Tata A.I.G Insurance: ಎಲೆಕ್ಟ್ರಿಕ್‌ ಕಾರುಗಳ ವಿಮೆ ದುಬಾರಿಯಾಗಲು ಕಾರಣ ಏನು? ಟಾಟಾ ಎ.ಐ.ಜಿ. ವಿಮೆಯಲ್ಲಿ ರಿಯಾಯಿತಿ ಎಷ್ಟು?

ಟಾಟಾ ಎ.ಐ.ಜಿ.ಯಂತಹ ಪ್ರತಿಷ್ಠಿತ ವಿಮಾ ಕಂಪನಿಯು ಸತತ 5 ಪರಿಹಾರ ಬೇಡಿಕೆ-ರಹಿತ ವರ್ಷಗಳಿಗೆ ನಿಮ್ಮ ಕಾರು ವಿಮಾ ಪ್ರೀಮಿಯಮ್‌ಗಳ ಮೇಲೆ ಶೇ 50ರವರೆಗಿನ ಡಿಸ್ಕೌಂಟ್‌ನ ಕೊಡುಗೆ ನೀಡುತ್ತದೆ.

Tata A.I.G Insurance: ಎಲೆಕ್ಟ್ರಿಕ್‌ ಕಾರುಗಳ ವಿಮೆ ದುಬಾರಿಯಾಗಲು ಕಾರಣ ಏನು? ಟಾಟಾ ಎ.ಐ.ಜಿ. ವಿಮೆಯಲ್ಲಿ ರಿಯಾಯಿತಿ ಎಷ್ಟು?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jul 27, 2023 | 11:29 AM

ದೇಶಾದ್ಯಂತ ಏರುತ್ತಿರುವ ಇಂಧನದ ಬೆಲೆಗಳು ಹಾಗೂ ಪರಿಸರ ಮಾಲಿನ್ಯದ ಬಗೆಗಿನ ತಿಳುವಳಿಕೆಗಳೊಂದಿಗೆ, ಎಲೆಕ್ಟ್ರಿಕ್‌ ಕಾರುಗಳು ನಮ್ಮ ವಾಹನ ಚಾಲನೆಯ ಅವಶ್ಯಕತೆಗಳಿಗೆ ಹೆಚ್ಚು ಪ್ರಾಯೋಗಿಕ ಹಾಗೂ ದೀರ್ಘಾವಧಿಯ ಪರಿಹಾರಗಳಾಗಿ ಹೊರಹೊಮ್ಮಿವೆ. ಈ ಶೂನ್ಯ-ಮಾಲಿನ್ಯ ಬಿಡುಗಡೆಯ ವಾಹನಗಳಿಗೆ ಇಂಧನದ ಅವಶ್ಯಕತೆ ಇರೋದಿಲ್ಲ ಹಾಗೂ ಇವು ಬ್ಯಾಟರಿ-ಚಾಲಿತ ಮತ್ತು ಸುಲಭ ನಿರ್ವಹಣೆಯ ವಾಹನಗಳಾಗಿವೆ. ಆದಾಗ್ಯೂ, ಇಂಧನ-ಚಾಲಿತ ಕಾರುಗಳಂತೆ, ನೀವು ಭಾರತದ ರಸ್ತೆಗಳಲ್ಲಿ ಕಾರು ವಿಮೆಯ ರಕ್ಷಣೆ ಇಲ್ಲದೇ ನಿಮ್ಮ ಎಲೆಕ್ಟ್ರಿಕ್‌ ಕಾರನ್ನು ಓಡಿಸಲು ಸಾಧ್ಯ ಆಗೋದಿಲ್ಲ. ಎಲೆಕ್ಟ್ರಿಕ್‌ ಕಾರುಗಳು ಸಾಮಾನ್ಯವಾಗಿ ದುಬಾರಿಯಾಗಿರುತ್ತವೆ, ಹಾಗೂ ನಿಮ್ಮ ಕಾರು ಅಪಘಾತಕ್ಕೀಡಾದರೆ, ಕಳೆದು ಹೋದರೆ, ಅಥವಾ ಅಂತಹ ಯಾವುದೇ ದುರ್ಘಟನೆಗೆ ಒಳಗಾದರೂ ಸಹ ನಿಮ್ಮ ಕಾರು ವಿಮಾ ಯೋಜನೆಯು ನಿಮಗೆ ಆರ್ಥಿಕ ರಕ್ಷಣೆಯನ್ನು ನೀಡುತ್ತದೆ.

