ಭಾರತದ ಫುಟ್ಬಾಲ್ ಮಾಂತ್ರಿಕ ಸುನಿಲ್ ಛೆತ್ರಿಗೆ ಕೊರೊನಾ ವೈರಸ್ ಪಾಸಿಟಿವ್

|

Updated on: Mar 11, 2021 | 9:36 PM

ಪ್ರಖ್ಯಾತ ಫುಟ್ಬಾಲ್ ಆಟಗಾರ ಮತ್ತು ಭಾರತೀಯ ಸಾಕರ್ ಟೀಮಿನ ನಾಯಕ ಸುನಿಲ್ ಛೆತ್ರಿ ಅವರು ಕೊವಿಡ್​-19 ಸೋಂಕಿಗೊಳಗಾಗಿದ್ದಾರೆ. ಸೋಂಕು ತಗುಲಿರುವುದನ್ನು ಖುದ್ದು ಅವರೇ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಆದರೆ ತಮ್ಮ ಆರೋಗ್ಯ ಚೆನ್ನಾಗಿದೆ ಮತ್ತು ಸೋಕಿನಿಂದ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿರುವ ಅವರು ಆದಷ್ಟು ಬೇಗ ಫುಟ್ಬಾಲ್ ಮೈದಾನಕ್ಕೆ ಮರಳುವುದಾಗಿ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ‘ಖುಷಿಯಿಂದ ಹೇಳಿಕೊಳ್ಳುವ ಸುದ್ದಿ ಇದಲ್ಲ. ನನಗೆ ಕೊವಿಡ್​-19 ಪಾಸಿಟಿವ್ ಎಂದು ಗೊತ್ತಾಗಿದೆ. ಆದರೆ ಒಳ್ಳೆಯ ಸುದ್ದಿ ಏನೆಂದರೆ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ಅದಷ್ಟು ಬೇಗ ಫುಟ್ಬಾಲ್ […]

ಭಾರತದ ಫುಟ್ಬಾಲ್ ಮಾಂತ್ರಿಕ ಸುನಿಲ್ ಛೆತ್ರಿಗೆ ಕೊರೊನಾ ವೈರಸ್ ಪಾಸಿಟಿವ್
ಸುನಿಲ್ ಛೆತ್ರಿ
Follow us on

ಪ್ರಖ್ಯಾತ ಫುಟ್ಬಾಲ್ ಆಟಗಾರ ಮತ್ತು ಭಾರತೀಯ ಸಾಕರ್ ಟೀಮಿನ ನಾಯಕ ಸುನಿಲ್ ಛೆತ್ರಿ ಅವರು ಕೊವಿಡ್​-19 ಸೋಂಕಿಗೊಳಗಾಗಿದ್ದಾರೆ. ಸೋಂಕು ತಗುಲಿರುವುದನ್ನು ಖುದ್ದು ಅವರೇ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಆದರೆ ತಮ್ಮ ಆರೋಗ್ಯ ಚೆನ್ನಾಗಿದೆ ಮತ್ತು ಸೋಕಿನಿಂದ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿರುವ ಅವರು ಆದಷ್ಟು ಬೇಗ ಫುಟ್ಬಾಲ್ ಮೈದಾನಕ್ಕೆ ಮರಳುವುದಾಗಿ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

‘ಖುಷಿಯಿಂದ ಹೇಳಿಕೊಳ್ಳುವ ಸುದ್ದಿ ಇದಲ್ಲ. ನನಗೆ ಕೊವಿಡ್​-19 ಪಾಸಿಟಿವ್ ಎಂದು ಗೊತ್ತಾಗಿದೆ. ಆದರೆ ಒಳ್ಳೆಯ ಸುದ್ದಿ ಏನೆಂದರೆ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ಅದಷ್ಟು ಬೇಗ ಫುಟ್ಬಾಲ್ ಮೈದಾನಕ್ಕೆ ವಾಪಸ್ಸಾಗುತ್ತೇನೆ, ಎಂದು ಛೆತ್ರಿ ಟ್ವೀಟ್​ ಮಾಡಿದ್ದಾರೆ.

