2012 ಡೆಕ್ಕನ್ ಚಾರ್ಜರ್ಸ್ ವಜಾ ಪ್ರಕರಣ: ಡಿಸಿಎಚ್ಎಲ್ಗೆ ಬಿಸಿಸಿಐ ಪರಿಹಾರ ರೂಪದಲ್ಲಿ ರೂ. 4,880 ಕೋಟಿ ನೀಡಬೇಕಿಲ್ಲವೆಂದ ಬಾಂಬೆ ಹೈಕೋರ್ಟ್
ಆರ್ಬಿಟ್ರೇಟರ್ ಅವರು ಡಿಎಚ್ಸಿಎಲ್ಗೆ ಆಗಿರುವ ಹಾನಿಗೆ ರೂ 600 ಕೋಟಿ ಮತ್ತು ಪರಿಹಾರದ ಮೊತ್ತವಾಗಿ ರೂ 4.150 ಕೋಟಿ ನೀಡಬೇಕು ಎಂದು ತೀರ್ಪಿನಲ್ಲಿ ಹೇಳಿದ್ದರು. ಅವರ ತೀರ್ಪನ್ನು ಬಿಸಿಸಿಐ ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು.
ಮುಂಬೈ: ಹಿಂದೆ ಇಂಡಿಯನ್ ಪ್ರಿಮೀಯರ್ ಲೀಗ್ ಭಾಗವಾಗಿದ್ದ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ ಲಿಮಿಟೆಡ್ ಸಂಸ್ಥೆಯ (ಡಿಸಿಎಚ್ಎಲ್) ಡೆಕ್ಕನ್ ಚಾರ್ಜರ್ಸ್ (ಡಿಸಿ) ಟೀಮನ್ನು ಟೂರ್ನಿಯಿಂದ ವಜಾ ಮಾಡಿದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಡಿಸಿಎಚ್ಎಲ್ ಸಂಸ್ಥೆಗೆ ರೂ 4,800 ಕೋಟಿಗಳನ್ನು ಪರಿಹಾರ ರೂಪದಲ್ಲಿ ನೀಡಬೇಕು ಎಂದು ನ್ಯಾಯಾಧೀಶರೊಬ್ಬರು ನೀಡಿದ್ದ ತೀರ್ಪನ್ನು ಬಾಂಬೆ ಹೈಕೋರ್ಟ್ ತಳ್ಳಿ ಹಾಕಿದೆ. ಕೋರ್ಟಿನ ತೀರ್ಪು ಕ್ರಿಕೆಟ್ ಮಂಡಳಿಗೆ ನಿರಾಳವಾಗಿಸಿರುವುದರಲ್ಲಿ ಸಂದೇಹವಿಲ್ಲ. ಬಿಸಿಸಿಐ, ಡೆಕ್ಕನ್ ಚಾರ್ಜರ್ಸ್ ತಂಡವನ್ನು ಟರ್ಮಿನೇಟ್ ಮಾಡಿದ್ದು ಕಾನೂನುಬದ್ಧವೇ ಅಥವಾ ಕಾನೂನುಬಾಹಿರವೇ ಎನ್ನುವುದನ್ನು ಖಚಿತಪಡಿಸಲು 2012ರಲ್ಲಿ ನಿಯುಕ್ತಿಗೊಳಿಸಿದ್ದ ನ್ಯಾಯಾಧೀಶರೊಬ್ಬರ ತೀರ್ಪನ್ನು ನ್ಯಾಯಮೂರ್ತಿ ಗೌತಮ್ ಎಸ್ ಪಟೇಲ್ ಅವರ ಏಕ-ಸದಸ್ಯ ಪೀಠವು ಬದಿಗಿರಿಸಿದೆ.
