ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಸುದೀಪ್ ಸತತ 12 ಸೀಸನ್ಗಳಲ್ಲಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಿರೂಪಣೆ ಮಾಡಿದ್ದಾರೆ. 12ನೇ ಸೀಸನ್ ನಡೆಸಿಕೊಳ್ಳುತ್ತಾರೋ ಇಲ್ಲವೋ ಎನ್ನುವ ಗೊಂದಲ ಇತ್ತು. ಮೊದಲು ಬೇಡ ಎಂದು, ನಂತರ ಸುದೀಪ್ ಒಪ್ಪಿಕೊಂಡರು. ಆ ಬಗ್ಗೆ ಟಿವಿ9 ಸಂದರ್ಶನದಲ್ಲಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ಕಿಚ್ಚ ಸುದೀಪ್ (Kichcha Sudeep) ಅವರು ಸತತ 12 ಸೀಸನ್ಗಳಲ್ಲಿ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ನಿರೂಪಣೆ ಮಾಡಿದ್ದಾರೆ. ಅವರು 12ನೇ ಸೀಸನ್ ನಡೆಸಿಕೊಳ್ಳುತ್ತಾರೋ ಇಲ್ಲವೋ ಎಂಬ ಗೊಂದಲ ಇತ್ತು. ಮೊದಲು ಬೇಡ ಎಂದು, ನಂತರ ಸುದೀಪ್ ಅವರು ಒಪ್ಪಿಕೊಂಡರು. ಆ ಬಗ್ಗೆ ಟಿವಿ9 ಸಂದರ್ಶನದಲ್ಲಿ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ಕೆಲವು ಕಾರಣಗಳಿಂದಾಗಿ ಸುದೀಪ್ ಅವರು ಬಿಗ್ ಬಾಸ್ (Bigg Boss Kannada) ಬೇಡ ಎಂಬ ನಿರ್ಧಾರ ಮಾಡಿದ್ದರು. ಆದರೆ ವಾಹಿನಿ ಕಡೆಯಿಂದ ಮಾತುಕಥೆ ನಡೆದ ಬಳಿಕ ಅವರು ಪುನಃ ಒಪ್ಪಿಕೊಂಡರು. ‘ವಾಹಿನಿಯವರು ತೋರಿಸಿದ ಪ್ರೀತಿಗೆ ನಾನು ತಲೆಬಾಗಬೇಕಾಯಿತು. ಆಗ ನನಗೆ ಬಿಗ್ ಬಾಸ್ ಬೇಡ ಎನ್ನಲು ಬೇರೆ ಕಾರಣ ಸಿಗಲಿಲ್ಲ. ಇಷ್ಟ ಇಲ್ಲ ಅಂತ ನಾನು ಹೇಳೋಕೆ ಆಗಲ್ಲ. ಯಾಕೆಂದರೆ ಅದು ನನ್ನ ಇಷ್ಟದ ಶೋ. ಹಾಗಿದ್ದರೂ ನಾನು ಮಾಡಲ್ಲ ಎನ್ನಬೇಕಾದರೆ ದುರಹಂಕಾರ ಇರಬೇಕು. ಆ ರೀತಿ ಆಹಂ ಸಮಸ್ಯೆ ನನಗೆ ಇಲ್ಲ’ ಎಂದು ಸುದೀಪ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