‘ಯಾವಾಗಲೂ ಜಾಗರೂಕರಾಗಿರಿ ಮತ್ತು ಸುರಕ್ಷತೆ ಬಗ್ಗೆ ಮುನ್ನಚ್ಚೆರಿಕೆ ಕ್ರಮಗಳನ್ನು ನಿರ್ಲಕ್ಷ್ಯ ಮಾಡಬೇಡಿ ಅಂತ ಹೇಳಲು ಇದಕ್ಕಿಂತ ಒಳ್ಳೆ ಸಮಯ ಮತ್ತೊಂದಿಲ್ಲ,’ ಅಂತಲೂ ಅವರು ಹೇಳಿದ್ದಾರೆ.

ಪುಟ್ಬಾಲ್ ಪ್ರಿಯರಿಗೆ ಗೊತ್ತಿರುವ ಹಾಗೆ ಛೆತ್ರಿ ಇಂಡಿಯನ್ ಸೂಪರ್​ ಲೀಗ್ (ಐಎಸ್ಎಲ್) 7ನೇ ಸೀಸನ್​ನಲ್ಲಿ ಬೆಂಗಳುರು ಎಫ್​ಸಿ ಪರ ಆಡಿದ್ದರು. ಆದರೆ ಈ ಬಾರಿಯ ಸೀಸನ್ ಬೆಂಗಳೂರು ತಂಡಕ್ಕೆ ಒಳ್ಳೆಯದಾಗಿರಲಿಲ್ಲ. ಲೀಗ್ ಹಂತದಲ್ಲಿ ಅದು 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮಾರ್ಚ್​ 25 ಮತ್ತು 29ರಂದು ಕ್ರಮವಾಗಿ ಓಮನ್ ಮತ್ತು ಯುಎಈ ಜೊತೆ ಸ್ನೇಹಪರ ಪಂಧ್ಯಗಳನ್ನು ಆಡಲಿರುವ ಭಾರತ ತಂಡಕ್ಕೆ ಕಳೆದ ವಾರ ಪ್ರಕಟಿಸಿರುವ 35 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಛೆತ್ರಿ ಅವರ ಹೆಸರು ಕೂಡ ಇದೆ.

ಸಾಕರ್​ಗೆ ಸಂಬಂಧಿಸಿದಂತೆ ಹೇಳುವುದಾದರೆ ಛೆತ್ರಿ ನಿಸ್ಸಂದೇಹವಾಗಿ ಭಾರತದ ಸೂಪರ್ ಸ್ಟಾರ್. 2017-18 ಸಾಲಿನ ಐಎಸ್​ಎಲ್​ ಸೀಸನ್​ನಲ್ಲಿ ಅವರು ಅಪ್ರತಿಮ ಪ್ರದರ್ಶನಗಳನ್ನು ನೀಡಿ ‘ಹಿರೋ ಆಫ್ ದಿ ಲೀಗ್’ ಪ್ರಶಸ್ತಿಗೆ ಪಾತ್ರರಾಗಿದ್ದರು. ಹಾಗೇಯೇ, 2017 ಸಾಲಿಗೆ, ‘ಎಐಎಫ್ಎಫ್ ಪ್ಲೇಯರ್ ಅಫ್ ದಿ ಈಯರ್,’ ಪ್ರಶಸ್ತಿಯನ್ನೂ ಅವರಿಗೆ ನೀಡಲಾಗಿತ್ತು.

ಇದನ್ನೂ ಓದಿ: ಫುಟ್ಬಾಲ್​ ದಂತಕಥೆ ಪೀಲೆ ಸಾರ್ವಕಾಲಿಕ ದಾಖಲೆ ಮುರಿದ ಕಾಲ್ಚೆಂಡಿನ ಚತುರ ಲಿಯೋನೆಲ್ ಮೆಸ್ಸಿ