ಮಾಡಬೇಕು. ಮಹಿಳೆಯರಲ್ಲಿ ಅಥವಾ ಪುರುಷರಲ್ಲಿ ಜೈವಿಕ ಗಡಿಯಾರವನ್ನು ನಾವು ನಿಲ್ಲಿಸಲು ಸಾಧ್ಯವಿಲ್ಲ; ಆದ್ದರಿಂದ ಸರಿಯಾದ ಸಮಯದಲ್ಲಿ ಸರಿಯಾದ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯ” ಎಂದಿದ್ದಾರೆ Dr. Krishna Chaitanya, Scientific Head & Clinical Embryologist, Oasis Fertility.

Dr Devi R Clinical Head & Fertility Specialist MBBS, MS (OBG) Fellowship in Reproductive Medicine Oasis Fertility Bengaluru For appointment call: 9015 245 245 WhatsApp: 733 732 8877

Published On - 5:24 pm, Wed, 29 March 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