ಡಿಸಿಎಚ್ಎಲ್ ಸಂಸ್ಥೆಗೆ ಬಿಸಿಸಿಐ ರೂ 30 ಕೋಟಿ ನೀಡುವುದು ಬಾಕಿಯಿದ್ದು ಕ್ರಿಕೆಟ್ ಮಂಡಳಿ ಆ ಮೊತ್ತವನ್ನು ಬಡ್ಡಿ ಸಮೇತ ನೀಡಬೇಕೆಂದು ತೀರ್ಪನ್ನು ನೀಡುವ ಸಂದರ್ಭದಲ್ಲಿ ಪೀಠವು ಹೇಳಿತು. ಕಳೆದ ವರ್ಷ ಜುಲೈನಲ್ಲಿ ಹೈಕೋರ್ಟ್ ನಿಯುಕ್ತಿಗೊಳಿಸಿದ್ದ ಆರ್ಬಿಟ್ರೇಟರ್, ಐಪಿಎಲ್ನ ಎಂಟು ಟೀಮುಗಳಲ್ಲಿ ಒಂದಾಗಿದ್ದ ಡೆಕ್ಕನ ಚಾರ್ಜರ್ಸ್ ಪರ ತೀಪನ್ನು ಪ್ರಕಟಿಸಿ ಬಿಸಿಸಿಐ ಟೀಮನ್ನು ವಜಾ ಮಾಡಿದ್ದು ಅಕ್ರಮ ಅಂತ ಹೇಳಿ ರೂ. 4,800 ಪರಿಹಾರ ಮತ್ತು ಅದರ ಮೇಲಿನ ಬಡ್ಡಿಯನ್ನು ನೀಡಬೇಕೆಂದು ಎಂದು ತೀರ್ಪು ನೀಡಿದ್ದರು.
ಆರ್ಬಿಟ್ರೇಟರ್ ಅವರು ಡಿಎಚ್ಸಿಎಲ್ಗೆ ಆಗಿರುವ ಹಾನಿಗೆ ರೂ 600 ಕೋಟಿ ಮತ್ತು ಪರಿಹಾರದ ಮೊತ್ತವಾಗಿ ರೂ 4.150 ಕೋಟಿ ನೀಡಬೇಕು ಎಂದು ತೀರ್ಪಿನಲ್ಲಿ ಹೇಳಿದ್ದರು. ಅವರ ತೀರ್ಪನ್ನು ಬಿಸಿಸಿಐ ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು.
ಬಿಸಿಸಿಐ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆರ್ಬಿಟ್ರೇಷನ್ ನ್ಯಾಯಮಂಡಳಿಯು ವಿಚಾರಣೆಯನ್ನು ಬಿಸಿಸಿಐ ಮತ್ತು ಡಿಸಿಎಚ್ಎಲ್ ನಡುವೆ ಆಗಿದ್ದ ಕರಾರಿಗೆ ತದ್ವಿರುದ್ಧವಾಗಿ ನಡೆಸಿದೆ, ಟೀಮಿನ ಆಟಗಾರರರಿಗೆ ಮತ್ತು ಸಪೋರ್ಟ್ ಸ್ಟಾಫ್ ಮಾಡಿದ ಪೇಮೆಂಟ್ಗಳನ್ನು ಅದು ಸರಿಯಾಗಿ ಮಾಡಿದ್ದರೆ ಬಿಸಿಸಿಐ ಮಾಡಿದ ಟರ್ಮಿನೇಚನ್ ತಪ್ಪೆನಿಸುತಿತ್ತು ಎಂದು ವಾದಿಸಿದರು. ಆದರೆ ಆರ್ಬಿಟ್ರೇಷನ್ ನ್ಯಾಯಮಂಡಳಿಯು ಕರಾರನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಅದನ್ನು ತಾನೇ ಪುನಃ ಬರೆಯುವ ಹಂತಕ್ಕೆ ಹೋಗಿದ್ದು ಆಟಗಾರರಿಗೆ ಮತ್ತು ಸಪೋರ್ಟ್ ಸ್ಟಾಫ್ಗೆ ಬಿಸಿಸಿಐ ಹಣ ಪಾವತಿಸಿಬೇಕಿತ್ತು ಎಂದು ಹೇಳಿದೆ ಅಂತ ಮೆಹ್ತಾ ಅವರು ಹೈಕೋರ್ಟ್ ಪೀಠಕ್ಕೆ ತಿಳಿಸಿದರು.