ಎಲೆಕ್ಟ್ರಿಕ್‌ ಕಾರುಗಳು ದುಬಾರಿ ಆಗಿರೋದರಿಂದ, ಅವುಗಳ ವಾಹನ ವಿಮಾ ಯೋಜನೆಯೂ ಸಹ, ಸಾಮಾನ್ಯವಾಗಿ, ಇಂಧನ-ಚಾಲಿತ ಕಾರುಗಳ ವಿಮಾ ಯೋಜನೆಗಿಂತ ಸ್ವಲ್ಪ ದುಬಾರಿಯಾಗಿರುತ್ತೆ. ಎಲೆಕ್ಟ್ರಿಕ್‌ ಕಾರುಗಳ ವಿಮೆ ಏಕೆ ದುಬಾರಿ ಹಾಗೂ ಅದನ್ನು ಹೇಗೆ ಕಡಿತಗೊಳಿಸಿಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಎಲೆಕ್ಟ್ರಿಕ್‌ ಕಾರುಗಳ ವಿಮಾ ಯೋಜನೆ ದುಬಾರಿಯಾಗಲು 3 ಕಾರಣಗಳು

ಇಂಧನ-ಚಾಲಿತ ಕಾರುಗಳ ವಿಮಾ ವೆಚ್ಚಗಳಿಗೆ ಹೋಳಿಸಿದಲ್ಲಿ, ಎಲೆಕ್ಟ್ರಿಕ್‌ ಕಾರುಗಳ ವಿಮಾ ವೆಚ್ಚ ಸ್ವಲ್ಪ ಹೆಚ್ಚಾಗಿರುತ್ತದೆ. ಇದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ:

ಎಲೆಕ್ಟ್ರಿಕ್‌ ಕಾರುಗಳ ದುಬಾರಿ ಬೆಲೆ: ಎಲೆಕ್ಟ್ರಿಕ್‌ ಕಾರುಗಳ ವಿಮಾ ವೆಚ್ಚ ಹೆಚ್ಚಾಗಲು ಮೊಟ್ಟಮೊದಲ ಕಾರಣವೆಂದರೆ, ಇವು ಇಂಧನ-ಚಾಲಿತ ಕಾರುಗಳಿಗಿಂತಲೂ ದುಬಾರಿ ಬೆಲೆಯನ್ನು ಹೊಂದಿರುವುದು. ಶೂನ್ಯ-ಮಾಲಿನ್ಯ ಬಿಡುಗಡೆ ಮತ್ತು ಪ್ರಯಾಣಿಕರಿಗೆ ಗರಿಷ್ಠ ಆರಾಮದಾಯಕ ಸೌಲಭ್ಯಗಳನ್ನು ಒದಗಿಸಲು ಎಲೆಕ್ಟ್ರಿಕ್‌ ಕಾರುಗಳನ್ನು ಉತ್ಕೃಷ್ಟವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಅವುಗಳನ್ನು ದುಬಾರಿಯಾದ ಮತ್ತು ಅತ್ಯಾಧುನಿಕವಾದ ತಂತ್ರಜ್ಞಾನದಿಂದ ವಿನ್ಯಾಸಗೊಳಿಸುವುದೇ ಅವುಗಳ ದುಬಾರಿ ಬೆಲೆಗೆ ಕಾರಣ ಆಗಿದೆ. ಕಾರುಗಳ ದುಬಾರಿ ಬೆಲೆಗಳು ಅವುಗಳ ಘೋಷಿತ ವಿಮಾ ಮೌಲ್ಯ (ಐ.ಡಿ.ವಿ) ಹೆಚ್ಚಲು ಕಾರಣವಾಗುತ್ತವೆ. ಇದರಿಂದ ವಿಮಾ ಯೋಜನೆಗಳ ಪ್ರೀಮಿಯಮ್‌ಗಳೂ ಸಹ ಹೆಚ್ಚಾಗುತ್ತವೆ. ಎಲೆಕ್ಟ್ರಿಕ್‌ ಕಾರುಗಳ ಆರಂಭಿಕ ಮಾರಾಟ ಬೆಲೆಗಳು ಹೆಚ್ಚಾದರೂ ಸಹ ಅವು ದೀರ್ಘಾವಧಿಯಲ್ಲಿ ಹೆಚ್ಚು ಸಮರ್ಥವಾದವು ಮತ್ತು ಕಡಿಮೆ ವೆಚ್ಚದವು ಎಂಬುದು ದೃಢಪಡುತ್ತದೆ.

