ICC T20 World Cup: ಟಿ-20 ವಿಶ್ವಕಪ್ ಟೂರ್ನಿ ಯುಎಇಗೆ ಸ್ಥಳಾಂತರ ಖಚಿತಪಡಿಸಿದ ಐಸಿಸಿ; ಪಂದ್ಯ ನಡೆಯುವ ದಿನಾಂಕ ಘೋಷಣೆ

| Updated By: ganapathi bhat

Updated on: Jun 29, 2021 | 5:28 PM

ಯುಎಇ, ಒಮನ್​ನಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಪಂದ್ಯ ನಡೆಯಲಿದೆ ಎಂದು ಐಸಿಸಿ ಹೇಳಿದೆ. ಅದರಂತೆ, ಭಾರತದಿಂದ ಯುಎಇಗೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಸ್ಥಳಾಂತರ ಆಗಿರುವ ಬಗ್ಗೆ ಮಾಹಿತಿ ಖಚಿತಪಡಿಸಿದೆ.

ICC T20 World Cup: ಟಿ-20 ವಿಶ್ವಕಪ್ ಟೂರ್ನಿ ಯುಎಇಗೆ ಸ್ಥಳಾಂತರ ಖಚಿತಪಡಿಸಿದ ಐಸಿಸಿ; ಪಂದ್ಯ ನಡೆಯುವ ದಿನಾಂಕ ಘೋಷಣೆ
ಪ್ರಾತಿನಿಧಿಕ ಚಿತ್ರ
Follow us on

ಮುಂಬೈ: ಟ್ವೆಂಟಿ ಟ್ವೆಂಟಿ ವಿಶ್ವಕಪ್ ಆರಂಭವಾಗುವ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಅಧಿಕೃತ ಮಾಹಿತಿ ನೀಡಿದೆ. ಅಕ್ಟೋಬರ್ 17 ರಿಂದ ಐಸಿಸಿ ಟಿ-ಟ್ವೆಂಟಿ ವಿಶ್ವಕಪ್ ಆರಂಭವಾಗಲಿದೆ ಎಂದು ಐಸಿಸಿ ಹೇಳಿದೆ. ನವೆಂಬರ್ 14 ರಂದು ಟಿ-ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಯುಎಇ, ಒಮನ್​ನಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಪಂದ್ಯ ನಡೆಯಲಿದೆ ಎಂದು ಐಸಿಸಿ ಹೇಳಿದೆ. ಅದರಂತೆ, ಭಾರತದಿಂದ ಯುಎಇಗೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಸ್ಥಳಾಂತರ ಆಗಿರುವ ಬಗ್ಗೆ ಮಾಹಿತಿ ಖಚಿತಪಡಿಸಿದೆ.

ಕೊರೊನಾ ಕಾರಣದಿಂದ ಟಿ-20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳನ್ನು ಯುಎಇಗೆ ಸ್ಥಳಾಂತರ ಮಾಡಲು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ನಿರ್ಧರಿಸಿದೆ. ಭಾರತದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ಐಪಿಎಲ್​ 2021 ಕೂಡಾ ದುಬೈನಲ್ಲಿ ನಡೆಯಲಿದೆ ಎಂದು ಈ ಹಿಂದೆ ಬಿಸಿಸಿಐ ಘೋಷಿಸಿತ್ತು. ಇದೀಗ ಟಿ-20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳನ್ನು ಯುಎಇಗೆ ಸ್ಥಳಾಂತರ ಮಾಡಬೇಕೆಂದು ತೀರ್ಮಾನಿಸಿ ಮಾಹಿತಿ ಖಚಿತಪಡಿಸಿದೆ.

ಹೋಸ್ಟಿಂಗ್ ಹಕ್ಕುಗಳು ಬಿಸಿಸಿಐನೊಂದಿಗೆ ಉಳಿಯುತ್ತವೆ
ಕೆಲವು ವಾರಗಳ ಊಹಾಪೋಹಗಳು, ಆತಂಕಗಳ ನಂತರ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ಸಂಘಟನೆಯ ಬಗ್ಗೆ ಈಗ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತದಲ್ಲಿ ನಡೆಯಲಿರುವ ಈ ಪಂದ್ಯಾವಳಿಯನ್ನು ಈಗ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಆಯೋಜಿಸಲಾಗುವುದು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಗ್ಗೆ ಒಪ್ಪಿಗೆ ನೀಡಿತ್ತು. ಯುಎಇಯಲ್ಲಿ ಪಂದ್ಯಾವಳಿಯನ್ನು ಆಡಲಾಗಿದ್ದರೂ, ಹೋಸ್ಟಿಂಗ್ ಹಕ್ಕುಗಳು ಬಿಸಿಸಿಐನೊಂದಿಗೆ ಉಳಿಯುತ್ತವೆ.

ಭಾರತದಲ್ಲಿ ಕೊರೊನಾ ವೈರಸ್​ನಿಂದ ಉಂಟಾದ ಬಿಕ್ಕಟ್ಟಿನಿಂದಾಗಿ, ವಿಶ್ವಕಪ್ ಆಯೋಜನೆಯ ಬಗ್ಗೆ ಅನುಮಾನವಿತ್ತು. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಭಾರತೀಯ ಮಂಡಳಿ ಈ ತಿಂಗಳು ಐಸಿಸಿಯಿಂದ ಸ್ವಲ್ಪ ಸಮಯ ಕೋರಿತ್ತು ಮತ್ತು ಜೂನ್ 28 ರೊಳಗೆ ಐಸಿಸಿಗೆ ತನ್ನ ನಿರ್ಧಾರವನ್ನು ತಿಳಿಸಬೇಕಾಗಿತ್ತು. ಈಗ ಬಿಸಿಸಿಐ ತನ್ನ ನಿರ್ಧಾರವನ್ನು ತೆಗೆದುಕೊಂಡಿದೆ. ಸುಮಾರು ಒಂದು ತಿಂಗಳ ಕಾಲ ನಡೆಯುವ ಈ ವಿಶ್ವಕಪ್, ಈಗ ಯುಎಇಯಲ್ಲಿ ಆಡಲಾಗುವುದು ಖಚಿತವಾಗಿದೆ.

ಇದನ್ನೂ ಓದಿ: T20 World Cup : ಟಿ-20 ವಿಶ್ವಕಪ್ ಯುಎಇಗೆ ಸ್ಥಳಾಂತರಗೊಳ್ಳಲು ಪಾಕಿಸ್ತಾನ ಕಾರಣ! ಅವರು ಬಂದರೆ ಗಲಭೆಗಳಾಗಬಹುದು; ಬಿಸಿಸಿಐ

20 ಓವರ್‌, ಕೇವಲ ಒಂದು ಬೌಂಡರಿ, 19 ಹೆಚ್ಚುವರಿ ರನ್; ಈ ಟಿ-20 ಪಂದ್ಯದ ವಿಶೇಷತೆಗಳು ಒಂದೆರಡಲ್ಲ

Published On - 5:13 pm, Tue, 29 June 21