BBL: 2 ಜೀವದಾನ ಸಿಕ್ಕರೂ ಕೇವಲ 2 ರನ್ಗಳಿಗೆ ಔಟಾದ ಬಾಬರ್ ಆಝಂ; ವಿಡಿಯೋ
Babar Azam's Disappointing BBL Debut: ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ 15 ನೇ ಸೀಸನ್ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಬಾಬರ್ ಅಜಮ್ ಸಿಡ್ನಿ ಸಿಕ್ಸರ್ಸ್ ಪರ ಬಿಬಿಎಲ್ ಪದಾರ್ಪಣೆ ಮಾಡಿದರು. ಮಳೆಯಿಂದಾಗಿ 11 ಓವರ್ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಬಾಬರ್ ಕೇವಲ 5 ಎಸೆತಗಳಲ್ಲಿ 2 ರನ್ ಗಳಿಸಿ ನಿರಾಶಾದಾಯಕ ಪ್ರದರ್ಶನ ನೀಡಿದರು. 2 ಜೀವದಾನಗಳು ಸಿಕ್ಕರೂ ದೊಡ್ಡ ಇನ್ನಿಂಗ್ಸ್ ಕಟ್ಟಲು ವಿಫಲರಾದದ್ದು ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಹಿನ್ನಡೆಯಾಯಿತು.
ಆಸ್ಟ್ರೇಲಿಯಾದ ಟಿ20 ಲೀಗ್ ಬಿಗ್ ಬ್ಯಾಷ್ ಲೀಗ್ನ 15 ನೇ ಸೀಸನ್ ಅದ್ದೂರಿಯಾಗಿ ಆರಂಭವಾಗಿದೆ. ಪರ್ತ್ ಸ್ಕಾರ್ಚರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ತಂಡಗಳು ಈ ಸೀಸನ್ನ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದೊಂದಿಗೆ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ಮನ್ ಬಾಬರ್ ಆಝಂ ಕೂಡ ಬಿಗ್ ಬ್ಯಾಷ್ನಲ್ಲಿ ತನ್ನ ಚೊಚ್ಚಲ ಪಂದ್ಯವನ್ನಾಡಿದರು. ಈ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ಪರ ಆಡುತ್ತಿರುವ ಬಾಬರ್ ತಮ್ಮ ಚೊಚ್ಚಲ ಪಂದ್ಯದಲ್ಲೇ ನಿರಾಶಾದಾಯಕ ಪ್ರದರ್ಶನ ನೀಡಿದರು.
ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣದಿಂದಾಗಿ ಪಂದ್ಯವನ್ನು ತಲಾ 11 ಓವರ್ಗಳಿಗೆ ಸೀಮಿತಗೊಳಿಸಲಾಯಿತು. ಪರ್ತ್ ಸ್ಕಾರ್ಚರ್ಸ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಸಿಡ್ನಿ ಸಿಕ್ಸರ್ಸ್ ತಂಡವು ಕಳಪೆ ಆರಂಭ ಪಡೆದುಕೊಂಡಿತು. ಏಕೆಂದರೆ ತಂಡದ ರನ್ ಖಾತೆ ತೆರೆಯದೆಯೇ ಮೊದಲ ವಿಕೆಟ್ ಪತನವಾಯಿತು. ನಂತರ ಕ್ರಿಸ್ಗೆ ಬಂದ ಬಾಬರ್ ಆಝಂ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ತಮ್ಮ ಇನ್ನಿಂಗ್ಸ್ನಲ್ಲಿ ಐದು ಎಸೆತಗಳನ್ನು ಎದುರಿಸಿದ ಬಾಬರ್ ಕೇವಲ ಎರಡು ರನ್ಗಳಿಗೆ ಔಟಾದರು. ಅಚ್ಚರಿಯ ಸಂಗತಿಯೆಂದರೆ ಅವರ ಈ ಅಲ್ಪ ಇನ್ನಿಂಗ್ಸ್ನಲ್ಲಿಯೇ ಅವರಿಗೆ 2 ಜೀವದಾನಗಳು ಸಿಕ್ಕವು. ಬಾಬರ್ ಆಡಿದ ಎರಡು ಹೊಡೆತಗಳು ಗಾಳಿಯಲ್ಲಿ ಹೋದವು. ಆದರೆ ಅಲ್ಲಿ ಫೀಲ್ಡರ್ಗಳು ಇಲ್ಲದ ಕಾರಣ ಅವರು ಔಟಾಗುವುದರಿಂದ ಪಾರಾಗಿದ್ದರು. ಆದರೆ ಈ 2 ಜೀವದಾನಗಳ ಹೊರತಾಗಿಯೂ ಇನ್ನಿಂಗ್ಸ್ನ ಐದನೇ ಎಸೆತದಲ್ಲಿ ದೊಡ್ಡ ಶಾಟ್ ಹೊಡೆಯಲು ಪ್ರಯತ್ನಿಸಿ ಸುಲಭ ಕ್ಯಾಚ್ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