ದುರಸ್ತಿ ಮತ್ತು ಬಿಡಿ ಭಾಗಗಳ ಬದಲಾವಣೆಯ ದುಬಾರಿ ವೆಚ್ಚಗಳು: ಇಂಧನ-ಚಾಲಿತ ವಾಹನಗಳಿಗೆ ಹೋಲಿಸಿದಲ್ಲಿ, ಎಲೆಕ್ಟ್ರಿಕ್‌ ವಾಹನಗಳಿಗೆ ಕೆಲವೇ ಬಿಡಿ ಭಾಗಗಳ ಅವಶ್ಯಕತೆ ಇರುವುದಾದರೂ ಸಹ, ಈ ಬಿಡಿ ಭಾಗಗಳ ಬದಲಾವಣೆ ಮತ್ತು ದುರಸ್ತಿಗಳ ವೆಚ್ಚವು, ಸಾಮಾನ್ಯವಾಗಿ, ಸ್ವಲ್ಪ ಹೆಚ್ಚೇ ಇರುತ್ತದೆ. ಉದಾಹರಣೆಗೆ, ಈ ಕಾರುಗಳು ಅಧಿಕಶಕ್ತಿಯ ಲಿಥಿಯಮ್‌-ಅಯಾನ್‌ ಬ್ಯಾಟರಿಗಳ ಮೇಲೆ ಚಲಿಸುತ್ತವೆ. ಈ ಬ್ಯಾಟರಿಗಳನ್ನು ಬದಲಿಸುವ ವೆಚ್ಚವು ಸರಿಸುಮಾರು ಕಾರಿನ ಒಟ್ಟು ವೆಚ್ಚದ ಅರ್ಧದಷ್ಟು ಇರುತ್ತದೆ. ಸಹಜವಾಗಿ ಇಂತಹ ಬ್ಯಾಟರಿಗಳ ದುರಸ್ತಿ ಅಥವಾ ಬದಲಾವಣೆಯ ವೆಚ್ಚ ಹೆಚ್ಚೇ ಇರುತ್ತದೆ. ಇದಕ್ಕೂ ಮಿಗಿಲಾಗಿ, ಈ ಬ್ಯಾಟರಿಗಳು ಒಂದು ಪೂರ್ವನಿಗದಿತ ಗಡುವಿನ ದಿನಾಂಕದೊಡನೆ ಬರುತ್ತವೆ. ಈ ದಿನಾಂಕದ ನಂತರ ಕಾರಿನ ಮಾಲೀಕರು ಇವುಗಳನ್ನು ಬದಲಿಸಲೇಬೇಕಾಗುತ್ತದೆ. ಇದರಿಂದಾಗಿ, ವಿಮಾ ಸೌಲಭ್ಯ ನೀಡುವವರು ಎಲೆಕ್ಟ್ರಿಕ್‌ ಕಾರುಗಳ ವಿಮೆಗೆ ಹೆಚ್ಚಿನ ಪ್ರೀಮಿಯಮ್‌ ವಿಧಿಸುತ್ತಾರೆ.

