ಹೊಸ ವರ್ಷದ ಮೊದಲ ಎರಡು ಸರಣಿಗೆ ಟೀಮ್ ಇಂಡಿಯಾ ತಂಡ ಪ್ರಕಟ

ಹೊಸ ವರ್ಷದ ಮೊದಲ ಎರಡು ಸರಣಿಗೆ ಟೀಮ್ ಇಂಡಿಯಾ ತಂಡ ಪ್ರಕಟ
ಟೀಂ ಇಂಡಿಯಾ

ವೆಸ್ಟ್ ಇಂಡೀಸ್ ವಿರುದ್ಧದ ಟಿಟ್ವೆಂಟಿ ಸರಣಿ ಮತ್ತು ಏಕದಿನ ಸರಣಿ ಗೆದ್ದಿರುವ ಟೀಮ್ ಇಂಡಿಯಾ ವರ್ಷಾಂತ್ಯದಲ್ಲಿ ಹರುಷ ಕಂಡಿದೆ. ಈ ಮೂಲಕ ಹೊಸ ವರುಷವನ್ನ ಸಂಭ್ರಮದಿಂದ ಬರಮಾಡಿಕೊಳ್ಳೋಕೆ ಕೊಹ್ಲಿ ಹುಡುಗ್ರು ರೆಡಿಯಾಗಿದ್ದಾರೆ. ಹೊಸ ವರ್ಷದ ಮೊದಲ ಸರಣಿ ಅಂದ್ರೆ ಶ್ರೀಲಂಕಾ ವಿರುದ್ಧದ ಟಿಟ್ವೆಂಟಿ ಸರಣಿಗಾಗಿ ಟೀಮ್ ಇಂಡಿಯಾವನ್ನ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ಇದ್ರ ಜೊತೆಗೆ ಕುತೂಹಲ ಕೆರಳಿಸಿರುವ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಭಾರತ ತಂಡ ಪ್ರಕಟಗೊಂಡಿದೆ. ಹಾಗಾದ್ರೆ, ಸಿಂಹಳೀಯರ ಬೇಟೆಗೆ ಕೊಹ್ಲಿ ಸೈನ್ಯ […]

sadhu srinath

|

Dec 24, 2019 | 1:15 PM

ವೆಸ್ಟ್ ಇಂಡೀಸ್ ವಿರುದ್ಧದ ಟಿಟ್ವೆಂಟಿ ಸರಣಿ ಮತ್ತು ಏಕದಿನ ಸರಣಿ ಗೆದ್ದಿರುವ ಟೀಮ್ ಇಂಡಿಯಾ ವರ್ಷಾಂತ್ಯದಲ್ಲಿ ಹರುಷ ಕಂಡಿದೆ. ಈ ಮೂಲಕ ಹೊಸ ವರುಷವನ್ನ ಸಂಭ್ರಮದಿಂದ ಬರಮಾಡಿಕೊಳ್ಳೋಕೆ ಕೊಹ್ಲಿ ಹುಡುಗ್ರು ರೆಡಿಯಾಗಿದ್ದಾರೆ.

ಹೊಸ ವರ್ಷದ ಮೊದಲ ಸರಣಿ ಅಂದ್ರೆ ಶ್ರೀಲಂಕಾ ವಿರುದ್ಧದ ಟಿಟ್ವೆಂಟಿ ಸರಣಿಗಾಗಿ ಟೀಮ್ ಇಂಡಿಯಾವನ್ನ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ಇದ್ರ ಜೊತೆಗೆ ಕುತೂಹಲ ಕೆರಳಿಸಿರುವ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಭಾರತ ತಂಡ ಪ್ರಕಟಗೊಂಡಿದೆ. ಹಾಗಾದ್ರೆ, ಸಿಂಹಳೀಯರ ಬೇಟೆಗೆ ಕೊಹ್ಲಿ ಸೈನ್ಯ ಹೇಗಿದೆ. ಕಾಂಗರೂಗಳನ್ನ ಖತಂ ಮಾಡೋಕೆ ವಿರಾಟ್ ಪಡೆಯಲ್ಲಿ ಯಾಱರು ಸ್ಥಾನ ಪಡೆದಿದ್ದಾರೆ ಅಂತ ಇಲ್ಲಿ ತಿಳಿಯಿರಿ..