ಬಿಸಿಸಿಐ ರೂ 4,150 ಕೋಟಿಗಳನ್ನು ಯಾವ ಕಾರಣಕ್ಕೆ ಡಿಸಿಎಚ್ಎಲ್ಗೆ ನೀಡಬೇಕು ಎನ್ನುವುದನ್ನು ಹೇಳದೆ ಆರ್ಬಿಟ್ರೇಷನ್ ನ್ಯಾಯಮಂಡಳಿಯು ಬಹಳ ದೊಡ್ಡ ಪ್ರಮಾದ ಎಸಗಿದೆ. ಆ ಮೊತ್ತವನ್ನು ನಿರ್ಣಯಿಸುವುದರ ಹಿಂದೆ ಯಾವುದೇ ತರ್ಕ ಮತ್ತು ವಿಧಾನವಿಲ್ಲ ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು.
ಡಿಸಿಎಚ್ಎಲ್ 2012 ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ ಯಶಸ್ವೀಯಾಗಿ ಬಿಡ್ ಮಾಡಿ ಡೆಕ್ಕನ್ ಚಾರ್ಜರ್ಸ್ ಮತ್ತು ಬಿಸಿಸಿಐ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಡಿಸಿಎಚ್ಎಲ್ ಮತ್ತು ಕ್ರಿಕೆಟ್ ಮಂಡಳಿ ನಡುವೆ ವ್ಯಾಜ್ಯ ಶುರುವಾಯಿತು. ಆದರೆ ಅದೇ ವರ್ಷ ಬಿಸಿಸಿಐ ಡಿಸಿಯನ್ನು ಟರ್ಮಿನೇಟ್ ಮಾಡುವುದಕ್ಕೋಸ್ಕರ ಡಿಸಿಎಚ್ಎಲ್ಗೆ ಒಂದು ಶೋಕಾಸ್ ನೋಟಿಸನ್ನು ಜಾರಿಮಾಡಿತು. ನೋಟೀಸಿಗೆ ಪ್ರತಿಕ್ರಿಯಿಸಲು ನೀಡಿದ್ದ 30 ದಿನಗಳ ಕಾಲಾವಧಿ ತೀರುವ ಒಂದು ದಿನ ಮೊದಲೇ ಡಿಸಿಯನ್ನು ಟರ್ಮಿನೇಟ್ ಮಾಡಿದ್ದು ಧೃಡಪಟ್ಟಿತು.
ವ್ಯಾಕುಲಗೊಂಡ ಡಿಸಿಎಚ್ಎಲ್ ಸೆಪ್ಟಂಬರ್ 2012 ರಲ್ಲಿ ಬಿಸಿಸಿಐ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೊಕ್ಕಿತು. ಪ್ರಕರಣದ ವಿಚಾರಣೆ ನಡೆಸಲು ಹೈಕೋರ್ಟ್ ಸುಪ್ರೀಮ್ ಕೋರ್ಟ್ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ (ರಿ) ಅವರನ್ನು ಏಕೈಕ ಆರ್ಬಿಟ್ರೇಟರ್ ಆಗಿ ನೇಮಕ ಮಾಡಿದ ನಂತರ ಅವರು ಕಳೆದ ಜುಲೈನಲ್ಲಿ ಡಿಎಚ್ಸಿಎಲ್ ಪರ ತೀರ್ಪು ನೀಡಿದ್ದರು.
ಇದನ್ನೂ ಓದಿ: BCCI: ವಾರದೊಳಗೆ ಬಹುಮಾನದ ಹಣ ವಿತರಿಸಲಾಗುವುದು; ಮಾನ ಹರಾಜಾದ ಮೇಲೆ ಬುದ್ಧಿ ಕಲಿತ ಬಿಸಿಸಿಐ