ಸೀಮಿತ ಸಂಖ್ಯೆಯ ನುರಿತ ತಂತ್ರಜ್ಞರು: ಸಾಂಪ್ರದಾಯಿಕ ಕಾರುಗಳಿಗೆ, ನೀವು ದೇಶಾದ್ಯಂತ, ಬಹಳ ಸುಲಭವಾಗಿ ತಂತ್ರಜ್ಞರನ್ನು (ಮೆಕ್ಯಾನಿಕ್‌) ಹುಡುಕಿಕೊಂಡುಬಿಡಬಹುದು. ಆದರೆ, ಎಲೆಕ್ಟ್ರಿಕ್‌ ಕಾರುಗಳ ದುರಸ್ತಿ ಮಾಡಲು ವಿಶಿಷ್ಟ ಪರಿಣತಿ ಹಾಗೂ ತಂತ್ರಜ್ಞಾನದ ತಿಳುವಳಿಕೆಗಳನ್ನು ಹೊಂದಿರುವ ತಂತ್ರಜ್ಞರ ಅವಶ್ಯಕತೆ ಇರುತ್ತದೆ, ಹಾಗೂ ಇಂಥವರನ್ನು ಹುಡುಕುವುದು ಕಷ್ಟದ ಕೆಲಸವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಎಲೆಕ್ಟ್ರಿಕ್‌ ಕಾರುಗಳು ಭಾರತೀಯ ವಾಹನ ಮಾರುಕಟ್ಟೆಗೆ ಇನ್ನೂ ಹೊಸದಾಗಿವೆ ಹಾಗೂ ಇಂತಹ ಕಾರುಗಳಿಗೆ ಲಭ್ಯವಿರುವ ದುರಸ್ತಿ ಸೌಲಭ್ಯಗಳ ಸಂಖ್ಯೆಯೂ ಸಹ ಸೀಮಿತವಾಗಿದೆ. ಇದೇ ಕಾರಣಕ್ಕಾಗಿ, ಎಲೆಕ್ಟ್ರಿಕ್‌ ಕಾರುಗಳಿಗೆ ಸದ್ಯ ಲಭ್ಯವಿರುವ ಕುಶಲ ತಂತ್ರಜ್ಞರು ಮತ್ತು ದುರಸ್ತಿ ಸೌಲಭ್ಯಗಳು ತಮ್ಮ ಪರಿಣತ ಸೇವೆಗಳಿಗಾಗಿ ಹೆಚ್ಚಿನ ಶುಲ್ಕಗಳನ್ನು ವಿಧಿಸುತ್ತವೆ. ಹೀಗಾಗಿ, ವಿಮಾ ಸೌಲಭ್ಯ ನೀಡುವವರು ಎಲೆಕ್ಟ್ರಿಕ್‌ ಕಾರುಗಳ ವಿಮಾ ರಕ್ಷಣೆಗೆ ಹೆಚ್ಚಿನ ಶುಲ್ಕಗಳನ್ನು ವಿಧಿಸುತ್ತಾರೆ.

ಇದನ್ನೂ ಓದಿ: 5ಭಾರತದಲ್ಲಿ ಸದ್ಯದಲ್ಲೇ 5G ಸಂಪರ್ಕ ಸೇವೆ ಲಭ್ಯ!

ನಾಲ್ಕು-ಚಕ್ರಗಳ ಎಲೆಕ್ಟ್ರಿಕ್‌ ವಾಹನಗಳ ಪ್ರೀಮಿಯಮ್‌ ಕಡಿತಗೊಳಿಸಿಕೊಳ್ಳುವ ವಿಧಾನಗಳು

ಎಲೆಕ್ಟ್ರಿಕ್‌ ಕಾರುಗಳ ವಿಮಾ ಪಾಲಿಸಿಯ ಪ್ರೀಮಿಯಮ್‌ಗಳು ವಿಮಾರಕ್ಷಣೆಯ ಮೊತ್ತ, ವಾಹನದ ಒಟ್ಟು ವೆಚ್ಚ, ನಿಮ್ಮ ವಾಹನ ಚಾಲನೆಯ ಅನುಭವ, ಹಾಗೂ ನಿಮ್ಮ ವಾಹನ ಚಾಲನೆ ಮತ್ತು ವಿಮಾ ಪರಿಹಾರ ಬೇಡಿಕೆಗಳ ಇತಿಹಾಸಗಳಂತಹ ಅನೇಕ ಅಂಶಗಳ ಆಧಾರದಲ್ಲಿ ನಿರ್ಧರಿಸಲ್ಪಡುತ್ತವೆ.

ಇವುಗಳಲ್ಲಿ ಕೆಲವು ಅಂಶಗಳು ನಿಮ್ಮ ನಿಯಂತ್ರಣದಲ್ಲಿ ಇರದಿದ್ದರೂ, ನೀವು ಕೆಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ನಿಮ್ಮ ಎಲೆಕ್ಟ್ರಿಕ್ ಕಾರಿನ ವಿಮಾ ವೆಚ್ಚವನ್ನು ಕಡಿತಗೊಳಿಸಿಕೊಳ್ಳಬಹುದು.

