Vinesh Phogat: ವಿನೀಶ್ ಫೋಗಟ್​​ಗೆ ಕಂಚಿನ ಪದಕ, 2.5 ಕೋಟಿ ರೂ. ನೀಡಲು ನಿರ್ಧರಿಸಿದ ಹರಿಯಾಣ ಸರ್ಕಾರ

ಒಲಿಂಪಿಕ್​​ನಲ್ಲಿ ಅನರ್ಹಗೊಂಡರೇನು? ಭಾರತದಲ್ಲಿ ನೀವು ಎಲ್ಲದಕ್ಕೂ ಅರ್ಹರೇ, ವಿನೀಶ್ ಫೋಗಟ್​​ಗೆ ವಿಶೇಷ ಗೌರವ ನೀಡಲು ಮುಂದಾದ ಹರಿಯಾಣ ಸರ್ಕಾರ. ಈ ಬಗ್ಗೆ ನಯಾಬ್ ಸಿಂಗ್ ಸೈನಿ ಅವರು ಫೋಗಟ್ ಅವರಿಗೆ ಗೌರವ ನೀಡಲು ಹಾಗೂ ಅವರಿಗೆ ಭವ್ಯ ಸ್ವಾಗತ ನೀಡಲು ನಮ್ಮ ಸರ್ಕಾರ ಬದ್ಧ ಎಂದು ಹೇಳಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ

Vinesh Phogat: ವಿನೀಶ್ ಫೋಗಟ್​​ಗೆ ಕಂಚಿನ ಪದಕ, 2.5 ಕೋಟಿ ರೂ. ನೀಡಲು ನಿರ್ಧರಿಸಿದ ಹರಿಯಾಣ ಸರ್ಕಾರ
ವಿನೇಶ್ ಫೋಗಟ್
Follow us
|

Updated on:Aug 08, 2024 | 2:13 PM

ಅದು ಕೊನೆಯ ಕ್ಷಣ, ಗೆಲುವಿಗೆ ಒಂದೇ ಮಟ್ಟಿಲು, ಹಲವು ವರ್ಷಗಳ ಶ್ರಮ, ಇಡಿ ಭಾರತಕ್ಕೆ ಬಂಗಾರ ಭರವಸೆಯಾಗಿದ್ದ ವಿನೀಶ್ ಫೋಗಟ್ ಫೈನಲ್​​ ತಲುಪಿದ್ದು ಮಾತ್ರ ಒಂದು ದೊಡ್ಡ ಸಾಹಸವೇ ಸರಿ. ಆಕೆ ಈ ಹಂತಕ್ಕೆ ಬರಲು ತನ್ನ ದೇಹದಲ್ಲಿ ಬೆವರಲ್ಲ, ರಕ್ತವನ್ನು ಸುರಿಸಿದ್ದಾಳೆ. ಇಂತಹ ವಿನೀಶ್ ಫೋಗಟ್ ಅನರ್ಹತೆ ಬಗ್ಗೆ ಇಡೀ ಭಾರತ ಛೇ ಮಿಸ್​​​ ಆಯಿತಲ್ಲ ಎಂದು ದುಃಖಿತರಾಗಿದ್ದು ಮಾತ್ರ ನಿಜ. ಈ ಸಾಹಸಿ ಹುಡುಗಿಗೆ ಒಲಿಂಪಿಕ್​​​​ನಲ್ಲಿ ಗೌರವ ಸಿಗದಿದ್ದಾರೆ ಏನಾಯಿತು? ನಮ್ಮ ಭಾರತದಲ್ಲಿ ಆಕೆಗೆ ಉನ್ನತ ಗೌರವ ಸಿಗುವುದು ಖಂಡಿತ, ಈಗಾಗಲೇ ಪ್ರಧಾನಿ ಮೋದಿ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಹರಿಯಾಣ ಸರ್ಕಾರ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ, ಅದೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು  ವಿನೀಶ್ ಫೋಗಟ್ ಫೈನಲ್​​ನಲ್ಲಿ ಅನರ್ಹ ನಂತರ ಭಾರೀ ದುಃಖ ವ್ಯಕ್ತಪಡಿಸಿದ್ದಾರೆ. ಇದೀಗ ವಿನೀಶ್ ಫೋಗಟ್ ಅವರಿಗೆ ಎಲ್ಲ ರೀತಿಯ ಗೌರವಗಳು ಸಿಗಬೇಕು. ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಅದ್ಭುತ ಪ್ರದರ್ಶನ ನೀಡಿ, ಫೈನಲ್​​​ ತಲುಪಿದ ವಿನೀಶ್ ಫೋಗಟ್ ಅವರು ಕೊನೆ ಕ್ಷಣದಲ್ಲಿ ತಮ್ಮ ದೇಹದಲ್ಲಿ ಗ್ರಾಂನಷ್ಟು ಕೆಜಿ ಹೆಚ್ಚಾದ ಕಾರಣ ಅವರನ್ನು ಅನರ್ಹ ಮಾಡಲಾಗಿತ್ತು. ಆದರೆ ಭಾರತ ಆ ದುಃಖವನ್ನು ಬದಿಗಿಟ್ಟು, ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ತಯಾರಿ ಮಾಡಿಕೊಂಡಿದೆ.

ಹರಿಯಾಣದಲ್ಲಿ ಸರ್ಕಾರ ಒಲಿಂಪಿಕ್​​ನಲ್ಲಿ ಕಂಚು, ಬೆಳ್ಳಿ, ಚಿನ್ನ ಗೆದ್ದವರಿಗೆ ವಿಶೇಷ ಗೌರವ ನೀಡಲಾಗುತ್ತದೆ. ಇದೀಗ ಈ ಗೌರವ ವಿನೀಶ್ ಫೋಗಟ್ ಅವರಿಗೂ ನೀಡಲು ಸರ್ಕಾರ ಮುಂದಾಗಿದೆ. ಹರಿಯಾಣದಲ್ಲಿ ಕಂಚು ಗೆದ್ದವರಿಗೆ ನೀಡುವ ಗೌರವವನ್ನು ವಿನೀಶ್ ಫೋಗಟ್ ಅವರಿಗೆ ನೀಡಲಾಗುವುದು ಎಂದು ಹೇಳಿದೆ. ವಿನೇಶ್, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ” ಎಂದು  ಹರಿಯಾಣ ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ಭಾವುಕ ಸಂದೇಶದೊಂದಿಗೆ ಕುಸ್ತಿಗೆ ನಿವೃತ್ತಿ ಘೋಷಿಸಿದ ವಿನೇಶ್ ಫೋಗಟ್

ಕ್ರೀಡಾ ನೀತಿಯ ಪ್ರಕಾರ, ಹರಿಯಾಣ ಸರ್ಕಾರವು ರೂ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಿಗೆ 6 ಕೋಟಿ, ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ಮತ್ತು ಕಂಚಿನ ಪದಕ ವಿಜೇತರಿಗೆ 2.5 ಕೋಟಿ ರೂ. ನೀಡುತ್ತದೆ. ಇದೀಗ ಕಂಚಿನ ಪದಕ ಹಾಗೂ 2.5 ಕೋಟಿ ರೂ. ನೀಡಲಾಗುತ್ತದೆ ಎಂದು ಹರಿಯಾಣ ಸರ್ಕಾರ ಹೇಳಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:12 pm, Thu, 8 August 24

ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್