ಚೆಸ್ ವಿಶ್ವಕಪ್ ಫೈನಲ್: 2ನೇ ಗೇಮ್ ಡ್ರಾ: ನಾಳೆ ಟೈಬ್ರೇಕರ್ ಪಂದ್ಯ
Chess World Cup 2023 Final: ಮಂಗಳವಾರ ನಡೆದ ಫೈನಲ್ ಪಂದ್ಯದ ಮೊದಲ ಗೇಮ್ನಲ್ಲಿ ನಾರ್ವೆಯ ಕಾರ್ಲ್‌ಸೆನ್ ಅವರನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಮೊದಲ ಗೇಮ್ನ ಅಂತಿಮ ಸುತ್ತಿನಲ್ಲಿ ಜಾಣ್ಮೆಯ ನಡೆಗಳ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಅಲ್ಲದೆ ಮೊದಲ ಸುತ್ತು 35 ಚಲನೆಗಳ ನಂತರ ಡ್ರಾದಲ್ಲಿ ಕೊನೆಗೊಂಡಿತು.
Chess World Cup 2023 Final: ಅಝರ್ಬೈಜಾನ್ನಲ್ಲಿ ನಡೆದ ಚೆಸ್ ವಿಶ್ವಕಪ್ ಫೈನಲ್ನ 2ನೇ ಗೇಮ್ ಕೂಡ ಡ್ರಾನಲ್ಲಿ ಅಂತ್ಯಗೊಂಡಿದೆ. ಆರ್. ಪ್ರಜ್ಞಾನಂದ (R Praggnanandhaa) ಹಾಗೂ ಮ್ಯಾಗ್ನಸ್ ಕಾರ್ಲ್‌ಸೆನ್ ನಡುವಣ ಈ ಪಂದ್ಯದ ಮೊದಲ ಗೇಮ್ ಕೂಡ ಡ್ರಾ ಆಗಿತ್ತು. ಇದೀಗ ಫೈನಲ್ ಪಂದ್ಯದ 2ನೇ ಕ್ಲಾಸಿಕ್ ಗೇಮ್ ಕೂಡ ಸಮಬಲದೊಂದಿಗೆ ಅಂತ್ಯವಾಗಿದೆ. ಹೀಗಾಗಿ ಗುರುವಾರ ನಡೆಯಲಿರುವ ಟೈಬ್ರೇಕರ್ ಪಂದ್ಯದ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.
ಮಂಗಳವಾರ ನಡೆದ ಫೈನಲ್ ಪಂದ್ಯದ ಮೊದಲ ಗೇಮ್ನಲ್ಲಿ ನಾರ್ವೆಯ ಕಾರ್ಲ್‌ಸೆನ್ ಅವರನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಮೊದಲ ಗೇಮ್ನ ಅಂತಿಮ ಸುತ್ತಿನಲ್ಲಿ ಜಾಣ್ಮೆಯ ನಡೆಗಳ ಮೂಲಕ ವಿಶ್ವದ ನಂಬರ್ 1 ಚೆಸ್ ತಾರೆ ಕಾರ್ಲಸೆನ್ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಇದರೊಂದಿಗೆ ಮೊದಲ ಸುತ್ತು 35 ಚಲನೆಗಳ ನಂತರ ಡ್ರಾದಲ್ಲಿ ಕೊನೆಗೊಂಡಿತು.
ಬುಧವಾರ ನಡೆದ 2ನೇ ಗೇಮ್ನಲ್ಲಿ ಕಪ್ಪು ಕಾಯಿಗಳೊಂದಿಗೆ ಚದುರಂಗ ಚಲನೆ ಆರಂಭಿಸಿದ್ದ ಪ್ರಜ್ಞಾನಂದ ಆರಂಭದಲ್ಲೇ ಸಮಬಲದ ಹೋರಾಟ ನಡೆಸಿದ್ದರು. ಕಾರ್ಲ್‌ಸೆನ್ ಜಾಣ ಚಲನೆಗೆ ಅತ್ಯುತ್ತಮ ಚೆಕ್ ನಡೆಗಳ ಮೂಲಕ ಪ್ರಜ್ಞಾನಂದ ಕೌಂಟರ್ ನೀಡಿದ್ದರು. ಪರಿಣಾಮ 22 ನಡೆಗಳ ನಂತರ ಕೂಡ ಪಂದ್ಯವು ಸಮತೋಲಿತವಾಗಿತ್ತು.