ನಿಮ್ಮ ಎಲೆಕ್ಟ್ರಿಕ್‌ ವಾಹನಕ್ಕೆ ಭದ್ರತಾ ಸಾಧನಗಳನ್ನು ಅಳವಡಿಸಿಕೊಳ್ಳಿ: ಎಲೆಕ್ಟ್ರಿಕ್‌ ಕಾರುಗಳ ಬಿಡಿಭಾಗಗಳನ್ನು ಬದಲಿಸುವ ವೆಚ್ಚ ಹೆಚ್ಚಾಗಿರುವುದರಿಂದ ನೀವು ಕಳ್ಳತನಗಳನ್ನು ತಡೆಯುವ ಹಾಗೂ ಅಂತಹ ಭದ್ರತೆಯ ಸಾಧನಗಳನ್ನು ನಿಮ್ಮ ವಾಹನದಲ್ಲಿ ಅಳವಡಿಸಿಕೊಳ್ಳಬಹುದು. ಇದರಿಂದ ನೀವು ಅಂತಹ ಘಟನೆಗಳ ಸಾಧ್ಯತೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ವಿಮೆಯ ಪ್ರೀಮಿಯಮ್‌ ವೆಚ್ಚವನ್ನು ನಿರ್ಧರಿಸುವ ಸಮಯದಲ್ಲಿ, ವಿಮಾ ಕಂಪನಿಗಳು ಇಂತಹ ಭದ್ರತಾ ಸಾಧನಗಳನ್ನು ಪರಿಗಣಿಸುತ್ತವೆ. ಹೀಗಾಗಿ, ನಿಮ್ಮ ಎಲೆಕ್ಟ್ರಿಕ್‌ ಕಾರಿನಲ್ಲಿ ಭದ್ರತಾ ಸಾಧನಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದರಿಂದ ನಿಮ್ಮ ವಿಮಾ ವೆಚ್ಚವನ್ನು ಕಡಿತಗೊಳಿಸಿಕೊಳ್ಳಬಹುದು.

ಆನ್‌ಲೈನ್‌ ಕಾರು ವಿಮೆಯನ್ನು ಕೊಂಡುಕೊಳ್ಳಿ: ಅತ್ಯಂತ ಸೂಕ್ತವಾದ ಬೆಲೆಯ ಎಲೆಕ್ಟ್ರಿಕ್‌ ಕಾರು ವಿಮೆಯನ್ನು ಕೊಳ್ಳಲು ಇರುವ ಅತ್ಯಂತ ಬುದ್ಧಿವಂತಿಕೆಯ ವಿಧಾನವೆಂದರೆ, ಅದನ್ನು ಆನ್‌ಲೈನ್‌ ಮೂಲಕ ಕೊಳ್ಳುವುದು. ಅನೇಕ ವಿಮಾ ಕಂಪನಿಗಳು ನೀಡುತ್ತಿರುವ ಎಲೆಕ್ಟ್ರಿಕ್‌ ಕಾರಿನ ವಿಮಾ ಯೋಜನೆಗಳ ಕೊಡುಗೆಗಳನ್ನು ನೀವು ಅವುಗಳ ಅಧಿಕೃತ ಜಾಲತಾಣಗಳಲ್ಲಿ ಹೋಲಿಸಿ ನೋಡಿ ನಿಮಗೆ ಸೂಕ್ತವೆನಿಸುವ ವೆಚ್ಚದಲ್ಲಿ ಗರಿಷ್ಠ ರಕ್ಷಣೆ ನೀಡುವಂತಹ ಪಾಲಿಸಿಯನ್ನು ಆರಿಸಿಕೊಳ್ಳಬಹುದು.

ಎಲ್ಲಕ್ಕಿಂತ ಹೆಚ್ಚಾಗಿ, ನೀವೊಂದು ಕಾರು ವಿಮೆಯನ್ನು ಆನ್‌ಲೈನ್‌ ಮೂಲಕ ಖರೀದಿಸುವಾಗ, ಕಾರು ವಿಮೆಯ ಕ್ಯಾಲ್ಕ್ಯುಲೇಟರ್‌ ಬಳಸಿ, ನೀವು ಬಯಸುವ ವಿಮಾ ರಕ್ಷಣೆಯ ಮೊತ್ತಕ್ಕೆ ಅನುಗುಣವಾಗಿ ಯಾವ ವಿಮಾ ಪಾಲಿಸಿ ನಿಮ್ಮ ಬಜೆಟ್‌ಗೆ ಹೊಂದುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಹೀಗೆ, ನೀವು ನಿಮ್ಮ ಬಜೆಟ್‌ಗೆ ಮೀರಿದ ವಾಹನ ವಿಮಾ ಪಾಲಿಸಿಯನ್ನು ಕೊಳ್ಳುವುದನ್ನು ತಪ್ಪಿಸಬಹುದು.

