ಫಿರೋಜ್ ಷಾ ಕೋಟ್ಲಾ ಇನ್ನು ಅರುಣ್ ಜೇಟ್ಲಿ ಸ್ಟೇಡಿಯಂ

ದೆಹಲಿಯಲ್ಲಿರುವ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂಗೆ ಮಾಜಿ ಸಚಿವ ಅರುಣ್ ಜೇಟ್ಲಿ ಹೆಸರಿಡಲು ಡಿಡಿಸಿಎ (ದೆಹಲಿ & ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್) ನಿರ್ಧರಿಸಿದೆ. ಇತ್ತೀಚೆಗೆ ವಿಧಿವಶರಾದ ಕೇಂದ್ರದ ಮಾಜಿ ಸಚಿವ ಜೇಟ್ಲಿ ಗೌರವಾರ್ಥವಾಗಿ ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಮರುನಾಮಕರಣ ನಡೆಯಲಿದೆ. ಅರುಣ್ ಜೇಟ್ಲಿಅವರು ಈ ಹಿಂದೆ #DDCA ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಂದಹಾಗೆ ಫಿರೋಜ್ ಷಾ ತುಘಲಕ್​ 13ನೇ ಶತಮಾನದಲ್ಲಿ ದೆಹಲಿಯ ಸುಲ್ತಾನನಾಗಿದ್ದ. ಆತನ ಹೆಸರಲ್ಲಿ ಇದುವರೆಗೂ ಸ್ಟೇಡಿಯಂಗೆ ಫಿರೋಜ್ ಷಾ ಹೆಸರಿತ್ತು. ಇದೇ ಫಿರೋಜ್ ಷಾ ಹೆಸರಿನಲ್ಲಿ […]

ಫಿರೋಜ್ ಷಾ ಕೋಟ್ಲಾ ಇನ್ನು ಅರುಣ್ ಜೇಟ್ಲಿ ಸ್ಟೇಡಿಯಂ
ಸಾಧು ಶ್ರೀನಾಥ್​

Updated on: Sep 09, 2019 | 1:02 PM

ದೆಹಲಿಯಲ್ಲಿರುವ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂಗೆ ಮಾಜಿ ಸಚಿವ ಅರುಣ್ ಜೇಟ್ಲಿ ಹೆಸರಿಡಲು ಡಿಡಿಸಿಎ (ದೆಹಲಿ & ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್) ನಿರ್ಧರಿಸಿದೆ. ಇತ್ತೀಚೆಗೆ ವಿಧಿವಶರಾದ ಕೇಂದ್ರದ ಮಾಜಿ ಸಚಿವ ಜೇಟ್ಲಿ ಗೌರವಾರ್ಥವಾಗಿ ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಮರುನಾಮಕರಣ ನಡೆಯಲಿದೆ. ಅರುಣ್ ಜೇಟ್ಲಿಅವರು ಈ ಹಿಂದೆ #DDCA ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಂದಹಾಗೆ ಫಿರೋಜ್ ಷಾ ತುಘಲಕ್​ 13ನೇ ಶತಮಾನದಲ್ಲಿ ದೆಹಲಿಯ ಸುಲ್ತಾನನಾಗಿದ್ದ. ಆತನ ಹೆಸರಲ್ಲಿ ಇದುವರೆಗೂ ಸ್ಟೇಡಿಯಂಗೆ ಫಿರೋಜ್ ಷಾ ಹೆಸರಿತ್ತು. ಇದೇ ಫಿರೋಜ್ ಷಾ ಹೆಸರಿನಲ್ಲಿ ದೆಹಲಿಯಲ್ಲಿ ದೊಡ್ಡ ಪುರಾತನ ಕೋಟೆಯೂ ಇದೆ.

 

 

 

Published On - 4:09 pm, Fri, 30 August 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us