Table Tennis: ರೋಚಕ ಪಂದ್ಯದಲ್ಲಿ ಕಂಚಿನ ಪದಕ ಗೆದ್ದ ಜಿ. ಸತ್ಯನ್
Gnanasekaran Sathiyan: Table Tennis: ಪೌಲ್ ಡ್ರಿಂಕ್‌ಹಾಲ್ ವಿರುದ್ದ ಅದ್ಭುತ ಆಟ ಪ್ರದರ್ಶಿಸಿದ ಸತ್ಯನ್, ಆರಂಭದಲ್ಲೇ ಸತತ ಮೂರು ಸೆಟ್ಗಳನ್ನು ಗೆದ್ದರು. ಆದರೆ ಆ ಬಳಿಕ ಕಂಬ್ಯಾಕ್ ಮಾಡಿದ ಪೌಲ್ ಕೂಡ ಮೂರು ಸೆಟ್ಗಳನ್ನು ಗೆದ್ದರು. ಈ ಮೂಲಕ 3-3 ಅಂತರದಿಂದ ಸಮಬಲ ಸಾಧಿಸಿದರು.
ಕಾಮನ್‌ವೆಲ್ತ್ ಗೇಮ್ಸ್ನ ಪುರುಷ ಟೇಬಲ್ ಟೆನ್ನಿಸ್ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಜ್ಞಾನಶೇಖರನ್ ಸತ್ಯನ್ ಕಂಚಿನ ಪದಕ ಗೆದ್ದಿದ್ದಾರೆ. ಆತಿಥೇಯ ಇಂಗ್ಲೆಂಡ್‌ನ ಪೌಲ್ ಡ್ರಿಂಕ್‌ಹಾಲ್ ಅವರನ್ನು 4-3 (11-9, 11-3, 11-5, 11-8, 11-9, 10-12, 11-9) ಸೋಲಿಸುವ ಮೂಲಕ ಜಿ. ಸತ್ಯಜಿತ್ ಮೂರನೇ ಸ್ಥಾನ ಪಡೆದರು. ಇದಕ್ಕೂ ಮುನ್ನ ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡೆದಿದ್ದ ಅವರು ಮಧ್ಯದಲ್ಲಿ ಪಾಯಿಂಟ್ಗಳನ್ನು ಕೈಚೆಲ್ಲಿದ್ದರು. ಆದರೆ, ನಿರ್ಣಾಯಕ ಗೇಮ್‌ನಲ್ಲಿ ತಿರುಗೇಟು ನೀಡುವ ಮೂಲ ಅಮೋಘ ಆಟ ಪ್ರದರ್ಶಿಸಿದರು. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕವನ್ನು ತಂದುಕೊಟ್ಟಿದ್ದಾರೆ.
ಪೌಲ್ ಡ್ರಿಂಕ್‌ಹಾಲ್ ವಿರುದ್ದ ಅದ್ಭುತ ಆಟ ಪ್ರದರ್ಶಿಸಿದ ಸತ್ಯನ್, ಆರಂಭದಲ್ಲೇ ಸತತ ಮೂರು ಸೆಟ್ಗಳನ್ನು ಗೆದ್ದರು. ಆದರೆ ಆ ಬಳಿಕ ಕಂಬ್ಯಾಕ್ ಮಾಡಿದ ಪೌಲ್ ಕೂಡ ಮೂರು ಸೆಟ್ಗಳನ್ನು ಗೆದ್ದರು. ಈ ಮೂಲಕ 3-3 ಅಂತರದಿಂದ ಸಮಬಲ ಸಾಧಿಸಿದರು.
ಇದರಿಂದ ಪಂದ್ಯವು 7ನೇ ಸುತ್ತಿನತ್ತ ಸಾಗಿತು. ಇಲ್ಲಿ ಸತ್ಯನ್ ಉತ್ತಮ ಆರಂಭ ಪಡೆದು 7-1 ಮುನ್ನಡೆ ಪಡೆದರು. ಆದರೆ ಮತ್ತೊಮ್ಮೆ ಕಂಬ್ಯಾಕ್ ಮಾಡಿದ ಪೌಲ್ ಸ್ಕೋರ್ ಅನ್ನು 8-8 ಸಮಬಲಗೊಳಿಸಿದರು. ಅದಾಗ್ಯೂ ರೋಚಕ ಹೋರಾಟದಲ್ಲಿ ಅಂತಿಮವಾಗಿ ಕೇವಲ 2 ಪಾಯಿಂಟ್ಗಳ ಮುನ್ನಡೆಯೊಂದಿಗೆ ಸತ್ಯನ್ 11-9 ಅಂಕಗಳ ಮೂಲಕ ಜಯ ಸಾಧಿಸಿದರು. ಈ ಮೂಲಕ 4-3 ಅಂತರದಿಂದ ಗೆಲ್ಲುವ ಮೂಲಕ ಕಂಚಿನ ಪದಕಕ್ಕೆ ಕೊರೊಳ್ಳೊಡ್ಡಿದ್ದಾರೆ.
GOES THE DISTANCE! ?@sathiyantt clinches the BRONZE? following a Dramatic victory over Drinkhall of England in the Table Tennis MS Bronze Medal match.
Our Indian champ won the match 4-3 (11-9 11-3 11-5 8-11 9-11 10-12 11-9) ??
SPECTACULAR SATHIYAN!#Cheer4India pic.twitter.com/SqU5WuWv01
— SAI Media (@Media_SAI) August 8, 2022
ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತ್ಯನ್‌ಗೆ ಇದು ಮೊದಲ ಪದಕವಲ್ಲ. ಇದಕ್ಕೂ ಮುನ್ನ ಪುರುಷರ ಡಬಲ್ಸ್ ವಿಭಾಗದಲ್ಲಿ ಪದಕ ಗೆದ್ದಿದ್ದರು. ಅಚಂತಾ ಶರತ್ ಕಮಲ್ ಅವರೊಂದಿಗೆ ಡಬಲ್ಸ್ ಆಡಿದ್ದ ಸತ್ಯನ್ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದರು. ಡ್ರಿಂಕ್‌ಹಾಲ್ ಮತ್ತು ಲಿಯಾಮ್ ಪಿಚ್‌ಫೋರ್ಡ್ ವಿರುದ್ದ ನಡೆದಿದ್ದ ಡಬಲ್ಸ್ ಫೈನಲ್ನಲ್ಲಿ ಈ ಫೈನಲ್ ಪಂದ್ಯದಲ್ಲಿ ಅಚಂತಾ ಮತ್ತು ಸತ್ಯನ್ ಜೋಡಿಯು 2-3 (11-8, 8-11, 3-11, 11-7, 4-11) ಅಂತರದಿಂದ ಗೆದ್ದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
Published On - 5:28 pm, Mon, 8 August 22