ನೋ-ಕ್ಲೈಮ್‌ ಬೋನಸ್‌ ಬಳಸಿಕೊಳ್ಳಿ: ನೀವು ಪರಿಹಾರಕ್ಕೆ ಬೇಡಿಕೆ ಸಲ್ಲಿಸದ ಪ್ರತಿಯೊಂದು ವರ್ಷಕ್ಕೂ, ನಿಮ್ಮ ವಿಮಾ ಕಂಪನಿಯು ನಿಮಗೊಂದು ನೋ-ಕ್ಲೈಮ್‌ ಬೋನಸ್‌ ನೀಡುತ್ತದೆ. ಈ ಬೋನಸ್‌ ನಿಮಗೊಂದು ಕಡಿಮೆ ಮೊತ್ತದ ವಿಮಾ ಪ್ರೀಮಿಯಮ್‌ ಅಥವಾ ಹೆಚ್ಚಿನ ಮೊತ್ತದ ಆಶ್ವಾಸಿತ ಮೊತ್ತವನ್ನು ನೀಡಬಹುದು. ನೀವೇನಾದ್ರೂ ಹೊಣೆಗಾರಿಕೆಯಿಂದ ವಾಹನ ನಡೆಸಿದಲ್ಲಿ ಹಾಗೂ ನಿಮ್ಮ ವಾಹನದ ನಿರ್ವಹಣೆ ಉತ್ತಮವಾಗಿದ್ದಲ್ಲಿ, ನೀವು ಪರಿಹಾರಕ್ಕೆ ಬೇಡಿಕೆ ಸಲ್ಲಿಸದ ಪ್ರತಿಯೊಂದು ವರ್ಷವೂ ನೋ-ಕ್ಲೈಮ್‌ ಬೋನಸ್‌ ಪಡೆಯುವುದನ್ನು ಆನಂದಿಸಬಹುದು. ಕಾಲಾನುಕ್ರಮದಲ್ಲಿ, ಹೀಗೆ ಸಂಗ್ರಹವಾದ ಬೋನಸ್‌ಗಳು ನಿಮ್ಮ ವಿಮಾ ಪಾಲಿಸಿಯ ಪ್ರೀಮಿಯಮ್‌ಗಳನ್ನು ಕಡಿತಗೊಳಿಸುತ್ತವೆ.

ಸಣ್ಣ-ಸಣ್ಣ ಪರಿಹಾರಗಳಿಗೆ ಬೇಡಿಕೆ ಸಲ್ಲಿಸುವುದರಿಂದ ದೂರವಿರಿ: ವಾಹನವೊಂದನ್ನು ಬಳಸುವಾಗ ಸಣ್ಣ-ಪುಟ್ಟ ಹಾನಿಗಳು ಮತ್ತು ದುರಸ್ತಿಗಳು ಬಹಳ ಸ್ವಾಭಾವಿಕ. ಆದಾಗ್ಯೂ, ನಿಮ್ಮ ಎಲೆಕ್ಟ್ರಿಕ್ ವಾಹನಕ್ಕೆ ಬೇಕಾಗುವ ಪ್ರತಿಯೊಂದು ಸಣ್ಣ-ಪುಟ್ಟ ದುರಸ್ತಿಗಳಿಗೂ ಪರಿಹಾರಕ್ಕೆ ಬೇಡಿಕೆ ಸಲ್ಲಿಸುವುದರಿಂದ ದೂರವಿರಿ. ಹೀಗೆ, ನೀವು ಪರಿಹಾರ-ಮುಕ್ತ ವರ್ಷಗಳನ್ನು ಹೊಂದುವ ಹಾಗೂ ನೋ-ಕ್ಲೈಮ್ ಬೋನಸ್‌ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಬಹುದು. ಇದು ನೀವು ನಿಮ್ಮ ಪಾಲಿಸಿಯ ಪ್ರೀಮಿಯಮ್‌ ಮೊತ್ತವನ್ನು ಕಡಿತಗೊಳಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ. ಆದ್ದರಿಂದ, ಪ್ರತಿ ಬಾರಿಯೂ ಪರಿಹಾರಕ್ಕೆ ಬೇಡಿಕೆ ಸಲ್ಲಿಸುವ ಬದಲಿಗೆ ಸಣ್ಣ-ಪುಟ್ಟ ದುರಸ್ತಿಗಳ ವೆಚ್ಚಗಳನ್ನು ನೀವೇ ಭರಿಸುವ ಸಲಹೆಯನ್ನು ನೀಡಬಹುದಾಗಿದೆ.

