ಹಣೆಯಲ್ಲಿ ಸದಾ ವಿಭೂತಿ ಧರಿಸಿಕೊಳ್ಳುವ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಯಾರು ಗೊತ್ತೇ?

Praggnanandhaa Net Worth, Age, Family: ಮೂಲತಃ ತಮಿಳುನಾಡಿನ ಚೆನ್ನೈ ಮೂಲದವರಾದ ಐದು ಬಾರಿ ವಿಶ್ವ ಚಾಂಪಿಯನ್ ಪ್ರಜ್ಞಾನಂದ ಆಗಸ್ಟ್ 10, 2005ರಲ್ಲಿ ಜನಿಸಿದರು. 2016 ರಲ್ಲಿ 10 ವರ್ಷ, 10 ತಿಂಗಳುಗಳು ಮತ್ತು 19 ದಿನಗಳ ವಯಸ್ಸಿನಲ್ಲಿ ಕಿರಿಯ ಅಂತರರಾಷ್ಟ್ರೀಯ ಮಾಸ್ಟರ್ ಆಗುವ ಮೂಲಕ ವಿಶ್ವ ಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದ ಕೀರ್ತಿ ಇವರದ್ದು.

Vinay Bhat
| Updated By: Digi Tech Desk

Updated on:Aug 22, 2023 | 12:57 PM

ಆರ್. ಪ್ರಜ್ಞಾನಂದ, ಹಣೆಯಲ್ಲಿ ಸದಾ ವಿಭೂತಿ ಧರಿಸಿಕೊಳ್ಳುವ 18 ವರ್ಷದ ಈ ಯುವಕ ಇಂದು ಇತಿಹಾಸ ಸೃಷ್ಟಿಸಲು ಎದುರು ನೋಡುತ್ತಿದ್ದಾರೆ. ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆಯಲಿರುವ ಚೆಸ್​ ವಿಶ್ವಕಪ್ ಫೈನಲ್​ನಲ್ಲಿ ಪ್ರಜ್ಞಾನಂದ ಅವರು ಕಣಕ್ಕಿಳಿಯಲಿದ್ದು, ವಿಶ್ವ ನಂಬರ್ 1 ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಎದುರಿಸಲಿದ್ದಾರೆ.

1 / 9
ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಬಳಿಕ ಸೆಮಿಫೈನಲ್​ಗೆ​ ಪ್ರವೇಶಿಸಿದ ಮೊದಲ ಭಾರತೀಯ ಚೆಸ್ ಚತುರ ಎಂಬ ಹೆಗ್ಗಳಿಕಗೆ ಪಾತ್ರವಾಗಿದ್ದ 18 ವರ್ಷದ ಆರ್. ಪ್ರಜ್ಞಾನಂದ ಇದೀಗ ಫೈನಲ್​ಗೆ ಪ್ರವೇಶಿಸಿದ ಹಿರಿಮೆಗೂ ಪಾತ್ರರಾಗಿದ್ದಾರೆ. ಈ ಮೂಲಕ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಬಳಿಕ ಈ ಸಾಧನೆ ಮಾಡಿದ 2ನೇ ಭಾರತೀಯ ಆಗಿದ್ದಾರೆ.

2 / 9
ಮೂಲತಃ ತಮಿಳುನಾಡಿನ ಚೆನ್ನೈ ಮೂಲದವರಾದ ಐದು ಬಾರಿ ವಿಶ್ವ ಚಾಂಪಿಯನ್ ಪ್ರಜ್ಞಾನಂದ ಆಗಸ್ಟ್ 10, 2005ರಲ್ಲಿ ಜನಿಸಿದರು. 2016 ರಲ್ಲಿ 10 ವರ್ಷ, 10 ತಿಂಗಳುಗಳು ಮತ್ತು 19 ದಿನಗಳ ವಯಸ್ಸಿನಲ್ಲಿ ಕಿರಿಯ ಅಂತರರಾಷ್ಟ್ರೀಯ ಮಾಸ್ಟರ್ ಆಗುವ ಮೂಲಕ ವಿಶ್ವ ಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದ ಕೀರ್ತಿ ಇವರದ್ದು.

3 / 9
2018ರಲ್ಲಿ ಗ್ರ್ಯಾಂಡ್ಮಾಸ್ಟರ್ ಆಗಿ ಹೊರ ಹೊಮ್ಮಿದ ಪ್ರಜ್ಞಾನಂದ ಜುಲೈ 2019 ರಲ್ಲಿ ಡೆನ್ಮಾರ್ಕ್​​ನಲ್ಲಿ ನಡೆದ ಎಕ್ಸ್ಟ್ರಾಕಾನ್ ಚೆಸ್ ಓಪನ್​ನಲ್ಲೂ ಪರಾಕ್ರಮ ಮೆರೆದಿದ್ದರು. ಇಲ್ಲಿ 8½/10 ಅಂಕಗಳನ್ನು (+7–0=3) ಗಳಿಸಿದರು. ಅಲ್ಲದೇ 18 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಯುವ ಚಾಂಪಿಯನ್‌ ಶಿಪ್‌ ಗಳನ್ನು 9/11 ಅಂಕಗಳೊಂದಿಗೆ ಜಯಿಸಿದ ಸಾಧನೆ ಮಾಡಿದ್ದರು.