ಲಂಕಾ ಸರಣಿ.. ರೋಹಿತ್​ಗೆ ವಿಶ್ರಾಂತಿ.. ಧವನ್,ಬೂಮ್ರಾ ಕಮ್​ಬ್ಯಾಕ್! ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರು ಟಿಟ್ವೆಂಟಿ ಪಂದ್ಯಗಳ ಸರಣಿ ಇದೇ ಜನವರಿ 5ರಿಂದ ಆರಂಭವಾಗಲಿದೆ. 2020ರ ಹೊಸ ವರ್ಷದ ಮೊದಲ ಸರಣಿ ಇದಾಗಿದ್ದು, ಭಾರೀ ಕ್ರೇಜ್ ಹುಟ್ಟು ಹಾಕಿದೆ. ಹೀಗಾಗಿ ಸಿಂಹಳೀಯರ ಬೇಟೆಗೆ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ. ಸತತ ಸರಣಿ ಆಡ್ತಿದ್ದ, ಹಿಟ್​ಮ್ಯಾನ್ ರೋಹಿತ್ ಶರ್ಮಾಗೆ ಲಂಕಾ ಟಿಟ್ವೆಂಟಿ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹಾಗೇ ವಿಂಡೀಸ್ ಸರಣಿ ಬಳಿಕ ಇಂಜುರಿಗೆ ತುತ್ತಾಗಿ ಚೇತರಿಸಿಕೊಂಡಿರುವ ಜಸ್ಪ್ರೀತ್ ಬೂಮ್ರಾಗೆ ಮತ್ತು ದೇಸಿ ಕ್ರಿಕೆಟ್​ನಲ್ಲಿ ಗಾಯಗೊಂಡು ಚೇತರಿಸಿಕೊಂಡಿರುವ ಶಿಖರ್ ಧವನ್ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ.

ಶ್ರೀಲಂಕಾ ಟಿಟ್ವೆಂಟಿ ಸರಣಿಗೆ ಭಾರತ ತಂಡ: ಶ್ರೀಲಂಕಾ ಟಿಟ್ವೆಂಟಿ ಸರಣಿಗೆ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 15 ಮಂದಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.. ಆರಂಭಿಕರಾಗಿ ಶಿಖರ್ ಧವನ್, ಕೆ.ಎಲ್.ರಾಹುಲ್ ಸ್ಥಾನ ಪಡೆದ್ರೆ, ಶ್ರೇಯಸ್ ಐಯ್ಯರ್ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ವಿಕೆಟ್ ಕೀಪರ್ ಆಗಿ ರಿಷಬ್ ಪಂತ್​ಗೆ ಲಂಕಾ ಸರಣಿಯಲ್ಲೂ ಅವಕಾಶ ಸಿಕ್ಕಿದೆ.

ರವೀಂದ್ರ ಜಡೇಜಾ ಮತ್ತು ಶಿವಂ ದುಬೆ ಆಲ್​ರೌಂಡರ್ ಕೋಟಾದಡಿ ಚಾನ್ಸ್ ಸಿಕ್ಕಿದ್ರೆ ಸ್ಪಿನ್ನರ್​ಗಳಾಗಿ ಯಜ್ವಿಂದರ್ ಚಹಲ್, ಕುಲ್​ದೀಪ್ ಯಾದವ್ ಸ್ಪಿನ್ ಕೋಟಾದಲ್ಲಿ ಆಯ್ಕೆಯಾಗಿದ್ದಾರೆ. ಪೇಸರ್ ಕೋಟಾದಡಿಯಲ್ಲಿ ಯಾರ್ಕರ್ ಕಿಂಗ್ ಜಸ್ಪ್ರೀತ್ ಬೂಮ್ರಾ ಸ್ಥಾನ ಪಡೆದಿದ್ದು, ನವದೀಪ್ ಸೈನಿ ಮತ್ತು ಶಾರ್ದೂಲ್ ಠಾಕೂರ್​ಗೂ ಚಾನ್ಸ್ ಸಿಕ್ಕಿದೆ. ಇನ್ನು ಕನ್ನಡಿಗ ಮನೀಶ್ ಪಾಂಡೆ, ವಾಷಿಂಗ್ಟನ್ ಸುಂದರ್ ಮತ್ತು ಸಂಜು ಸ್ಯಾಮ್ಸನ್​ಗೆ ಬಿಸಿಸಿಐ ಲಂಕಾ ಸರಣಿಯಲ್ಲಿ ಮಣೆಹಾಕಿದೆ.