ಎಲೆಕ್ಟ್ರಿಕ್‌ ಕಾರುಗಳು ಶೂನ್ಯ-ಮಾಲಿನ್ಯ ಬಿಡುಗಡೆಯ ವಾಹನಗಳಾಗಿದ್ದು, ಇವು ಏರುತ್ತಿರುವ ಇಂಧನಗಳ ಬೆಲೆಗಳಿಗೆ ಹಾಗೂ ಪರಿಸರದ ಮಾಲಿನ್ಯಕ್ಕೆ ಪ್ರಾಯೋಗಿಕ ಪರಿಹಾರಗಳಾಗಿವೆ. ಈ ಕಾರುಗಳ ಆರಂಭಿಕ ವೆಚ್ಚವು ಹೆಚ್ಚಾಗಿದ್ದರೂ ಸಹ, ಇವು ದೀರ್ಘಾವಧಿಯಲ್ಲಿ, ಅತ್ಯಲ್ಪ ನಿರ್ವಹಣೆಯ ಅವಶ್ಯಕತೆಯುಳ್ಳ ಮತ್ತು ವೆಚ್ಚಕ್ಕೆ ತಕ್ಕ ಪರಿಣಾಮಕಾರಿ ಸೇವೆ ನೀಡುವ ವಾಹನಗಳೆಂದು ತಮ್ಮನ್ನು ತಾವು ನಿರೂಪಿಸಿಕೊಳ್ಳಲಿವೆ. ಇಂಧನ-ಚಾಲಿತ ಕಾರುಗಳ ವಿಮಾ ವೆಚ್ಚಕ್ಕಿಂತ ಎಲೆಕ್ಟ್ರಿಕ್‌ ಕಾರುಗಳ ವಿಮಾ ವೆಚ್ಚ ದುಬಾರಿಯಾಗಿದ್ದರೂ ಸಹ, ಕೆಲವು ಸುಲಭವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ನೀವು ಅವುಗಳ ವಿಮಾ ಯೋಜನೆಯ ಪ್ರೀಮಿಯಮ್‌ಗಳನ್ನು ಕಡಿತಗೊಳಿಸಿಕೊಳ್ಳಬಹುದು.

ಟಾಟಾ ಎ.ಐ.ಜಿ.ಯಂತಹ ಪ್ರತಿಷ್ಠಿತ ವಿಮಾ ಕಂಪನಿಯು ಸತತ 5 ಪರಿಹಾರ ಬೇಡಿಕೆ-ರಹಿತ ವರ್ಷಗಳಿಗೆ ನಿಮ್ಮ ಕಾರು ವಿಮಾ ಪ್ರೀಮಿಯಮ್‌ಗಳ ಮೇಲೆ ಶೇ 50ರವರೆಗಿನ ಡಿಸ್ಕೌಂಟ್‌ನ ಕೊಡುಗೆ ನೀಡುತ್ತದೆ. ಇದಲ್ಲದೇ, ಅವರು ಸುಮಾರು 18 ಹೆಚ್ಚುವರಿ ರಕ್ಷಣೆಗಳ (ಆಡ್‌-ಆನ್‌) ಆಯ್ಕೆಗಳನ್ನೂ ಹೊಂದಿದ್ದು, ಇದು ನಿಮ್ಮ ದುಬಾರಿ ಎಲೆಕ್ಟ್ರಿಕ್‌ ಕಾರಿನ ವಿಮಾ ರಕ್ಷಣೆಗೆ ಹೆಚ್ಚಿನ ಬಲವನ್ನು ನೀಡಲಿದೆ.

Published On - 11:27 am, Thu, 27 July 23