MR Poovamma ಉದ್ದೀಪನ ಮದ್ದು ಸೇವನೆ: ಕರ್ನಾಟಕದ ಅಥ್ಲಿಟ್ ಎಂಆರ್ ಪೂವಮ್ಮಗೆ 2 ವರ್ಷ ನಿಷೇಧ ಶಿಕ್ಷೆ
ಫೆಬ್ರವರಿ 18, 2021 ರಂದು ಪಟಿಯಾಲಾದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್-1 ಸಮಯದಲ್ಲಿ ಪೂವಮ್ಮ ಅವರನ್ನು ಪರೀಕ್ಷಿಸಲಾಯಿತು.

ಏಷ್ಯನ್ ಗೇಮ್ಸ್ ರಿಲೇ ಚಿನ್ನದ ಪದಕ ವಿಜೇತೆ ಎಂ.ಆರ್.ಪೂವಮ್ಮ (M.R Poovamma )ಅವರು ಉದ್ದೀಪನ ಮದ್ದು ಸೇವನೆ ಮಾಡಿ ಶಿಕ್ಷೆಗೊಳಗಾಗಿದ್ದಾರೆ. ಇವರಿಗೆ ಎರಡು ವರ್ಷ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಶಿಸ್ತು ಸಮಿತಿಯ ನಿರ್ಧಾರದ ವಿರುದ್ಧ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ಮೇಲ್ಮನವಿ ಸಲ್ಲಿಸಿದ ನಂತರ ಎಡಿಎಪಿ (Anti-Doping Appeal Panel) ಮೂರು ತಿಂಗಳ ನಿಷೇಧ ಶಿಕ್ಷೆಯನ್ನು ಎರಡು ವರ್ಷಕ್ಕೆ ವಿಸ್ತರಿಸಿದೆ. ಈ ನಿಷೇಧದಿಂದಾಗಿ ಪೂವಮ್ಮ ಮುಂದಿನ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್‌ನಿಂದ ಹೊರಗುಳಿಯಲಿದ್ದಾರೆ. ಫೆಬ್ರವರಿ 18, 2021 ರಂದು ಪಟಿಯಾಲಾದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್-1 ಸಮಯದಲ್ಲಿ ಪೂವಮ್ಮ ಅವರನ್ನು ಪರೀಕ್ಷಿಸಲಾಯಿತು. ಅವರಿಂದ ಸಂಗ್ರಹಿಸಲಾದ ರಮಾದರಿಯು ನಿಷೇಧಿತ ಉತ್ತೇಜಕ ಮೀಥೈಲ್‌ಹೆಕ್ಸಾನಿಯಮೈನ್ ಹೊಂದಿರುವುದಾಗಿ ಪತ್ತೆಯಾಗಿತ್ತು.
ಪೂವಮ್ಮ ಅವರ ‘ಎ’ ಮತ್ತು ‘ಬಿ’ ಮಾದರಿಗಳೆರಡೂ ಧನಾತ್ಮಕ ಪರೀಕ್ಷೆಗೆ ಒಳಪಟ್ಟಿವೆ. ಆದರೆ ಪೂವಮ್ಮ ತಾನು ಉದ್ದೀಪನ ಮದ್ದು ಸೇವನೆ ಮಾಡಿರುವುದನ್ನು ಎಂದು ನಿರಾಕರಿಸಿದ್ದು ತಾನು ಬೆಡ್‌ಟೈಮ್ ಲ್ಯಾಟೆ ಎಂಬ ಆಯುರ್ವೇದ ಉತ್ಪನ್ನವನ್ನು ಸೇವಿಸಿರುವುದಾಗಿ ಹೇಳಿದ್ದರು. ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿ (ಎಡಿಡಿಪಿ) ಆಕೆಗೆ ಮೂರು ತಿಂಗಳ ಅಮಾನತು (ಜೂನ್ 2022 ರಲ್ಲಿ) ನೀಡಿದ್ದು NADA ಈ ತೀರ್ಪಿಗೆ ಮೇಲ್ಮನವಿ ಸಲ್ಲಿಸಿತು.
ಯಾವುದೇ ತರ್ಕಬದ್ಧ ಮಾನದಂಡ, ನಿಯಮ ಅಥವಾ ಮಾರ್ಗಸೂಚಿಗೆ ಬದ್ಧವಾಗಿರದೆ ADDP ಆಕೆಗೆ ಕಡಿಮೆ ದಂಡವನ್ನು ನೀಡಿದೆ. ಆಕೆಯ ದೇಹದಲ್ಲಿ ಕಂಡುಬಂದಿರುವ ವಸ್ತುವು ಸಾಮಾನ್ಯವಾಗಿ ದುರುಪಯೋಗಪಡಿಸಿಕೊಂಡ ಉದ್ದೀಪನ ವಸ್ತು ಎಂದು ಮೇಲ್ಮನವಿ ಸಮಿತಿ ಹೇಳಿದೆ. ಇದೀಗ ಪೂವಮ್ಮ ಅವರ ಮೇಲೆ ಎರಡು ವರ್ಷಗಳ ನಿಷೇಧ ವಿಧಿಸಿದೆ. ಮಾದರಿ ಸಂಗ್ರಹದ ದಿನಾಂಕದಿಂದ (ಫೆಬ್ರವರಿ 18, 2021) ಅವರ ಎಲ್ಲಾ ಫಲಿತಾಂಶಗಳನ್ನು ಅನರ್ಹಗೊಳಿಸಲಾಗಿದೆ.
Published On - 5:03 pm, Tue, 20 September 22