ಆಸ್ಟ್ರೇಲಿಯಾ ಏಕದಿನ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ: ಶ್ರೀಲಂಕಾ ಟಿಟ್ವೆಂಟಿ ಸರಣಿ ಮುಗಿತಿದ್ದಂತೆ, ಭಾರತ ಮತ್ತು ಆಸಿಸ್ ನಡುವಿನ ಏಕದಿನ ಸರಣಿ ಆರಂಭವಾಗಲಿದೆ. ಜನವರಿ 16 ರಿಂದ 3ಏಕದಿನ ಪಂದ್ಯಗಳ ಇಂಡೋ-ಆಸಿಸ್ ಏಕದಿನ ಸರಣಿ ಶುರುವಾಗಲಿದೆ. ಈ ಸರಣಿಗೆ ಈಗಾಗ್ಲೇ ಆಸ್ಟ್ರೇಲಿಯಾ ತಂಡವನ್ನ ಪ್ರಕಟಿಸಲಾಗಿದೆ. ಹೀಗಾಗಿ ಬಲಿಷ್ಠ ವಿರಾಟ್ ಸೈನ್ಯವನ್ನೇ ಬಿಸಿಸಿಐ ಸೆಲೆಕ್ಷನ್ ಬೋರ್ಡ್ ಆಯ್ಕೆಮಾಡಿದೆ.

ಆಸಿಸ್ ಏಕದಿನ ಸರಣಿಗೆ ಭಾರತ ತಂಡ: ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 15 ಮಂದಿ ಆಟಗಾರರಿಗೆ ಅವಕಾಶವನ್ನ ಕಲ್ಪಿಸಲಾಗಿದೆ. ಆರಂಭಿಕರಾಗಿ ಶಿಖರ್ ಧವನ್, ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ. ಶ್ರೇಯಸ್ ಐಯ್ಯರ್, ಕನ್ನಡಿಗ ಮನೀಷ್ ಪಾಂಡೆ ಮಿಡಲ್ ಆರ್ಡರ್ ಬ್ಯಾಟ್ಸ್​ಮನ್​ಗಳಾಗಿ ಸೆಲೆಕ್ಟ್ ಆಗಿದ್ದಾರೆ.

ವಿಕೆಟ್ ಕೀಪರ್ ಆಗಿ ರಿಷಬ್ ಪಂತ್ ಆಯ್ಕೆಯಾಗಿದ್ರೆ, ಆಲ್​ರೌಂಡರ್ ಕೋಟಾದಡಿಯಲ್ಲಿ ಕೇದಾರ್ ಜಾಧವ್, ರವೀಂದ್ರ ಜಡೇಜಾ ಮತ್ತು ಶಿವಂ ದುಬೆಗೆ ಚಾನ್ಸ್ ಸಿಕ್ಕಿದೆ. ಸ್ಪಿನ್ನರ್​ಗಳಾಗಿ ಕುಲ್​ದೀಪ್ ಯಾದವ್ ಮತ್ತು ಯಜ್ವಿಂದರ್ ಚಹಲ್ ಸ್ಥಾನ ಪಡೆದಿದ್ರೆ, ಸ್ಪೀಡ್ ಸ್ಟಾರ್​ಗಳಾಗಿ ನವದೀಪ್ ಸೈನಿ, ಶಾರ್ದೂಲ್ ಠಾಕೂರ್ ಮತ್ತು ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿಗೆ ಅವಕಾಶ ಸಿಕ್ಕಿದೆ.

ಜನವರಿ ತನಕ ಕಾಯಿರಿ ಎಂದಿದ್ದ ಧೋನಿಗೆ ಚಾನ್ಸೇ ಸಿಗ್ಲಿಲ್ಲ! ವಿಶ್ವಕಪ್ ಬಳಿಕ ಟೀಮ್ ಇಂಡಿಯಾದಿಂದ ದೂರವಿರುವ ಧೋನಿ ನಿವೃತ್ತಿ ಬಗ್ಗೆ ಚರ್ಚೆ ಆಗ್ತಿದೆ. ಆದ್ರೆ, ಧೋನಿ ಮಾತ್ರ ಈ ಬಗ್ಗೆ ಮೌನ ಮುರಿದಿಲ್ಲ. ಇತ್ತೀಚೆಗೆ ಧೋನಿ ಜನವರಿ ತನಕ ಕಾಯಿರಿ ಅಂತ ಹೇಳಿದ್ರು. ಆದ್ರೀಗ, ಲಂಕಾ ವಿರುದ್ಧದ ಟಿಟ್ವೆಂಟಿ ಸರಣಿ ಇರ್ಲೀ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಧೋನಿಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಹೀಗಾಗಿ ಧೋನಿ ಕ್ರಿಕೆಟ್ ಜೀವನದ ಬಗ್ಗೆ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಅನ್ನೋ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada