ಅಲ್ಕರಾಝ್ ವಿರುದ್ಧ ಸೋಲಿನ ಸೇಡು ತೀರಿಸಿಕೊಂಡ ಜೊಕೊವಿಚ್

Cincinnati Open 2023: ವಿಂಬಲ್ಡನ್ ಟೂರ್ನಿಯಲ್ಲಿ 20 ರ ಹರೆಯದ ಕಾರ್ಲೊಸ್ ಅಲ್ಕರಾಝ್ ವಿರುದ್ಧ ಸೋತು ಭಾರೀ ಮುಖಭಂಗಕ್ಕೆ ಒಳಗಾಗಿದ್ದ ನೊವಾಕ್ ಜೊಕೊವಿಚ್ ಈ ಬಾರಿ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಕರಾಝ್ ವಿರುದ್ಧ ಸೋಲಿನ ಸೇಡು ತೀರಿಸಿಕೊಂಡ ಜೊಕೊವಿಚ್
Djokovic vs Alcaraz
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 21, 2023 | 9:59 PM

ಯುಎಸ್​ಎನಲ್ಲಿ ನಡೆದ ಸಿನ್ಸನಾಟಿ ಓಪನ್​ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಚ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಫೈನಲ್​ ಪಂದ್ಯದಲ್ಲಿ ವಿಂಬಲ್ಡನ್ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್​ಗೆ ಸೋಲುಣಿಸಿ ಸರ್ಬಿಯಾ ಟೆನಿಸ್ ತಾರೆ ಈ ಸಾಧನೆ ಮಾಡಿದರು.

ವಿಂಬಲ್ಡನ್​​ ಟೂರ್ನಿಯಲ್ಲಿ ಜೊಕೊವಿಚ್​ಗೆ ಸೋಲುಣಿಸಿ ಅಲ್ಕರಾಝ್ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಇದೇ ಕಾರಣದಿಂದಾಗಿ ಸಿನ್ಸನಾಟಿ ಓಪನ್ ಫೈನಲ್​ ಪಂದ್ಯವು ಎಲ್ಲಾ ಕುತೂಹಲಕ್ಕೆ ಕಾರಣವಾಗಿತ್ತು.

ಈ ಕೌತುಕದೊಂದಿಗೆ ಶುರುವಾದ ಫೈನಲ್ ಪಂದ್ಯದ ಮೊದಲ ಸುತ್ತಿನಲ್ಲಿ ರೋಚಕ ಪೈಪೋಟಿ ಕಂಡು ಬಂತು. ಇದಾಗ್ಯೂ 7-5 ಅಂತರದಿಂದ ಜಯ ಸಾಧಿಸಿದ ಅಲ್ಕರಾಝ್ ಮುನ್ನಡೆ ಕಾಯ್ದುಕೊಂಡರು.

ಆದರೆ 2ನೇ ಸುತ್ತಿನಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ ನೊವಾಕ್ ಜೊಕೊವಿಚ್ 7-6 ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪಂದ್ಯವು ಮೂರನೇ ಸುತ್ತಿನತ್ತ ಸಾಗಿತು. ಅಂತಿಮ ಸುತ್ತು ಕೂಡ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು.

3 ಗಂಟೆ ಮತ್ತು 49 ನಿಮಿಷಗಳವರೆಗೆ ಸಾಗಿದ ಪಂದ್ಯದಲ್ಲಿ ಅಂತಿಮ ಸುತ್ತನ್ನು ನೊವಾಕ್ ಜೊಕೊವಿಚ್ 7-6 ಅಂತರದಿಂದ ಗೆದ್ದುಕೊಂಡರು. ಈ ಮೂಲಕ ಸಿನ್ಸನಾಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಇದನ್ನೂ ಓದಿ: Wimbledon 2023 Final: ಜೊಕೊವಿಚ್​ಗೆ ಸೋಲುಣಿಸಿ ವಿಂಬಲ್ಡನ್ ​ಕಿರೀಟ ಗೆದ್ದ ಅಲ್ಕರಾಝ್

ಶರ್ಟ್ ಹರಿದು ಸಂಭ್ರಮಿಸಿದ ಜೊಕೊವಿಚ್:

ವಿಂಬಲ್ಡನ್ ಟೂರ್ನಿಯಲ್ಲಿ 20 ರ ಹರೆಯದ ಕಾರ್ಲೊಸ್ ಅಲ್ಕರಾಝ್ ವಿರುದ್ಧ ಸೋತು ಭಾರೀ ಮುಖಭಂಗಕ್ಕೆ ಒಳಗಾಗಿದ್ದ ನೊವಾಕ್ ಜೊಕೊವಿಚ್ ಈ ಬಾರಿ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಈ ಗೆಲುವಿನ ಬೆನ್ನಲ್ಲೇ ತಮ್ಮ ಶರ್ಟ್ ಅನ್ನು ಹರಿದು ಹಾಕುವ ಮೂಲಕ ವಿಚಿತ್ರವಾಗಿ ಸಂಭ್ರಮಿಸಿದರು.

ಮತ್ತೊಂದೆಡೆ ಸೋಲಿನ ನೋವಲ್ಲಿ ಕಾರ್ಲೊಸ್ ಅಲ್ಕರಾಝ್ ಕಣ್ಣೀರು ಹಾಕುತ್ತಿರುವುದು ಕಂಡು ಬಂತು. ಒಟ್ಟಿನಲ್ಲಿ ಅಂಗಳದಲ್ಲಿ ಇದೀಗ ರಣರೋಚಕ ಕಾದಾಟದೊಂದಿಗೆ ಅಲ್ಕರಾಝ್ ಹಾಗೂ ಜೊಕೊವಿಚ್ ಟೆನಿಸ್ ಪ್ರಿಯರಿಗೆ ಮನರಂಜನೆಯ ರಸದೌತಣ ಒದಗಿಸುತ್ತಿದ್ದಾರೆ.

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?