ಈ ಸಮಬಲವನ್ನು ಕಾಯ್ದುಕೊಳ್ಳುವಲ್ಲಿ ಇಬ್ಬರು ಆಟಗಾರರು ಯಶಸ್ವಿಯಾದರು. ಅಲ್ಲದೆ 30 ನಡೆಗಳ ನಂತರ ಪಂದ್ಯವು ಡ್ರಾನಲ್ಲಿ ಅಂತ್ಯವಾಯಿತು. ಇದರೊಂದಿಗೆ 2 ಕ್ಲಾಸಿಕ್ ಗೇಮ್ಗಳು 1-1 ಅಂತರದಿಂದ ಸಮಬಲವಾಗಿದೆ. ಇನ್ನು ಫಲಿತಾಂಶ ನಿರ್ಧರಿಸಲು ಟೈಬ್ರೇಕರ್ ಪಂದ್ಯವನ್ನು ಆಯೋಜಿಸಲಾಗುತ್ತದೆ.
ಟೈಬ್ರೇಕ್ರ್ನಲ್ಲಿ ಫಲಿತಾಂಶ ನಿರ್ಧಾರ ಹೇಗೆ?
ಎರಡು ಕ್ಲಾಸಿಕ್ ಗೇಮ್ಗಳಲ್ಲೂ ಫಲಿತಾಂಶ ಮೂಡಿಬರದ ಕಾರಣ ಪಂದ್ಯವನ್ನು ಟೈಬ್ರೇಕರ್ನತ್ತ ಕೊಂಡೊಯ್ಯಲಾಗಿದೆ. ಇಲ್ಲಿ 25 ನಿಮಿಷಗಳ ನಿಯಂತ್ರಣದೊಂದಿಗೆ 2 ಟೈಬ್ರೇಕ್ ಪಂದ್ಯವನ್ನು ಆಡಲಾಗುತ್ತದೆ. ಇಲ್ಲೂ ಡ್ರಾ ಆದರೆ 10 ನಿಮಿಷಗಳ ಎರಡು ರ್ಯಾಪಿಡ್ ಗೇಮ್ಗಳನ್ನು ಆಡಲಿದ್ದಾರೆ. ಇದರಲ್ಲೂ ವಿಜೇತ ಯಾರೆಂದು ನಿರ್ಧಾರವಾಗದಿದ್ದರೆ 5 ನಿಮಿಷಗಳ ಎರಡು ರ್ಯಾಪಿಡ್ ಗೇಮ್ಗಳನ್ನು ನೀಡಲಾಗುತ್ತದೆ.
ಇನ್ನು ರ್ಯಾಪಿಡ್ ಗೇಮ್ಗಳು ಕೂಡ ಡ್ರಾಗೊಂಡರೆ ಸಡನ್ ಡೆತ್ ಮೋಡ್‌ನಲ್ಲಿ ಒಂದೇ ಬ್ಲಿಟ್ಝ್ ಗೇಮ್ ಆಡಲಾಗುತ್ತದೆ. ಇದರಲ್ಲಿ ಗೆದ್ದವರು ಚಾಂಪಿಯನ್ ಆಗಲಿದ್ದಾರೆ. ಹೀಗಾಗಿ ನಾಳಿನ ಪಂದ್ಯದಲ್ಲಿ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ.
ಟೈಬ್ರೇಕರ್ ಮೂಲಕ ಫೈನಲ್ಗೆ ಎಂಟ್ರಿ:
ಇದಕ್ಕೂ ಮುನ್ನ ವಿಶ್ವದ ನಂಬರ್-3 ಚೆಸ್ ತಾರೆ ಫ್ಯಾಬಿಯಾನೊ ಕರುವಾನಾ ಹಾಗೂ ಪ್ರಜ್ಞಾನಂದ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಿದ್ದರು. ರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲೆರಡು ಗೇಮ್ಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು. ಹೀಗಾಗಿ ಟೈಬ್ರೇಕರ್ನಲ್ಲಿ ಪಂದ್ಯವನ್ನು ಮುಂದುವರೆಸಲಾಯಿತು.
ಇದನ್ನೂ ಓದಿ: ಹಣೆಯಲ್ಲಿ ಸದಾ ವಿಭೂತಿ ಧರಿಸಿಕೊಳ್ಳುವ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಯಾರು ಗೊತ್ತೇ?
ಈ ಹಂತದಲ್ಲಿ ಜಾಣ್ಮೆಯ ನಡೆಗಳೊಂದಿಗೆ 3.5-2.5 ಅಂತರದಿಂದ ಫ್ಯಾಬಿಯಾನೊ ಕರುವಾನಾಗೆ ಸೋಲುಣಿಸಿ ಪ್ರಜ್ಞಾನಂದ ಫೈನಲ್ಗೆ ಪ್ರವೇಶಿಸಿದ್ದರು. ಇದೀಗ ಟೈಬ್ರೇಕರ್ ಮೂಲಕವೇ ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರಾ ಕಾದು ನೋಡಬೇಕಿದೆ.
Published On - 5:57 pm, Wed, 23 August 23