4 / 9
ಖ್ಯಾತ ಚೆಸ್ ಪಟುಗಳಾದ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್, ಲೆವ್ ಅರೋನಿಯನ್, ರಷ್ಯಾದ ಆಂಡ್ರೆ ಎಸ್ಪಿಯೆಂಕೊ, ಮಾಜಿ ಮಹಿಳಾ ವಿಶ್ವ ಚಾಂಪಿಯನ್ ಅಲೆಕ್ಸಾಂಡ್ರಾ ಕೊಸ್ಟಾನ್ಯುಕ್ ಮತ್ತು ಕೆಮರ್​ರಂತಹ ಶ್ರೇಷ್ಠ ಪಟುಗಳಿಗೆ ಪ್ರಜ್ಞಾನಂದ ಅವರು ತನ್ನ 16ನೇ ವರ್ಷದಲ್ಲೇ ಸೋಲಿನ ರುಚಿ ತೋರಿಸಿದ್ದರು.

5 / 9
ಬಾಲ್ಯದಲ್ಲಿ ಪ್ರಜ್ಞಾನಂದ ಅವರು ತನ್ನ ಸಹೋದರಿ ವೈಶಾಲಿ ಜೊತೆಗೆ ಟಿವಿ ಕಾರ್ಟೂನ್​ ಅನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದರಂತೆ. ಇದರಿಂದ ಚಿಂತೆಗೀಡಾಗಿದ್ದ ಪೋಲಿಯೋ ಪೀಡಿತ ಬ್ಯಾಂಕ್ ಉದ್ಯೋಗಿ ತಂದೆ ರಮೇಶಬಾಬು ಮತ್ತು ತಾಯಿ ನಾಗಲಕ್ಷ್ಮಿ ಟಿವಿಯಿಂದ ದೂರ ಮಾಡಲು ಚೆಸ್​ ಬೋರ್ಡ್​ಗಳನ್ನು ತಂದುಕೊಟ್ಟಿದ್ದರು.

6 / 9
ಇಲ್ಲಿಂದ ಪ್ರಜ್ಞಾನಂದ ಜೀವನ ಸಂಪೂರ್ಣ ಬದಲಾಯಿತು. ವೈಶಾಲಿ ಜೊತೆ ಸೇರಿ ಪ್ರಜ್ಞಾನಂದ ಕಾರ್ಟೂನ್​ನಿಂದ ದೂರವಾಗಿ ಚೆಸ್​ನತ್ತ ಮುಖ ಮಾಡಿದರು. ಬಾಲ್ಯದಲ್ಲೇ ಚೆಸ್​ ಆಟವನ್ನು ಕರಗತ ಮಾಡಿಕೊಂಡರು. ವಿಶೇಷ ಎಂದರೆ ಇಂತಹದೊಂದು ಬದಲಾವಣೆ ಖುದ್ದು ತಂದೆಯೇ ನಿರೀಕ್ಷಿಸಿರಲಿಲ್ಲವಂತೆ. ಅದರಂತೆ 2016 ರಲ್ಲಿ 10 ವರ್ಷವಿದ್ದಾಗ ಪ್ರಜ್ಞಾನಂದ ಅಂತರರಾಷ್ಟ್ರೀಯ ಚೆಸ್​ನಲ್ಲಿ ಲಿಟ್ಲ್​ ಮಾಸ್ಟರ್ ಆಗಿ ಹೊರಹೊಮ್ಮಿದ್ದರು. ಇದೀಗ ಗ್ರ್ಯಾಂಡ್ ಮಾಸ್ಟರ್ ಆಗಿರುವ  ಪ್ರಜ್ಞಾನಂದ ಇತಿಹಾಸ ಸೃಷ್ಟಿಸಲು ಹೊರಟಿದ್ದಾರೆ.

7 / 9
ಪ್ರಜ್ಞಾನಂದ ಅವರ ಕೋಚ್ ರಮೇಶ್ ಆರ್​ಬಿ. ಇವರು 2002 ಬ್ರಿಟಿಷ್ ಚಾಂಪಿಯನ್‌ಶಿಪ್ ಮತ್ತು 2007 ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ಗೆದ್ದ ಚೆನ್ನೈನ ಭಾರತೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್ ಆಗಿದ್ದಾರೆ. ಇದೀಗ ಭಾರತದ ಅತ್ಯುತ್ತಮ ಚೆಸ್ ಕೋಚ್ ಆಗಿರುವ ರಮೇಶ್ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗುರುಕುಲ ಎಂಬ ಸಂಸ್ಥೆ ತೆರೆದು ತರಭೇತಿ ನೀಡುತ್ತಿದ್ದಾರೆ.

8 / 9
ಪ್ರಜ್ಞಾನಂದ ಅವರ ಆದಾಯ ಎಷ್ಟು ಎಂಬ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೆ, ಮೂಲಗಳ ಪ್ರಕಾರ ಇವರು ವಿಶ್ವದ ಅತಿದೊಡ್ಡ ಇಂಟರ್ನೆಟ್ ಚೆಸ್ ಬ್ಯುಸಿನೆಸ್​ನಲ್ಲಿ ಒಂದಾಗಿರುವ Play Magnus ನ ಮಾಲೀಕರಾಗಿದ್ದಾರೆ. ಇವರ ಒಟ್ಟು ಮೌಲ್ಯವು $1.00 ಮಿಲಿಯನ್, (ಸುಮಾರು 83 ಲಕ್ಷ ರೂ.) ಎಂದು ಹೇಳಲಾಗಿದೆ.

9 / 9

Published On - 12:36 pm, Tue, 22 August 23

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