ಏಷ್ಯನ್ ಗೇಮ್ಸ್​: ಒಂದೇ ದಿನ 6 ಚಿನ್ನದ ಪದಕಗಳನ್ನು ಗೆದ್ದ ಭಾರತ!

ಜಪಾನ್‌ನಲ್ಲಿ ಇಂದು (ಅ.3) ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ 17 ವರ್ಷದ ಬಿಲ್ಲುಗಾರ್ತಿ ಕುಂಕುಮ್ ಮೊಹೋದ್ ಮಹಿಳೆಯರ ವೈಯಕ್ತಿಕ ರಿಕರ್ವ್ ಬಿಲ್ಲುಗಾರಿಕೆ ಭಾಗದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದಾರೆ. ಅವರು ಫೈನಲ್ ಪಂದ್ಯದ ಶೂಟ್-ಆಫ್‌ನಲ್ಲಿ ಸೌತ್ ಕೊರಿಯಾದ ಓ ಯೆಜಿನ್ ಅವರನ್ನು ಸೋಲಿಸುವ ಮೂಲಕ ಈ ಸಾಧನೆ ಮಾಡಿದರು. ಇದು ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಕುಂಕುಮ್ ಅವರ ಎರಡನೇ ಚಿನ್ನದ ಪದಕವಾಗಿದೆ. ಇದಕ್ಕೂ ಮುನ್ನ ಅವರು ಮಹಿಳಾ ರಿಕರ್ವ್ ತಂಡ ವಿಭಾಗದಲ್ಲೂ ಚಿನ್ನ ಗೆದ್ದಿದ್ದರು.

ಏಷ್ಯನ್ ಗೇಮ್ಸ್​: ಒಂದೇ ದಿನ 6 ಚಿನ್ನದ ಪದಕಗಳನ್ನು ಗೆದ್ದ ಭಾರತ!
India Archery Team
Image Credit source: Asian Games

Updated on: Oct 03, 2026 | 8:53 AM

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಕ್ರೀಡಾಕೂಟದ 13ನೇ ದಿನ (ಅಕ್ಟೋಬರ್ 2) 6 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವಲ್ಲಿ ಭಾರತೀಯ ಕ್ರೀಡಾಪಟುಗಳು ಯಶಸ್ವಿಯಾಗಿದ್ದಾರೆ. ಹೀಗೆ ಭಾರತಕ್ಕೆ 6 ಚಿನ್ನದ ಪದಕ ಗೆದ್ದುಕೊಟ್ಟ ಕ್ರೀಡಾಳುಗಳ ಪಟ್ಟಿ ಈ ಕೆಳಗಿನಂತಿದೆ…

  • ಮಹಿಳಾ ಹಾಕಿ ತಂಡಕ್ಕೆ ಐತಿಹಾಸಿಕ ಚಿನ್ನ: ಚೀನಾ ವಿರುದ್ಧದ ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ 1-0 ಗೋಲುಗಳ ಅಂತರದಿಂದ ಜಯಗಳಿಸಿದ ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸ ಪ್ರಸಿದ್ಧ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು.
  • ಬಾಕ್ಸಿಂಗ್‌ನಲ್ಲಿ ಮೂರು ಬಂಗಾರ: ಬಾಕ್ಸಿಂಗ್ ಅಖಾಡದಲ್ಲಿ ಭಾರತೀಯರ ಪಂಚ್‌ಗೆ ಎದುರಾಳಿಗಳು ಧೂಳೀಪಟವಾದರು. ಮಹಿಳೆಯರ 75 ಕೆಜಿ ವಿಭಾಗದಲ್ಲಿ ಲವ್ಲಿನಾ ಬೊರ್ಗೊಹೈನ್, 65 ಕೆಜಿ ವಿಭಾಗದಲ್ಲಿ ಪರ್ವೀನ್ ಹೂಡಾ ಮತ್ತು ಪುರುಷರ 80 ಕೆಜಿ ವಿಭಾಗದಲ್ಲಿ ಅಂಕುಶ್ ಪಂಗಲ್ ಚಿನ್ನದ ಪದಕಗಳನ್ನು ಗೆದ್ದು ಬೀಗಿದರು.
  • ಆರ್ಚರಿಯಲ್ಲಿ ಐತಿಹಾಸಿಕ ಸಾಧನೆ: ಮಹಿಳಾ ರಿಕರ್ವ್ ತಂಡವು ಅಪ್ರತಿಮ ಪ್ರದರ್ಶನ ನೀಡಿ, ಈ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ತಂದುಕೊಟ್ಟಿತು.
  • ಕುಸ್ತಿಯಲ್ಲಿ ಸುಜೀತ್ ಕಮಾಲ್: ಪುರುಷರ ಕುಸ್ತಿ ಪಂದ್ಯದಲ್ಲಿ ತೀವ್ರ ಪೈಪೋಟಿ ಎದುರಿಸಿದ ಸುಜೀತ್ ಕಲ್ಕಲ್, ಕೊನೆಯ ಕ್ಷಣದಲ್ಲಿ 10-9 ಅಂತರದ ರೋಮಾಂಚಕ ಜಯ ಸಾಧಿಸಿ ಬಂಗಾರಕ್ಕೆ ಮುತ್ತಿಕ್ಕಿದರು.

