ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್​ಗೆ ಆ ಬೌಲರ್​ನ ಕಂಡ್ರೆ ಢವಢವ!

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್​ನ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ವಿಶ್ವದ ಘಟಾನುಘಟಿ ಬೌಲರ್​ಗಳ ಮೇಲೆ ಪ್ರಾಬಲ್ಯ ಸಾಧಿಸಿರೋ ದಿಗ್ಗಜರು ಅಂದ್ರೂ ತಪ್ಪಾಗೋದಿಲ್ಲ. ಆದ್ರೆ ಸ್ಟೀವನ್ ಸ್ಮಿತ್​ಗೆ ಆ ಬೌಲರ್​ನ ಎಸೆತ ಎದುರಿಸೋಕೆ ಮಾತ್ರ ಬಹಳ ಕಷ್ಟವಾಗುತ್ತದೆ ಅಂತಾ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಹಾಗಾದ್ರೆ ಆ ಬೌಲರ್ ಯಾರು ಗೊತ್ತಾ? ಅಭಿಮಾನಿ ಹತ್ರ ಇನ್​ಸ್ಟಾಗ್ರಾಮ್ ಲೈವ್​ನಲ್ಲಿ ಅಂಜಿಕೆ ತೋಡಿಕೊಂಡ ಸ್ಮಿತ್​! […]

ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್​ಗೆ ಆ ಬೌಲರ್​ನ ಕಂಡ್ರೆ ಢವಢವ!
Follow us
KUSHAL V
| Updated By: ಆಯೇಷಾ ಬಾನು

Updated on:Jun 18, 2020 | 2:44 PM

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್​ನ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ವಿಶ್ವದ ಘಟಾನುಘಟಿ ಬೌಲರ್​ಗಳ ಮೇಲೆ ಪ್ರಾಬಲ್ಯ ಸಾಧಿಸಿರೋ ದಿಗ್ಗಜರು ಅಂದ್ರೂ ತಪ್ಪಾಗೋದಿಲ್ಲ. ಆದ್ರೆ ಸ್ಟೀವನ್ ಸ್ಮಿತ್​ಗೆ ಆ ಬೌಲರ್​ನ ಎಸೆತ ಎದುರಿಸೋಕೆ ಮಾತ್ರ ಬಹಳ ಕಷ್ಟವಾಗುತ್ತದೆ ಅಂತಾ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಹಾಗಾದ್ರೆ ಆ ಬೌಲರ್ ಯಾರು ಗೊತ್ತಾ?

ಅಭಿಮಾನಿ ಹತ್ರ ಇನ್​ಸ್ಟಾಗ್ರಾಮ್ ಲೈವ್​ನಲ್ಲಿ ಅಂಜಿಕೆ ತೋಡಿಕೊಂಡ ಸ್ಮಿತ್​!

ಇನ್​ಸ್ಟಾಗ್ರಾಮ್​ ಲೈವ್​ ಸೆಷನ್​ ವೇಳೆ ಸ್ಮಿತ್​ಗೆ ಅಭಿಮಾನಿಯೊಬ್ಬ ನಿಮಗೆ ಯಾವ ಬೌಲರ್​ನ ಎಸೆತ ಎದುರಿಸೋಕೆ ಕಷ್ಟವಾಗುತ್ತೆ ಅಂತಾ ಪ್ರಶ್ನೆ ಕೇಳಿದ್ದ. ಇದಕ್ಕೆ ಸ್ಮಿತ್ ನನಗೆ ಪಾಕಿಸ್ತಾನ ತಂಡದ ಯುವ ಫಾಸ್ಟ್​ ಬೌಲರ್​ ಮೊಹಮ್ಮದ್ ಅಮೀರ್​ನ ಬೌಲಿಂಗ್​ನ ಎದುರಿಸೋದು ಕೊಂಚ ಕಷ್ಟ ಎಂದು ಹೇಳಿದ್ದಾರೆ. ಮೊಹಮ್ಮದ್ ಅಮೀರ್ ನಾನು ಇಲ್ಲಿಯವರೆಗೆ ಎದುರಿಸಿರುವ ಅತ್ಯಂತ ಪ್ರತಿಭಾವಂತ ಬೌಲರ್ ಎಂದು ಭಾವಿಸುತ್ತೇನೆ ಅಂತಾ ತಮ್ಮ ಫ್ಯಾನ್​ ಹತ್ತಿರ ಸೆಷನ್​ ವೇಳೆ ಹಂಚಿಕೊಂಡರು.

‘ಕಮ್​ಬ್ಯಾಕ್’ ಬಾಯ್ ಮೊಹಮ್ಮದ್ ಅಮೀರ್ ಇಡೀ ಕ್ರಿಕೆಟ್ ಲೋಕವನ್ನೇ ಬೆಚ್ಚಿಬೀಳಿಸಿದ್ದ 2010ರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಪಾಲ್ಗೊಂಡಿದ್ದ ಮೊಹಮ್ಮದ್ ಅಮೀರ್​ಗೆ 5 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿಷೇಧ ಹೇರಲಾಗಿತ್ತು. ಹಾಗಿದ್ರೂ ನಿಷೇಧಾವಧಿ ಮುಗಿದ ಬಳಿಕ ಅಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಿದ್ರು. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಪಾಕಿಸ್ತಾನ ಪ್ರಪ್ರಥಮ ಬಾರಿಗೆ ಟ್ರೋಫಿ ಗೆಲ್ಲುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು.

ಇದೀಗ ಖ್ಯಾತ ಬ್ಯಾಟ್ಸ್​ಮನ ಸ್ಮಿತ್​ ಅವರ ಪ್ರಶಂಸೆಯ ಮಾತುಗಳಿಂದ ತಮ್ಮ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ.

Published On - 6:13 pm, Wed, 17 June 20

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