ಕುಂಕುಮ್​ಗೆ ಚಿನ್ನ:

ನಿನ್ನೆಯ ಜೋಶ್‌ನಲ್ಲೇ ಇವತ್ತಿನ ದಿನವನ್ನು ಆರಂಭಿಸಿದ ಭಾರತಕ್ಕೆ, 17 ವರ್ಷದ ಬಿಲ್ಲುಗಾರ್ತಿ ಕುಮ್ಕುಮ್ ಮೊಹೊದ್ ಮಹಿಳೆಯರ ವೈಯಕ್ತಿಕ ರಿಕರ್ವ್ ಆರ್ಚರಿ ಫೈನಲ್‌ನಲ್ಲಿ ಅದ್ಭುತ ಗುರಿ ನೆಟ್ಟು ಚಿನ್ನದ ಪದಕ ಗೆದ್ದಿದ್ದಾರೆ. ಇದು ಭಾರತದ ಇವತ್ತಿನ ಮೊದಲ ಹಾಗೂ ಕ್ರೀಡಾಕೂಟದ ಒಟ್ಟಾರೆ 17ನೇ ಚಿನ್ನದ ಪದಕವಾಗಿದೆ.

ಏಷ್ಯನ್ ಗೇಮ್ಸ್ 2026ರ ಪದಕ ಪಟ್ಟಿ:

ಸ್ಥಾನ ದೇಶ ಚಿನ್ನ ಬೆಳ್ಳಿ  ಕಂಚು ಒಟ್ಟು ಪದಕಗಳು
1 ಚೀನಾ 162 81 73 316
2  ಜಪಾನ್ 72 83 85 240
3 ಸೌತ್ ಕೊರಿಯಾ 33 39 62 134
4 ಉಜ್ಬೇಕಿಸ್ತಾನ್ 20 23 22 65
5 ಭಾರತ 17 25 35 77

ಇದನ್ನೂ ಓದಿ: ಲುಹಾನ್ ವಿಸ್ಫೋಟಕ ಸೆಂಚುರಿ: ಕ್ರಿಸ್ ಗೇಲ್ 175 ರನ್​ಗಳ ವಿಶ್ವ ದಾಖಲೆ ಧೂಳೀಪಟ!

ಎರಡು ಪದಕಗಳು ಖಚಿತ:

ಏಷ್ಯನ್ ಗೇಮ್ಸ್‌ನ ಇಂದಿನ ಅಂತಿಮ ದಿನದ ಕ್ರೀಡೆಗಳು ಭಾರತದ ಪಾಲಿಗೆ ಅತ್ಯಂತ ಪ್ರಮುಖವಾಗಿವೆ. ಇಡೀ ದೇಶ ಕಣ್ಣಿಟ್ಟಿರುವ ಎರಡು ಮಹಾ ಫೈನಲ್ ಪಂದ್ಯಗಳು ಇಂದು ನಡೆಯಲಿವೆ.

  •  ಭಾರತ vs ಪಾಕಿಸ್ತಾನ್ (ಪುರುಷರ ಕ್ರಿಕೆಟ್ ಫೈನಲ್): ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಚಿನ್ನದ ಪದಕಕ್ಕಾಗಿ ಇಂದು ಮುಖಾಮುಖಿಯಾಗುತ್ತಿದ್ದು, ಜಿದ್ದಾಜಿದ್ದಿನ ಪಂದ್ಯ ನಿರೀಕ್ಷಿಸಲಾಗಿದೆ.
  • ಭಾರತ vs ಮಲೇಷ್ಯಾ (ಪುರುಷರ ಹಾಕಿ ಫೈನಲ್): ಹಾಲಿ ಚಾಂಪಿಯನ್ ಆಗಿರುವ ಭಾರತ ಪುರುಷರ ಹಾಕಿ ತಂಡವು ತನ್ನ ಚಿನ್ನದ ಕಿರೀಟವನ್ನು ಉಳಿಸಿಕೊಳ್ಳುವ ಸಲುವಾಗಿ ಇಂದು ಮಲೇಷ್ಯಾ ವಿರುದ್ಧ ಕಣಕ್ಕಿಳಿಯುತ್ತಿದೆ.

 

Published On - 8:47 am, Sat, 3 October 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us